ಕೆಂಡಸಂಪಿಗೆ (Kendasampige) ಧಾರಾವಾಹಿ (Serial) ಕಲರ್ಸ್ ಕನ್ನಡದಲ್ಲಿ (Colors Kannada) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ ಪ್ರಸಾರವಾಗುತ್ತಿದೆ. ಶುರುವಾದಾಗಿನಿಂದ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಕೆಂಡಸಂಪಿಗೆ ಧಾರಾವಾಹಿ ಯನ್ನು ಈಗಾಗಲೇ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಬೇರೆಯವರ ಜೊತೆ ಮದುವೆ ಆಗ ಬೇಕಿದ್ದ ಸುಮನಾ ಕಾರ್ಪೊರೇಟರ್ ತೀರ್ಥಂಕರ್ ಜೊತೆ ಮದುವೆ (Marriage) ಆಗಿದ್ದಾರೆ. ಹೇಳದೇ, ಕೇಳದೇ ಸುಮಿಗೆ ತಾಳಿ ಕಟ್ಟಿದ್ದರಿಂದ ತೀರ್ಥಂಕರ್ ಮನೆಯಲ್ಲಿ ಜಗಳವಾಗುತ್ತಲೇ ಇದೆ. ಅತ್ತೆ ಪದ್ಮಾ ಮಾತ್ರ ಸುಮನಾಳನ್ನು ಸೊಸೆ ಎಂದು ಒಪ್ಪಿಕೊಂಡಿದ್ದಾಳೆ. ಮಾವ ಸುಮನಾಳನ್ನು ಮನೆಯಿಂದ ಆಚೆ ಕಳಿಸಿದ್ದಾರೆ. ಈಗ ಮಾವ (Father In Law) ಕೇಶವ್ ಪ್ರಸಾದ್ ಸುಮನಾಳನ್ನು ಮನೆಗೆ ಕರೆದಿದ್ದಾನೆ.
ಸುಮನಾಳನ್ನು ಆಚೆ ಕಳಿಸಿರುವ ಮಾವ
ಕಾಶಿ ತೊಂದ್ರೆ ಕೊಟ್ಟಿದ್ದು ಸುಮನಾಳಿಂದ ಎಂದು ಮಾವ ಅಂದುಕೊಂಡು, ನನ್ನ ಮಗನ ನಿನ್ನಿಂದ ಸಾಯುತ್ತಿದ್ದ. ನೀನು ಇಲ್ಲಿ ಇರಬೇಡ. ನೀನು ಈ ಮನೆಯುಲ್ಲಿ ಇದ್ರೆ ಕಾಶಿ ಮತ್ತೆ ನನ್ನ ಮಗನನ್ನು ಕೊಲ್ಲಲು ಬರಬಹುದು.
ನೀನು ದೂರ ಹೋದೆ ಎಂದು ಗೊತ್ತಾದ್ರೆ, ಅವನು ಈ ಕಡೆ ತಲೆ ಹಾಕಲ್ಲ. ರಾಜಕೀಯ ದ್ವೇಷ ಆಗಿದ್ರೆ, ಅದನ್ನು ಬಿಟ್ಟು ಕಾರ್ಖಾನೆ ನೋಡಿಕೋ ಅಂತಿದ್ದೆ. ಇದು ವೈಯಕ್ತಿಕ ದ್ವೇಷ, ಅದಕ್ಕೆ ನೀನು ಮನೆಯಿಂದ ಆಚೆ ಹೋಗು ಎಂದು ಕಳಿಸಿದ್ದ.
ಪದ್ಮಾಗಾಗಿ ಬದಲಾದ ಕೇಶವ್ ಪ್ರಸಾದ್
ಮನೆ ಬಿಟ್ಟು ಹೋಗಿದ್ದ ಸುಮನಾಳನ್ನು ಎಷ್ಟೇ ಕರೆದ್ರೂ ಮನೆಗೆ ಬಂದಿರಲಿಲ್ಲ. ಮಾವ ಕರೆದ್ರೆ ಮಾತ್ರ ಬರುತ್ತೇನೆ ಎಂದಿದ್ದಾಳೆ. ಸೊಸೆ ಸುಮನಾ ನೆನಪಲ್ಲಿ ಪದ್ಮಾ ಹಾಸಿಗೆ ಹಿಡಿದಿದ್ದಾಳೆ. ಬಿಪಿ ಹೆಚ್ಚಾಗಿದೆ. ಏನೂ ತಿನ್ನುತ್ತಿಲ್ಲ. ಸುಮನಾ, ಸುಮನಾ ಎಂದು ಕನವರಿಸುತ್ತಿದ್ದಾಳೆ. ಅದಕ್ಕೆ ಪಟ್ಟು ಬಿಟ್ಟು ಕೇಶವ್ ಪ್ರಸಾದ್ ಬದಲಾಗಿದ್ದಾನೆ.
ಇದನ್ನೂ ಓದಿ: Bigg Boss Kannada: ಬಿಗ್ ಬಾಸ್ ಸೀಸನ್ 08 ರ ಸ್ಪರ್ಧಿಗಳ ಸಮಾಗಮ, ಹಳೇ ಸ್ನೇಹಿತರ ಮಸ್ತಿ!
ಕೇಶವ್ ಪ್ರಸಾದ್ ಕಣ್ಣೀರು
ನೋಡಪ್ಪಾ ನೋಡು, ಅವಳ ಸ್ಥಿತಿ ನೋಡು. ಜೀವಂತ ಶವವಾಗಿದ್ದಾಳೆ. ನಿಮ್ಮನ್ನು ಹೆತ್ತ ತಪ್ಪಿಗೆ, ತಂದೆ-ತಾಯಿಗೆ ಏನಾದ್ರೂ ಆದ್ರೆ ನಾವೇ ಕಾಲ್ ಮಾಡಿ ಕರೆಸಬೇಕು ಎಂದು ತೀರ್ಥನಿಗೆ ಅಪ್ಪ ಹೇಳ್ತಾನೆ. ಆ ಹುಡುಗಿ ಈ ಕೂಡಲೇ ಮನೆಗೆ ಬರಬೇಕು ಕಾಲ್ ಮಾಡು ಎಂದು ಕೇಶವ್ ತೀರ್ಥನಿಗೆ ಹೇಳ್ತಾರೆ. ಆದ್ರೆ ತೀರ್ಥ ಆಕೆ ನಾನು ಕರೆದ್ರೆ ಬರಲ್ಲ ನೀವೇ ಕರೆಯಬೇಕು ಎಂದು ಹೇಳ್ತಾನೆ.
ಪದ್ದುಗಾಗಿ ಸೋಲುತ್ತೇನೆ
ನಿನಗೆ ಸುಮನಾ ಎಷ್ಟು ಮುಖ್ಯಾನೋ, ನನಗೆ ನನ್ನ ಪದ್ದು ಅಷ್ಟೇ ಮುಖ್ಯ. ಅವಳಿಗಾಗಿ ನಾನು ಸ್ವಾಭಿಮಾನದ ಮೆಟ್ಟಿಲು ಇಳಿದು, ಯಾರಿಗೆ ಎಷ್ಟೋ ಸಲ ಬೇಕಾದ್ರೂ ಸೋಲೋಕೆ ತಯಾರಾಗಿದ್ದೇನೆ. ನಾನೇ ಕರೆಯುತ್ತೇನೆ. ಕಾಲ್ ಮಾಡಿ ಕೊಡು ಎಂದು ತೀರ್ಥನಿಗೆ ಕೇಶವ್ ಪ್ರಸಾದ್ ಹೇಳ್ತಾರೆ
ಸುಮನಾಳನ್ನು ಮನೆಗೆ ಕರೆದ ಮಾವ
ಸಾಹೇಬ್ರು ಅಪ್ಪ ಮಾತನಾಡ್ತಾ ಇದೀನಿ. ನಿನಗೆ ಏನೇ ಕೆಲಸ ಇದ್ದರೂ, ಎಲ್ಲಾ ಬಿಟ್ಟು ಈ ಕ್ಷಣನೇ ಮನೆಗೆ ಬಂದು ಬಿಡು ಎಂದು ಕೇಶವ್ ಪ್ರಸಾದ್ ಕರೆಯುತ್ತಾರೆ. ಅದನ್ನು ಕೇಳಿ ಸುಮನಾ ತುಂಬಾ ಖುಷಿಯಾಗಿದ್ದಾಳೆ. ಕೊನೆಗೂ ನನ್ನ ಮಾವ ಕರೆದ್ರು ಎಂದು ಸಂತೋಷವಾಗಿದ್ದಾಳೆ.
ಇದನ್ನೂ ಓದಿ: Gattimela: ಸಾವಿರ ಸಂಚಿಕೆಗಳ ಸಂಭ್ರಮದಲ್ಲಿ ಗಟ್ಟಿಮೇಳ, ಸಂಕ್ರಾಂತಿ ಸಡಗರದಲ್ಲಿ ಧಾರಾವಾಹಿ ತಂಡ!
ಸುಮನಾ ಖುಷಿಯಿಂದ ಮನೆಗೆ ಬರ್ತಾಳಾ? ಅತ್ತೆ ಪದ್ಮಾ ಪರಿಸ್ಥಿತಿ ಸುಧಾರಿಸುತ್ತಾ? ಸಾಧನಾ ಮತ್ತೆ ಯಾವ ಪ್ಲ್ಯಾನ್ ಮಾಡ್ತಾಳೆ? ಮುಂದೇನಾಗುತ್ತೆ ಅಂತ ನೋಡೋಕೆ ಕೆಂಡಸಂಪಿಗೆ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ