Yamuna Srinidhi: ಯಮುನಾ ಶ್ರೀನಿಧಿ ಅವರು ಉತ್ತಮ ಭರತನಾಟ್ಯ ಡ್ಯಾನ್ಸರ್ ಕೂಡ ಹೌದು ನೀವೇ ಓದಿ ನೋಡಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಕನ್ಯಾಕುಮಾರಿ ಧಾರವಾಹಿಯಲ್ಲಿ ನಾಯಕನ ಅಮ್ಮನ ಪಾತ್ರದಲ್ಲಿ ಮಿಂಚುತ್ತಿರುವ ನಟಿ ಯಮುನಾ ಶ್ರೀನಿಧಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಕನ್ಯಾಕುಮಾರಿ ಧಾರವಾಹಿಯಲ್ಲಿ ನಾಯಕನ ಅಮ್ಮನ ಪಾತ್ರದಲ್ಲಿ ಮಿಂಚುತ್ತಿರುವ ನಟಿ ಯಮುನಾ ಶ್ರೀನಿಧಿ (Yamuna Srinidhi). ತಮ್ಮ ಅತ್ಯದ್ಭುತ ನಟನೆಯಿಂದ ಹಲವರು ಅಭಿಮಾನಿಗಳನ್ನು ಪಡೆದಿದ್ದಾರೆ. ಮುಗ್ಧ ತಾಯಿ ತನ್ನ ಮಗನ ಸಂತೋಷಕ್ಕಾಗಿ ಏನು ಮಾಡಲು ತಯಾರಿರುವ ಪಾತ್ರದಲ್ಲಿ ಇವರು ನಟಿಸುತ್ತಿದ್ದಾರೆ. ಹಳ್ಳಿಯ ಬಡತನ ಜೋಗಿ ಹಟ್ಟಿಯ ಪುಟ್ಟ ಮನೆ ಹಾಗೂ ಹಳ್ಳಿಯ ಕನ್ನಡದ ಸೊಗಡಿನಲ್ಲಿ ಯಮುನಾ ಮಿಂಚುತ್ತಿದ್ದಾರೆ. ಈ ಮೊದಲು ಇವರು ಜೀ ಕನ್ನಡ (Zee Kannada) ವಾಹಿನಿಯಲ್ಲಿ ಹೆಸರು ಗೊಳ್ಳುತ್ತಿರುವ ಕಮಲಿ (Kamali) ಧಾರಾವಾಹಿಯಲ್ಲಿ ಕಮಲಿಯ ಅಮ್ಮನ ಪಾತ್ರದಲ್ಲಿ ನಟಿಸುತ್ತಿದ್ದರು. ಈ ದಾರವಾಹಿ ಅವರಿಗೆ ಎಲ್ಲಿಲ್ಲದ ಖ್ಯಾತಿಯನ್ನು ತಂದುಕೊಟ್ಟದ್ದಂತಯ ಸತ್ಯ. ನಾಯಕಿ ಕಮಲಿಯ ತಾಯಿಯ ಪಾತ್ರವನ್ನು ನಿರ್ವಹಿಸುತ್ತಿದ್ದ ಇವರು ಗೌರಿ ಪಾತ್ರಕ್ಕೆ ಜೀವ ತುಂಬಿದ್ದಾರೆ.

  "ಓಮಾಶ್ರಮ" ವೃದ್ಧಾಶ್ರಮದಲ್ಲಿ ವಿಶೇಷವಾಗಿ  ಹುಟ್ಟುಹಬ್ಬ ಆಚರಿಸಿದ್ದಾರೆ

  ಮಾರ್ಚ್ 8ರ ಆ ವಿಶೇಷ ದಿನದಂದು ಯಮುನಾ ಅವರ ಹುಟ್ಟುಹಬ್ಬವೂ ಇದ್ದು, ಮಕ್ಕಳು ಎರಡು ದಿನವನ್ನು ವಿಶೇಷವಾಗಿ ಆಚರಿಸಿದ್ದಾರೆ. ವೃದ್ಧರ ಆಶ್ರಮಕ್ಕೆ ಕರೆದುಕೊಂಡು ಹೋಗಿ ಹುಟ್ಟುಹಬ್ಬ ಆಚರಿಸಿದ್ದಾರೆ. ಈ ಸಂಬಂಧ ಯಮುನಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. "ಓಮಾಶ್ರಮ" ವೃದ್ಧಾಶ್ರಮದಲ್ಲಿ ಪೋಷಕರ ಆಶೀರ್ವಾದ ಪಡೆಯಲು ಮತ್ತು ಗುಣಮಟ್ಟದ ಸಮಯವನ್ನು ಕಳೆಯಲು ನಾನು ಅದೃಷ್ಟ ಮಾಡಿದ್ದೇನೆ. ನಮ್ಮ ಮಕ್ಕಳಾದ ವೇದಾಂತ್ ಮತ್ತು ಲಾಸ್ಯ ಹಲವಾರು ವರ್ಷಗಳಿಂದ ವೃದ್ಧಾಶ್ರಮಗಳಿಗೆ ಭೇಟಿ ನೀಡುತ್ತಿರುವುದು ನನಗೆ ಸಂತಸದ ವಿಷಯ. ಹೆಚ್ಚಿನ ಜವಾಬ್ದಾರಿಗಳೊಂದಿಗೆ 47 ನೇ ವರ್ಷಕ್ಕೆ ಕಾಲಿಡುತಿದ್ದೇನೆ. ನಿಮ್ಮೆಲ್ಲರ ಆಶೀರ್ವಾದವಿರಲಿ ಎಂದು ಬರೆದುಕೊಂಡಿದ್ದಾರೆ.

  ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟನೆ!

  ನಟಿ ಯಮುನಾ ಶ್ರೀನಿಧಿ ಯವರು ಕೇವಲ ಧಾರವಾಹಿಗಳಲ್ಲಷ್ಟೆ ಮಿಂಚಿದ್ದಲ್ಲ ಇವರು ಬೆಳ್ಳಿತೆರೆಯಲ್ಲೂ ತಮ್ಮ ಉತ್ತಮ ಅಭಿನಯದ ಮೂಲಕ ಅವಕಾಶಗಳನ್ನು ಪಡೆದುಕೊಂಡಿದ್ದಾರೆ. 'ಅರಮನೆ', 'ಅಶ್ವಿನಿ ನಕ್ಷತ್ರ', 'ಮಧು ಮಗಳು', 'ಒಂದೂರಲ್ಲಿ ರಾಜ ರಾಣಿ', 'ಅಮೃತವರ್ಷಿಣಿ', 'ಸಾಕ್ಷಿ' ಮುಂತಾದ ಧಾರಾವಾಹಿಯಲ್ಲಿ ನಟಿಸಿದ್ದಾರೆ. 'ಮನಸಿನಾಟ', 'ಫೇಸ್ ಟು ಫೇಸ್', 'ಕರ್ಷಣಂ', 'ಗಲ್ಲಿ ಬೇಕರಿ, 'ರನ್ನ', 'ರಾಂಧವ' ಇತ್ಯಾದಿ ಸಿನಿಮಾದಲ್ಲಿಯೂ ಬಣ್ಣ ಹಚ್ಚಿದ್ದಾರೆ.

  ಇದನ್ನೂ ಓದಿ: Akshara: ಪುಟ್ಟಕ್ಕನ ಮಕ್ಕಳು ಸಹನಾ ಖ್ಯಾತಿಯ ಅಕ್ಷರಾ ಬಗ್ಗೆ ನಿಮಗೆಷ್ಟು ಗೊತ್ತು?

  ಮಾಜಿ ಎನ್ ಸಿ ಸಿ ಕೆಡೆಟ್ ಕೂಡ ಆಗಿದ್ದವರು

  ಎನ್ ಸಿ ಸಿ ಎಂದರೆ ತುಂಬಾ ಇಷ್ಟ ಪಡುವ ಯಮುನಾ ಇದರ ಮಾಜಿ ಕೆಡೆಟ್ ಕೂಡ ಆಗಿದ್ದವರು. ಈಗ ಎನ್ಸಿಸಿ ಅಲ್ಯುಮಿನಿ ಅಸೋಸಿಯೇಟ್‌ನಲ್ಲಿ ಪ್ರಮುಖ ಸದಸ್ಯರಾಗಿದ್ದಾರೆ. ಜೀವನದ ಮೌಲ್ಯಗಳನ್ನು ಕಲಿಸಿಕೊಟ್ಟ ಎನ್ ಸಿ ಸಿಗೆ ಅನಂತಾನಂತ ವಂದನೆಗಳು ಎಂದು ಎನ್ ಸಿ ಸಿ ಮೇಲಿರುವ ಗೌರವವನ್ನು ತೋರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಎನ್ ಸಿ ಸಿ ವಿಚಾರದಲ್ಲಿ ಗೋವಾ ಮತ್ತು ಕರ್ನಾಟಕ ಭಾಗದಲ್ಲಿ ನಡೆಯುವ ಇವೆಂಟ್/ಪ್ರಾಜೆಕ್ಟ್‌ಗಳಲ್ಲಿ ಪಾಲ್ಗೊಳ್ಳುತ್ತಾ, ಎನ್ ಸಿ ಸಿ ಕೆಡೆಟ್‌ಗಳಿಗೆ ಪ್ರೇರಣೆ ತುಂಬುತ್ತಿರುತ್ತಾರೆ.

  ಮೈಸೂರಿನವರಾದ ಯಮುನಾ ಸದ್ಯ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಹಲವು ಆಕ್ಟಿವಿಟೀಸ್‌ನಲ್ಲಿ ಭಾಗಿಯಾಗುತ್ತಿರುತ್ತಾರೆ. ಧಾರಾವಾಹಿಯಲ್ಲಿ ಪಕ್ಕಾ ಹಳ್ಳಿ ಮಗಳಂತೆ ನಟಿಸಿದ್ದ ಯಮುನಾ ರಿಯಲ್ ಲೈಫ್‌ನಲ್ಲಿ ಇರುವ ರೀತಿಯೇ ಬೇರೆಯಾಗಿದೆ. ಲಾಕ್‌ಡೌನ್ ಟೈಮ್‌ನಲ್ಲಿ ಯಮುನಾ ಶ್ರೀನಿಧಿ ಅವರು ರಕ್ತದಾನ ಮಾಡುವುದರ ಜೊತೆಗೆ ಅದರ ಮಹತ್ವ ಸಾರಿದ್ದರು.

  ಇದನ್ನೂ ಓದಿ:Sathya Serial: ಬಾಲನ ಸುಳ್ಳಿನ ಅರಮನೆಯಲ್ಲಿ ಸಿಲುಕಿದಳಾ ದಿವ್ಯಾ? ಮುಂದೆ ಏನ್ ಮಾಡ್ತಾಳೆ ಸತ್ಯಾ?

  ಭರತನಾಟ್ಯ ಕಲಿತಿರುವ  ಯಮುನಾ ಶ್ರೀನಿಧಿ

  ಯಮುನಾ ಬರೀ ನಟನೆಯಲ್ಲಿ ಛಾಪು ಮೂಡಿಸಿದವರಲ್ಲ. ಅಮೆರಿಕದಲ್ಲಿ ಸುಮಾರು 700ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಭರತನಾಟ್ಯ ತರಬೇತಿ ನೀಡಿದ್ದಾರೆ. ಮೊದ ಮೊದಲಿಗೆ ಭರತನಾಟ್ಯ ಮಾಡುತ್ತಿದ್ದ ಯಮುನಾ, ಬಳಿಕ ಭರತನಾಟ್ಯ ಗುರುಗಳಿಂದ ವಿವಿಧ ಶೈಲಿಯ ಭರತನಾಟ್ಯವನ್ನು ಕಲಿತಿದ್ದಾರೆ. ಅಷ್ಟೇ ಅಲ್ಲ ಇವರು ವಿದೇಶದಲ್ಲಿ ಒಂದಷ್ಟು ವರ್ಷ ವಾಸವಾಗಿದ್ದವರು.
  Published by:Swathi Nayak
  First published: