• Home
 • »
 • News
 • »
 • entertainment
 • »
 • Kannadathi: ಅಮ್ಮಮ್ಮನ ಸ್ಥಾನ ತುಂಬೇ ಬಿಟ್ಟಳು ಭುವಿ, ಮತ್ತೆ ಆಸ್ಪತ್ರೆ ಸೇರ್ತಾರಾ ರತ್ನಮಾಲಾ?

Kannadathi: ಅಮ್ಮಮ್ಮನ ಸ್ಥಾನ ತುಂಬೇ ಬಿಟ್ಟಳು ಭುವಿ, ಮತ್ತೆ ಆಸ್ಪತ್ರೆ ಸೇರ್ತಾರಾ ರತ್ನಮಾಲಾ?

ಅಮ್ಮಮ್ಮನ ಸ್ಥಾನ ತುಂಬೇ ಬಿಟ್ಟಳು ಭುವಿ

ಅಮ್ಮಮ್ಮನ ಸ್ಥಾನ ತುಂಬೇ ಬಿಟ್ಟಳು ಭುವಿ

ಅಮ್ಮಮ್ಮ ತನ್ನ ಸ್ಥಾನದಲ್ಲಿ ಭುವಿಯನ್ನು ಕೂರಿಸಿದ್ದಕ್ಕೆ ಸಾನಿಯಾಗೆ ಕೋಪ ಹೆಚ್ಚಾಗಿದೆ. ರತ್ನಮಾಲಾ ಒಪ್ಪದ ಕಂಪನಿಗಳಿಗೆ ಡೀಲ್ ಕೊಡಿಸಿ, ಅದಕ್ಕೆ ಅಮ್ಮಮ್ಮ ಕೈಯಲ್ಲೇ ಸಹಿ ಹಾಕಿಸಿಕೊಳ್ಳೋಣ ಎಂದು ಪ್ಲ್ಯಾನ್ ಮಾಡಿದ್ಲು. ಆದ್ರೆ ಅಮ್ಮಮ್ಮನೇ ಬಂದಿಲ್ಲ.

 • News18 Kannada
 • Last Updated :
 • Karnataka, India
 • Share this:

  ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ (Kannadathi) ಧಾರಾವಾಹಿ (Serial) ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್‍ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ. ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ (Super Hit) ಆಗಿ ಓಡುತ್ತಿದೆ. ಅಮ್ಮಮ್ಮನ ಆರೋಗ್ಯ (Health) ಪರಿಸ್ಥಿತಿ ಹದಗೆಡುತ್ತಿದ್ದು, ಮತ್ತೆ ಆಸ್ಪತ್ರೆ (Hospital) ಸೇರೋ ಸಾಧ್ಯತೆ ಇದೆ. ಇನ್ನು ಅಮ್ಮಮ್ಮನ ಸ್ಥಾನವನ್ನು ಭುವಿ ತುಂಬುತ್ತಿದ್ದಾಳೆ.


  ವಾರ್ಷಿಕ ಸಭೆಗೆ ಆಗಮಿಸಿದ ಅಮ್ಮಮ್ಮ-ಭುವಿ


  ರತ್ನಮಾಲಾ ಒಡೆತನದ ಕಂಪನಿಯ ವಾರ್ಷಿಕ ಸಭೆ ಇದೆ. ಅದನ್ನು ರತ್ನಮಾಲಾ ಅವರೇ ನೋಡಿಕೊಳ್ಳಬೇಕು. ಆದ್ರೆ ಅವರಿಗೆ ಆರೋಗ್ಯ ಸರಿ ಇಲ್ಲದ ಕಾರಣ ಅದನ್ನು ನಿಭಾಯಿಸಲು ಆಗುತ್ತಿಲ್ಲ. ಅದಕ್ಕೆ ಜೊತೆಗೆ ಬಾ ಎಂದು ಭುವಿಯನ್ನು ಕರೆದುಕೊಂಡು ಬಂದಿದ್ದಾರೆ. ಭುವಿ ತಾನು ಸುಮ್ಮನೇ ಜೊತೆ ಬಂದಿರುವುದು ಎಂದುಕೊಂಡಿದ್ಲು. ಆದ್ರೆ ರತ್ನಮಾಲಾ ಅವರು ದೊಡ್ಡ ಜವಾಬ್ದಾರಿ ವಹಿಸಿದ್ದಾರೆ.


  ಭುವಿಯೇ ಮೀಟಿಂಗ್ ಮಾಡುವಂತೆ ಹೇಳಿದ ಅಮ್ಮಮ್ಮ


  ಅಮ್ಮಮ್ಮ ತನಗೆ ಆರೋಗ್ಯ ಸರಿ ಇಲ್ಲ. ಸುಸ್ತು ಆಗ್ತಾ ಇದೆ. ನನ್ನ ಕೈಯಲ್ಲಿ ಸಭೆ ಮಾಡಲು ಆಗಲ್ಲ. ಹಾಗಾಗಿ ಭುವಿ ನೀನೇ ಇದನ್ನು ನೋಡಿಕೋ ಎಂದು ಎಲ್ಲ ಫೈಲ್ ಗಳನ್ನು ಭುವಿ ಕೈಲಿ ಇಡುತ್ತಾರೆ. ಭುವಿ ಬೇಡ ಅಮ್ಮ ಅಂದ್ರೂ ಕೇಳಲ್ಲ. ನನ್ನ ಸ್ಥಾನದಲ್ಲಿ ನಿಂತು ಎಲ್ಲ ಜವಾಬ್ದಾರಿ ನಿರ್ವಹಿಸು. ಯಾವುದೇ ನಿರ್ಧಾರ ಇದ್ರೂ ನಿನೇ ತೆಗೆದುಕೋ ಎಂದು ಹೇಳ್ತಾಳೆ.


  ಇದನ್ನೂ ಓದಿ: Anupama Gowda: ಬಿಗ್ ಬಾಸ್ ಮನೆಯಲ್ಲಿ ಅನುಪಮಾ ಹಾಟ್ ಲುಕ್, ಪಡ್ಡೆ ಹುಡುಗರ ನಿದ್ದೆ ಕದ್ದ ಸುಂದರಿ


  ಅಮ್ಮಮ್ಮನ ಸ್ಥಾನದಲ್ಲಿ ಕೂತ ಭುವಿ


  ಅಮ್ಮಮ್ಮ ಅಷ್ಟು ಕೇಳಿಕೊಂಡ ಮೇಲೆ ಭುವಿ ಓಕೆ ಎಂದು ಒಪ್ಪಿ, ವಾರ್ಷಿಕ ಸಭೆಗೆ ಹಾಜರಾಗಿದ್ದಾಳೆ. ಅಲ್ಲಿದ್ದವರೆಲ್ಲಾ ಕೆಲವು ಪ್ರಶ್ನೆಗಳಿಗೆ ರತ್ನಮಾಲಾ ಮೇಡಂ ಉತ್ತರ ನೀಡಬೇಕು. ಅವರೇ ಬರಬೇಕು ಎನ್ನುತ್ತಾರೆ.


  ಅಲ್ಲೇ ಇದ್ದ ಸಾನಿಯಾ ಕೂಡ ಅದನ್ನೇ ಹೇಳ್ತಾಳೆ. ಆದ್ರೆ ಭುವಿ ಎಲ್ಲರ ಮನವೊಲಿಸಿ ತಾನೇ ಈ ಸಭೆ ನಡೆಸುವುದಾಗಿ ಹೇಳ್ತಾಳೆ. ಅದನ್ನು ನೋಡಿ ಅಮ್ಮಮ್ಮ ಖುಷಿ ಆಗ್ತಾರೆ.


  Colors Kannada serial, Kannada serial, Kannadathi Serial, Kannadathi serial today episode, Company MD post to Bhuvi, ಕನ್ನಡತಿ ಧಾರಾವಾಹಿ, ಭುವಿಗೆ ಎಂಡಿ ಸ್ಥಾನ ಪಟ್ಟ ಕೊಡಲು ಅಮ್ಮಮ್ಮ ಸಿದ್ಧ, ಅಮ್ಮಮ್ಮನಿಗೆ ತನ್ನ ಮರೆವಿನ ಕಾಯಿಲೆ ಬಗ್ಗೆ ಗೊತ್ತಾಯ್ತಾ?, ಅಮ್ಮಮ್ಮನ ಸ್ಥಾನ ತುಂಬೇ ಬಿಟ್ಟಳು ಭುವಿ, ಮತ್ತೆ ಆಸ್ಪತ್ರೆ ಸೇರ್ತಾರಾ ರತ್ನಮಾಲಾ?, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
  ಭುವಿ


  ಸಾನಿಯಾಗೆ ಉರಿ ಉರಿ


  ಅಮ್ಮಮ್ಮ ತನ್ನ ಸ್ಥಾನದಲ್ಲಿ ಭುವಿಯನ್ನು ಕೂರಿಸಿದ್ದಕ್ಕೆ ಸಾನಿಯಾಗೆ ಕೋಪ ಹೆಚ್ಚಾಗಿದೆ. ರತ್ನಮಾಲಾ ಒಪ್ಪದ ಕಂಪನಿಗಳಿಗೆ ಡೀಲ್ ಕೊಡಿಸಿ, ಅದಕ್ಕೆ ಅಮ್ಮಮ್ಮ ಕೈಯಲ್ಲೇ ಸಹಿ ಹಾಕಿಸಿಕೊಳ್ಳೋಣ ಎಂದು ಪ್ಲ್ಯಾನ್ ಮಾಡಿದ್ಲು. ಆದ್ರೆ ಅಮ್ಮಮ್ಮನೇ ಬಂದಿಲ್ಲ. ಅದನ್ನೂ ನೋಡಿ ಇನ್ನಷ್ಟು ಕೋಪಿಸಿಕೊಂಡಿದ್ದಾಳೆ.


  ಇದನ್ನೂ ಓದಿ: Nammamma Super Star: ಮತ್ತೆ ಬರ್ತಿದೆ ನನ್ನಮ್ಮ ಸೂಪರ್ ಸ್ಟಾರ್! ವಂಶಿನೇ ನಿರೂಪಕಿ!


  ಅಮ್ಮಮ್ಮನಿಗೆ ಮತ್ತೆ ಹದಗೆಟ್ಟ ಆರೋಗ್ಯ


  ರತ್ನಮಾಲಾ ಅವರಿಗೆ ಮರೆವಿನ ಕಾಯಿಲೆ ಇದ್ದು ಅದು ಮೂರನೇ ಸ್ಟೇಜ್ ಗೆ ಬಂದಿದೆ. ಇಷ್ಟು ದಿವ ಅವರು ಮರೆಯುತ್ತಿದ್ದರು. ಅದರಿಂದ ಹೆಚ್ಚು ತೊಂದರೆ ಆಗುತ್ತಿರಲಿಲ್ಲ. ಈಗ ಅವರ ದೇಹದ ಮೇಲೆ ಇದು ಪರಿಣಾಮ ಬೀರಬಹುದು ಎಂದು ಡಾಕ್ಟರ್ ಹೇಳಿದ್ದಾರೆ.


  ಇದನ್ನು ಕೇಳಿ ಹರ್ಷ, ಭುವಿ, ದೇವ್ ಶಾಕ್ ಆಗಿ ಹೋಗಿದ್ದಾರೆ. ಇವತ್ತು ಹರ್ಷ ಬಳಿ ಮಾತನಾಡುತ್ತಿರುವಾಗ ರತ್ನಮಾಲಾ ಕೆಳಗೆ ಬಿದ್ದು ಹೋಗ್ತಾರೆ. ಅವರನ್ನ ಮತ್ತೆ ಆಸ್ಪತ್ರೆಗೆ ಸೇರಿಸ್ತಾರಾ ನೋಡಬೇಕು.


  Colors Kannada serial, Kannada serial, Kannadathi Serial, Kannadathi serial today episode, Company MD post to Bhuvi, ಕನ್ನಡತಿ ಧಾರಾವಾಹಿ, ಭುವಿಗೆ ಎಂಡಿ ಸ್ಥಾನ ಪಟ್ಟ ಕೊಡಲು ಅಮ್ಮಮ್ಮ ಸಿದ್ಧ, ಅಮ್ಮಮ್ಮನಿಗೆ ತನ್ನ ಮರೆವಿನ ಕಾಯಿಲೆ ಬಗ್ಗೆ ಗೊತ್ತಾಯ್ತಾ?, ಅಮ್ಮಮ್ಮನ ಸ್ಥಾನ ತುಂಬೇ ಬಿಟ್ಟಳು ಭುವಿ, ಮತ್ತೆ ಆಸ್ಪತ್ರೆ ಸೇರ್ತಾರಾ ರತ್ನಮಾಲಾ?, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
  ರತ್ನಮಾಲಾ


  ಭುವಿ ಕಂಪನಿ ಒಡತಿ ಅಂತ ಅಧಿಕೃತ ಘೋಷಣೆವೊಂದೇ ಬಾಕಿ ಇದೆ. ಇತ್ತ ರತ್ನಮಾಲಾ ಆರೋಗ್ಯ ಗಂಭೀರ ಸ್ಥಿತಿ ತಲುಪುತ್ತಿದೆ. ಮುಂದೇನಾಗುತ್ತೆ ಅಂತ ನೋಡೋಕೆ ಕನ್ನಡತಿ ಸೀರಿಯಲ್ ನೋಡಬೇಕು.

  Published by:Savitha Savitha
  First published: