• Home
 • »
 • News
 • »
 • entertainment
 • »
 • Kannadathi: ಮತ್ತೆ ಸೌಪರ್ಣಿಕಾಳನ್ನು ಕರೆ ತಂದ ವರು! ಭುವಿ ಪ್ರಾಣಕ್ಕೆ ಅಪಾಯನಾ?

Kannadathi: ಮತ್ತೆ ಸೌಪರ್ಣಿಕಾಳನ್ನು ಕರೆ ತಂದ ವರು! ಭುವಿ ಪ್ರಾಣಕ್ಕೆ ಅಪಾಯನಾ?

ಭುವಿ ಪ್ರಾಣಕ್ಕೆ ಅಪಾಯನಾ?

ಭುವಿ ಪ್ರಾಣಕ್ಕೆ ಅಪಾಯನಾ?

ಇದ್ದಕ್ಕಿದ್ದ ಹಾಗೇ ಸೌಪರ್ಣಿಕಾಳನ್ನು ವರು ಕರೆಸಿದ್ದಾಳೆ. ಆಕೆ ಹರ್ಷನ ಮುಂದೆ ಬಂದು ನಿಂತಿದ್ದಾಳೆ. ಹರ್ಷನಿಗೆ ಚೆನ್ನಾಗಿ ಬೈದಿದ್ದಾಳೆ. ಇನ್ನೊಬ್ಬರ ಜೀವನದಲ್ಲಿ ಈ ರೀತಿ ಆಟವಾಡಬೇಡಿ ಎಂದು ಬೈದು  ಹೋಗುತ್ತಾಳೆ

 • News18 Kannada
 • Last Updated :
 • Karnataka, India
 • Share this:

  ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ ಧಾರಾವಾಹಿ (Kannadathi Serial) ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್‍ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ, ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು (Fans) ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡುತ್ತಿದೆ. ಇದ್ದಕ್ಕಿದ್ದ ಹಾಗೇ ವರು ಸೌಪರ್ಣಿಕಾ ಎನ್ನುವ ಹುಡುಗಿಯನ್ನು ಕರೆಸಿದ್ದಾಳೆ. ಹರ್ಷ (Harsha) ಮತ್ತಷ್ಟು ಬೇಸರದಲ್ಲಿದ್ದಾನೆ.


  ಬೇಸರದಲ್ಲಿರುವ ಹರ್ಷ
  ಹರ್ಷ ತನ್ನ ಪ್ರೀತಿಯ ಅಮ್ಮಮ್ಮನನ್ನು ಕಳೆದುಕೊಮಡು ಬೇಸರದಲ್ಲಿ ಇದ್ದಾನೆ. ಅವಳ ಕಾರ್ಯಗಳನ್ನು ಮಾಡುತ್ತಿದ್ದಾನೆ. ಅಮ್ಮಮ್ಮ ಹೇಳಿದ ರೀತಿ ಸೈಲೆಂಟ್ ಆಗುತ್ತಿದ್ದಾನೆ. ಅಮ್ಮಮ್ಮ ಜವಾಬ್ದಾರಿಯನ್ನು ಮುಂದೆ ನಿಂತು, ತಪ್ಪಾಗದಂತೆ ಮಾಡಬೇಕು ಎಂದುಕೊಳ್ತಾ ಇದ್ದಾನೆ. ಯಾರು ಎಷ್ಟೇ ಕೂಗಾಡಿದ್ರು ಸೈಲೆಂಟ್ ಆಗಿ ಉತ್ತರ ನೀಡ್ತಾ ಇದ್ದಾನೆ.


  ಸೌಪರ್ಣಿಕಾ ಎಂಬ ಹುಡುಗಿ ಕರೆ ತಂದ ವರು
  ಈ ಹಿಂದೆ ಅಮ್ಮಮ್ಮ ಸೌಪರ್ಣಿಕ ಎಂಬ ಹುಡುಗಿಯನ್ನು ಹುಡುಕು ಎಂದು ಹೇಳಿರುತ್ತಾಳೆ. ಆಕೆ ಹೇಳಿದ್ದು ಭುವಿಯನ್ನು ಹುಡುಕಲು. ಹರ್ಷ ತಪ್ಪು ತಿಳಿದು, ಬೇರೆ ಸೌಪರ್ಣಿಕಾ ಎಂಬ ಹುಡುಗಿಯನ್ನು ಹುಡುಕಿರುತ್ತಾನೆ. ಸಾನಿಯಾಳು ತಪ್ಪು ತಿಳಿದು, ಆಕೆಯನ್ನು ಕಿಡ್ನ್ಯಾಪ್ ಮಾಡಿ ಕೊಲ್ಲಲು ಹೇಳಿರ್ತಾಳೆ. ಹರ್ಷ ಆಕೆಯನ್ನು ಕಾಪಾಡಿರುತ್ತಾನೆ.


  ಇದನ್ನೂ ಓದಿ: Olavina Nildana: ತಾರಿಣಿ ಬಾಳಲ್ಲಿ ಸುಮತಿ ಹೊಸ ಗೇಮ್, ಸಿದ್ಧಾಂತ್​ನಿಂದ ದೂರ ಮಾಡಲು ಪ್ರಯತ್ನ 


  ಹರ್ಷನಿಗೆ ಬೈದು ಹೋದ ಸೌಪರ್ಣಿಕಾ
  ಇದ್ದಕ್ಕಿದ್ದ ಹಾಗೇ ಸೌಪರ್ಣಿಕಾಳನ್ನು ವರು ಕರೆಸಿದ್ದಾಳೆ. ಆಕೆ ಹರ್ಷನ ಮುಂದೆ ಬಂದು ನಿಂತಿದ್ದಾಳೆ. ಹರ್ಷನಿಗೆ ಚೆನ್ನಾಗಿ ಬೈದಿದ್ದಾಳೆ. ಇನ್ನೊಬ್ಬರ ಜೀವನದಲ್ಲಿ ಈ ರೀತಿ ಆಟವಾಡಬೇಡಿ.


  ನೀವು ಸೌಪರ್ಣಿಕಾ ಅನ್ನುವವರನ್ನು ಟಿಶು ಪೇಪರ್ ತರ ಮಾಡಿಕೊಂಡಿದ್ದೀರಾ? ಕೆಲಸ ಆದ ಮೇಲೆ ಬಿಸಾಕ್ತೀರಿ. ಇನ್ನು ಎಷ್ಟು ಜನಕ್ಕೆ ಈ ರೀತಿ ಮಾಡಿದ್ದೀರಿ ಎಂದು ಪ್ರಶ್ನೆ ಮಾಡ್ತಾಳೆ. ಹರ್ಷ ನನ್ನನ್ನು ಕ್ಷಮಿಸಿ ಎನ್ನುತ್ತಾನೆ. ಆದ್ರೂ ಆಕೆ ಬೈದು ಹೊರಟು ಹೋಗುತ್ತಾಳೆ.


  colors kannada serial, kannada serial, kannadathi serial, souparnika entry to serial, bhuvi in danger situation, harsha mother death, ಕನ್ನಡತಿ ಧಾರಾವಾಹಿ, ಮತ್ತೆ ಸೌಪರ್ಣಿಕಾಳನ್ನು ಕರೆ ತಂದ ವರು, ಭುವಿ ಪ್ರಾಣಕ್ಕೆ ಅಪಾಯನಾ?, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
  ಹರ್ಷ


  ಸೌಪರ್ಣಿಕಾ ಹೆಸರಿಗೆ ಇರುವ ಆಸ್ತಿ 
  ರತ್ನಮಾಲಾಗೆ ಯಾವಾಗ ಭುವಿ ಪರಿಚಯ ಆಯ್ತೋ, ಅವತ್ತಿನಿಂದ ಅವಳೆಂದ್ರೆ ತುಂಬಾ ಇಷ್ಟ ಆಗಿತ್ತು. ಈಕೆಯೇ ನಮ್ಮ ಮನೆಗೆ ತಕ್ಕ ಸೊಸೆ ಎಂದು ಆಸ್ತಿಯನ್ನು ಭುವಿ ಹೆಸರಿಗೆ ಬರೆದಿರುತ್ತಾಳೆ. ಆದ್ರೆ ಭುವಿಯ ನಿಜವಾದ ಹೆಸರು ಸೌಪರ್ಣಿಕಾ. ಅದು ಎಲ್ಲರಿಗೂ ಗೊತ್ತಿಲ್ಲ. ಈಗ ವರುಗೆ ಆಸ್ತಿ ಬಗ್ಗೆ ಗೊತ್ತಾಗೊದೆ. ಅದಕ್ಕೆ ಆ ಸೌಪರ್ಣಿಕಾ ಎನ್ನುವ ಹುಡುಗಿ ಕರೆಸಿದ್ದಾಳೆ.


  colors kannada serial, kannada serial, kannadathi serial, souparnika entry to serial, bhuvi in danger situation, harsha mother death, ಕನ್ನಡತಿ ಧಾರಾವಾಹಿ, ಮತ್ತೆ ಸೌಪರ್ಣಿಕಾಳನ್ನು ಕರೆ ತಂದ ವರು, ಭುವಿ ಪ್ರಾಣಕ್ಕೆ ಅಪಾಯನಾ?, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
  ವರು


  ಭುವಿ ಪ್ರಾಣಕ್ಕೆ ಅಪಾಯನಾ?
  ಸೌಪರ್ಣಿಕಾ ಹೆಸರಲ್ಲಿ ರತ್ನಮಾಲಾ ತನ್ನ ಆಸ್ತಿಯನ್ನು ಬರೆದಿದ್ದಾಳೆ. ಅಂದ್ರೆ ಭುವಿ ಹೆಸರಿಗೆ. ಅದಕ್ಕೆ ಸೌಪರ್ಣಿಕಾಳಿಗೆ ಅಪಾಯ ಮಾಡಿದ್ರೆ, ಅಂತ ಸಾನಿಯಾ ಕಾಯ್ತಾ ಇದ್ದಾಳೆ. ಈಗ ಅವಳಿಗೆ ಭುವಿನೇ ಸೌಪರ್ಣಿಕಾ ಅಂತ ಗೊತ್ತಾದ್ರೆ, ಅವಳ ಜೀವಕ್ಕೆ ಅಪಾಯ ಮಾಡಬಹುದು.


  ಇದನ್ನೂ ಓದಿ: Bigg Boss Kannada: ವೀಕೆಂಡ್​​ಗೆ ಕಿಚ್ಚನ ಸ್ಪೆಷಲ್ ಅಡುಗೆ, ಖುಷಿಯಿಂದ ಕುಣಿದಾಡಿದ ಸ್ಪರ್ಧಿಗಳು! 


  ಹರ್ಷನಿಗೆ ಭುವಿಯೇ ಸೌಪರ್ಣಿಕಾ ಅಂತ ಗೊತ್ತಾಗುತ್ತಾ? ವರು ಮುಂದಿನ ಪ್ಲ್ಯಾನ್ ಏನು? ಸಾನಿಯಾಗೆ ಎಂಡಿ ಪಟ್ಟ ಸಿಗುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ಕನ್ನಡತಿ ಸೀರಿಯಲ್ ನೋಡಬೇಕು.

  Published by:Savitha Savitha
  First published: