• Home
  • »
  • News
  • »
  • entertainment
  • »
  • Kannadathi: ಹರ್ಷನಿಗಾಗಿ ಅಡ್ಡ ದಾರಿ ಹಿಡಿದ ವರು! ಸಾನಿಯಾ ಹೇಳಿದ ಪೇಪರ್​ ಹಿಡಿದು ಹೊಸ ಗೇಮ್

Kannadathi: ಹರ್ಷನಿಗಾಗಿ ಅಡ್ಡ ದಾರಿ ಹಿಡಿದ ವರು! ಸಾನಿಯಾ ಹೇಳಿದ ಪೇಪರ್​ ಹಿಡಿದು ಹೊಸ ಗೇಮ್

ಹರ್ಷನಿಗಾಗಿ ಅಡ್ಡ ದಾರಿ ಹಿಡಿದ್ಲಾ ವರು?

ಹರ್ಷನಿಗಾಗಿ ಅಡ್ಡ ದಾರಿ ಹಿಡಿದ್ಲಾ ವರು?

ವರು ತನಗೆ ಮೋಸ ಆಗಿದೆ. ಹರ್ಷ ಸಿಗಲಿಲ್ಲ ಎಂದು ಮಲಗಿರುವ ರತ್ನಮಾಲಾ ಬಳಿ ತನ್ನ ನೋವು ಹೇಳಿಕೊಳ್ಳುತ್ತಿದ್ದಾಳೆ. ಅಲ್ಲದೇ ಸಾನಿಯಾ ಕೊಟ್ಟ ಪೇಪರ್ ಗೆ ಬಲವಂತವಾಗಿ ಅವರ ಬಳಿ ಸಹಿ ಮಾಡಿಸಿಕೊಳ್ಳಲು ಯತ್ನ ಮಾಡ್ತಾ ಇದ್ದಾಳೆ.

  • News18 Kannada
  • Last Updated :
  • Karnataka, India
  • Share this:

    ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ (Kannadathi) ಧಾರಾವಾಹಿ (Serial) ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್‍ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ (Fans) ಅಲ್ಲ. ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡುತ್ತಿದೆ. ರತ್ನಮಾಲಾ ಕೋಮಾಗೆ (Coma) ಹೋಗಿದ್ದಾರೆ. ಸಾನಿಯಾ ಮಾತು ಕೇಳಿ ವರು, ಅಮ್ಮಮ್ಮನ ಬಳಿ ಸಹಿ (Signature) ಮಾಡಿಸಲು ಮುಂದಾಗಿದ್ದಾಳೆ.


    ಕೋಮಾದಲ್ಲಿರುವ ಅಮ್ಮಮ್ಮ


    ರತ್ನಮಾಲಾ ಅವರಿಗೆ ಮೊದಲಿನಿಂದಲೂ ಆರೋಗ್ಯ ಸಮಸ್ಯೆ ಇತ್ತು. ತಾನು ಸಾಯುವ ದಿನಗಳನ್ನು ಲೆಕ್ಕಾ ಹಾಕ್ತಾ ಇದ್ರು. ಅದರ ಜೊತೆ ಮರೆವಿನ ಕಾಯಿಲೆ ಶುರುವಾಗಿತ್ತು. ಆದ್ರೆ ಈಗ ಆಕೆ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟು, ಕೋಮಾಗೆ ಹೋಗಿದ್ದಾರೆ. ಅವರು ಯಾವಾಗ ಎಚ್ಚರಗೊಳ್ತಾರೆ ಅಂತ ಗೊತ್ತಿಲ್ಲ.


    MD ಪಟ್ಟ ಪಡೆಯಲು ಸಾನಿಯಾ ಹರಸಾಹಸ


    ಅಮ್ಮಮ್ಮನ ಆರೋಗ್ಯ ಸರಿ ಇಲ್ಲದ ಕಾರಣ ಕಂಪನಿ ಜವಾಬ್ದಾರಿಯನ್ನು ಹರ್ಷ ತೆಗೆದುಕೊಂಡಿದ್ದಾನೆ. ರತ್ನಮಾಲಾ ಅವರ ಮಗನಾಗಿ, ಸಾನಿಯಾಳನ್ನು ಎಂಡಿ ಪೋಸ್ಟ್ ನಿಂದ ಕೆಳಗಿಳಿಸಿದ್ದಾನೆ. ಸಾನಿಯಾ ಹೇಗಾದ್ರೂ ಎಂಡಿ ಪಟ್ಟವನ್ನು ಪಡೆಯಬೇಕು ಎಂದು ಹಠ ತೊಟ್ಟಿದ್ದಾಳೆ. ಅದಕ್ಕೆ ಎಂತಹ ರಿಸ್ಕ್ ತೆಗೆದುಕೊಳ್ಳುಲು ರೆಡಿಯಿದ್ದಾಳೆ.


    ಇದನ್ನೂ ಓದಿ: Olavina Nildana: ಅಮ್ಮ ಎಂದುಕೊಂಡಿದ್ದವಳೇ ತಾರಿಣಿಗೆ ವಿಷ ಬೆರೆಸಿ ಕೊಟ್ಟಿದ್ದಾಳೆ! ಗಣಪತಿ ಕಾಪಾಡ್ತಾನಾ? 


    ವರು ಸಹಾಯ ಕೇಳಿದ ಸಾನಿಯಾ


    ಸಾನಿಯಾಗೆ ಎಂಡಿ ಪಟ್ಟ ಬೇಕು. ಅದಕ್ಕೆ ವರು ಸಹಾಯ ಕೇಳುತ್ತಿದ್ದಾಳೆ. ನಾನು ನಿನಗೆ ಹೀರೋ ವಿಷಯದಲ್ಲಿ ಎಷ್ಟೊಂದು ಸಹಾಯ ಮಾಡಿದ್ದೇನೆ. ಮುಂದೆಯೂ ಮಾಡುತ್ತೇನೆ. ನನಗೆ ಒಂದು ಸಹಾಯ ಮಾಡು ಎಂದು ಕೇಳ್ತಾಳೆ. ಏನು ಎಂದಿದ್ದಕ್ಕೆ, ನಾನು ಕೊಡುವ ಒಂದು ಪೇಪರ್ ಗೆ  ಅಮ್ಮಮ್ಮನ ಬಳಿ ಸಹಿ ಮಾಡಿಸಿಕೊಂಡು ಬಾ ಎನ್ನುತ್ತಾಳೆ.


    colors kannada serial, kannada serial, kannadathi serial, saniya plan signature from rathnamala, kannadathi serial today episode, ಕನ್ನಡತಿ ಧಾರಾವಾಹಿ, ಹರ್ಷನಿಗಾಗಿ ಅಡ್ಡ ದಾರಿ ಹಿಡಿದ್ಲಾ ವರು, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ಸಾನಿಯಾ


    ಹರ್ಷನಿಗಾಗಿ ವರು ಅಡ್ಡದಾರಿ


    ವರೂಧಿನಿಗೆ ಮೊದಲಿನಿಂದಲೂ ಹರ್ಷ ಎಂದ್ರೆ ತುಂಬಾ ಇಷ್ಟ. ಅವನೇ ನನ್ನ ಹೀರೋ ಎಂದುಕೊಂಡು ಪ್ರಾಣಕ್ಕಿಂತ ಹೆಚ್ಚು ಪ್ರೀತಿ ಮಾಡ್ತಾ ಇದ್ಲು. ಆದ್ರೆ ಹರ್ಷನಿಗೆ ವರು ಇಷ್ಟ ಇಲ್ಲ. ಭುವಿಯನ್ನು ಪ್ರೀತಿಸಿ ಮದುವೆ ಆಗಿದ್ದಾನೆ. ಆದ್ರೂ ವರುಗೆ ಹರ್ಷನ ಮೇಲೆ ಕಣ್ಣು ಅವನನ್ನು ಹೇಗಾದ್ರೂ ಪಡೆಯಬೇಕು ಎಂದು ಸಾನಿಯಾ ಮಾತು ಕೇಳುತ್ತಿದ್ದಾಳೆ.


    ಇದನ್ನೂ ಓದಿ: Kendasampige: ನಿತ್ಯಾಳಿಗೆ ವಾರ್ನಿಂಗ್ ಕೊಟ್ಟ ಸುಮನಾ ಅತ್ತೆ ಪದ್ಮಾ, ತೀರ್ಥನ ಸುದ್ದಿಗೆ ಬರದಂತೆ ಎಚ್ಚರಿಕೆ! 


    ಅಮ್ಮಮ್ಮನ ಬಳಿ ಸಹಿ ಹಾಕಿಸಿಕೊಳ್ಳೋ ಯತ್ನ


    ವರು ತನಗೆ ಮೋಸ ಆಗಿದೆ. ಹರ್ಷ ಸಿಗಲಿಲ್ಲ ಎಂದು ಮಲಗಿರುವ ರತ್ನಮಾಲಾ ಬಳಿ ತನ್ನ ನೋವು ಹೇಳಿಕೊಳ್ಳುತ್ತಿದ್ದಾಳೆ. ಅಲ್ಲದೇ ಸಾನಿಯಾ ಕೊಟ್ಟ ಪೇಪರ್ ಗೆ ಬಲವಂತವಾಗಿ ಅವರ ಬಳಿ ಸಹಿ ಮಾಡಿಸಿಕೊಳ್ಳಲು ಯತ್ನ ಮಾಡ್ತಾ ಇದ್ದಾಳೆ. ಆಗ ರತ್ನಮಾಲಾ ಅವರಿಗೆ ಎಚ್ಚರ ಆಗುತ್ತೆ. ಹರ್ಷ, ಹರ್ಷ ಎನ್ನುತ್ತಿದ್ದಾರೆ. ಆದ್ರೆ ವರು ಸೈನ್ ಮಾಡಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಳೆ.


    colors kannada serial, kannada serial, kannadathi serial, saniya plan signature from rathnamala, kannadathi serial today episode, ಕನ್ನಡತಿ ಧಾರಾವಾಹಿ, ಹರ್ಷನಿಗಾಗಿ ಅಡ್ಡ ದಾರಿ ಹಿಡಿದ್ಲಾ ವರು, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ಅಮ್ಮಮ್ಮ


    ಸಾನಿಯಾ ಕೊಟ್ಟ ಪೇಪರ್ ಗೆ ಸೈನ್ ಆಗುತ್ತಾ? ಅಮ್ಮಮ್ಮ ಆರೋಗ್ಯ ಮತ್ತಷ್ಟು ಹದಗೆಡುತ್ತಾ? ಹರ್ಷನಿಗೆ ರತ್ನಮಾಲಾ ಎಚ್ಚರ ಆಗಿದ್ದು ಗೊತ್ತಾಗುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ಕನ್ನಡತಿ ಸೀರಿಯಲ್ ನೋಡಬೇಕು.

    Published by:Savitha Savitha
    First published: