• Home
  • »
  • News
  • »
  • entertainment
  • »
  • Kannadathi: ಪ್ರೀತಿಯ ಅಮ್ಮನನ್ನು ಕೋಮಾದಲ್ಲಿ ನೋಡಿ ಹರ್ಷ ಭಾವುಕ, ಬದುಕಿ ಬರ್ತಾರಾ ರತ್ನಮಾಲಾ?

Kannadathi: ಪ್ರೀತಿಯ ಅಮ್ಮನನ್ನು ಕೋಮಾದಲ್ಲಿ ನೋಡಿ ಹರ್ಷ ಭಾವುಕ, ಬದುಕಿ ಬರ್ತಾರಾ ರತ್ನಮಾಲಾ?

ಪ್ರೀತಿಯ ಅಮ್ಮನನ್ನು ಕೋಮಾದಲ್ಲಿ ನೋಡಿ ಹರ್ಷ ಭಾವುಕ

ಪ್ರೀತಿಯ ಅಮ್ಮನನ್ನು ಕೋಮಾದಲ್ಲಿ ನೋಡಿ ಹರ್ಷ ಭಾವುಕ

ನಾನು ಪಾಠ ಕಲಿಯಲು ಅಮ್ಮಮ್ಮನನ್ನು ಬಳಿಸಿಕೊಳ್ಳಬಾರದಿತ್ತು. ಏನಾದ್ರೂ ಆಗಲಿ, ಎಲ್ಲಾ ಡಾಕ್ಟರ್ ಗೆ  ಕೈ ಮುಗಿಯುತ್ತೇನೆ. ಹೇಗಾದ್ರೂ ಮಾಡಿ ಅಮ್ಮಮ್ಮನನ್ನು ಉಳಿಸಿ ಕೊಡಿ ಎಂದು ಎಲ್ಲರ ಬಳಿ ಕೇಳಿಕೊಳ್ತೇನೆ ಎಂದು ಹರ್ಷ ಹೇಳಿದ್ದಾನೆ.

  • News18 Kannada
  • Last Updated :
  • Karnataka, India
  • Share this:

    ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ (Serials) ಕನ್ನಡತಿ (Kannadathi) ಧಾರಾವಾಹಿ ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್‍ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ. ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡುತ್ತಿದೆ. ಹರ್ಷ (Harsha) ಅಮ್ಮಮ್ಮನ ಬಳಿ ಮಾತನಾಡುತ್ತಿರುವಾಗಲೇ ರತ್ನಮಾಲಾ ಕೋಮಾಗೆ (Coma) ಹೋಗಿದ್ದಾರೆ. ಅಮ್ಮನನ್ನು ನೆನೆದು ಹರ್ಷ ಕಣ್ಣೀರಿಡುತ್ತಿದ್ದಾನೆ (Crying).


    ಕೋಮಾಗೆ ಹೋದ ಅಮ್ಮಮ್ಮನಿಗೆ ಚಿಕಿತ್ಸೆ
    ಹರ್ಷ ತನ್ನ ಮನದ ಮಾತನ್ನು ಅಮ್ಮಮ್ಮ ಬಳಿ ಹೇಳುತ್ತಿರುವಾಗ್ಲೇ ಆಕೆ ಕೆಳಗೆ ಬಿದ್ದು ಕೋಮಾಗೆ ಹೋಗಿ ಬಿಟ್ಟಿದ್ದಾಳೆ. ದೇವ್ ಸಹ ಆಕೆಯನ್ನು ಚೆಕ್ ಮಾಡಿ ಕೋಮಾಗೆ ಹೋಗಿರುವುದನ್ನು ಖಚಿತಪಡಿಸಿದ್ದಾನೆ. ಅಮ್ಮಮ್ಮ ತನ್ನ ಮನದ ಮಾತು ಹರ್ಷನಿಗೆ ಹೇಳಬೇಕಿತ್ತು. ಆದ್ರೆ ಏನೂ ಹೇಳದೇ ಕೋಮಾಗೆ ಹೋಗಿ ಬಿಟ್ಟಿದ್ದಾಳೆ. ಅಮ್ಮಮ್ಮನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.


    ಅಮ್ಮಮ್ಮನನ್ನು ನೆನೆದು ಹರ್ಷ ಭಾವುಕ
    ಹರ್ಷ ಅಮ್ಮಮ್ಮನ ಬಗ್ಗೆ ದೇವ್ ಬಳಿ ಹೇಳಿಕೊಳ್ಳತ್ತಿದ್ದಾನೆ. ಅಮ್ಮಮ್ಮ ಜೊತೆ ಉಳಿದಿರುವ ಸಮಯವನ್ನಾದ್ರೂ ಕೂತು ಮಾತನಾಡಬೇಕು. ನಾನು ಅವರ ಜೊತೆ ಮಾತನಾಡಿದ್ದಕ್ಕಿಂತ ಜಗಳ ಆಡಿದ್ದೇ ಹೆಚ್ಚು. ಜಗಳ ಎಲ್ಲ ಬಿಟ್ಟು ಬಿಡಬೇಕು. 6 ಮೂರಾಗಲಿ, 3 ಆರಾಗಲಿ, ಅಮ್ಮಮ್ಮನ ಜೊತೆ ಇನ್ನು ಜಗಳ ಮಾಡಲ್ಲ ಎಂದು ಡಿಸೈಡ್ ಮಾಡಿದ್ದೇನೆ ಎಂದು ಹರ್ಷ ಹೇಳ್ತಾನೆ. ಅದಕ್ಕೆ ದೇವ್ ಗಿಲ್ಟ್ ಮಾಡಿಕೊಳ್ಳಬೇಡ. ಎಲ್ಲಿ ಪ್ರೀತಿ ಜಾಸ್ತಿ ಇರುತ್ತೋ ಅಲ್ಲಿ ಜಗಳ ಹೆಚ್ಚಿರುತ್ತೆ ಎಂದು ಹೇಳಿದ್ದಾನೆ.



    ನೀನು ಜಗಳ ಮಾಡಿದ್ದೀಯಾ ಅಷ್ಟೇ, ದ್ವೇಷ ಮಾಡಿಲ್ಲ ತಾನೇ. ಜಗಳ ಅನ್ನೋದು ಒಬ್ಬರೇ ಮಾಡೋ ಕೆಲಸ ಅಲ್ಲ ಅಲ್ವಾ? ಜಗಳಕ್ಕೆ ಇಬ್ಬರು ಬೇಕಾಕ್ತಾರೆ. ನೀನು ದೊಡ್ಡಮ್ಮನ ಬಳಿ ಜಗಳ ಮಾಡಿದ್ದೀಯಾ ಅಂದ್ರೆ, ಅವರು ನಿನ್ನ ಜೊತೆ ಜಗಳ ಮಾಡಿರಬೇಕು ತಾನೆ. ಅಂದ ಮೇಲೆ ದೊಡ್ಡಮ್ಮನಿಗೂ ನಿನ್ನ ಮೇಲೆ ಪ್ರೀತಿ ಇದೆ ಎಂದು ಆಯ್ತು. ಮತ್ತೆ ಯಾಕ್ ಬೇಜಾರು ಮಾಡಿಕೊಳ್ಳುತ್ತಿ ಅಂತ ದೇವ್ ಹರ್ಷನಿಗೆ ಸಮಾಧಾನಾ ಮಾಡುತ್ತಿದ್ದಾರೆ.


    ಇದನ್ನೂ ಓದಿ: Lakshana: ಲಕ್ಷಣ ಧಾರಾವಾಹಿಗೆ ವೈಷ್ಣವಿ ಎಂಟ್ರಿ, ನಕ್ಷತ್ರಾ-ಭೂಪತಿ ಪ್ರೀತಿಗೆ ಮತ್ತೊಂದು ವಿಘ್ನ! 


    ನಾನು ಪಾಠ ಕಲಿಯಲು ಅಮ್ಮಮ್ಮನನ್ನು ಬಳಸಿಕೊಂಡೆ
    ಹರ್ಷ ದೇವ್ ಬಳಿ, ನಾನು ಅಮ್ಮಮ್ಮ ಚೆನ್ನಾಗಿರಬಹುದಿತ್ತು ಎನ್ನುತ್ತಾನೆ. ಅದಕ್ಕೆ ದೇವ್, ಜೀವನದಲ್ಲಿ ಪ್ರತಿಯೊಂದು ಪಾಠ ಕಣೋ ಎನ್ನುತ್ತಾನೆ. ನಾನು ಪಾಠ ಕಲಿಯಲು ಅಮ್ಮಮ್ಮನನ್ನು ಬಳಿಸಿಕೊಳ್ಳಬಾರದಿತ್ತು. ಏನಾದ್ರೂ ಆಗಲಿ, ಎಲ್ಲಾ ಡಾಕ್ಟರ್ ಗೆ  ಕೈ ಮುಗಿಯುತ್ತೇನೆ. ಹೇಗಾದ್ರೂ ಮಾಡಿ ಅಮ್ಮಮ್ಮನನ್ನು ಉಳಿಸಿ ಕೊಡಿ ಎಂದು ಎಲ್ಲರ ಬಳಿ ಕೇಳಿಕೊಳ್ತೇನೆ ಎಂದು ಹರ್ಷ ಹೇಳಿದ್ದಾನೆ.


    colors kannada serial, kannada serial, kannadathi serial, harsha mother in coma, ಕನ್ನಡತಿ ಧಾರಾವಾಹಿ, ಪ್ರೀತಿಯ ಅಮ್ಮನನ್ನು ಕೋಮಾದಲ್ಲಿ ನೋಡಿ ಹರ್ಷ ಭಾವುಕ, ಬದುಕೇ ಬರ್ತಾರಾ ರತ್ನಮಾಲಾ?, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ದೇವ್


    ಬದುಕಿ ಬರ್ತಾಳಾ ಅಮ್ಮಮ್ಮ?
    ರತ್ನಮಾಲಾ ಅವರು ಕೋಮಾಗೆ ಹೋಗಿದ್ದು, ಇನ್ನು ಎಚ್ಚರಗೊಳ್ಳುವುದ ಕಷ್ಟ ಅಂತಿದ್ದಾರೆ ಡಾಕ್ಟರ್. ಹರ್ಷ ಅಮ್ಮ ಬದುಕಲಿ ಎಂದು ಬೇಡಿಕೊಳ್ಳುತ್ತಿದ್ದಾನೆ. ಅಲ್ಲದೇ ಅಮ್ಮಮ್ಮ ಹೇಳಬೇಕಾದ ಮಾತುಗಳು ಆಕೆಯ ಬಳಿಯೇ ಉಳಿದಿವೆ. ಮನಸ್ಸಿನ ಮಾತು ಹೇಳಲಾದ್ರೂ ಬದುಕುತ್ತಾಳಾ? ನೋಡಬೇಕು.


    ಇದನ್ನೂ ಓದಿ: Gattimela: ತಮ್ಮನನ್ನು ಕಾಪಾಡೋಕೆ ಟೈಟ್ ಸೆಕ್ಯೂರಿಟಿ! ವೇದಾಂತ ತಮ್ಮ ದ್ರುವನಿಗೆ ಪ್ರಾಣಾಪಾಯ 


    ಕನ್ನಡತಿ ಧಾರಾವಾಹಿಯಲ್ಲಿ ಅಮ್ಮಮ್ಮನ ಪಾತ್ರ ಅಂತ್ಯವಾಗುತ್ತಾ? ಅಮ್ಮಮ್ಮ ಬದುಕಿ ಬರ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಸೀರಿಯಲ್ ನೋಡಬೇಕು.

    Published by:Savitha Savitha
    First published: