• Home
  • »
  • News
  • »
  • entertainment
  • »
  • Kannadathi: ಸಾನಿಯಾಗೆ ಶಾಕ್, ಇನ್ನುಂದೆ ಹರ್ಷ ಕಂಪನಿ MD; ಅತ್ತ ಭುವಿಗೆ ಡಿವೋರ್ಸ್ ಕೊಡಿಸಲು ವರೂಧಿನಿ ಪ್ಲ್ಯಾನ್!

Kannadathi: ಸಾನಿಯಾಗೆ ಶಾಕ್, ಇನ್ನುಂದೆ ಹರ್ಷ ಕಂಪನಿ MD; ಅತ್ತ ಭುವಿಗೆ ಡಿವೋರ್ಸ್ ಕೊಡಿಸಲು ವರೂಧಿನಿ ಪ್ಲ್ಯಾನ್!

ಇನ್ನುಂದೆ ಹರ್ಷ ಕಂಪನಿ ಎಂಡಿ

ಇನ್ನುಂದೆ ಹರ್ಷ ಕಂಪನಿ ಎಂಡಿ

ಆ ಕಡೆ ಹರ್ಷ, ಸಾನಿಯಾ ಕಂಪನಿ ಎಂಡಿ ಸ್ಥಾನಕ್ಕೆ ಜಗಳ ಆಡ್ತಾ ಇದ್ದಾರೆ. ಇತ್ತ ಅಮ್ಮಮ್ಮ ಸದ್ದಿಲ್ಲದೇ ಭುವಿಯನ್ನೇ ಕಂಪನಿ ಎಂಡಿ ಮಾಡಲು ಹೊರಟಿದ್ದಾಳೆ. ಎಲ್ಲ ಫೈಲ್ ಗಳನ್ನು ಕೈಗೆ ಇಟ್ಟು ಕಂಪನಿ ನಡೆಸಿಕೊಂಡು ಹೋಗು. ಎಲ್ಲ ಜವಾಬ್ದಾರಿ ತೆಗೆದುಕೋ ಎಂದು ಹೇಳುತ್ತಿದ್ದಾಳೆ.

  • News18 Kannada
  • Last Updated :
  • Karnataka, India
  • Share this:

    ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ (Kannadathi) ಧಾರಾವಾಹಿ (Serial) ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್‍ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ. ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡುತ್ತಿದೆ. ಅಮ್ಮಮ್ಮ ಕಂಪನಿ ನೋಡಿಕೋ ಎಂದು ಭುವಿಗೆ ಹೇಳ್ತಿದ್ದಾರೆ. ಸಾನಿಯಾ ತಾನೇ ಖಾಯಂ ಎಂಡಿ ಅಂದುಕೊಂಡಿದ್ದಾಳೆ. ಆದ್ರೆ ಹರ್ಷ (Harsha) ನಾನೇ ಕಂಪನಿ ಎಂಡಿ (MD) ಎನ್ನುತ್ತಿದ್ದಾನೆ.


    ಕೈ ಮೇಲೆ MD ಅಂತ ಟ್ಯಾಟೋ!


    ಅಮ್ಮಮ್ಮ ತಮಗೆ ಗೊತ್ತಾಗದೇ, ಭುವಿ ಎಂದುಕೊಂಡು ಸಾನಿಯಾಗೆ , ಮನೆಯಲ್ಲಿ ಆಗಿದ್ದು ಮರೆತು ಬಿಡು. ಕಂಪನಿ ನಡೆಸಿಕೊಂಡು ಹೋಗು. ಎಂಡಿ ಆಗಿ ಜವಾಬ್ದಾರಿ ವಹಿಸಿಕೋ ಎಂದು ಹೇಳ್ತಾರೆ. ಅದೇ ಖುಷಿಯಲ್ಲಿ ತೇಲಾಡ್ತಾ ಇದ್ದಾಳೆ ಸಾನಿಯಾ.


    ಇನ್ಮುಂದೆ ನಾನೇ ಎಂಡಿ. ನನ್ನನ್ನು ಯಾರೂ ತಡೆಯೋಕೆ ಆಗಲ್ಲ ಎಂದು ಸಂತೋಷವಾಗಿದ್ದಾಳೆ. ಅಲ್ಲದೇ ತನ್ನ ಗೆಲುವು ಯಾವಾಗಲೂ ಕಾಣುತ್ತಿರಬೇಕು ಎಂದು ಕೈಯಲ್ಲಿ ಎಂಡಿ ಎಂದು ಟ್ಯಾಟೋ ಹಾಕಿಸಿಕೊಂಡಿದ್ದಾಳೆ.


    ತಾನೇ ಎಂಡಿ ಎಂದು ಸಾನಿಯಾಗೆ ನೋಟಿಸ್


    ಸಾನಿಯಾ ತಾನು ಎಂಡಿ ಎಂದು ಮೆರೆಯುತ್ತಿದ್ರೆ, ಹರ್ಷ ಸಾನಿಯಾಗೆ ನೋಟಿಸ್ ಕಳಿಸಿದ್ದಾನೆ. ಇನ್ಮುಂದೆ ಈ ಕಂಪನಿಯ ಎಂಡಿ ನಾನು, ಆ ಪೋಸ್ಟ್ ನಿಂದ ನೀವು ಕೆಳಗೆ ಇಳಿಯಿರಿ ಎನ್ನುತ್ತಿದ್ದಾನೆ. ಅದನ್ನು ನೋಡಿ ಸಾನಿಯಾ ಶಾಕ್ ಆಗಿದ್ದಾಳೆ. ಅತ್ತೆ ನಾನೇ ಎಂಡಿ ಎಂದಿದ್ರು, ಹರ್ಷ ಬಂದಿದ್ದಾನೆ ಎಂದು ಆತಂಕಗೊಂಡಿದ್ದಾಳೆ.


    ಇದನ್ನೂ ಓದಿ: Kannadathi: ಊಹಾಪೋಹಗಳಿಗೆ ತೆರೆ, ಕನ್ನಡತಿ ಸೀರಿಯಲ್​ಗೆ ವರೂಧಿನಿ ವಾಪಸ್!


    ಭುವಿಗೆ MD ಆಗು ಎನ್ನುತ್ತಿರುವ ರತ್ನಮಾಲಾ


    ಆ ಕಡೆ ಹರ್ಷ, ಸಾನಿಯಾ ಕಂಪನಿ ಎಂಡಿ ಸ್ಥಾನಕ್ಕೆ ಜಗಳ ಆಡ್ತಾ ಇದ್ದಾರೆ. ಇತ್ತ ಅಮ್ಮಮ್ಮ ಸದ್ದಿಲ್ಲದೇ ಭುವಿಯನ್ನೇ ಕಂಪನಿ ಎಂಡಿ ಮಾಡಲು ಹೊರಟಿದ್ದಾಳೆ. ಎಲ್ಲ ಫೈಲ್ ಗಳನ್ನು ಕೈಗೆ ಇಟ್ಟು ಕಂಪನಿ ನಡೆಸಿಕೊಂಡು ಹೋಗು. ಎಲ್ಲ ಜವಾಬ್ದಾರಿ ತೆಗೆದುಕೋ ಎಂದು ಹೇಳುತ್ತಿದ್ದಾಳೆ. ಭುವಿ ಬೇಡ ಎಂದ್ರೂ ಕೇಳ್ತಿಲ್ಲ.


    ಧಾರಾವಾಹಿಗೆ ವಾಪಸ್ ಆದ ವರೂಧಿನಿ


    ಹಲವು ದಿನಗಳಿಂದ ಸೀರಿಯಲ್ ನಲ್ಲಿ ವರು ನಾಪತ್ತೆ ಆಗಿದ್ಲು. ಅದಕ್ಕೆ ವರೂಧಿನಿ ಧಾರಾವಾಹಿಯನ್ನು ಬಿಟ್ಟಿದ್ದಾರಾ ಎನ್ನುವ ಪ್ರಶ್ನೆಗಳು ಎದ್ದಿದ್ದವು. ಆದ್ರೆ ಈಗ ಕಮ್ ಬ್ಯಾಕ್ ಮಾಡಿದ್ದಾರೆ.


    ವರೂಧಿನಿ ಇಷ್ಟು ದಿನ ಟ್ರಿಪ್‍ಗೆ ಹೋಗಿದ್ಲಂತೆ. ಹೌದು ನಿಜ ಜೀವನದಲ್ಲಿ ರಿಯಲ್ ಆಗಿ ಸಾರಾ ಅವರು ದೇಶ ಸುತ್ತಿಕೊಂಡು ಬಂದಿದ್ದಾರೆ. ಅದಕ್ಕೆ ಇಷ್ಟು ದಿನ ಕಾಣಿಸಿಕೊಂಡಿರಲಿಲ್ಲ.


    Colors Kannada serial, Kannada serial, Kannadathi Serial, Kannadathi serial today episode, Company MD post and divorce matter in serial, ಕನ್ನಡತಿ ಧಾರಾವಾಹಿ, ಸಾನಿಯಾಗೆ ಶಾಕ್, ಇನ್ನುಂದೆ ಹರ್ಷ ಕಂಪನಿ MD, ಅತ್ತ ಭುವಿಗೆ ಡಿವೋರ್ಸ್ ಕೊಡಿಸಲು ವರೂಧಿನಿ ಪ್ಲ್ಯಾನ್, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ವರೂಧಿನಿ


    ಭುವಿ-ಹರ್ಷನಿಗೆ ಡಿವೋರ್ಸ್ ಕೊಡಿಸಲು ಪ್ಲ್ಯಾನ್


    ವರು ವಾಪಸ್ ಆಗುತ್ತಿದ್ದಂತೆ ತನ್ನ ಬುದ್ಧಿ ತೋರಿಸಿದ್ದಾಳೆ. ಭುವಿ-ಹರ್ಷ ಮದುವೆ ರಿಜಿಸ್ಟ್ರೇಶನ್ ನೆಪದಲ್ಲಿ, ಡಿವೋರ್ಸ್ ಪೇಪರ್ ಗೆ ಸಹಿ ಹಾಕಿಸಿಕೊಳ್ಳುವ ಪ್ಲ್ಯಾನ್ ಮಾಡಿದ್ದಾಳೆ. ಹೀರೋ ಜೊತೆ ನಾನು ಇರಬೇಕು. ನನ್ನ ಬೆಸ್ಟ್ ಫ್ರೆಂಡ್ ಅಲ್ಲ ಎಂದು ಹೇಳಿಕೊಳ್ತಿದ್ದಾಳೆ.


    Colors Kannada serial, Kannada serial, Kannadathi Serial, Kannadathi serial today episode, Company MD post and divorce matter in serial, ಕನ್ನಡತಿ ಧಾರಾವಾಹಿ, ಸಾನಿಯಾಗೆ ಶಾಕ್, ಇನ್ನುಂದೆ ಹರ್ಷ ಕಂಪನಿ MD, ಅತ್ತ ಭುವಿಗೆ ಡಿವೋರ್ಸ್ ಕೊಡಿಸಲು ವರೂಧಿನಿ ಪ್ಲ್ಯಾನ್, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಭುವಿ


    ಇದನ್ನೂ ಓದಿ: BBK Season 9: ಅವಳನ್ನು ಬಿಟ್ಟು ಇವಳು, ಇವಳನ್ನು ಬಿಟ್ಟು ಅವಳು, ರಾಕಿ ಕಣ್ಣು ಕಾವ್ಯಶ್ರೀ, ಅಮೂಲ್ಯ ಮೇಲೆ


    ಕಂಪನಿಗೆ ನಿಜವಾದ ಎಂಡಿ ಯಾರು? ಭುವಿ-ಹರ್ಷ ಡಿವೋರ್ಸ್ ಆಗುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ಕನ್ನಡತಿ ಧಾರಾವಾಹಿ ನೋಡಬೇಕು.

    Published by:Savitha Savitha
    First published: