ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ ಧಾರಾವಾಹಿ (Kannadathi Serial) ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ, ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡುತ್ತಿದೆ. ಧಾರಾವಾಹಿಯಲ್ಲಿ ಅಮ್ಮಮ್ಮನ ಅಧ್ಯಾಯ ಮುಕ್ತಾಯವಾಗ್ತಿದ್ದಂತೆ, ಸೌಪರ್ಣಿಕಾ ಅನ್ನೋ ಹೆಸರು ಓಡಾಡ್ತಾ ಇದೆ. ಎಲ್ಲಾ ಸತ್ಯ (Truth) ಗೊತ್ತಾಗಿರುವ ಭುವಿ ನಾಪತ್ತೆ (Missing) ಆಗಿದ್ದಾಳೆ.
ಸೌಪರ್ಣಿಕಾ-ಸೌಪರ್ಣಿಕಾ ಭೇಟಿ
ಭುವಿ ಮತ್ತು ಸಾನಿಯಾ ಒಂದೇ ಕಾರಿನಲ್ಲಿ ಅಸ್ಥಿ ಬಿಡಲು ಶ್ರೀರಂಗಪಟ್ಟಣಕ್ಕೆ ಹೋಗ್ತಾ ಇರ್ತಾರೆ. ಆಗ ದಾರಿಯಲ್ಲಿ ಸೌಪರ್ಣಿಕಾ ಸಿಗ್ತಾಳೆ. ಆಕೆ ತಾನು ಮೈಸೂರಿಗೆ ಹೊರಟಿರುವುದಾಗಿ ಹೇಳ್ತಾಳೆ. ಅದಕ್ಕೆ ಭುವಿ ಅವರನ್ನು ತಮ್ಮ ಕಾರಿಗೆ ಹತ್ತಿಸಿಕೊಳ್ತಾರೆ. ಸಾನಿಯಾ ಇದ್ದಿದ್ದರಿಂದ ಸೌಪರ್ಣಿಕಾ ಸ್ಪಲ್ಪ ಭಯದಿಂದಲೇ ಇರುತ್ತಾರೆ. ಭುವಿ ಹೆಸರು ಕೂಡ ಸೌಪರ್ಣಿಕಾ, ಈಗ ಇಬ್ಬರು ಸೌಪರ್ಣಿಕಾ ಎದುರಾಗಿದ್ದಾರೆ.
ಹರ್ಷನ ಮೇಲೆ ನಿಮಗ್ಯಾಕೆ ಕೋಪ ಎಂದ ಭುವಿ?
ಸೌಪರ್ಣಿಕಾಳನ್ನು ಭೇಟಿಯಾಗಿರುವ ಭುವಿ, ಹರ್ಷನ ಮೇಲೆ ನಿಮಗ್ಯಾಕೆ ಅಷ್ಟೊಂದು ಕೋಪ, ದ್ವೇಷ? ನಿಜವಾಗ್ಲೂ ಏನಾಗಿತ್ತು ಹೇಳಿ ಎಂದು ಕೇಳಿದ್ದಾಳೆ. 'ಸೌಪರ್ಣಿಕಾ ಹೆಸರಿನಿಂದ ಎಲ್ಲಾ ಶುರುವಾಯ್ತು. ನಾನು ಕೆಲಸಕ್ಕಾಗಿ ಹರ್ಷ ಅವರುನ್ನು ಭೇಟಿಯಾಗಿದ್ದೆ. ತುಂಬಾ ಜಂಟನ್ ಮ್ಯಾನ್ ಅನ್ನಿಸಿದ್ರು. ನನಗೆ ಮೊದಲಿನಿಂದ ಅನುಮಾನ ಶುರುವಾಯ್ತು. ಅವರಿಗೆ ನನಗಿಂತ ಸೌಪರ್ಣಿಕಾ ಅನ್ನೋ ಹೆಸರು ಬೇಕಾಗಿತ್ತು.
ಇದನ್ನೂ ಓದಿ: Bhagya Lakshmi: ಮನೆ ಮರ್ಯಾದೆ ಉಳಿಸಲು ಹೋದ ಭಾಗ್ಯಾಗೆ ಕಣ್ಣೀರಿನ ಶಿಕ್ಷೆ!
ನನಗೆ ಭದ್ರತೆ ಕೊಟ್ರು, ಕಾರು ಕೊಟ್ರು, ಗನ್ ಮ್ಯಾನ್ ಕೊಟ್ರು. ನನಗೆ ರಾಯಲ್ ಟ್ರೀಟ್ ಮೆಂಟ್ ಕೊಟ್ರು. ದಿನಕ್ಕೆ 10 ಸಲ ಕಾಲ್ ಮಾಡೋರು. ಒಬ್ಬಬ್ಬಳೇ ಓಡಾಡಬೇಡಿ ಎಂದರು. ಒಂದು ಕಡೆ ಸಂತೋಷ. ಇನ್ನೊಂದು ಕಡೆ ಭಯ. ಹರ್ಷ ಅವರ ಮನೆಯಲ್ಲಿ ಸಾನಿಯಾ ಸಿಕ್ರು. ನನ್ನ ಹೆಸರು ಸೌಪರ್ಣಿಕಾ ಎಂದು ಗೊತ್ತಾಗಿ ಕಾಟ ಕೊಡಲು ಶುರು ಮಾಡಿದ್ರು. ನನ್ನ ಗರ್ಲ್ ಫ್ರೆಂಡ್ ತರ ಟ್ರೀಟ್ ಮಾಡಿದ್ರು' ಎಂದು ಸೌಪರ್ಣಿಕಾ ಹೇಳಿದ್ದಾಳೆ.
ಸತ್ಯ ಗೊತ್ತಾಗಿ ಭುವಿ ಕಂಗಾಲು
ಅದಾದ ನಂತರ ಸೌರ್ಪಣಿಕಾಳನ್ನು ಹರ್ಷ ಮೈಸೂರಿಗೆ ಕಳಿಸಿದನಂತೆ. ನನಗೆ ಬೇಕಾದ ಸೌಪರ್ಣಿಕಾ ಸಿಕ್ಕಳು ಎಂದು ಹೇಳಿದ್ರು ಎಂದು ಹೇಳಿದ್ದಾಳೆ. ಈ ಎಲ್ಲಾ ಸತ್ಯ ಗೊತ್ತಾಗಿ ಭುವಿ ಕಂಗಾಲಾಗಿದ್ದಾಳೆ. ಹರ್ಷ ನನ್ನನ್ನು ಪ್ರೀತಿ ಮಾಡಿದ್ದೇ ಸೌಪರ್ಣಿಕಾ ಅನ್ನೋ ಹೆಸರಿಗಾ ಎಂಬ ಅನುಮಾನಗಳು ಶುರುವಾಗಿದೆ. ಆಸ್ತಿ ನನ್ನ ಹೆಸರಿಗೆ ಇದ್ದಿದ್ದಕ್ಕೆ ಮದುವೆ ಆದ್ರಾ ಎಂಬ ಚಿಂತೆ ಶುರುವಾಗಿದೆ.
ಇದ್ದಕ್ಕಿದ್ದ ಹಾಗೇ ಭುವಿ ನಾಪತ್ತೆ
ಇದ್ದಕ್ಕಿದ್ದ ಹಾಗೇ ಭುವಿ ಕಾಣ್ತ ಇಲ್ಲ. ನಾಪತ್ತೆ ಆಗಿದ್ದಾಳೆ. ಭುವಿ ಎಲ್ಲಿ ಹೋದ್ಲು. ಮತ್ತೆ ಸೌಪರ್ಣಿಕಾ ಅನ್ನುವ ಹೆಸರಿನಿಂದ ಕಷ್ಟ ಶುರುವಾಗಿದೆಯಾ? ಯಾರದ್ರೂ ಕಿಡ್ನ್ಯಾಪ್ ಮಾಡಿದ್ರಾ? ಅಥವಾ ಬೇಸರ ಮಾಡಿಕೊಂಡು ಎಲ್ಲಿಯಾದ್ರೂ ಹೋದ್ಲಾ? ಹರ್ಷ ಆಕೆಯನ್ನು ಎಲ್ಲ ಕಡೆ ಹುಡುಕುತ್ತಿದ್ದಾನೆ.
ಇದನ್ನೂ ಓದಿ: Lakshana: ಮೌರ್ಯನನ್ನು ಕೊಂದ ಸಿಎಸ್ ವಿರುದ್ಧ ನಕ್ಷತ್ರಾ ಕಿಡಿ, ಪೊಲೀಸರಿಗೆ ದೂರು ಕೊಡಲು ರೆಡಿ!
ಭುವಿ ಎಲ್ಲಿ ಹೋದ್ಲು? ಸೌಪೌರ್ಣಿಕಾ ಹೆಸರಿಂದ ಅಪಾಯನಾ? ಸಾನಿಯಾ ಕೈವಾಡ ಏನಾದ್ರೂ ಇದೇನಾ? ಮುಂದೇನಾಗುತ್ತೆ ಅಂತ ನೋಡೋಕೆ ಕನ್ನಡತಿ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ