• Home
  • »
  • News
  • »
  • entertainment
  • »
  • Kannadathi: ಅಮ್ಮಮ್ಮ ಕೋಮಾದತ್ತ; ಸಾನಿಯಾ ಮುಂದೆ ಸತ್ಯ ಬಾಯ್ಬಿಟ್ಟ ರತ್ನಮಾಲಾ!

Kannadathi: ಅಮ್ಮಮ್ಮ ಕೋಮಾದತ್ತ; ಸಾನಿಯಾ ಮುಂದೆ ಸತ್ಯ ಬಾಯ್ಬಿಟ್ಟ ರತ್ನಮಾಲಾ!

ಕೋಮಾ ಸ್ಥಿತಿಯತ್ತ ಅಮ್ಮಮ್ಮನ ಪರಿಸ್ಥಿತಿ

ಕೋಮಾ ಸ್ಥಿತಿಯತ್ತ ಅಮ್ಮಮ್ಮನ ಪರಿಸ್ಥಿತಿ

ಸಾನಿಯಾಳನ್ನು ಭುವಿ ಎಂದುಕೊಂಡ ಅಮ್ಮಮ್ಮ, ಅವಳನ್ನು ಹಿಡಿದುಕೊಂಡು, ಮನೆಯಲ್ಲಿ ಆಗಿದ್ದನ್ನು ಮರೆತು ಬಿಡು. ಕಂಪನಿಯ ಎಂಡಿ ಆಗಿ ಕೆಲಸ ಮಾಡು ಎಂದು ಹೇಳ್ತಾಳೆ. ಅದನ್ನು ಕೇಳಿಸಿಕೊಂಡ ಸಾನಿಯಾ ಫುಲ್ ಖುಷಿಯಾಗಿದ್ದಾಳೆ.

  • News18 Kannada
  • Last Updated :
  • Karnataka, India
  • Share this:

    ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ (Serials) ಕನ್ನಡತಿ (Kannadathi) ಧಾರಾವಾಹಿ ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್‍ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ. ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡುತ್ತಿದೆ. ಅಮ್ಮಮ್ಮನ ಆರೋಗ್ಯ (Health) ಪರಿಸ್ಥಿತಿ ಹದಗೆಡುತ್ತಿದ್ದು, ಮತ್ತೆ ಆಸ್ಪತ್ರೆ ಸೇರೋ ಸಾಧ್ಯತೆ ಇದೆ. ಅಲ್ಲದೇ ಕೋಮಾ ಸ್ಥಿತಿಗೆ ಹೋಗ್ತಾರಂತೆ.


    ತಲೆ ಸುತ್ತಿ ಕೆಳಗೆ ಬಿದ್ದ ಅಮ್ಮಮ್ಮ
    ರತ್ನಮಾಲಾ ಅವರಿಗೆ ಮರೆವಿ ಕಾಯಿಲೆ ಇದ್ದು ಅದು ಮೂರನೇ ಸ್ಟೇಜ್​ಗೆ ಬಂದಿದೆ. ಇಷ್ಟು ದಿವ ಅವರು ಮರೆಯುತ್ತಿದ್ದರು. ಅದರಿಂದ ಹೆಚ್ಚು ತೊಂದರೆ ಆಗುತ್ತಿರಲಿಲ್ಲ. ಈಗ ಅವರ ದೇಹದ ಮೇಲೆ ಇದು ಪರಿಣಾಮ ಬೀರಬಹುದು ಎಂದು ಡಾಕ್ಟರ್ ಹೇಳಿದ್ದಾರೆ. ಇನ್ನು ಹರ್ಷ ಬಳಿ ಮಾತನಾಡುತ್ತಿರುವಾಗ ರತ್ನಮಾಲಾ ಕೆಳಗೆ ಬಿದ್ದು ಹೋಗ್ತಾರೆ. ಅದನ್ನು ಕಂಡ ಹರ್ಷ ಆತಂಕಗೊಂಡಿದ್ದಾನೆ.


    ಹೆಚ್ಚು ನಿದ್ದೆ ಮಾಡ್ತಾರಂತೆ
    ರತ್ನಮಾಲಾ ತಲೆ ಸುತ್ತಿ ಬಿದ್ದಿದ್ದನ್ನು ಕಂಡು ಹರ್ಷ ಗಾಬರಿ ಆಗಿರುತ್ತಾನೆ. ಆಗ ಅಲ್ಲಿಗೆ ದೇವ್ ಬರ್ತಾನೆ. ಅವರು ಡಾಕ್ಟರ್ ಆದ ಕಾರಣ, ಈ ರೀತಿ ಆಗುತ್ತೆ ಹರ್ಷ. ಈ ಕಾಯಿಲೆ ಇರುವವರು ತುಂಬಾ ಹೊತ್ತು ನಿದ್ದೆ ಮಾಡ್ತಾರೆ ಎಂದು ಹೇಳ್ತಾನೆ. ಅದನ್ನೇ ಹರ್ಷ ಕಾರ್ಯಾ ಇರ್ತಾನೆ. ಆದ್ರೆ ಎಷ್ಟು ವೇಳೆ ಆದ್ರೂ ಅಮ್ಮಮ್ಮ ನಿದ್ದೆಯಿಂದ ಎಚ್ಚರಗೊಳ್ಳಲ್ಲ.


    ಇದನ್ನೂ ಓದಿ: Kantara Hindi Collection: ಬಾಲಿವುಡ್​ನಲ್ಲಿ ಕಾಂತಾರ ಹವಾ! ದಿನವೂ ಕೋಟಿ ಕೋಟಿ ಕಲೆಕ್ಷನ್ 


    ಕೋಮಾ ಸ್ಥಿತಿಗೆ ಹೋಗ್ತಾರಾ ರತ್ನಮಾಲಾ?
    ರತ್ನಮಾಲಾ ಅವರು ನಿದ್ದೆಗೆ ಜಾರಿ ತುಂಬಾ ಹೊತ್ತು ಆಗಿರುತ್ತೆ. ಹರ್ಷ ಅದಕ್ಕೆ ಗಾಬರಿಕೊಂಡು ದೇವ್ ಅಣ್ಣನ ಬಳಿ ಕೇಳ್ತಾನೆ. ಅದಕ್ಕೆ ದೇವ್ ಅರ್ಜೆಂಟ್ ಆಗಿ ಆಸ್ಪತ್ರೆಗೆ ಸೇರಿಸಬೇಕು ಎಂದು ಹೇಳ್ತಾನೆ. ಯಾಕ್ ದೇವಣ್ಣ ಎಂದು ಹರ್ಷ ಕೇಳ್ತಾನೆ. ಅದಕ್ಕೆ ದೇವ್ ಈ ರೀತಿ ಮಲಗಿಯೇ ಇದ್ರೆ ಕೋಮಾಗೆ ಹೋಗೋ ಸ್ಥಿತಿ ಬರುತ್ತೆ. ಅದಕ್ಕೆ ಆಸ್ಪತ್ರೆಗೆ ಸೇಎರಿಸೋಣ ಎಂದು ಹೇಳ್ತಾನೆ.


    Colors Kannada serial, Kannada serial, Kannadathi Serial, Kannadathi serial today episode, hero Harsha mother in problem, ಕನ್ನಡತಿ ಧಾರಾವಾಹಿ, ಭುವಿಗೆ ಎಂಡಿ ಸ್ಥಾನ ಪಟ್ಟ ಕೊಡಲು ಅಮ್ಮಮ್ಮ ಸಿದ್ಧ, ಅಮ್ಮಮ್ಮನಿಗೆ ತನ್ನ ಮರೆವಿನ ಕಾಯಿಲೆ ಬಗ್ಗೆ ಗೊತ್ತಾಯ್ತಾ?, ಕೋಮಾ ಸ್ಥಿತಿಯತ್ತ ಅಮ್ಮಮ್ಮನ ಪರಿಸ್ಥಿತಿ, ಭುವಿ ಅನ್ಕೊಂಡು ಸಾನಿಯಾ ಮುಂದೆ ಸತ್ಯ ಬಾಯ್ಬಿಟ್ಟ ರತ್ನಮಾಲಾ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಭುವಿ


    ಸಾನಿಯಾ ಬಳಿ ಸತ್ಯ ಹೇಳಲಿರುವ ಅಮ್ಮಮ್ಮ
    ಅಮ್ಮಮ್ಮನ ಪರಿಸ್ಥಿತಿ ದಿನದಿಂದ ದಿನಕ್ಕೆ ಗಂಭೀರ ಆಗ್ತಿದೆ. ತಮ್ಮ ಮರೆವಿನ ಕಾಯಿಲೆಯಿಂದ ಏನೇನೋ ಅನಾಹುತಗಳು ನಡೆಯುವಂತೆ ಕಾಣ್ತಿವೆ. ರತ್ನಮಾಲಾ ಅವರು ಸಾನಿಯಾಳನ್ನು ಭುವಿ ಎಂದುಕೊಂಡಿದ್ದಾರೆ. ಅವರ ಕಣ್ಣು ಮಂಜು ಮಂಜಾಗುತ್ತಿವೆ. ಆಕೆಯ ಬಳಿ ಕೆಲವು ಆಫೀಸ್ ಸತ್ಯ ಹೇಳಲಿದ್ದಾರೆ.


    Colors Kannada serial, Kannada serial, Kannadathi Serial, Kannadathi serial today episode, hero Harsha mother in problem, ಕನ್ನಡತಿ ಧಾರಾವಾಹಿ, ಭುವಿಗೆ ಎಂಡಿ ಸ್ಥಾನ ಪಟ್ಟ ಕೊಡಲು ಅಮ್ಮಮ್ಮ ಸಿದ್ಧ, ಅಮ್ಮಮ್ಮನಿಗೆ ತನ್ನ ಮರೆವಿನ ಕಾಯಿಲೆ ಬಗ್ಗೆ ಗೊತ್ತಾಯ್ತಾ?, ಕೋಮಾ ಸ್ಥಿತಿಯತ್ತ ಅಮ್ಮಮ್ಮನ ಪರಿಸ್ಥಿತಿ, ಭುವಿ ಅನ್ಕೊಂಡು ಸಾನಿಯಾ ಮುಂದೆ ಸತ್ಯ ಬಾಯ್ಬಿಟ್ಟ ರತ್ನಮಾಲಾ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಅಮ್ಮಮ್ಮ ಸಾನಿಯಾ


    ಸಾನಿಯಾಗೆ ಎಂಡಿ ಪಟ್ಟ ಫಿಕ್ಸಾ?
    ಸಾನಿಯಾಳನ್ನು ಭುವಿ ಎಂದುಕೊಂಡ ಅಮ್ಮಮ್ಮ, ಅವಳನ್ನು ಹಿಡಿದುಕೊಂಡು, ಮನೆಯಲ್ಲಿ ಆಗಿದ್ದನ್ನು ಮರೆತು ಬಿಡು. ಕಂಪನಿಯ ಎಂಡಿ ಆಗಿ ಕೆಲಸ ಮಾಡು ಎಂದು ಹೇಳ್ತಾಳೆ. ಅದನ್ನು ಕೇಳಿಸಿಕೊಂಡ ಸಾನಿಯಾ ಫುಲ್ ಖುಷಿಯಾಗಿದ್ದಾಳೆ. ಅಮ್ಮಮ್ಮ ಎಂಡಿ ಸ್ಥಾನದಿಂದ ತೆಗೆಯುತ್ತಾರೆ ಎಂದುಕೊಂಡಿದ್ದವಳಿಗೆ, ಎಂಡಿ ಸ್ಥಾನ ಖಾಯಂ ಆಗೋ ರೀತಿ ಆಗ್ತಿದೆ.


    ಇದನ್ನೂ ಓದಿ: Ramachari: ದಟ್ಟ ಕಾಡಿನಲ್ಲಿ ಒಬ್ಬಂಟಿ ಚಾರು, ಜೀವ ಉಳಿಸಿಕೊಳ್ಳಲು ಓಟ - ಅಮ್ಮನಿಂದ ಮಗಳ ಪ್ರಾಣಕ್ಕೆ ಬರ್ತಿದೆ ಕುತ್ತು!


    ಅಮ್ಮಮ್ಮ ಕೋಮಾಗೆ ಹೋಗ್ತಾರಾ? ಸಾನಿಯಾಗೆ ಎಂಡಿ ಪಟ್ಟ ಫಿಕ್ಸಾ? ಮುಂದೇನಾಗುತ್ತೆ ಅಂತ ನೋಡೋಕೆ ಕನ್ನಡತಿ ಸೀರಿಯಲ್ ನೋಡಬೇಕು.

    Published by:Savitha Savitha
    First published: