ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ (Serials) ಕನ್ನಡತಿ (Kannadathi) ಧಾರಾವಾಹಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ, ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ (Super Hit)ಆಗಿ ಓಡ್ತಿದೆ. ಧಾರಾವಾಹಿಯಲ್ಲಿ ಅಮ್ಮಮ್ಮನ ಅಧ್ಯಾಯ ಮುಕ್ತಾಯವಾಗ್ತಿದ್ದಂತೆ, ಭುವಿ ಹೆಸರಲ್ಲಿ ಆಸ್ತಿ ಇರೋದು ಮನೆಯವರಿಗೆ ಗೊತ್ತಾಗಿದೆ. ಮೊದಲ ಬಾರಿ ಭುವಿ ಅಮ್ಮಮ್ಮನ ಗತ್ತಿನಲ್ಲಿ ಮಾತನಾಡಿದ್ದಾಳೆ. ಹರ್ಷನನ್ನ ಬಿಡಿಸಲು ಸಾನಿಯಾ ಒದ್ದಾಡುತ್ತಿದ್ದಾಳೆ.
ಹರ್ಷನನ್ನು ಅರೆಸ್ಟ್ ಮಾಡಿಸಿದ್ದ ಸಾನಿಯಾ
ಹರ್ಷ ಸಾನಿಯಾಳನ್ನು ಎಂಡಿ ಪಟ್ಟದಿಂದ ತೆಗೆದು ಹಾಕಿದ್ದಾನೆ. ಅದಕ್ಕೆ ಸಾನಿಯಾ ಸೇಡು ತೀರಿಸಕೊಳ್ಳಲು, ಪೊಲೀಸರಿಗೆ ದೂರು ನೀಡಿ ಅರೆಸ್ಟ್ ಮಾಡಿದ್ದಾಳೆ. ಈ ಹಿಂದೆ ಹರ್ಷ, ಸಾನಿಯಾಳ ಬಳಿ ಸತ್ಯ ಬಾಯ್ಬಿಡಿಸಲು, ಹರ್ಷ ಸಾನಿಯಾ ತಲೆಗೆ ಗನ್ ಇಟ್ಟಿರುತ್ತಾನೆ. ಅದನ್ನು ಪತ್ರಕರ್ತರೊಬ್ಬರು ವಿಡಿಯೋ ಮಾಡಿರುತ್ತಾರೆ. ಅದನ್ನೇ ಸಾಕ್ಷಿಯಾಗಿಟ್ಟುಕೊಂಡು ಹರ್ಷನನ್ನು ಅರೆಸ್ಟ್ ಮಾಡಿಸಿದ್ದಾಳೆ.
ಸಾನಿಯಾಗೆ ವಿಡಿಯೋ ತೋರಿಸಿದ ಭುವಿ
ಅಮ್ಮಮ್ಮನ ಆರೋಗ್ಯ ಹದಗೆಟ್ಟಾಗ, ಆಂಬುಲೆನ್ಸ್ನಲ್ಲಿ ಕರೆದುಕೊಂಡು ಹೋಗುತ್ತಾ ಇರುತ್ತಾರೆ. ಆಗ ಸಾನಿಯಾ ರತ್ನಮಾಲಾ ಅವರಿಗೆ ಏಕವಚನದಲ್ಲಿ ಬೈದು, ಸಾಯಿಸಲು ಪ್ರಯತ್ನ ಪಟ್ಟಿರುತ್ತಾಳೆ. ಅದರ ವಿಡಿಯೋ ಈಗ ಭುವಿ ಕೈಯಲ್ಲಿದೆ. ಅದನ್ನು ಸಾನಿಯಾಗೆ ತೋರಿಸಿದ್ದಾಳೆ. ಸಾನಿಯಾ ಶೇಕ್ ಆಗಿ ಹೋಗಿದ್ದಾಳೆ.
ಇದನ್ನೂ ಓದಿ: Olavina Nildana: ಸಿದ್ಧಾಂತ್-ತಾರಿಣಿ ದೂರ ಮಾಡಲು ಪಾಲಾಕ್ಷನ ಗೇಮ್, ಕುತಂತ್ರಿ ಸುಮತಿ ಹೊಸ ಐಡಿಯಾ
ಅಮ್ಮಮ್ಮನ ರೀತಿ ಮಾತನಾಡಿದ ಭುವಿ
ನ್ಯಾಯ ಎಲ್ಲರಿಗೂ ಒಂದೇ ಆಗಿರಬೇಕಲ್ವಾ ಸಾನಿಯಾ ಅವರೇ. ನಿಮ್ಮ ತಲೆಗೆ ಹರ್ಷ ಗನ್ ಇಟ್ಟಿದ್ದಕ್ಕೆ ಅವರನ್ನು ಅರೆಸ್ಟ್ ಮಾಡಿಸಿದ್ದೀರಿ. ಅವರಿಗೆ ಶಿಕ್ಷೆ ಆಗಬೇಕು ಎನ್ನುತ್ತಿದ್ದೀರಿ. ಹಾಗಾದ್ರೆ ನೀವು ರತ್ನಮ್ಮ ಅವರನ್ನು ಕೊಲ್ಲಲು ಯತ್ನಿಸಿದ್ದೀರಿ. ನಿಮಗೆ ಶಿಕ್ಷೆ ಆಗಬೇಕು ತಾನೇ. ಅದೇ ನ್ಯಾಯ ಅಲ್ವಾ ಎಂದು ಕೇಳಿದ್ದಾಳೆ. ನೋಟ ಭುವಿದೇ ಆದ್ರೂ, ಮಾತೆಲ್ಲಾ ಅಮ್ಮಮ್ಮನ ರೀತಿ.
ಹರ್ಷನನ್ನು ಬಿಡಿಸಲು ಪರದಾಟ
ಭುವಿ ವಿಡಿಯೋ ತೋರಿಸುತ್ತಿದ್ದಂತೆ, ಸಾನಿಯಾ ಗಾಬರಿಯಾಗಿದ್ದಾಳೆ. ದಯವಿಟ್ಟು ನನ್ನನ್ನು ಪೊಲೀಸರಿಗೆ ಹಿಡಿದು ಕೊಡಬೇಡ. ನಾನು ಹರ್ಷನ ವಿರುದ್ಧ ದೂರು ಕೊಡಲ್ಲ. ಅವನನ್ನು ಬಿಡಿಸುತ್ತೇನೆ ಎಂದು ಹೇಳ್ತಾ ಇದ್ದಾಳೆ. ಲಾಯರ್ ಗೆ ಕಾಲ್ ಮಾಡ್ತಿದ್ದಾಳೆ. ಪೊಲೀಸರಿಗೆ ಹರ್ಷನನ್ನು ಬಿಡಿ ಎಂದು ಕೇಳಿಕೊಳ್ತಾ ಇದ್ದಾಳೆ. ಆದ್ರೆ ಪೊಲೀಸರು ಒಪ್ಪುತ್ತಿಲ್ಲ. ಹುಡುಗಾಟ ಆಡ್ತೀರಾ ಎಂದು ಬೈದಿದ್ದಾರೆ.
ಭುವಿ ನಡೆ ಮೆಚ್ಚಿಕೊಂಡ ಜನ
ಭುವಿ ಸೈಲೆಂಟ್ ಆಗಿರುವುದು ಇಷ್ಟ ಇರಲಿಲ್ಲ. ಅಮ್ಮಮ್ಮ ಹೋದ ಮೇಲೆ ಜೋರಾಗಬೇಕು ಎಂದು ಅಭಿಮಾನಿಗಳು ಕೇಳ್ತಾ ಇದ್ರು. ಅದೇ ರೀತಿ ಈಗ ಜೋರಾಗಿದ್ದಾರೆ. ಅಮ್ಮಮ್ಮನ ಗತ್ತು ಭುವಿಗೆ ಬಂದಿದೆ. ಸಾನಿಯಾ ಸೊಕ್ಕು ಇನ್ನು ಮರಿಯಬೇಕು. ಒಳ್ಳೆಯ ನಿರ್ಧಾರ ಭುವಿ ಎಂದು ಜನ ಹೇಳ್ತಿದ್ದಾರೆ. ಭುವಿಯನ್ನು ಮೆಚ್ಚಿಕೊಂಡಿದ್ದಾರೆ.
ಇದನ್ನೂ ಓದಿ: Bigg Boss Kannada: ಮಿತಿ ಮೀರಿದ ಸಲುಗೆ, ರೂಪೇಶ್ ರಾಜಣ್ಣ-ಆರ್ಯವರ್ಧನ್ ನಡುವೆ ಗಲಾಟೆ!
ಸಾನಿಯಾ ಜೈಲು ಸೇರ್ತಾಳಾ? ಹರ್ಷ ಜೈಲಿಂದ ಆಚೆ ಬರ್ತಾನಾ? ಭುವಿಯ ಮುಂದಿನ ನಡೆ ಏನು? ಮುಂದೇನಾಗುತ್ತೆ ಅಂತ ನೋಡೋಕೆ ಕನ್ನಡತಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ