Kannadathi: ಪೂಜೆ ತಯಾರಿ ಮಾಡ್ತಿರೋ ಭುವಿ ಮೇಲೆ ಸುದರ್ಶನ್ ಹಲ್ಲೆ, ಶುಭದಿನದಲ್ಲಿ ಇದೆಂಥಾ ಅನಾಹುತ!

ಕಾಫಿ ಶಾಪ್ ಐಡಿಯಾ ಕೊಟ್ಟಿದ್ದು ನಾನೇ. ಇದರಿಂದ ಬಂದ ಲಾಭವೆಲ್ಲಾ ನಂದೇ, ನನಗೆ ಮುಕ್ಕಾಲು ಭಾಗ ಕೊಟ್ಟು, ಕಾಲು ಭಾಗ ನೀವು ತೆಗೆದುಕೊಂಡು ಹೋಗಿ ಎಂದು ಹರ್ಷನಿಗೆ ಹೇಳಿದ್ದಾನೆ. ಅದೇ ಸಮಯದಲ್ಲಿ ಪೂಜೆಗೆ ಇಟ್ಟಿದ್ದ ಕಾಯಿಗಾಗಿ ಭುವಿ ಹುಡುಕುತ್ತಿದ್ದರೆ, ಸುದರ್ಶನ ಅದನ್ನು ಒಡೆದು ಹಾಕಿದ್ದಾರೆ. ಕೇಳಿದ ಭುವಿ ಮೇಲೂ ಕೈ ಮಾಡಲು ಹೋಗಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ ಧಾರಾವಾಹಿ (Serial) ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್‍ಗೆ ದೊಡ್ಡ ಅಭಿಮಾನಿಗಳ (Fans) ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಹರ್ಷ-ಭುವಿ ಮದುವೆ ಸಮಯದಲ್ಲಿ ಅಮ್ಮಮ್ಮನಿಗೆ ಹುಷಾರಿಲ್ಲದೇ ಹೆಚ್ಚಿನ ಚಿಕಿತ್ಸೆಗೆ ವಿದೇಶಕ್ಕೆ ಹೋಗಿದ್ದರು. ಇನ್ನೇನು ಗುಣಮುಖರಾಗಿ ವಾಪಸ್ ಬರಲಿದ್ದಾರೆ. ಆದ್ರೆ ಹರ್ಷನ ಚಿಕ್ಕಪ್ಪನಿಗೆ ತಮಗೆ ಏನೂ ಆಸ್ತಿ (Property) ಸಿಗಲ್ಲ ಎಂದು ಹೆಂಡತಿ ಮೇಲೆ ಕೋಪ ಮಾಡಿಕೊಂಡಿದ್ದಾನೆ. ವರಮಹಾಲಕ್ಷ್ಮಿ ಹಬ್ಬ (Festival) ನಡೆಯುತ್ತಿರುವಾಗಲೇ, ದೇವರಿಗೆ ಇಟ್ಟಿದ್ದ ಕಾಯಿಯನ್ನು ಸುದರ್ಶನ್ ಒಡೆದು ಹಾಕಿ, ನನ್ನ ಮೇಲೆ ಅಧಿಕಾರ ತೋರಿಸುತ್ತೀಯಾ ಎಂದ ಭುವಿ ಮೇಲೆ ಕೈ ಮಾಡಲು ಹೋಗಿದ್ದಾನೆ.

  ಭುವಿ ಕೆನ್ನೆಗೆ ಹೊಡೆಯಲು ಹೋದ ಸುದರ್ಶನ್
  ಅಮ್ಮಮ್ಮ ಮನೆಯಲ್ಲಿ ಇಲ್ಲದಿರುವದನ್ನೇ ಬಂಡವಾಳ ಮಾಡಿಕೊಂಡಿರುವ ಹರ್ಷನ ಚಿಕ್ಕಪ್ಪ ಆಸ್ತಿಗಾಗಿ ಕ್ಯಾತೆ ತೆಗೆದಿದ್ದಾರೆ. ಕಾಫಿ ಶಾಪ್ ಐಡಿಯಾ ಕೊಟ್ಟಿದ್ದು ನಾನೇ. ಇದರಿಂದ ಬಂದ ಲಾಭವೆಲ್ಲಾ ನಂದೇ, ನನಗೆ ಮುಕ್ಕಾಲು ಭಾಗ ಕೊಟ್ಟು, ಕಾಲು ಭಾಗ ನೀವು ತೆಗೆದುಕೊಂಡು ಹೋಗಿ ಎಂದು ಹರ್ಷನಿಗೆ ಹೇಳಿದ್ದಾನೆ. ಅದೇ ಸಮಯದಲ್ಲಿ ಪೂಜೆಗೆ ಇಟ್ಟಿದ್ದ ಕಾಯಿಗಾಗಿ ಭುವಿ ಹುಡುಕುತ್ತಿದ್ದರೆ, ಸುದರ್ಶನ ಅದನ್ನು ಒಡೆದು ಹಾಕಿದ್ದಾರೆ. ಕೇಳಿದ ಭುವಿ ಮೇಲೂ ಕೈ ಮಾಡಲು ಹೋಗಿದ್ದಾರೆ.

  ಚಿಕ್ಕಪ್ಪ ಹೊಡೆಯುವುದನ್ನು ತಡೆದ ಹರ್ಷ
  ಇನ್ನು ಕನ್ನಡತಿ ಸೀರಿಯಲ್‍ನಲ್ಲಿ ವರಮಹಾಲಕ್ಷ್ಮಿ ಹಬ್ಬ ನಡೆಯುತ್ತಿದೆ. ಮನೆಯವರೆಲ್ಲಾ ಸಂಭ್ರಮದಿಂದ ಇದ್ದಾರೆ. ಪೂಜೆ ನಡೆಯಬೇಕಾದ್ರೆ ಸುದರ್ಶನ್ ಗಲಾಟೆ ಮಾಡಿ, ಭುವಿ ಕೆನ್ನೆಗೆ ಹೊಡೆಯಲು ಹೋಗುತ್ತಾನೆ. ಆಗ ಹರ್ಷ ಮಧ್ಯೆ ಬಂದು ಚಿಕ್ಕಪ್ಪನ ಕೈ ಹಿಡಿದು ಹೊಡೆಯುವುದನ್ನು ತಪ್ಪಿಸುತ್ತಾನೆ.

  Colors Kannada serial, Kannada serial, Kannadathi Serial, Kannadathi serial today episode, property problem, ಕನ್ನಡತಿ ಧಾರಾವಾಹಿ, ಮನೆಯಲ್ಲಿ ಆಸ್ತಿಗಾಗಿ ಜಗಳ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
  ಸುದರ್ಶನ್


  ಮನೆ ಬಾಗಿಲಿಗೆ ಬಂದಿಳಿದ ಅಮ್ಮಮ್ಮ
  ಅಮ್ಮಮ್ಮ ಅಂದ್ರೆ ರತ್ನಮಾಲಾ ಬಹಳ ದಿನಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಹರ್ಷ-ಭುವಿ ಸಮಯದಲ್ಲಿ ಮತ್ತೆ ಆರೋಗ್ಯ ಹದಗೆಟ್ಟು ಆಸ್ಪತ್ರೆ ಸೇರಿದ್ದರು. ಹೆಚ್ಚಿನ ಚಿಕಿತ್ಸೆಗೆಂದು ವಿದೇಶಕ್ಕೆ ಕಳಿಸಿದ್ದರು. ಅವರು ಸಹ ಗುಣಮುಖರಾಗಿ ಮನೆಗೆ ಬಂದಿದ್ದಾರೆ.

  ಇದನ್ನೂ ಓದಿ: Ramachari: ರಾಮಾಚಾರಿ ಹಾಕಿದ ಮೂರನೇ ಸವಾಲಿಗೆ ತಬ್ಬಿಬ್ಬಾದ ಚಾರು! CEO ಪಟ್ಟಕ್ಕಾಗಿ ಈ ಕೆಲಸ ಮಾಡ್ತಾಳಾ?   

  ಮತ್ತೆ ಅಮ್ಮಮ್ಮನ ಆರೋಗ್ಯ ಹದಗೆಡುತ್ತಾ?
  ಈಗ ತಾನೇ ಅಮ್ಮಮ್ಮ ಹುಷಾರಾಗಿ ಮನೆಗೆ ಬಂದಿದ್ದಾರೆ. ಬದುಕಿ ಸ್ವದೇಶಕ್ಕೆ ಬಂದ ರತ್ನಮಾಲಾ ದೇವರಿಗೆ ಥ್ಯಾಂಕ್ಸ್ ಹೇಳಿದ್ದಾರೆ. ಆದ್ರೆ ಅವರು ಮನೆ ಒಳಗೆ ಕಾಲಿಟ್ರೆ ಮತ್ತೆ ಅವರ ಆರೋಗ್ಯ ಕೆಡಬಹುದು. ಯಾದಂದ್ರೆ ಹಬ್ಬದ ದಿನವೇ ಮನೆಯಲ್ಲಿ ಆಸ್ತಿಗಾಗಿ ಜಗಳ ನಡೆಯುತ್ತಿದೆ. ಅಲ್ಲದೇ ತಾನೇ ಆಯ್ಕೆ ಮಾಡಿದ್ದ ಸೊಸೆ ಭುವಿ ಮೇಲೆ ಸುದರ್ಶನ್ ಕೈ ಮಾಡಲು ಹೋಗಿದ್ದು ಗೊತ್ತಾದ್ರೆ, ಅಮ್ಮಮ್ಮ ನೊಂದುಕೊಳ್ತಾರೆ. ಆಗ ಮತ್ತೆ ಆರೋಗ್ಯ ಕೆಡಬಹುದು.

  ಮನೆಯವರೆಲ್ಲಾ ಅಮ್ಮಮ್ಮ ಬರುತ್ತಾಳೆ ಎಂದು ಖುಷಿಯಾಗಿ, ಅವಳನ್ನು ಸಂತೋಷ ಪಡಿಸಲು ಏನೇನು ಪ್ಲ್ಯಾನ್ ಹಾಕಿಕೊಂಡಿದ್ದರು. ಅವಳು ಬಂದ ತಕ್ಷಣ ಸಪ್ರೈಸ್ ಮಾಡಿ ಖುಷಿ ಪಡಿಸಬೇಕು ಎಂದು ಕೊಂಡಿದ್ದರು. ಆದ್ರೆ ಇಲ್ಲಿ ಆಗುತ್ತಿರುವುದೇ ಬೇರೆ. ಮನೆಯಲ್ಲಿ ಜಗಳವಾಗುತ್ತಿದೆ. ಆಸ್ತಿ ವಿವಾದ ತಾರಕಕ್ಕೇರಿದೆ. ಸುದರ್ಶನ್ ಆಸ್ತಿ ಬೇಕೇ ಬೇಕು ಎಂದು ಪಟ್ಟು ಹಿಡಿದಿದ್ದಾನೆ. ಹರ್ಷನಿಗೆ ಏನೂ ಮಾಡಲು ತೋಚದೆ ಕಂಗಾಲಾಗಿ ಹೋಗಿದ್ದಾನೆ.

  ಇದನ್ನೂ ಓದಿ: Paaru: ಅಖಿಲಾಂಡೇಶ್ವರಿ ಬಳಿ ರಾಖಿ ಕಟ್ಟಿಸಿಕೊಳ್ಳಲು ಬಂದ ವೀರಣ್ಣ; ಅರಸನಕೋಟೆಯಲ್ಲಿ ಸಂಭ್ರಮವೋ, ಸಂಭ್ರಮ 

  ಇವತ್ತು ಏನಾಗುತ್ತೆ? ಅಮ್ಮಮ್ಮ ಮನೆಯ ರಾಮಾಯಣವನ್ನು ನೋಡಿ ಕುಸಿದು ಬೀಳುತ್ತಾರಾ? ಸುದರ್ಶನ್ ನಡೆಗೆ ಹರ್ಷನ ಉತ್ತರವೇನು? ಸಂಭ್ರಮದ ಮನೆಯಲ್ಲಿ ಗಲಾಟೆ, ಎಲ್ಲದಕ್ಕೂ ಉತ್ತರ ಬೇಕು ಅಂದ್ರೆ ಕನ್ನಡತಿ ಧಾರಾವಾಹಿ ಸಂಚಿಕೆ ನೋಡಬೇಕು.
  Published by:Savitha Savitha
  First published: