Kannadathi: ಅಮ್ಮಮ್ಮನ ಪರೀಕ್ಷೆ ಮಾಡಿಸಲು ಹೋಗಿ ಸಾನಿಯಾ ಸಿಕ್ಕಿ ಹಾಕಿಕೊಳ್ತಾಳಾ? ಅತ್ತೆ V/s ಸೊಸೆ

ಪಾಪಾ ಆದಿ ತನ್ನ ಹೆಂಡತಿಗೆ ಏನೋ ಆಗಿದೆ ಅಂತ ಅಂದುಕೊಂಡು, ಸಾನಿಯಾ ರಿಪೋರ್ಟ್ ಕಲೆಕ್ಟ್ ಮಾಡಲು ಆಸ್ಪತ್ರೆಗೆ ಹೋಗಿದ್ದಾನೆ. ಅದನ್ನು ಸಾನಿಯಾಗೆ ಹೇಳಿದ್ದಾನೆ. ಸಾನಿಯಾಗೆ ಭಯ ಶುರುವಾಗಿದೆ.

ಸಾನಿಯಾ-ಅಮ್ಮಮ್ಮ

ಸಾನಿಯಾ-ಅಮ್ಮಮ್ಮ

 • Share this:
  ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ (Serials) ಕನ್ನಡತಿ (Kannadathi) ಧಾರಾವಾಹಿ ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್‍ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ. ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ (Super Hit) ಆಗಿ ಓಡುತ್ತಿದೆ. ಅಮ್ಮಮ್ಮ ಆರೋಗ್ಯ ಸರಿ ಇಲ್ಲದಾಗ ವಿದೇಶಕ್ಕೆ ಹೋಗಿ ಚಿಕಿತ್ಸೆ ಪಡೆದು ಬಂದಿದ್ದಾರೆ. ಅಲ್ಲಿಂದ ಬಂದ ಮೇಲೆ ಅಮ್ಮಮ್ಮನಿಗೆ ಮರವಿನ  (Memory Loss) ಕಾಯಿಲೆ ಶುರುವಾಗಿದೆ. ಇದನ್ನು ಪತ್ತೆ ಹಚ್ಚಲು ಸಾನಿಯಾ ಮುಂದಾಗಿದ್ದಾಳೆ.

  ಅಮ್ಮಮ್ಮನ ಮೆಮೊರಿ ಲಾಸ್!

  ಅಮ್ಮಮ್ಮ ಅಂದ್ರೆ ರತ್ನಮಾಲಾ, ಹರ್ಷನ ಮುದ್ದಿನ ಅಮ್ಮ. ಗಂಡ ತೀರಿ ಹೋದ್ರೂ ಜವಾಬ್ದಾರಿ ತಾನೇ ತೆಗೆದುಕೊಂಡು ಕಂಪನಿ ಬೆಳೆಸಿರುವ ಹೆಂಗಸು. ಎಲ್ಲೂ, ಏನು ತಪ್ಪಾಗದಂತೆ, ಸಂಸಾರ, ಅಧಿಕಾರ ಎರಡನ್ನೂ ನಿರ್ವಹಿಸಿಕೊಂಡು ಬಂದಿರುವವಳು. ಆದ್ರೆ ವಯಸ್ಸಾದಂತೆ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಸಾವಿಗೆ ದಿನಗಳನ್ನು ಎಣಿಸುತ್ತಿದ್ದಾಳೆ. ಆದ್ರೆ ಈ ಬಾರಿ ಚಿಕಿತ್ಸೆ ಪಡೆದು ಬಂದ ನಂತರ ಅಮ್ಮಮ್ಮ ಮೆಮೊರಿ ಲಾಸ್ ಆಗಿದೆ. ಆಗಾಗ ಮರೆತು ಹೋಗುತ್ತಾರೆ.

  ಅಮ್ಮಮ್ಮನ ಕಾಯಿಲೆ ಪತ್ತೆ ಹಚ್ಚಲು ಸಾನಿಯಾ ಸರ್ಕಸ್

  ಅಮ್ಮಮ್ಮ ಹುಷಾರಿಲ್ಲದಾಗ, ಸಾನಿಯಾ ಅವರಿಗೆ ಬೈದು, ಕೊಲ್ಲಲು ಹೋದ ವಿಡಿಯೋ, ರತ್ನಾಮಾಲಾ ಬಳಿ ಇದೆ. ಅದನ್ನು ಸಾನಿಯಾಗೆ ತೋರಿಸಿದ್ದಾರೆ. ಈಗ ಸಾನಿಯಾ ಜುಟ್ಟು ಅಮ್ಮಮ್ಮನ ಕೈಯಲ್ಲಿದೆ. ಅದಕ್ಕೆ ಸಾನಿಯಾ, ಅಮ್ಮಮ್ಮನಿಗೆ ಮರೆವಿನ ಕಾಯಿಲೆ ಇದೆಯಾ ಎಂದು ತಿಳಿದುಕೊಳ್ಳಲು ಪ್ರಯತ್ನ ಮಾಡುತ್ತಿದ್ದಾಳೆ. ಅದಕ್ಕೆ ಅಮ್ಮಮ್ಮನನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿ ಪರೀಕ್ಷೆ ಮಾಡಿಸಿದ್ದಾಳೆ.

  Colors Kannada Kannadathi serial very interesting episode today Saniya plan to hospital but Mother in law is good
  ಕನ್ನಡತಿ


  ಇದನ್ನೂ ಓದಿ: Kendasampige: ಸುಮನಾ ಮರ್ಯಾದೆ ತೆಗೆಯಲು ಮುಂದಾದ ಕಾಳಿ, ಯಾರು ಇಲ್ಲದ ವೇಳೆ ಮನೆಗೆ ಬಂದ!

  ತನಗಾಗಿ ಆಸ್ಪತ್ರೆಗೆ ಹೋಗುತ್ತೇನೆ ಎಂದು ಸುಳ್ಳು

  ಸಾನಿಯಾ, ರತ್ನಮಾಲಾ ಅವರನ್ನು ಪರೀಕ್ಷೆ ಮಾಡಿಸಲು ಸುಳ್ಳು ಹೇಳಿರುತ್ತಾಳೆ. ತನಗೆ ಯಾಕೋ ಒತ್ತಡ ಹೆಚ್ಚಾಗಿದೆ. ಆಸ್ಪತ್ರೆಗೆ ಹೋಗುತ್ತೇನೆ ಎಂದು ಹೇಳಿ ಅಮ್ಮಮ್ಮನನ್ನು ಕರೆದುಕೊಂಡು ಹೋಗಿರುತ್ತಾಳೆ. ಜೊತೆಗೆ ಭುವಿಯೂ ಹೋಗಿರುತ್ತಾಳೆ. ಅಲ್ಲದೇ ಡಾಕ್ಟರ್ ಬಳಿ ತನ್ನ ಅತ್ತೆ ಬಗ್ಗೆ ವಿಚಾರಿಸುತ್ತಾಳೆ. ಅದಕ್ಕೆ ಡಾಕ್ಟರ್ ಅವರಿಗೆ ಆಗಾಗ ಮರೆತು ಹೋಗಬಹುದು. ಇಲ್ಲ ನಿಮ್ಮ ಬಗ್ಗೆ ತಿಳಿದುಕೊಳ್ಳಲು ಈ ರೀತಿ ನಾಟಕ ಮಾಡುತ್ತಿರಬಹುದು ಎಂದು ಹೇಳಿದ್ದಾರೆ.

  ರಿಪೋರ್ಟ್ ಕಲೆಕ್ಟ್ ಮಾಡಲು ಹೋದ ಆದಿ

  ಪಾಪಾ ಆದಿ ತನ್ನ ಹೆಂಡತಿಗೆ ಏನೋ ಆಗಿದೆ ಅಂತ ಅಂದುಕೊಂಡು, ಸಾನಿಯಾ ರಿಪೋರ್ಟ್ ಕಲೆಕ್ಟ್ ಮಾಡಲು ಆಸ್ಪತ್ರೆಗೆ ಹೋಗಿದ್ದಾನೆ. ಅದನ್ನು ಸಾನಿಯಾಗೆ ಹೇಳಿದ್ದಾನೆ. ಸಾನಿಯಾಗೆ ಭಯ ಶುರುವಾಗಿದೆ. ಆಸ್ಪತ್ರೆಗೆ ಕರೆ ಮಾಡುತ್ತಿದ್ದಾಳೆ. ಆದ್ರೆ ಈಗಾಗಲೇ ರಿಪೋರ್ಟ್ ಆದಿ ಕೈಯಲ್ಲಿ ಸೇರಿದೆ.

  Colors Kannada Kannadathi serial very interesting episode today Saniya plan to hospital but Mother in law is good
  ಕನ್ನಡತಿ ಧಾರಾವಾಹಿ


  ಅಮ್ಮಮ್ಮನ ಕಾಯಿಲೆ ಕಣ್ಣಾರೆ ನೋಡಿ ಹರ್ಷ ಶಾಕ್

  ಹರ್ಷ ಗಣೇಶ ಹಬ್ಬದಂದು ಅಮ್ಮಮ್ಮನಿಗೆ ಕುಂಕುಮ ಇಡಲು ಹೋಗಿರುತ್ತಾನೆ. ಆಗ ಅಮ್ಮಮ್ಮ ಹರ್ಷನಿಗೆ ಕಾಲ್ ಮಾಡ್ತಾ ಇರ್ತಾಳೆ. ಹರ್ಷ ನಾನು ಇಲ್ಲೇ ಇದೀನಿ ಎಂದ್ರೂ, ಆ ಅರಿವು ಇಲ್ಲದಂತೆ ಅಮ್ಮಮ್ಮ ಒಂದೇ ಸಮನೇ ಕರೆ ಮಾಡುತ್ತಾ ಇರುತ್ತಾಳೆ. ಆಗ ಹರ್ಷನಿಗೆ ಭುವಿ ಹೇಳಿದ್ದು ನೆನಪಾಗುತ್ತೆ. ಅಮ್ಮಮ್ಮನಿಗೆ ಮರೆವಿನ ಕಾಯಿಲೆ ಇರೋದು ಗೊತ್ತಾಗುತ್ತೆ. ಅದನ್ನು ಕಣ್ಣಾರೆ ನೋಡಿ ಹರ್ಷ ಗಾಬರಿಕೊಂಡಿದ್ದಾನೆ.

  ಇದನ್ನೂ ಓದಿ: Ramachari: ಅಮ್ಮನಿಗಾಗಿ ಗನ್ ಹಿಡಿದ ಚಾರು! ರೆಬೆಲ್ ಅವತಾರದಲ್ಲಿ ರಾಮಾಚಾರಿ ಮನೆಗೆ!

  ಕನ್ನಡತಿ ಧಾರಾವಾಹಿ ದಿನಕ್ಕೊಂದು ತಿರುವುಗಳನ್ನು ಪಡೆದುಕೊಂಡು ಕುತೂಹಲ ಮೂಡಿಸುತ್ತಿದೆ. ಮುಂದೇನಾಗುತ್ತೆ ಅಂತ ನೋಡೋಕೆ ಸಂಚಿಕೆ ನೋಡಬೇಕು.
  Published by:Savitha Savitha
  First published: