Kannadathi: ಸಾಯುವ ಡ್ರಾಮಾ ಮಾಡಿ ಭುವಿಯನ್ನ ದಾಳವಾಗಿಸಿಕೊಳ್ತಾಳಾ ಸಾನಿಯಾ? ಹರ್ಷನ ಮುಂದೆ ಠುಸ್ ಪಟಾಕಿಯಾದ ಆದಿ ಮಡದಿ

ಭುವಿ ಸಾನಿಯಾಯಳನ್ನು ಸಾಯದಂತೆ ತಡೆಯುತ್ತಾಳೆ. ಏನ್ ಮಾಡಬೇಕು ಹೇಳಿ ಅಂತಾಳೆ. ಅದಕ್ಕೆ ಸಾನಿಯಾ ನೀನು ನನಗೆ ಮಾತು ಕೊಡಬೇಕು. ದೊಡ್ಡತ್ತೆ ನನ್ನ ಬಳಿ ಮಾತು ಬಿಟ್ಟಿದ್ದಾರೆ. ಅದು ಏಕೆ ಅಂತ ನೀನು ತಿಳಿದುಕೊಂಡು ಹೇಳಬೇಕು. ನನ್ನ ತಪ್ಪು ಏನ್ ಅಂತ ಅವರ ಬಳಿ ಕೇಳು ಎಂದು ಹೇಳುತ್ತಿದ್ದಾಳೆ.

ಸಾನಿಯಾ- ಭುವಿ

ಸಾನಿಯಾ- ಭುವಿ

  • Share this:
    ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ (Kannadathi) ಧಾರಾವಾಹಿ (Serial) ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್‍ಗೆ ದೊಡ್ಡ ಅಭಿಮಾನಿಗಳ (Fans) ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ. ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ (Super Hit) ಆಗಿ ಓಡುತ್ತಿದೆ. ಅಮ್ಮಮ್ಮ ತನ್ನ ಕಂಪನಿಯ ಎಂಡಿ (MD) ಪಟ್ಟವನ್ನು ಭುವಿಗೆ ಕೊಡಲು ರೆಡಿಯಾಗಿದ್ದಾಳೆ. ಇದು ಗೊತ್ತಾಗಿ ಸಾನಿಯಾಗೆ ಶಾಕ್ ಆಗಿದೆ. ಭುವಿಯ ಮುಂದೆ ಸಾಯೋ (Suicide) ನಾಟಕವಾಡುತ್ತಿದ್ದಾಳೆ (Drama) ಸಾನಿಯಾ.

    ಮನೆಯಲ್ಲಿ ಕನ್ನಡ ಪಾಠ ಹೇಳಿ ಕೊಡ್ತಿರೋ ಭುವಿ

    ಕನ್ನಡ ಪಾಠ ಮಾಡ್ತಿದ್ದ ಭುವಿಯನ್ನು ಟೀಚರ್ ಕೆಲಸದಿಂದ ಹರ್ಷ ಬಿಡಿಸಿದ್ದಾನೆ. ಇದರಿಂದ ಭುವಿ ಸ್ವಲ್ಪ ಬೇಸರದಲ್ಲಿ ಇದ್ದಳು. ಅದಕ್ಕೆ ಹರ್ಷ ಆಕೆಯನ್ನು ಸಂತೋಷ ಪಡಿಸಬೇಕೆಂದು ವಿದ್ಯಾರ್ಥಿಗಳ್ನು ಮನೆಗೆ ಕರೆಸಿದ್ದಾನೆ. ಅದರಲ್ಲಿ ಸಾನಿಯಾ ಕಳಿಸಿದ ಹುಡುಗ ಸಹ ಇದ್ದಾನೆ. ಭುವಿ ಮನೆಯಲ್ಲೇ ಕೆಲ ವಿದ್ಯಾರ್ಥಿಗಳಿಗೆ ಕನ್ನಡ ಪಾಠ ಹೇಳಿ ಕೊಡುತ್ತಿದ್ದಾಳೆ. ಇದರಿಂದ ಭುವಿಗೂ ಸಂತೋಷವಾಗಿದೆ.

    ಸಾನಿಯಾ ಗುಟ್ಟು ರಟ್ಟು

    ಸಾನಿಯಾ ಏನೇ ಪ್ಲ್ಯಾನ್ ಮಾಡಿದ್ರೂ ಹರ್ಷನ ಮುಂದೆ ನಡೆಯಲ್ಲ. ಅದು ಆಕೆಗೂ ಗೊತ್ತು ಆದ್ರೂ ಏನೇನು ಐಡಿಯಾ ಮಾಡಿ ಸಿಕ್ಕಿ ಹಾಕಿಕೊಳ್ಳುತ್ತಾಳೆ. ಈ ಬಾರಿಯೂ ಅದೇ ರೀತಿ ಆಗಿದೆ. ಆಕೆ ಕಳಿಸಿದ ಹುಡುಗ ಹರ್ಷನ ಕೈಯಲ್ಲಿ ತಗ್ಲಾಕೊಂಡಿದ್ದ.

    Colors Kannada serial, Kannada serial, Kannadathi Serial, Kannadathi serial today episode, Saniya suicide plan, ಕನ್ನಡತಿ ಧಾರಾವಾಹಿ, ಭುವಿಗೆ ಎಂಡಿ ಸ್ಥಾನ ಪಟ್ಟ ಕೊಡಲು ಅಮ್ಮಮ್ಮ ಸಿದ್ಧ, ಭುವಿಯನ್ನು ದಾಳವಾಗಿಸಿಕೊಳ್ಳೋ ನಾಟಕ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಸಾನಿಯಾ ಕಳಿಸಿದ ಹುಡುಗ


    ಪಾಠ ಕೇಳೋಕೆ ಬಂದವನ್ನು, ಸಾನಿಯಾ ಹೇಳಿದಂತೆ ಅಮ್ಮಮ್ಮನ ರೂಮ್ ಹುಡುಕಲು ಬಂದಿದ್ದ. ಅಲ್ಲಿ ಹರ್ಷ ಇರುತ್ತಾನೆ. ಅದನ್ನು ಕಂಡು ಆ ಹುಡುಗ ಶಾಕ್ ಆಗಿ ವಾಪಸ್ ಹೋಗುತ್ತಾನೆ.

    ಇದನ್ನೂ ಓದಿ: Mandya Ravi Death: ಮಗಳು ಜಾನಕಿ ಧಾರಾವಾಹಿ ಖ್ಯಾತಿಯ ಮಂಡ್ಯ ರವಿ ಇನ್ನಿಲ್ಲ

    ಭುವಿ ಮುಂದೆ ಸಾನಿಯಾ ಸಾಯೋ ನಾಟಕ

    ಸಾನಿಯಾ ಭುವಿಯನ್ನು ದಾಳವಾಗಿ ಬಳಸಿಕೊಂಡು ಮತ್ತೆ ಏನೋ ಪ್ಲ್ಯಾನ್ ಮಾಡಿದ್ದಾಳೆ. ಅದಕ್ಕೆ ಭುವಿ ಮುಂದೆ ತಾನು ಸಾಯುವುದಾಗಿ ಹೇಳಿದ್ದಾಳೆ. ಅಲ್ಲದೇ ಏನ್ನನ್ನೋ ಕುಟ್ಟಿ ಪುಡಿ ಮಾಡಿ ನೀರಿನ ಜೊತೆ ಬೆರೆಸಿ ಕುಡಿಯಲು ಹೊರಟಿದ್ದಾಳೆ. ಅಷ್ಟರಲ್ಲಿ ಬಂದು ಭುವಿ ಅದನ್ನು ತಡೆಯುತ್ತಾಳೆ. ಯಾಕ್ ಈ ರೀತಿ ಮಾಡ್ತಾ ಇದ್ದೀರಿ. ಚಿಕ್ಕ ಮಕ್ಕಳ ಹಾಗೇ ಆಡಬೇಡಿ ಎನ್ನುತ್ತಾಳೆ. ಅದಕ್ಕೆ. ಸಾನಿಯಾ ನಾನು ಸಾಯ್ತೀನಿ ಅಂತ ನಾಟಕ ಮಾಡ್ತಾ ಇದ್ದಾಳೆ.

    Colors Kannada serial, Kannada serial, Kannadathi Serial, Kannadathi serial today episode, Saniya suicide plan, ಕನ್ನಡತಿ ಧಾರಾವಾಹಿ, ಭುವಿಗೆ ಎಂಡಿ ಸ್ಥಾನ ಪಟ್ಟ ಕೊಡಲು ಅಮ್ಮಮ್ಮ ಸಿದ್ಧ, ಭುವಿಯನ್ನು ದಾಳವಾಗಿಸಿಕೊಳ್ಳೋ ನಾಟಕ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಸಾನಿಯಾ


    ಭುವಿ ಬಳಿ ಮಾತು ಕೊಡು ಎಂದು ಕೇಳ್ತಿರೋ ಸಾನಿಯಾ

    ಭುವಿ ಸಾನಿಯಾಯಳನ್ನು ಸಾಯದಂತೆ ತಡೆಯುತ್ತಾಳೆ. ಏನ್ ಮಾಡಬೇಕು ಹೇಳಿ ಅಂತಾಳೆ. ಅದಕ್ಕೆ ಸಾನಿಯಾ ನೀನು ನನಗೆ ಮಾತು ಕೊಡಬೇಕು. ದೊಡ್ಡತ್ತೆ ನನ್ನ ಬಳಿ ಮಾತು ಬಿಟ್ಟಿದ್ದಾರೆ. ಅದು ಏಕೆ ಅಂತ ನೀನು ತಿಳಿದುಕೊಂಡು ಹೇಳಬೇಕು. ನನ್ನ ತಪ್ಪು ಏನ್ ಅಂತ ಅವರ ಬಳಿ ಕೇಳು ಎಂದು ಹೇಳುತ್ತಿದ್ದಾಳೆ. ಎಲ್ಲವನ್ನೂ ಮಾಡ್ತೀನಿ ಅಂತ ಮಾತು ಕೊಡು ಎನ್ನುತ್ತಿದ್ದಾಳೆ.

    Colors Kannada serial, Kannada serial, Kannadathi Serial, Kannadathi serial today episode, Saniya suicide plan, ಕನ್ನಡತಿ ಧಾರಾವಾಹಿ, ಭುವಿಗೆ ಎಂಡಿ ಸ್ಥಾನ ಪಟ್ಟ ಕೊಡಲು ಅಮ್ಮಮ್ಮ ಸಿದ್ಧ, ಭುವಿಯನ್ನು ದಾಳವಾಗಿಸಿಕೊಳ್ಳೋ ನಾಟಕ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಕನ್ನಡತಿ


    ಈ ಬಾರಿ ಸಾನಿಯಾಗೆ ಭುವಿಯೇ ದಾಳ

    ಭುವಿಗೂ ಆ ಮನೆಯಲ್ಲಿ ಏನ್ ನಡೆಯುತ್ತಿದೆ ಎಂದು ಸರಿಯಾಗಿ ಗೊತ್ತಿಲ್ಲ. ಸಾನಿಯಾ ಕೆಟ್ಟವಳು ಅಂತ ಗೊತ್ತಿದ್ರೂ, ಕೆಲವೊಮ್ಮೆ ಭುವಿ ಅವಳನ್ನು ನಂಬುತ್ತಾಳೆ. ಪ್ರತಿ ಬಾರಿ ಅನುಮಾನ ಪಡಬಾರದು ಎಂದು ಹೇಳುತ್ತಾಳೆ. ಅದಕ್ಕೆ ಈಗ ಸಾನಿಯಾ ಕೇಳಿದಂತೆ ಮಾತು ಕೊಟ್ಟು, ಭುವಿಯೇ ಸಮಸ್ಯೆಯಲ್ಲಿ ಸಿಲುಕಿ ಹಾಕಿಕೊಳ್ತಾಳಾ? ನಾಟಕ ಮಾಡೋ ಸಾನಿಯಾ ಮಾತಿಗೆ ಮರುಳಾಗ್ತಾಳಾ ನೋಡಬೇಕು.

    ಇದನ್ನೂ ಓದಿ: Actress Amulya: ಮುದ್ದು ಅವಳಿ ಮಕ್ಕಳ ಜೊತೆ ಗೋಲ್ಡನ್​ ಕ್ವಿನ್ ಮೊದಲ​ ಹುಟ್ಟು ಹಬ್ಬ

    ಭುವಿಗೆ ಮತ್ತೆ ಸಾನಿಯ ಸಂಕಷ್ಟ ತರುತ್ತಾಳಾ? ಹರ್ಷ ಭುವಿಯನ್ನು ಕಾಪಾಡ್ತಾನಾ? ಹರ್ಷನ ಮುಂದೆ ಸಾನಿಯಾ ಪ್ಲ್ಯಾನ್ ವರ್ಕ್ ಆಗಲ್ವಾ? ಎಲ್ಲವನ್ನೂ ನೋಡಲು ಕನ್ನಡತಿ ಸೀರಿಯಲ್ ನೋಡಬೇಕು.
    Published by:Savitha Savitha
    First published: