Kannadathi: ಭುವಿಗೆ ಎಂಡಿ ಸ್ಥಾನ ಪಟ್ಟ ಕೊಡಲು ಅಮ್ಮಮ್ಮ ಸಿದ್ಧ, ಸಾನಿಯಾಗೆ ಡಬಲ್ ಶಾಕ್!

ಭುವಿ, ಹರ್ಷನನ್ನು ಮದುವೆ ಆಗಿ ಆ ಮನೆ ಸೊಸೆಯಾಗಿದ್ದಾಳೆ. ಅದಕ್ಕೆ ಅಮ್ಮಮ್ಮ ಕಂಪನಿಯ ಎಂಡಿ ಸ್ಥಾನ ಕೊಡಲು ರೆಡಿಯಾಗಿದ್ದಾಳೆ. ತನ್ನ ರೂಮ್‍ನಲ್ಲಿರುವ ಚೇರ್ ಮೇಲೆ ಕೂರಿಸಿ, ಭುವಿ ಇನ್ಮೇಲೆ ಕಂಪನಿ ಜವಾಬ್ದಾರಿ ತೆಗೆದುಕೋ ಎಂದು ಹೇಳುತ್ತಿದ್ದಾಳೆ.

ಕನ್ನಡತಿ

ಕನ್ನಡತಿ

  • Share this:
    ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ (Serials) ಕನ್ನಡತಿ (Kannadathi) ಧಾರಾವಾಹಿ ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್‍ಗೆ ದೊಡ್ಡ ಅಭಿಮಾನಿಗಳ (Fans) ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ. ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡುತ್ತಿದೆ. ಅಮ್ಮಮ್ಮ ತನ್ನ ಕಂಪನಿಯ (Company) ಎಂಡಿ (MD) ಪಟ್ಟವನ್ನು ಭುವಿಗೆ ಕೊಡಲು ರೆಡಿಯಾಗಿದ್ದಾಳೆ. ಇದನ್ನು ಕೇಳಿಸಿಕೊಂಡ ಸಾನಿಯಾಗೆ ಶಾಕ್ ಆಗಿದೆ.

    ಭುವಿಗೆ ಎಂಡಿ ಪಟ್ಟ ಕೊಡಲು ತೀರ್ಮಾನ

    ಅಮ್ಮಮ್ಮ ಭುವಿ ನೋಡಿದ ದಿನದಿಂದಲೇ ಈಕೆಯೇ ನಮ್ಮ ಮನೆ ಸೊಸೆ ಎಂದು ಭಾವಿಸಿದ್ದಳು. ಅದಕ್ಕೆ ಮೊದಲೇ ತನ್ನ ಎಲ್ಲ ಆಸ್ತಿಯನ್ನು ಅವಳ ಹೆಸರಿಗೆ ಬರೆಸಿದ್ದಳು. ಈಗ ಭುವಿ, ಹರ್ಷನನ್ನು ಮದುವೆ ಆಗಿ ಆ ಮನೆ ಸೊಸೆಯಾಗಿದ್ದಾಳೆ. ಅದಕ್ಕೆ ಅಮ್ಮಮ್ಮ ಕಂಪನಿಯ ಎಂಡಿ ಸ್ಥಾನ ಕೊಡಲು ರೆಡಿಯಾಗಿದ್ದಾಳೆ. ತನ್ನ ರೂಮ್‍ನಲ್ಲಿರುವ ಚೇರ್ ಮೇಲೆ ಕೂರಿಸಿ, ಭುವಿ ಇನ್ಮೇಲೆ ಕಂಪನಿ ಜವಾಬ್ದಾರಿ ತೆಗೆದುಕೋ ಎಂದು ಹೇಳುತ್ತಿದ್ದಾಳೆ.

    ಕದ್ದು ಕೇಳಿಸಿಕೊಂಡ ಸಾನಿಯಾ

    ಭುವಿಯನ್ನು ಅಮ್ಮಮ್ಮ ರೂಮ್‍ಗೆ ಕರೆದುಕೊಂಡು ಹೋಗುವುದನ್ನು ನೋಡಿ, ಹಿಂದೆಯೇ ಸಾನಿಯಾ ಹೋಗಿದ್ದಾಳೆ. ಅವರು ಬಾಗಿಲು ಹಾಕಿದ್ದನ್ನು ನೋಡಿ ಕದ್ದು ಕೇಳಿಸಿಕೊಳ್ಳುತ್ತಿದ್ದಾಳೆ. ಅಮ್ಮಮ್ಮ ಭುವಿಗೆ ಎಂಡಿ ಆಗು ಅನ್ನುವುದನ್ನು ಕೇಳಿಸಿಕೊಂಡು ಶಾಕ್ ಆಗಿದ್ದಾಳೆ. ಇನ್ನು ತನ್ನನ್ನು ಎಂಡಿ ಪೋಸ್ಟ್ ಇಂದ ತೆಗೆಯುತ್ತಾರೆ ಎಂದು ಆತಂಕಗೊಂಡಿದ್ದಾಳೆ.

    ಇದನ್ನೂ ಓದಿ: Kannada Actress Shruti: ಮಾಲ್ಡೀವ್ಸ್​ನಲ್ಲಿ ನಟಿ ಶೃತಿ ಬರ್ತಡೇ ಸೆಲೆಬ್ರೇಷನ್!

    ಸಾನಿಯಾ ಬಳಿ ಬಂದ ಹರ್ಷ

    ಅಮ್ಮಮ್ಮ-ಭುವಿ ರೂಮ್‍ನಲ್ಲಿ ಮಾತನಾಡುವುದನ್ನು ಸಾನಿಯಾ ಕದ್ದು ಕೇಳಿಸಿಕೊಳ್ಳುತ್ತಿದ್ದಳು. ಅಲ್ಲಿಗೆ ಹರ್ಷ ಬರುತ್ತಾನೆ. ಸಾನಿಯಾ ಶಾಕ್ ಆಗಿದ್ದಾಳೆ. ಅವಳು ಕದ್ದು ಕೇಳಿಸಿಕೊಳ್ಳುವುದನ್ನು ನೋಡಿದ್ದಾನೆ. ಅದಕ್ಕೆ ಸಾನಿಯಾಗೆ ಏನು ಉತ್ತರ ಹೇಳಬೇಕು ಎಂದು ಗೊತ್ತಾಗಾದೇ ಶಾಕ್ ಮೇಲೆ ಶಾಕ್ ಆಗಿದ್ದಾಳೆ.

    Colors Kannada serial, Kannada serial, Kannadathi Serial, Kannadathi serial today episode, Company MD post, ಕನ್ನಡತಿ ಧಾರಾವಾಹಿ, ಭುವಿಗೆ ಎಂಡಿ ಸ್ಥಾನ ಪಟ್ಟ ಕೊಡಲು ಅಮ್ಮಮ್ಮ ಸಿದ್ಧ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಕನ್ನಡತಿ


    ಅಮ್ಮಮ್ಮನ ಮೆಮೊರಿ ಲಾಸ್!

    ಅಮ್ಮಮ್ಮ ಅಂದ್ರೆ ರತ್ನಮಾಲಾಗೆ ಗಂಡ ತೀರಿ ಹೋದ್ರೂ, ಜವಾಬ್ದಾರಿ ತಾನೇ ತೆಗೆದುಕೊಂಡು ಕಂಪನಿ ಬೆಳೆಸಿರುವ ಹೆಂಗಸು. ಎಲ್ಲೂ, ಏನು ತಪ್ಪಾಗದಂತೆ, ಸಂಸಾರ, ಅಧಿಕಾರ ಎರಡನ್ನೂ ನಿರ್ವಹಿಸಿಕೊಂಡು ಬಂದಿರುವವಳು. ಆದ್ರೆ ವಯಸ್ಸಾದಂತೆ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾಳೆ.

    ಅಮ್ಮಮ್ಮನ ಕಾಯಿಲೆ ಕಣ್ಣಾರೆ ನೋಡಿ ಹರ್ಷ ಶಾಕ್

    ಹರ್ಷ ಗಣೇಶ ಹಬ್ಬದಂದು ಅಮ್ಮಮ್ಮನಿಗೆ ಕುಂಕುಮ ಇಡಲು ಹೋಗಿರುತ್ತಾನೆ. ಆಗ ಅಮ್ಮಮ್ಮ ಹರ್ಷನಿಗೆ ಕಾಲ್ ಮಾಡ್ತಾ ಇರ್ತಾಳೆ. ಹರ್ಷ ನಾನು ಇಲ್ಲೇ ಇದೀನಿ ಎಂದ್ರೂ, ಆ ಅರಿವು ಇಲ್ಲದಂತೆ ಅಮ್ಮಮ್ಮ ಒಂದೇ ಸಮನೇ ಕರೆ ಮಾಡುತ್ತಾ ಇರುತ್ತಾಳೆ. ಆಗ ಹರ್ಷನಿಗೆ ಭುವಿ ಹೇಳಿದ್ದು ನೆನಪಾಗುತ್ತೆ. ಅಮ್ಮಮ್ಮನಿಗೆ ಮರೆವಿನ ಕಾಯಿಲೆ ಇರೋದು ಗೊತ್ತಾಗುತ್ತೆ. ಅದನ್ನು ಕಣ್ಣಾರೆ ನೋಡಿ ಹರ್ಷ ಗಾಬರಿಕೊಂಡಿದ್ದಾನೆ.

    Colors Kannada Kannadathi serial very interesting episode today Heroine MD post in company
    ಸಾನಿಯಾ-ಅಮ್ಮಮ್ಮ


    ಇದನ್ನೂ ಓದಿ: Kendasampige: ಮನೆ ಸಾಲಕ್ಕಾಗಿ ಪ್ರತಿಭಟನೆಯಲ್ಲಿ ಬೆಂಕಿ ಹಚ್ಚಿಕೊಳ್ಳೋಕೆ ರಾಜೇಶ್​ ರೆಡಿ

    ಅಮ್ಮಮ್ಮ ಸಾವಿಗೆ ದಿನಗಳನ್ನು ಎಣಿಸುತ್ತಿದ್ದಾಳೆ. ಆದ್ರೆ ಈ ಬಾರಿ ಚಿಕಿತ್ಸೆ ಪಡೆದು ಬಂದ ನಂತರ ಅಮ್ಮಮ್ಮ ಮೆಮೊರಿ ಲಾಸ್ ಆಗಿದೆ. ಆಗಾಗ ಮರೆತು ಹೋಗುತ್ತಾರೆ. ಅದಕ್ಕೆ ತನ್ನ ಎಂಡಿ ಪಟ್ಟ ಕೊಡಲು ರೆಡಿಯಾಗಿದ್ದಾಳೆ. ಮುಂದೇನಾಗುತ್ತೆ ಅಂತ ನೋಡೋಕೆ ಕನ್ನಡತಿ ಸೀರಿಯಲ್ ನೋಡಬೇಕು.
    Published by:Savitha Savitha
    First published: