Kannadathi Serial: ಸಾನಿಯಾಳ ಎಲ್ಲಾ ಪ್ಲಾನ್ಸ್ ಉಲ್ಟಾ! ಅಮ್ಮಮ್ಮನಿಗೆ ಗೊತ್ತಾಯ್ತಾ?

ಸಾನಿಯಾ ಬೇಗ ಬೇಗ ಎಣ್ಣೆ ಕ್ಲೀನ್ ಮಾಡುತ್ತಾ ಇರುತ್ತಾಳೆ. ಆಗ ಅಲ್ಲಿಗೆ ಯಾರೋ ಬಂದಂತೆ ಆಗುತ್ತೆ. ಅದಕ್ಕೆ ಆಕೆ ಸಿಕ್ಕಿ ಹಾಕಿಕೊಳ್ಳುವ ಭಯದಲ್ಲಿ ಎದ್ದು ಹೋಗುತ್ತಾ ಇರುತ್ತಾಳೆ. ಅವಳೇ ಎಣ್ಣೆ ಮೇಲೆ ಕಾಲಿಟ್ಟು ಜಾರಿ ಬೀಳುತ್ತಾಳೆ. ಬಿದ್ದ ರಭಸಕ್ಕೆ ತಲೆಗೆ ಏಟಾಗುತ್ತೆ.

ಸಾನಿಯಾ

ಸಾನಿಯಾ

 • Share this:
  ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ  (Kannadathi) ಧಾರಾವಾಹಿ (Serial) ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್‍ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ. ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು (Kannada Fans) ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡುತ್ತಿದೆ. ಅಮ್ಮಮ್ಮ ತನ್ನ ಕಂಪನಿಯ ಎಂಡಿ ಪಟ್ಟವನ್ನು ಭುವಿಗೆ ಕೊಡಲು ರೆಡಿಯಾಗಿದ್ದಾಳೆ. ಇದು ಗೊತ್ತಾಗಿ ಸಾನಿಯಾಗೆ (Saniya) ಶಾಕ್ ಆಗಿದೆ. ಸಾನಿಯಾ ಏನೇನೋ ಪ್ಲ್ಯಾನ್  (Plan) ಮಾಡ್ತಿದ್ದಾಳೆ. ಆದ್ರೆ ಅವಳು ಏನೇ ಮಾಡಿದ್ರೂ ಅವಳಿಗೆ ಉಲ್ಟಾ ಹೊಡೆಯುತ್ತಿದೆ.

  ಸಾನಿಯಾ ಟಾರ್ಗೆಟ್ ಮಾಡಿರೋ ಹರ್ಷ

  ಸಾನಿಯಾ ಭುವಿಗೆ ತೊಂದರೆ ಕೊಡಲು ರಿತೇಶ್ ಎನ್ನೋ ಹುಡುಗನ್ನು ವಿದ್ಯಾರ್ಥಿ ಸೋಗಿನಲ್ಲಿ ಕಳಿಸಿದ್ದಾಳೆ. ಅದು ಹರ್ಷನಿಗೆ ಗೊತ್ತಾಗಿದೆ. ಅದಕ್ಕೆ ಹರ್ಷ ಸಾನಿಯಾಳನ್ನು ಬಿಟ್ಟು ಬಿಡದೇ ಕಾಡ್ತಿದ್ದಾನೆ. ಅದಕ್ಕೆ ಅವಳು ಕಳಿಸಿದ ಹುಡುಗನನ್ನು ಹಿಡಿದು ಬುದ್ಧಿ ಹೇಳಿದ್ದಾನೆ. ಆಕೆ ಮುಂದೆ ಪೊಲೀಸ್ ವೇಷದಲ್ಲಿ ಕಾಣಿಸಿಕೊಂಡು ಕಾಟ ಕೊಟ್ಟಿದ್ದಾನೆ.

  ಅಮ್ಮಮ್ಮನನ್ನು ಬೀಳಿಸಲು ನೆಲಕ್ಕೆ ಎಣ್ಣೆ ಹಾಕಿದ ಸಾನಿಯಾ
  ಸಾನಿಯಾ ಅಮ್ಮಮ್ಮನನ್ನು ಬೀಳಿಸಲು ನೆಲಕ್ಕೆ ಎಣ್ಣೆ ಹಾಕಿದ್ದಾಳೆ. ಅಮ್ಮಮ್ಮ ಅದರ ಮೇಲೆ ಕಾಲಿಟ್ಟು ಜಾರಿ ಬಿದ್ರೆ, ಮತ್ತೆ ಆಸ್ಪತ್ರೆ ಸೇರ್ತಾರೆ. ಮತ್ತೆ ತಾನು ಎಂ.ಡಿ ಆಗಿ ದರ್ಬಾರ್ ಮಡಬಹುದು ಎಂದು ಕನಸು ಕಾಣುತ್ತಿದ್ದಾಳೆ. ಅದ್ಕೆ ಅಮ್ಮಮ್ಮ ಬೀಳಲಿ ಎಂದು ಈ ಎಣ್ಣೆ ಪ್ಲ್ಯಾನ್ ಮಾಡಿದ್ದಾಳೆ.

  ಇದನ್ನೂ ಓದಿ: Lakshana Serial: ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಮೌರ್ಯ ಎಸ್ಕೇಪ್! ಹೊಸ ವಿಲನ್ ಎಂಟ್ರಿ, ಯಾರದು?

  ಅಮ್ಮಮ್ಮ ಬರುತ್ತಾರೆ ಅಂತಾ ಕಾಯ್ತಾಳೆ

  ಎಣ್ಣೆ ನೆಲಕ್ಕೆ ಹಾಕಿದ ಸಾನಿಯಾ, ಅಮ್ಮಮ್ಮ ಬರುತ್ತಾರೆ ಎಂದು ಕಾಯ್ತಾ ಇದ್ದಾಳೆ. ಅವಳು ಅಂದುಕೊಂಡಂತೆ ರತ್ನಮಾಲಾ ಮೆಟ್ಟಿಲಿಳಿದು ಕೆಳಗೆ ಬರುತ್ತಾರೆ. ಆದ್ರೆ ಪಕ್ಕದಲ್ಲಿ ನಡೆದು ಹೋಗುತ್ತಾರೆ. ಬೇರೆ ಅವರು ಬಂದು ಬಿದ್ರೆ ಕಷ್ಟ. ಅವರಿಗೆ ಎಲ್ಲಾ ಸತ್ಯ ಗೊತ್ತಾಗುತ್ತೆ ಅಂತ ನೆಲದ ಮೇಲಿದ್ದ ಎಣ್ಣೆ ಕ್ಲೀನ್ ಮಾಡುತ್ತಿದ್ದಾಳೆ.

  Colors Kannada serial, Kannada serial, Kannadathi Serial, Kannadathi serial today episode, Hero Mother know about plan of Saniya, ಕನ್ನಡತಿ ಧಾರಾವಾಹಿ, ಸಾನಿಯಾ ಗುಟ್ಟು ಹರ್ಷನ ಮುಂದೆ ರಟ್ಟು, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
  ಸಾನಿಯಾ-ಅಮ್ಮಮ್ಮ


  ತಾನೇ ಜಾರಿ ಬಿದ್ದ ಸಾನಿಯಾ!
  ಸಾನಿಯಾ ಬೇಗ ಬೇಗ ಎಣ್ಣೆ ಕ್ಲೀನ್ ಮಾಡುತ್ತಾ ಇರುತ್ತಾಳೆ. ಆಗ ಅಲ್ಲಿಗೆ ಯಾರು ಬಂದಂತೆ ಆಗುತ್ತೆ. ಅದಕ್ಕೆ ಆಕೆ ಸಿಕ್ಕಿ ಹಾಕಿಕೊಳ್ಳುವ ಭಯದಲ್ಲಿ ಎದ್ದು ಹೋಗುತ್ತಾ ಇರುತ್ತಾಳೆ. ಅವಳೇ ಎಣ್ಣೆ ಮೇಲೆ ಕಾಲಿಟ್ಟು ಜಾರಿ ಬೀಳುತ್ತಾಳೆ. ಬಿದ್ದ ರಭಸಕ್ಕೆ ತಲೆಗೆ ಏಟಾಗುತ್ತೆ.

  ಇದನ್ನೂ ಓದಿ: Olavina Nildana: ಪಾಲಾಕ್ಷ-ಚಕ್ರವರ್ತಿ ಸಂಚು ಸಫಲ, ಕಾಲೇಜಿನಿಂದ ಡಿಬಾರ್ ಆಗ್ತಾನಾ ಸಿದ್ಧಾಂತ್?

  ಅಮ್ಮಮ್ಮನಿಗೆ ಸಾನಿಯಾ ಪ್ಲ್ಯಾನ್ ಗೊತ್ತಾಗುತ್ತೆ
  ಸಾನಿಯಾ ಬಿದ್ದು ಅಮ್ಮ ಎಂದು ಕಿರುಚುತ್ತಾಳೆ. ಆಗ ಅಲ್ಲಿಗೆ ರತ್ನಮಾಲಾ ಅವರು ಬರುತ್ತಾರೆ. ಏನಾಯ್ತು ಸಾನಿಯಾ? ಏಕೆ ಬಿದ್ದೆ ಎಮದು ಕೇಳುತ್ತಾರೆ. ಅಷ್ಟರಲ್ಲಿ ಅಲ್ಲೇ ಬಿದ್ದಿದ್ದ ಎಣ್ಣೆ ನೋಡ್ತಾಳೆ. ಆಗ ಆಕೆಗೆ ಗೊತ್ತಾಗುತ್ತೆ. ಹೋ ಈಕೆಯೇ ಯಾರನ್ನೂ ಬೀಳಿಸಲು ಎಣ್ಣೆ ಚೆಲ್ಲಿದ್ದಾಳೆ ಎಂದು. ಆಗ ಮತ್ತೆ ನಿನ್ನ ಬುದ್ಧಿ ಶುರು ಮಾಡಿದ್ಯಾ ಸಾನಿಯಾ ಎಂದು ಪ್ರಶ್ನೆ ಮಾಡ್ತಾಳೆ.

  Colors Kannada serial, Kannada serial, Kannadathi Serial, Kannadathi serial today episode, Hero Mother know about plan of Saniya, ಕನ್ನಡತಿ ಧಾರಾವಾಹಿ, ಸಾನಿಯಾ ಗುಟ್ಟು ಹರ್ಷನ ಮುಂದೆ ರಟ್ಟು, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
  ಕನ್ನಡತಿ


  ಅಮ್ಮಮ್ಮ ಸಾನಿಯಾಗೆ ಬುದ್ಧಿ ಕಲಿಸ್ತಾಳಾ? ಮನೆವರ ಮುಂದೆ ಸಿಕ್ಕಿ ಹಾಕಿ ಕೊಳ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಕನ್ನಡತಿ ಸೀರಿಯಲ್ ನೋಡಬೇಕು.
  Published by:Savitha Savitha
  First published: