Kannadathi: ಅಮ್ಮಮ್ಮನಿಗೆ ತನ್ನ ಮರೆವಿನ ಕಾಯಿಲೆ ಬಗ್ಗೆ ಗೊತ್ತಾಗುತ್ತಾ? ಆತಂಕದಲ್ಲಿ ಮುದ್ದಿನ ಸೊಸೆ ಭುವಿ!

ಅಮ್ಮಮ್ಮ ಪದೇ ಪದೇ ಎಲ್ಲವನ್ನೂ ಮರೆಯುತ್ತಿದ್ದಾರೆ. ಅವರಿಗೆ ಯಾಕೋ ಆತಂಕ ಶುರುವಾಗಿದೆ. ಅದಕ್ಕೆ ಭುವಿ ಬಳಿ ಬಂದು, ಭುವಿ ನನಗೆ ಯುಎಸ್ ಡಾಕ್ಟರ್ ನಂಬರ್ ಕೊಡು. ನಾನು ಅವರ ಬಳಿ ಮಾತನಾಡಬೇಕು. ಏನೂ ಸರಿ ಇಲ್ಲ ಎನ್ನಿಸುತ್ತಿದೆ. ನನಗೆ ಏನೋ ಆಗಿದೆ ಎಂದು ಹೇಳುತ್ತಾರೆ.

ಅಮ್ಮಮ್ಮ-ಸಾನಿಯಾ

ಅಮ್ಮಮ್ಮ-ಸಾನಿಯಾ

 • Share this:
  ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ (Kannadathi) ಧಾರಾವಾಹಿ (Serial) ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್‍ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ. ಗಂಡಸರು (Male Fans) ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡುತ್ತಿದೆ. ಅಮ್ಮಮ್ಮ ತನ್ನ ಕಂಪನಿಯ ಎಂಡಿ (MD) ಪಟ್ಟವನ್ನು ಭುವಿಗೆ ಕೊಡಲು ರೆಡಿಯಾಗಿದ್ದಾಳೆ. ಇದು ಗೊತ್ತಾಗಿ ಸಾನಿಯಾ (Saniya) ಏನೇನೋ ಪ್ಲ್ಯಾನ್ ಮಾಡ್ತಿದ್ದಾಳೆ. ಅಮ್ಮಮ್ಮನಿಗೆ ತನ್ನ ಮರೆವಿನ ಕಾಯಿಲೆ ಬಗ್ಗೆ ಅನುಮಾನ ಬಂದಿದೆ.

  ಸಾನಿಯಾಳನ್ನು ಬಿಟ್ಟು ಬಂದಿದ್ದ ಅಮ್ಮಮ್ಮ
  ಸಾನಿಯಾ ಅಮ್ಮಮ್ಮನನ್ನು ಬೀಳಿಸಲು ನೆಲದ ಮೇಲೆ ಎಣ್ಣೆ ಚೆಲ್ಲಿರುತ್ತಾಳೆ. ಆದ್ರೆ ಅಮ್ಮಮ್ಮನ ಬದಲು ಸಾನಿಯಾಳೇ ಬಿದ್ದು ಪೆಟ್ಟು ಮಾಡಿಕೊಳ್ತಾಳೆ. ಆಗ ಆಕೆ ತಲೆಗೆ ಏಟಾಗುತ್ತೆ. ಮನೆಯಲ್ಲಿ ಯಾರೂ ಇಲ್ಲದ ಕಾರಣ ಸಾನಿಯಾಳನ್ನು ಅಮ್ಮಮ್ಮ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ಆಕೆ ಚಿಕಿತ್ಸೆ ಪಡೆಯುತ್ತಿದ್ದಾಗ, ಅಮ್ಮಮ್ಮ ಎಲ್ಲವನ್ನೂ ಮರೆತು ಆಸ್ಪತ್ರೆಯಿಂದ ಹೊರಟು ಬಿಡುತ್ತಾರೆ. ಸಾನಿಯಾಳನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದನು ಮರೆತೇ ಬಿಡುತ್ತಾರೆ.

  ಇದನ್ನೂ ಓದಿ: Bigg Boss Season 9: ಬಿಗ್ ಬಾಸ್ ಮನೆಯಲ್ಲಿ ಹೊಸ ರೂಲ್ಸ್ ಘೋಷಿಸಿದ ಕಿಚ್ಚ ಸುದೀಪ್‍, ಮತ್ತೆ ಬರ್ತಿದ್ದಾರಾ ಅರವಿಂದ್-ದಿವ್ಯಾ ಉರುಡುಗ?

  ರಾತ್ರಿಯೆಲ್ಲಾ  ಸಾನಿಯಾ ಪರದಾಟ
  ಅಮ್ಮಮ್ಮ ಸಾನಿಯಾಳನ್ನು ಮರೆತು ಹೋದ ಕಾರಣ, ಆಕೆಯನ್ನು ಡಿಸ್ಚಾರ್ಜ್ ಮಾಡುವವರು ಯಾರೂ ಇರಲ್ಲ. ಸಾನಿಯಾ ಬಳಿ ದುಡ್ಡು ಸಹ ಇರಲ್ಲ. ಅಲ್ಲದೇ ತಾನು ಎಂ.ಡಿ ದೊಡ್ಡ ಶ್ರೀಮಂತೆ ಎಂದು ಆಸ್ಪತ್ರೆಯಲ್ಲಿ ಧಿಮಾಕು ತೋರಿಸುತ್ತಾಳೆ.

  Colors Kannada serial, Kannada serial, Kannadathi Serial, Kannadathi serial today episode, Company MD post, ಕನ್ನಡತಿ ಧಾರಾವಾಹಿ, ಭುವಿಗೆ ಎಂಡಿ ಸ್ಥಾನ ಪಟ್ಟ ಕೊಡಲು ಅಮ್ಮಮ್ಮ ಸಿದ್ಧ, ಅಮ್ಮಮ್ಮನಿಗೆ ತನ್ನ ಮರೆವಿನ ಕಾಯಿಲೆ ಬಗ್ಗೆ ಗೊತ್ತಾಗುತ್ತಾ?, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
  ಸಾನಿಯಾ


  ಅದನ್ನು ಕಂಡ ನರ್ಸ್ ಇಲ್ಲೇ ಬಿದ್ದಿರೋ ಎಂದು ರಾತ್ರಿಯೆಲ್ಲಾ ಚಳಿಯಲ್ಲಿ ಮಲಗುವಂತೆ ಮಾಡುತ್ತಾರೆ. ಕೊನೆಗೆ ಆದಿ ಕೊಟ್ಟ ಪ್ರೀತಿ ಉಂಗುರವನ್ನು ಬಿಚ್ಚಿಕೊಟ್ಟು ಮನೆಗೆ ವಾಪಸ್ ಬರುತ್ತಾಳೆ.

  ಮನೆಯಲ್ಲಿ ಆತಂಕ
  ಸಾನಿಯಾ ಮನೆಯಲ್ಲಿ ಇಲ್ಲದ ಕಾರಣ ಮನೆಯವರೆಲ್ಲಾ ಆತಂಕ ಆಗಿರುತ್ತಾರೆ. ರಾತ್ರಿಯೆಲ್ಲ ಎಲ್ಲಿ ಹೋಗಿದ್ಲು ಅಂತ ಗೊತ್ತಾಗದೇ ಕಂಗಾಲಾಗಿದ್ದು, ಸಾನಿಯಾ ಪರಿಸ್ಥಿತಿ ಸರಿ ಇಲ್ಲ. ಏನಾದ್ರೂ ಆದ್ರೆ ಏನ್ ಕಥೆ ಎಂದು ಆದಿ ಭಯಗೊಂಡಿರುತ್ತಾನೆ. ಬೆಳಗ್ಗೆ ಎದ್ದು ಪೊಲೀಸರಿಗೆ ದೂರು ಕೊಡಲು ಹೊರಟಿರುತ್ತಾನೆ. ಆಗ ಸಾನಿಯಾ ಬರುತ್ತಾಳೆ.

  ಅಮ್ಮಮ್ಮನಿಗೆ ಆತಂಕ
  ಅಮ್ಮಮ್ಮ ಪದೇ ಪದೇ ಎಲ್ಲವನ್ನೂ ಮರೆಯುತ್ತಿದ್ದಾರೆ. ಅವರಿಗೆ ಯಾಕೋ ಆತಂಕ ಶುರುವಾಗಿದೆ. ಅದಕ್ಕೆ ಭುವಿ ಬಳಿ ಬಂದು, ಭುವಿ ನನಗೆ ಯುಎಸ್ ಡಾಕ್ಟರ್ ನಂಬರ್ ಕೊಡು. ನಾನು ಅವರ ಬಳಿ ಮಾತನಾಡಬೇಕು. ಏನೂ ಸರಿ ಇಲ್ಲ ಎನ್ನಿಸುತ್ತಿದೆ. ನನಗೆ ಏನೋ ಆಗಿದೆ ಎಂದು ಹೇಳುತ್ತಾರೆ.

  Colors Kannada serial, Kannada serial, Kannadathi Serial, Kannadathi serial today episode, Company MD post, ಕನ್ನಡತಿ ಧಾರಾವಾಹಿ, ಭುವಿಗೆ ಎಂಡಿ ಸ್ಥಾನ ಪಟ್ಟ ಕೊಡಲು ಅಮ್ಮಮ್ಮ ಸಿದ್ಧ, ಅಮ್ಮಮ್ಮನಿಗೆ ತನ್ನ ಮರೆವಿನ ಕಾಯಿಲೆ ಬಗ್ಗೆ ಗೊತ್ತಾಗುತ್ತಾ?, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
  ಕನ್ನಡತಿ


  ಭುವಿಗೆ ಹೆಚ್ಚಾದ ಆತಂಕ
  ರತ್ನಾಮಾಲಾಗೆ ಮರೆವಿನ ಕಾಯಿಲೆ ಇರೋದು ಭುವಿಗೆ ಗೊತ್ತು. ಅದಕ್ಕೆ ಆಕೆ ಅವರನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ತಾಳೆ. ಆದ್ರೆ ಈಗ ಅಮ್ಮಮ್ಮನೇ ಬಂದು ಡಾಕ್ಟರ್ ನಂಬರ್ ಕೇಳಿದ್ದಕ್ಕೆ ಆತಂಕಗೊಂಡಿದ್ದಾಳೆ. ಎಲ್ಲಿ ಅವರಿಗೆ ನಿಜ ಗೊತ್ತಾಗಿ ಬಿಡುತ್ತೋ ಎಂದು ಕಂಗಾಲಾಗಿದ್ದಾಳೆ.

  ಇದನ್ನೂ ಓದಿ: Kendasampige: ರಾಜಕೀಯಕ್ಕೆ ಎಂಟ್ರಿ ಕೊಡ್ತಾಳಾ ಸುಮನಾ? ಜನರ ಸೇವೆಗಾಗಿ ಕಾರ್ಪೊರೇಟರ್ ಮಾತಿಗೆ ಎಸ್ ಅಂತಾಳಾ?

  ಅಮ್ಮಮ್ಮನಿಗೆ ತನ್ನ ಮರೆವಿನ ಕಾಯಿಲೆ ಬಗ್ಗೆ ಗೊತ್ತಾಗುತ್ತಾ? ಈಗ ಭುವಿ ಏನ್ ಮಾಡ್ತಾಳೆ? ಎಲ್ಲವನ್ನೂ ನೋಡಲು ಕನ್ನಡತಿ ಸೀರಿಯಲ್ ನೋಡಬೇಕು.
  Published by:Savitha Savitha
  First published: