Kannadathi: ಅಮ್ಮಮ್ಮನ ಮರೆವಿನ ಕಾಯಿಲೆ ಬಗ್ಗೆ ಹರ್ಷನಿಗೆ ಹೆಚ್ಚಾದ ಚಿಂತೆ; ಮನೆ ಬಿಟ್ಟು ಹೋಗ್ತೀವಿ ಅಂತಿದ್ದಾನೆ ಆದಿ!

ಅರಿವು ಇಲ್ಲದಂತೆ ಅಮ್ಮಮ್ಮ ಒಂದೇ ಸಮನೇ ಕರೆ ಮಾಡುತ್ತಾ ಇರುತ್ತಾಳೆ. ಆಗ ಹರ್ಷನಿಗೆ ಭುವಿ ಹೇಳಿದ್ದು ನೆನಪಾಗುತ್ತೆ. ಅಮ್ಮಮ್ಮನಿಗೆ ಮರೆವಿನ ಕಾಯಿಲೆ ಇರೋದು ಗೊತ್ತಾಗುತ್ತೆ. ಅದನ್ನು ಕಣ್ಣಾರೆ ನೋಡಿ ಹರ್ಷ ಗಾಬರಿಕೊಂಡಿದ್ದಾನೆ.

ಕನ್ನಡತಿ ಧಾರಾವಾಹಿ

ಕನ್ನಡತಿ ಧಾರಾವಾಹಿ

  • Share this:
    ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ (Serials) ಕನ್ನಡತಿ (Kannadathi) ಧಾರಾವಾಹಿ ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್‍ಗೆ ದೊಡ್ಡ ಅಭಿಮಾನಿಗಳ (Fans) ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ. ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡುತ್ತಿದೆ. ಅಮ್ಮಮ್ಮ ಆರೋಗ್ಯ ಸರಿ ಇಲ್ಲದಾಗ ವಿದೇಶಕ್ಕೆ ಹೋಗಿ ಚಿಕಿತ್ಸೆ ಪಡೆದು ಬಂದಿದ್ದಾರೆ. ಅಲ್ಲಿಂದ ಬಂದ ಮೇಲೆ ಅಮ್ಮಮ್ಮನಿಗೆ ಮರವಿನ ಕಾಯಿಲೆ (Memory Loss) ಶುರುವಾಗಿದೆ. ಈ ವಿಷಯ ಹರ್ಷನಿಗೆ ಗೊತ್ತಾಗಿದೆ.

    ಅಮ್ಮಮ್ಮನ ಮೆಮೊರಿ ಲಾಸ್!
    ಅಮ್ಮಮ್ಮ ಅಂದ್ರೆ ರತ್ನಮಾಲಾ, ಹರ್ಷನ ಮುದ್ದಿನ ಅಮ್ಮ. ಗಂಡ ತೀರಿ ಹೋದ್ರೂ ಜವಾಬ್ದಾರಿ ತಾನೇ ತೆಗೆದುಕೊಂಡು ಕಂಪನಿ ಬೆಳೆಸಿರುವ ಹೆಂಗಸು. ಎಲ್ಲೂ, ಏನು ತಪ್ಪಾಗದಂತೆ, ಸಂಸಾರ, ಅಧಿಕಾರ ಎರಡನ್ನೂ ನಿರ್ವಹಿಸಿಕೊಂಡು ಬಂದಿರುವವಳು. ಆದ್ರೆ ವಯಸ್ಸಾದಂತೆ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಸಾವಿಗೆ ದಿನಗಳನ್ನು ಎಣಿಸುತ್ತಿದ್ದಾಳೆ. ಆದ್ರೆ ಈ ಬಾರಿ ಚಿಕಿತ್ಸೆ ಪಡೆದು ಬಂದ ನಂತರ ಅಮ್ಮಮ್ಮ ಮೆಮೊರಿ ಲಾಸ್ ಆಗಿದೆಯಂತೆ.

    ಅಮ್ಮಮ್ಮನ ಕಾಯಿಲೆ ಕಣ್ಣಾರೆ ನೋಡಿ ಹರ್ಷ ಶಾಕ್
    ಹರ್ಷ ಗಣೇಶ ಹಬ್ಬದಂದು ಅಮ್ಮಮ್ಮನಿಗೆ ಕುಂಕುಮ ಇಡಲು ಹೋಗಿರುತ್ತಾನೆ. ಆಗ ಅಮ್ಮಮ್ಮ ಹರ್ಷನಿಗೆ ಕಾಲ್ ಮಾಡ್ತಾ ಇರ್ತಾಳೆ. ಹರ್ಷ ನಾನು ಇಲ್ಲೇ ಇದೀನಿ ಎಂದ್ರೂ, ಆ ಅರಿವು ಇಲ್ಲದಂತೆ ಅಮ್ಮಮ್ಮ ಒಂದೇ ಸಮನೇ ಕರೆ ಮಾಡುತ್ತಾ ಇರುತ್ತಾಳೆ. ಆಗ ಹರ್ಷನಿಗೆ ಭುವಿ ಹೇಳಿದ್ದು ನೆನಪಾಗುತ್ತೆ. ಅಮ್ಮಮ್ಮನಿಗೆ ಮರೆವಿನ ಕಾಯಿಲೆ ಇರೋದು ಗೊತ್ತಾಗುತ್ತೆ. ಅದನ್ನು ಕಣ್ಣಾರೆ ನೋಡಿ ಹರ್ಷ ಗಾಬರಿಕೊಂಡಿದ್ದಾನೆ.

    ಇದನ್ನೂ ಓದಿ: Ramachari: ಅಮ್ಮನಿಗಾಗಿ ರಾಮಾಚಾರಿ ಕಾಲು ಹಿಡಿದ ಸೊಕ್ಕಿನ ರಾಣಿ ಚಾರು!

    ಡಾಕ್ಟರ್ ಗೆ ಕರೆ ಮಾಡಿದ ಹರ್ಷ-ದೇವ್
    ಹರ್ಷ ಗಾಬರಿಯಿಂದ ಡಾಕ್ಟರ್ ಅಣ್ಣ ದೇವ್ ಬಗ್ಗೆ ಎಲ್ಲಾ ರಿಪೋರ್ಟ್‍ಗಳನ್ನು ಚೆಕ್ ಮಾಡಿಸುತ್ತಾನೆ. ಅಲ್ಲಿ ಮೆಮೊರಿ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ. ಆಗ ಡಾಕ್ಟರ್​ಗೆ ಕಾಲ್ ಮಾಡ್ತಾರೆ. ಆಗ ಡಾಕ್ಟರ್ ನಿಜ ಹೇಳ್ತಾರೆ. ಅಮ್ಮಮ್ಮನಿಗೆ ಮರೆವಿನ ಕಾಯಿಲೆ ಇರೋದು ತಿಳಿಯುತ್ತೆ. ಹರ್ಷ ಸಂಪೂರ್ಣ ಕುಸಿದು ಹೋಗಿದ್ದಾನೆ.

    colors Kannada Serials, Kannada serial, Kannadathi serial cast, Kannadathi today episode, ಕನ್ನಡತಿ ಧಾರಾವಾಹಿ, ಅಮ್ಮಮ್ಮನ ಮರೆವಿನ ಕಾಯಿಲೆ ಬಗ್ಗೆ ಹರ್ಷನಿಗೆ ಹೆಚ್ಚಾದ ಚಿಂತೆ, ಕನ್ನಡತಿ ಅಭಿಮಾನಿಗಳು, ಕಲರ್ಸ್ ಕನ್ನಡ ಧಾರಾವಾಹಿ, Kannada news, Karnataka news,
    ಕನ್ನಡತಿ ಧಾರಾವಾಹಿ


    ಅಮ್ಮಮ್ಮನಿಗೆ ಟೆಸ್ಟ್ ಮಾಡಿಸಲು ಸಾನಿಯಾ ತಯಾರಿ
    ಸಾನಿಯಾ ಜುಟ್ಟು ಈಗ ಅಮ್ಮಮ್ಮನ ಕೈಯಲ್ಲಿದೆ. ಅಮ್ಮಮ್ಮ ಹೇಳಿದಂತೆ ಕೇಳೋ ಅನಿವಾರ್ಯತೆ ಬಂದಿದೆ. ಅದಕ್ಕೆ ಸಾನಿಯಾ ಅಮ್ಮಮ್ಮನಿಗೆ ಮರವಿನ ಕಾಯಿಲೆ ಇದೆಯೋ, ಇಲ್ವೋ ಎಂದು ತಿಳಿದುಕೊಳ್ಳಲು ಮುಂದಾಗಿದ್ದಾಳೆ. ಡಾಕ್ಟರ್ ಬಳಿ ಕರೆದುಕೊಂಡು ಹೋಗಲು ಚಿಂತನೆ ನಡೆಸುತ್ತಿದ್ದಾಳೆ.

    ಮನೆ ಬಿಟ್ಟು ಹೋಗ್ತೀವಿ ಎಂದ ಆದಿ
    ಇನ್ನು ಸಾನಿಯಾ ಮೊಬೈಲ್‍ಗೆ ಡಾಕ್ಟರ್ ಕರೆ ಮಾಡಿರುತ್ತಾರೆ. ಈ ವಿಚಾರವಾಗಿ ಆದಿ ಮತ್ತು ಸಾನಿಯಾ ನಡುವೆ ಗಲಾಟೆ ಆಗುತ್ತೆ. ಅದಕ್ಕೆ ಬೇಸರಗೊಂಡ ಆದಿ, ದೊಡ್ಡಮ್ಮನ ಮುಂದೆ ಜಗಳ ಆಡ್ತಾಳೆ. ನಾವ್ಯಾಕೆ ಈ ಮನೆಯಲ್ಲಿ ಒಟ್ಟಿಗೆ ಇರಬೇಕು. ನಾವ್ ಬೇರೆ ಮನೆಗೆ ಹೋಗ್ತೀನಿ ಅಂತಿದ್ದಾನೆ.

    ಇದನ್ನೂ ಓದಿ: Sathya Serial: ಸತ್ಯ ಮೇಲೆ ಕಾರ್ತಿಕ್‍ಗೆ ಲವ್ ಆಗಿದ್ಯಾ? ತನ್ನ ಸುದ್ದಿಗೆ ಬಂದ ಕೀರ್ತನಾಗೆ ಲೇಡಿ ರಾಮಾಚಾರಿ ಕ್ಲಾಸ್!

    ಹಬ್ಬದ ದಿನವೇ ಎಲ್ಲರೂ ಬೇಸರದಲ್ಲಿದ್ದಾರೆ. ಎಲ್ಲಾ ವಿಘ್ನಗಳನ್ನು ವಿನಾಯಕ ದೂರ ಮಾಡ್ತಾನಾ? ಮುಂದೇನಾಗುತ್ತೆ ಅಂತ ನೋಡೋಕೆ ಕನ್ನಡತಿ ಸೀರಿಯಲ್ ನೋಡಬೇಕು.
    Published by:Savitha Savitha
    First published: