• Home
  • »
  • News
  • »
  • entertainment
  • »
  • Kannadathi: ಅಮ್ಮಮ್ಮ ಇಲ್ಲದಿರುವಾಗ ಭುಗಿಲೆದ್ದ ಆಸ್ತಿ ವಿವಾದ; ಹರ್ಷ, ಚಿಕ್ಕಪ್ಪನ ನಡುವೆ ಗಲಾಟೆಯಾಗುತ್ತಾ?

Kannadathi: ಅಮ್ಮಮ್ಮ ಇಲ್ಲದಿರುವಾಗ ಭುಗಿಲೆದ್ದ ಆಸ್ತಿ ವಿವಾದ; ಹರ್ಷ, ಚಿಕ್ಕಪ್ಪನ ನಡುವೆ ಗಲಾಟೆಯಾಗುತ್ತಾ?

ಕನ್ನಡತಿ

ಕನ್ನಡತಿ

ಹಬ್ಬ ಮಾಡೋ ಖುಷಿಯಲ್ಲಿ ಹರ್ಷ, ಭುವಿ ಮನೆಯವರು ಇದ್ದಾರೆ. ಆದ್ರೆ ಹರ್ಷನ ಚಿಕ್ಕಪ್ಪ ಮಾತ್ರ ಆಸ್ತಿ ಬಗ್ಗೆ ಮಾತನಾಡಲು ಹರ್ಷನ ಬಳಿ ಹೋಗಿದ್ದಾನೆ. ಅಮ್ಮಮ್ಮ ಇಲ್ಲದಿರೋ ವೇಳೆಯಲ್ಲಿ ಆಸ್ತಿಗಾಗಿ ವಿವಾದ ಆಗುತ್ತಾ, ಗಲಾಟೆ ನಡೆಯುತ್ತಾ? ಎಲ್ಲವನ್ನು ನೋಡಲು ಕನ್ನಡತಿ ಸಂಚಿಕೆಯನ್ನು ನೋಡಬೇಕು.

ಮುಂದೆ ಓದಿ ...
  • Share this:

    ಕಲರ್ಸ್ ಕನ್ನಡದಲ್ಲಿ  (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ ಧಾರಾವಾಹಿ (Serial) ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್‍ಗೆ ದೊಡ್ಡ ಅಭಿಮಾನಿಗಳ (Fans) ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ (Kannadathi) ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಹರ್ಷ-ಭುವಿ ಮದುವೆ ಸಮಯದಲ್ಲಿ ಅಮ್ಮಮ್ಮನಿಗೆ ಹುಷಾರಿಲ್ಲದೇ ಹೆಚ್ಚಿನ ಚಿಕಿತ್ಸೆಗೆ ವಿದೇಶಕ್ಕೆ ಹೋಗಿದ್ದರು. ಇನ್ನೇನು ಗುಣಮುಖರಾಗಿ ವಾಪಸ್ ಬರಲಿದ್ದಾರೆ. ಆದ್ರೆ ಹರ್ಷನ ಚಿಕ್ಕಪ್ಪನಿಗೆ ತಮಗೆ ಏನೂ ಆಸ್ತಿ ಸಿಗಲ್ಲ ಎಂದು ಹೆಂಡತಿ ಮೇಲೆ ಕೋಪ ತೋರಿಸಿ, ಇವತ್ತೆ ಇತ್ಯರ್ಥವಾಗಲಿ, ಆಸ್ತಿಯನ್ನು ಕೇಳುತ್ತೇನೆ ಎಂದು ಹರ್ಷನ ಬಳಿ ಮಾತನಾಡುತ್ತೇನೆ ಎಂದು ಹೋಗಿದ್ದಾರೆ.  ಅಮ್ಮಮ್ಮ ಇಲ್ಲದಿರೋ ವೇಳೆಯಲ್ಲಿ ಆಸ್ತಿಗಾಗಿ ವಿವಾದ ಆಗುತ್ತಾ, ಗಲಾಟೆ ನಡೆಯುತ್ತಾ?


    ಹಬ್ಬದ ಸಂಭ್ರಮದಲ್ಲಿ ಕ್ಯಾತೆ ತೆಗೆದ ಚಿಕ್ಕಪ್ಪ


    ಕನ್ನಡತಿ ಧಾರಾವಾಹಿಯಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸುತ್ತಿದ್ದಾರೆ. ಹರ್ಷನೇ ಮುಂದೆ ನಿಂತು ಎಲ್ಲಾ ತಯಾರಿ ನಡೆಸುತ್ತಿದ್ದಾನೆ. ಹಬ್ಬದ ಸಂಭ್ರಮದಲ್ಲಿ ದೇವರಿಗೆ ಅಲಂಕಾರ ಮಾಡಲು ಹರ್ಷ ಚಿಕ್ಕಮ್ಮ ಒಡವೆ ತರಲು ಹೋಗಿದ್ದಳು. ಆದ್ರೆ ಹರ್ಷನ ಚಿಕ್ಕಪ್ಪ ಅದೆನ್ನೆಲ್ಲಾ ತಡೆದು, ಏನೂ ಕೊಡಬೇಡ, ಈಗಾಲೇ ಹರ್ಷನ ಬಳಿ ಮಾತನಾಡುತ್ತೇನೆ ಎಂದು ಹೋಗಿದ್ದಾರೆ.


    Colors Kannada Kannadathi serial very interesting episode today hero Harsha uncle talk with Harsha property matter
    ಸಾಂದರ್ಭಿಕ ಚಿತ್ರ


    ಅಮ್ಮಮ್ಮ ಇಲ್ಲದಿರೋ ವೇಳೆಯಲ್ಲಿ ಆಸ್ತಿ ವಿವಾದ


    ಹಬ್ಬ ಮಾಡೋ ಖುಷಿಯಲ್ಲಿ ಹರ್ಷ, ಭುವಿ ಮನೆಯವರು ಇದ್ದಾರೆ. ಆದ್ರೆ ಹರ್ಷನ ಚಿಕ್ಕಪ್ಪ ಮಾತ್ರ ಆಸ್ತಿ ಬಗ್ಗೆ ಮಾತನಾಡಲು ಹರ್ಷನ ಬಳಿ ಹೋಗಿದ್ದಾನೆ. ನಿನ್ನ ಬಳಿ ನಾನು ಮಾತನಾಡಬೇಕು ಮೂರನೇಯವರನ್ನು ಅಂದ್ರೆ ಭುವಿಯನ್ನ ಹೊರಗಿ ಕಳಿಸಿ ಎಂದು ಹರ್ಷನಿಗೆ ಹೇಳುತ್ತಾನೆ. ಅದಕ್ಕೆ ಭುವಿ ಹೋಗಲು ತಯಾರಾಗುತ್ತಾಳೆ. ಹರ್ಷ ತಡೆದ ಅವಳು ಬೇರೆ ಅವಳಲ್ಲ. ನಮ್ಮ ಮನೆಯವಳೇ ಏನು ಹೇಳಿ ಎನ್ನುತ್ತಾನೆ.


    ಇದನ್ನೂ ಓದಿ: Gattimela: ಧ್ರುವನ ಕಿಡ್ನಾಪ್​ ಮಾಡಿ ಮದುವೆಯಾಗ್ತಾಳಾ ಅದಿತಿ? ಅತ್ತಿಗೆ ಸಹಾಯ ಸಿಗುತ್ತಾ? 


    ಇವತ್ತು ಇಬ್ಬರ ನಡುವೆ ಗಲಾಟೆಯಾಗುತ್ತಾ?


    ಇವತ್ತು ಹರ್ಷ ಮತ್ತು ಚಿಕ್ಕಪ್ಪನ ನಡುವೆ ಮಾತಿಗೆ ಮಾತು ಬೆಳೆಯಬಹುದು ಇಬ್ಬರ ನಡುವೆ ಗಲಾಟೆಯಾಗಬಹುದು. ಹರ್ಷನ ಮೇಲೆ ಚಿಕ್ಕಪ್ಪ ಕೈ ಮಾಡಲು ಹೋಗುತ್ತಾನೆ. ಆಗ ಯಾರೂ ತಡೆಯುತ್ತಾರೆ. ಯಾರು ಅನ್ನೋದನ್ನು ಇವತ್ತಿನ ಸಂಚಿಕೆಯಲ್ಲಿ ನೋಡಬೇಕು.


    ಅಮ್ಮಮ್ಮನಿಗೆ ಕುಂದುತ್ತಿದೆಯಂತೆ ನೆನಪಿನ ಶಕ್ತಿ


    ಆರೋಗ್ಯ ಸರಿ ಇಲ್ಲದೇ ವಿದೇಶದಲ್ಲಿ ಅಮ್ಮಮ್ಮ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಜೊತೆ ಆದಿ ಕೂಡ ಇದ್ದಾನೆ. ಆದ್ರೆ ಅಲ್ಲಿಂದ ಕರೆ ಮಾಡಿದ ಡಾಕ್ಟರ್ ಶಾಕಿಂಗ್ ನ್ಯೂಸ್ ಒಂದನ್ನು ಹೇಳಿದ್ದಾರೆ. ಅಮ್ಮಮ್ಮ ಹುಷಾರಾಗಿದ್ದಾರೆ ಡಿಸ್ಚಾರ್ಜ್ ಮಾಡುತ್ತಿದ್ದೇವೆ. ಆದ್ರೆ ಅಮ್ಮಮ್ಮನಿಗೆ ದಿನದಿಂದ ದಿನಕ್ಕೆ ನೆನಪಿ ಶಕ್ತಿ ಕುಂದುತ್ತಿದೆ. ಹಳೆಯದನ್ನು ಮರೆಯುತ್ತಿದ್ದಾರೆ ಎಂದು ಹೇಳಿದ್ದಾರೆ.


    Colors Kannada serial, Kannada serial, Kannadathi Serial, Kannadathi serial today episode, property matter in home, ಕನ್ನಡತಿ ಧಾರಾವಾಹಿ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ರತ್ನಮಾಲಾ


    ಖುಷಿಯಿಂದ ಕುಣಿದಾಡಿದ ಸಾನಿಯಾ


    ವಿದೇಶದಿಂದ ಅಮ್ಮಮ್ಮ ನೆನಪಿನ ಶಕ್ತಿ ಕಡಿಮೆಯಾಗುತ್ತಿದೆ ಎಂದು ಡಾಕ್ಟರ್ ಹೇಳಲು ಕರೆ ಮಾಡಿದ್ದಾಗ ಅದನ್ನು ಸಾನಿಯಾ ರಿಸೀವ್ ಮಾಡಿ ಕೇಳಿಸಿಕೊಳ್ಳುತ್ತಾಳೆ. ವಿಷಯ ಗೊತ್ತಾಗುತ್ತಿದ್ದಂತೆ ಖುಷಿಯಾಗಿ, ನನ್ನನ್ನು ಕೆಲಸದಿಂದ ತೆಗೆದಿದ್ದು ಮಾತ್ರ ನೆನಪಿನಲ್ಲಿ ಇಲ್ಲ ಎಂದ್ರೆ ಸಾಕು ಎಂದು ಸಂತೋಷಗೊಂಡಿದ್ದಾಳೆ.


    ಇದನ್ನೂ ಓದಿ: Paaru: ಅರಸನಕೋಟೆಯ ಕಿರಿಯ ಪುತ್ರನ ರಾಸಲೀಲೆ ವೀಡಿಯೋ ಲೀಕ್ ಆಗುತ್ತಾ? ಶತ್ರುಗಳ ಬಲೆಗೆ ಸಿಲುಕ್ತಾನಾ ಪ್ರೀತು 


    ಮನೆಯವರೆಲ್ಲಾ ಅಮ್ಮಮ್ಮ ಮನೆಗೆ ಬರುತ್ತಾಳೆ ಎನ್ನುವ ಸಂಭ್ರಮದಲ್ಲಿದ್ದಾರೆ. ಅಮ್ಮಮ್ಮನಿಗೆ ಸಪ್ರೈಸ್ ಕೊಡಲು ಏನೇನು ಮಾಡುತ್ತಿದ್ದಾರೆ. ಅಮ್ಮಮ್ಮ ನೋಡಿ ಖುಷಿಯಾಗಬೇಕು. ಅವಳ ಆರೋಗ್ಯ ಚೆನ್ನಾಗಿರಬೇಕು ಎಂದು ದೇವರಲ್ಲಿ ಕೇಳಿಕೊಳ್ಳುತ್ತಿದ್ದಾರೆ. ಇವತ್ತು ಏನಾಗುತ್ತೆ, ಹರ್ಷನಿಗೆ ಹೊಡೆಯುವುದನ್ನು ತಪ್ಪಿಸಿದ್ದು ಯಾರು?, ಇದ್ದಕ್ಕಿದ್ದ ಹಾಗೇ ಚಿಕ್ಕಪ್ಪ ರೊಚ್ಚಿಗೇಳಲು ಕಾರಣವೇನು? ಇದರ ಹಿಂದೆ ಸಾನಿಯಾ ಕುತುಂತ್ರವೇನಾದ್ರೂ ಇದೆಯಾ? ಎಲ್ಲವನ್ನು ನೋಡಲು ಕನ್ನಡತಿ ಸಂಚಿಕೆಯನ್ನು ನೋಡಬೇಕು

    Published by:Savitha Savitha
    First published: