• Home
  • »
  • News
  • »
  • entertainment
  • »
  • Kannadathi: ವರ್ಕ್ ಆಗ್ತಿಲ್ಲ ಸಾನಿಯಾ ಪ್ಲ್ಯಾನ್, ರಾವಣನ ತಲೆ ಹೊತ್ತು ಹರ್ಷನ ಬಳಿ ಗನ್ ಹಿಡಿದು ಬಂದಿದ್ಯಾರು?

Kannadathi: ವರ್ಕ್ ಆಗ್ತಿಲ್ಲ ಸಾನಿಯಾ ಪ್ಲ್ಯಾನ್, ರಾವಣನ ತಲೆ ಹೊತ್ತು ಹರ್ಷನ ಬಳಿ ಗನ್ ಹಿಡಿದು ಬಂದಿದ್ಯಾರು?

ಕನ್ನಡತಿ

ಕನ್ನಡತಿ

Kannadathi: ಸಾನಿಯಾ ಕಡೆ ಹುಡುಗ ಹರ್ಷನ ಬಳಿ ಗನ್ ಹಿಡಿದು ಬರುತ್ತಿದ್ದಾನೆ. ಹರ್ಷನಿಗೆ ಶೂಟ್ ಮಾಡಲು ಬಂದಿದ್ದಾನಾ? ಇಲ್ವಾ ಒಂದು ಗೊತ್ತಿಲ್ಲ. ಸಾನಿಯಾ ಹರ್ಷ, ಭುವಿ, ಅಮ್ಮಮ್ಮನ ವಿರುದ್ಧ ಯಾವುದೇ ಪ್ಲ್ಯಾನ್ ಮಾಡಿದ್ರು ಉಲ್ಟಾ ಆಗುತ್ತೆ. 

  • Share this:

ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ (Kannadathi)  ಧಾರಾವಾಹಿ  (Serial) ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್‍ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ. ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡುತ್ತಿದೆ. ಹರ್ಷ (Harsha) ಮನೆಗೆ ರಾವಣನ 10 ತಲೆ ಇರುವ ಕಿರೀಟ ತಂದಿದ್ದಾನೆ. ಅದನ್ನು ಸಾನಿಯಾ ನೋಡಿ ಗಾಬರಿ ಆಗಿದ್ದಾಳೆ. ಅಲ್ಲದೇ ಹರ್ಷ ಬಳಿ ಸಾನಿಯಾ ಕಳಿಸಿದ ಹುಡುಗ ಗನ್ (Gun) ಹಿಡಿದು ಬಂದಿದ್ದಾನೆ.


ರಾವಣನ ತಲೆ ಹಾಕಿಕೊಂಡ ಬಂದ ಹರ್ಷ
ಕಳೆದ ಒಂದು ವಾರದಿಂದ ಹರ್ಷ ಧಾರಾವಾಹಿಯಲ್ಲಿ ಕಾಣಿಸಿಕೊಂಡಿರಲಿಲ್ಲ. ಈಗ ಬಂದಿರುವ ಹರ್ಷ ರಾವಣನ ತಲೆ ಕಿರೀಟ ಹಾಕಿಕೊಂಡು ಬಂದಿದ್ದಾನೆ. ಅದನ್ನು ನೋಡಿ ಸಾನಿಯಾ ಗಾಬರಿಗೊಂಡು ಕಿರುಚಿದ್ದಾಳೆ. ಅಷ್ಟರಲ್ಲಿ ಮನೆಯವರೆಲ್ಲಾ ಬರುತ್ತಾರೆ. ಅಮ್ಮಮ್ಮ ಇದನ್ನು ಏಕೆ ತಂದೆ ಎಂದು ಬೈಯ್ತಾಳೆ. ಅದಕ್ಕೆ ಇದರಲ್ಲಿ ಏಕೆ ಕೆಟ್ಟದ್ದು ಹುಡುಕುತ್ತೀರಿ ಅಮ್ಮಮ್ಮ ಇದರಲ್ಲಿ ಒಳ್ಳೆಯ ಕಥೆ ಹುಡುಕಿ ಎನ್ನುತ್ತಾನೆ.


ಭುವಿ ಜೊತೆ ಮಾತು ಬಿಟ್ಟ ಹರ್ಷ
ಭುವಿ ಅಮ್ಮಮ್ಮ ಸಲುವಾಗಿ ಪೊಲೀಸ್ ಠಾಣೆಗೆ ಹೋದಾಗ ಹರ್ಷ ಕಾಲ್ ಮಾಡ್ತಾ ಇರ್ತಾನೆ. ಆದ್ರೆ ಭುವಿ ಪಿಕ್ ಮಾಡಿರಲಿಲ್ಲ. ಭುವಿ ಮತ್ತೆ ಹರ್ಷನಿಗೆ ಕಾಲ್ ಮಾಡಿದಾಗ ಅವನು ಪಿಕ್ ಮಾಡಿರಲಿಲ್ಲ. ಹರ್ಷ ಬಂದ ಮೇಲೆ ಭುವಿ ಮಾತನಾಡಿಸಲು ಹೋದ್ರೆ ನಿವ್ಯಾರು ಎಂದು ಕೇಳಿದ್ದಾನೆ ಹರ್ಷ. ಅದಕ್ಕೆ ಭುವಿ ಬೇಸರ ಮಾಡಿಕೊಂಡಿದ್ದಾಳೆ. ಇದು ಕೇವಲ ತಮಾಷೆಗಾಗಿ ಮಾಡಿರಬಹುದು.


ಇದನ್ನೂ ಓದಿ: Khushbu: ಖುಷ್ಬೂಗೆ ಜನ್ಮ ದಿನದ ಸಂಭ್ರಮ, ಕನ್ನಡದಲ್ಲಿ ಅಭಿನಯಿಸಿದ ಅವರ ಚಿತ್ರಗಳ ಪಟ್ಟಿ ಹೀಗಿದೆ ನೋಡಿ


ಫೈಲ್ ಕದಿಯಲು ಹೋದ ಸಾನಿಯಾ ಕಳಿಸಿದ ರಿತೇಶ್
ಭುವಿ ಬಳಿ ಮನೆಯಲ್ಲಿ ಕೆಲ ಹುಡುಗರು ಪಾಠ ಹೇಳಿಸಿಕೊಳ್ಳಲು ಬರುತ್ತಾರೆ. ಅದರಲ್ಲಿ ಸಾನಿಯಾ ಕಳಿಸಿದ ರಿತೇಶ್ ಎನ್ನುವ ಹುಡುಗ ಸಹ ಇದ್ದಾನೆ. ಅವನು ಪಾಠ ಕೇಳೋ ನೆಪದಲ್ಲಿ, ಸಾನಿಯಾ ಹೇಳಿದ ಕೆಲಸ ಮಾಡ್ತಾನೆ. ಈಗ ಅಮ್ಮಮ್ಮ ಇಟ್ಟಿರುವ ಫೈಲ್ ಕದಿಯುತ್ತಾನೆ. ಅಷ್ಟರಲ್ಲೇ ಅಮ್ಮಮ್ಮ ಬರುತ್ತಾಳೆ. ಆಗ ಆ ಹುಡುಗ ಫೈಲ್ ಕೆಳಗೆ ಬಿಡುತ್ತಾನೆ.


Colors Kannada serial, Kannada serial, Kannadathi Serial, Kannadathi serial today episode, Harsha know about plan of Saniya, ಕನ್ನಡತಿ ಧಾರಾವಾಹಿ, ರಾವಣನ ತಲೆ ಹೊತ್ತು ಬಂದ ಹರ್ಷ, ಸಾನಿಯಾ ಗುಟ್ಟು ಹರ್ಷನ ಮುಂದೆ ರಟ್ಟು, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
ರಿತೇಶ್


ಸಾನಿಯಾ ಪ್ಲ್ಯಾನ್ ಉಲ್ಟಾ
ಸಾನಿಯಾ ಹರ್ಷ, ಭುವಿ, ಅಮ್ಮಮ್ಮನ ವಿರುದ್ಧ ಯಾವುದೇ ಪ್ಲ್ಯಾನ್ ಮಾಡಿದ್ರು ಉಲ್ಟಾ ಆಗುತ್ತೆ. ಈಗ ರಿತೇಶ್ ಫೈಲ್ ಕದ್ದು ಸಿಕ್ಕಿ ಬಿದ್ದಿದ್ದಾನೆ. ಒಂದು ವೇಳೆ ಅವನು ಸತ್ಯ ಹೇಳಿದ್ರೆ, ಸಾನಿಯಾ ಬಂಡವಾಳ ಎಲ್ಲಾ ಮನೆ ಸದಸ್ಯರ ಮುಂದೆ ಬಯಲಾಗಲಿದೆ.


Colors Kannada serial, Kannada serial, Kannadathi Serial, Kannadathi serial today episode, Harsha know about plan of Saniya, ಕನ್ನಡತಿ ಧಾರಾವಾಹಿ, ರಾವಣನ ತಲೆ ಹೊತ್ತು ಬಂದ ಹರ್ಷ, ಸಾನಿಯಾ ಗುಟ್ಟು ಹರ್ಷನ ಮುಂದೆ ರಟ್ಟು, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
ಸಾನಿಯಾ


ಹರ್ಷ ಬಳಿ ಗನ್ ಹಿಡಿದು ಬಂದ ರಿತೇಶ್
ಸಾನಿಯಾ ಕಡೆ ಹುಡುಗ ಹರ್ಷನ ಬಳಿ ಗನ್ ಹಿಡಿದು ಬರುತ್ತಿದ್ದಾನೆ. ಹರ್ಷನಿಗೆ ಶೂಟ್ ಮಾಡಲು ಬಂದಿದ್ದಾನಾ? ಇಲ್ವಾ ಒಂದು ಗೊತ್ತಿಲ್ಲ. ಹರ್ಷ ಅವನು ಮತ್ತು ಗನ್ ನೋಡಿ ಶಾಕ್ ಆಗಿದ್ದಾನೆ. ಇದು ಮತ್ತೆ ಸಾನಿಯಾ ಮಾಡಿರೋ ಪ್ಲ್ಯಾನ್ ಇರಬಹುದು ಎಂದು ಚಿಂತೆ ಮಾಡುತ್ತಿದ್ದಾನೆ.


ಇದನ್ನೂ ಓದಿ: Rashmika Mandanna: ರಶ್ಮಿಕಾ ಮಂದಣ್ಣ​ ಕ್ರೇಜ್​; ಎದೆ ಮೇಲೆ ಆಟೋಗ್ರಾಫ್ ಬೇಕೇ ಬೇಕು ಎಂದ ಫ್ಯಾನ್!


ಇನ್ನೊಂದೆಡೆ ಹರ್ಷನ ಚಿಕ್ಕಪ್ಪ ಭುವಿ ಬಳಿ ನನ್ನ ಪಾಲಿನ ಆಸ್ತಿ ಬಗ್ಗೆ ನಿಮ್ಮ ಅತ್ತೆಯ ಬಳಿ ಮಾತನಾಡು ಎಂದು ಒತ್ತಡ ಹಾಕುತ್ತಿದ್ದಾನೆ. ಧಾರಾವಾಹಿ ಕುತೂಹಲ ಮೂಡಿಸುತ್ತಿದ್ದು, ಮುಂದೆ ಏನಾಗುತ್ತೆ ಅಂತ ನೋಡೋಕೆ ಕನ್ನಡತಿ ಧಾರಾವಾಹಿ ನೋಡಬೇಕು.

Published by:Savitha Savitha
First published: