• Home
  • »
  • News
  • »
  • entertainment
  • »
  • Kannadathi: ಅಮ್ಮಮ್ಮ ಬರೋ ಖಷಿಯಲ್ಲಿ ಮನೆ ಮಂದಿ! ಸಾನಿಯಾ ಸಿಡಿಮಿಡಿ

Kannadathi: ಅಮ್ಮಮ್ಮ ಬರೋ ಖಷಿಯಲ್ಲಿ ಮನೆ ಮಂದಿ! ಸಾನಿಯಾ ಸಿಡಿಮಿಡಿ

ಕನ್ನಡತಿ ಧಾರಾವಾಹಿ

ಕನ್ನಡತಿ ಧಾರಾವಾಹಿ

ಅಮ್ಮಮ್ಮ ಹುಷಾರಾಗಿ ಬರುತ್ತಿರುವುದಕ್ಕೆ ಹರ್ಷನ ಖುಷಿಗೆ ಪಾರವೇ ಇಲ್ಲದಂತಾಗಿದೆ. ಸಂತೋಷದಿಂದ ಈಡೀ ಮನೆಯವರ ಬಾಯಿಗೆ ಸಕ್ಕರೆ ಹಾಕುತ್ತಿದ್ದಾನೆ. ಕುಟುಂಬದವರೆಲ್ಲಾ ನಗುತ್ತಾ ಖುಷಿಯಿಂದಾ ಇದ್ದಾರೆ. ಸಾನಿಯಾಗೆ ಮನೆ ಕೆಲಸದಾಕೆ ಶಾರದಮ್ಮ ಸಕ್ಕರೆ ಕೊಡಲು ಹೋಗುತ್ತಾಳೆ. ಆಗ ಸಾನಿಯಾ ನಿನ್ನ ಕೈಯಿಂದ ಒಂದು ಗ್ಲಾಸ್ ಸಹ ನೀರು ಕುಡಿಯುವುದಿಲ್ಲ ನಾನು, ಇನ್ನು ಸಕ್ಕರೆ ತಿನ್ನುತ್ತೀನಾ ಎಂದು ಕೇಳಿ ಕೋಪ ಮಾಡಿಕೊಂಡ ಹೋಗುತ್ತಾಳೆ.

ಮುಂದೆ ಓದಿ ...
  • Share this:

    ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ ಧಾರಾವಾಹಿ (Serial)  ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್‍ಗೆ ದೊಡ್ಡ ಅಭಿಮಾನಿಗಳ (Fans) ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಪ್ರೀತಿಸಿ ಮದುವೆಯಾಗಿರೋ ಹರ್ಷ (Harsha)_ಭುವಿಯನ್ನು ದೂರ ಮಾಡಲು ಸಾನಿಯಾ, ವರೂಧಿನಿ ಒಂದಲ್ಲ ಒಂದು ಪ್ರಯತ್ನ ಮಾಡುತ್ತಲೇ ಇದ್ದಾರೆ. ಇಬ್ಬರ ಮಧ್ಯೆ ವೈಮನಸ್ಸು ಸೃಷ್ಟಿಸಲು ಏನೇನೂ ಪ್ಲ್ಯಾನ್ ಮಾಡ್ತಾ ಇದ್ದಾರೆ. ಈ ನಡುವೆ ಅಮ್ಮಮ್ಮ ಹುಷಾರಿಲ್ಲದೇ ಹೊರ ದೇಶಕ್ಕೆ ಚಿಕಿತ್ಸೆಗೆ ಹೋಗಿರುವದೇ ಮನೆಯಲ್ಲೆ ಆಗುತ್ತಿರುವ ಕೆಲ ಘಟನೆಗಳೆಗೆ ಕಾರಣ ಆಗಿದೆ. ಈಗ ಎಲ್ಲಾ ಸಮಸ್ಯೆಗಳು (Problems) ಪರಿಹಾರ ಆಗುತ್ತೆ ಅಸನ್ನಿಸುತ್ತೆ, ಏಕಂದ್ರೆ ಚಿಕಿತ್ಸೆಗೆ ಹೋಗಿದ್ದ ಅಮ್ಮಮ್ಮ ಹುಷಾರಾಗಿ ಮನೆಗೆ ಬರುತ್ತಿದ್ದಾರೆ.


    ಅಮ್ಮಮ್ಮ ಬರೋ ಖುಷಿಯಲ್ಲಿ ಮನೆ
    ಹರ್ಷ ಮತ್ತು ಭುವಿ ಮದುವೆ ಟೈಂನಲ್ಲಿ ಅಮ್ಮಮ್ಮನಿಗೆ ಆರೋಗ್ಯ ಸಮಸ್ಯೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ವಿದೇಶಕ್ಕೆ ಕಳಿಸಲಾಗಿರುತ್ತೆ. ಇತ್ತ ಭುಮಿ ಹರ್ಷನ ಮನೆಗೆ ಸೊಸೆಯಾಗಿ ಕಾಲಿಟ್ಟ ತಕ್ಷಣ, ತನ್ನ ನೆಚ್ಚಿ ರತ್ನಮ್ಮ ಇಲ್ಲದಿರೋದು ಬೇಸರ ತಂದಿತ್ತು. ಹರ್ಷನಿಗೂ ತನ್ನ ಅಮ್ಮಮ್ಮ ಇಲ್ಲದಿರುವುದು ಹೆಚ್ಚು ಕಾಡುತಿತ್ತು. ಈ ಎಲ್ಲಾ ಬೇಸರಗಳನ್ನು ದೂರ ಮಾಡಲು, ಗುಣಮುಖರಾಗಿರುವ ಅಮ್ಮಮ್ಮ ಭಾರತಕ್ಕೆ ವಾಪಸ್ ಮರಳಿ ಬರುತ್ತಿದ್ದಾರೆ.


    ಸಂತೋಷಕ್ಕೆ ಮನೆಯವರ ಬಾಯಿಗೆ ಸಕ್ಕರೆ ಹಾಕಿದ ಹರ್ಷ
    ಇನ್ನು ತನ್ನ ಅಮ್ಮಮ್ಮ ಹುಷಾರಾಗಿ ಬರುತ್ತಿರುವುದಕ್ಕೆ ಹರ್ಷನ ಖುಷಿಗೆ ಪಾರವೇ ಇಲ್ಲದಂತಾಗಿದೆ. ಸಂತೋಷದಿಂದ ಈಡೀ ಮನೆಯವರ ಬಾಯಿಗೆ ಸಕ್ಕರೆ ಹಾಕುತ್ತಿದ್ದಾನೆ. ಕುಟುಂಬದವರೆಲ್ಲಾ ನಗುತ್ತಾ ಖುಷಿಯಿಂದಾ ಇದ್ದಾರೆ. ಅಮ್ಮಮ್ಮ ಯಾವಾಗ ಬರುತ್ತಾರೋ ಅಂತ ಕಾಯ್ತಾ ಇದ್ದಾರೆ.


    ಸಕ್ಕರೆ ತಿನ್ನದೇ ಸಿಡಿಮಿಡಿಗೊಂಡ ಸಾನಿಯಾ
    ಮನೆಯವರೆಲ್ಲಾ ಸಿಹಿ ತಿನ್ನುತ್ತಾ ಖುಷಿಯಲ್ಲಿ ಇದ್ದಾಗ ಅಲ್ಲಿಗೆ ಸಾನಿಯಾ ಬರುತ್ತಾಳೆ. ಸಾನಿಯಾಗೆ ಮನೆ ಕೆಲಸದಾಕೆ ಶಾರದಮ್ಮ ಸಕ್ಕರೆ ಕೊಡಲು ಹೋಗುತ್ತಾಳೆ. ಆಗ ಸಾನಿಯಾ ನಿನ್ನ ಕೈಯಿಂದ ಒಂದು ಗ್ಲಾಸ್ ಸಹ ನೀರು ಕುಡಿಯುವುದಿಲ್ಲ ನಾನು, ಇನ್ನು ಸಕ್ಕರೆ ತಿನ್ನುತ್ತೀನಾ ಎಂದು ಕೇಳಿ ಕೋಪ ಮಾಡಿಕೊಂಡ ಹೋಗುತ್ತಾಳೆ. ಈ ಹಿಂದೆ ಶಾರದಮ್ಮ ನೀರು ಕೊಟ್ಟಾಗ ಅದರಲ್ಲಿ ಕಾರದ ಪುಟಿ ಹಾಕಿಕೊಟ್ಟಿದಾಳೆ ಎಂದು ಶಾರದಮ್ಮನ್ನ ಬಳಿ ಜಗಳವಾಡಿ, ಅವರು ಇರೋವರೆಗೂ ಊಟ, ತಿಂಡಿ ಮಾಡಲ್ಲ ಎಂದು ಸಾನಿಯಾ ಹೇಳಿದ್ದಳು.


    ಇದನ್ನೂ ಓದಿ: Kannadathi Actress: ಇಂಟ್ರೆಸ್ಟಿಂಗ್ ಒಗಟು ಕೇಳ್ತಿದ್ದಾರೆ ಕನ್ನಡ ಟೀಚರ್, ನಿಮಗೆ ಗೊತ್ತಾ ಆನ್ಸರ್? 


    ಸಮಾಧಾನ ಮಾಡಲು ಹೋದ ಭುವಿಗೆ ಪಾಠ
    ಮನೆ ಮಂದಿಯೆಲ್ಲಾ ಸಿಹಿ ತಿಂದು ಸಂತೋಷವಾಗಿದ್ದಾರೆ. ಸಾನಿಯಾ ಮಾತ್ರ ಕೋಪ ಮಾಡಿಕೊಂಡ್ರೆ ಹೇಗೆ ಎಂದು, ಭುವಿಯ ಸಕ್ಕರೆಯನ್ನು ಕೊಡಲು ಹೋಗುತ್ತಾಳೆ. ಆದರೂ ಸಾನಿಯಾ ತೆಗೆದುಕೊಳ್ಳಲ್ಲ. ಶಾರದಮ್ಮ ಎಷ್ಟೋ ದಿನದಿಂದ ನಮ್ಮ ಮನೆಯಲ್ಲಿ ಕೆಲಸ ಮಾಡಿಕೊಂಡು ಇದ್ದಾರೆ. ಈ ಮನೆಯಲ್ಲಿ ಒಬ್ಬರಾಗಿದ್ದಾರೆ. ಅವರ ಮೇಲೆಕೆ ಕೋಪ ಸಾನಿಯಾ ಅವರೇ ಅಂತ ಭುವಿ ಕೇಳಿದ್ದಕ್ಕೆ, ಸಾನಿಯಾ ಶಾರದಮ್ಮ ನನಗೆ ಒಮ್ಮೆ ಧಮ್ಕಿ ಹಾಕಿದ್ದಳು, ನನ್ನ ಮೇಲೆ ಅತ್ತೆ ಬಳಿ ಚಾಡಿ ಹೇಳಿದ್ದಳು. ಅವಳು ಇರೋವರೆಗೂ ನಾನು ಏನೂ ತಿನ್ನಲ್ಲ ಎಂದು ಹೇಳಿ ಹೋಗುತ್ತಾಳೆ.


    ಇದನ್ನೂ ಓದಿ: Ramachari Serial: ಎಲ್ಲರ ಬದುಕು ಸರಿ ಮಾಡೋ ರಾಮಾಚಾರಿ ಮನೆ ಒಡೆದು ಹೋಗುತ್ತಾ? ರಾಮನಿಂದ ದೂರ ಆಗ್ತಾನಾ ಕೋದಂಡ? 


    ಅಮ್ಮಮ್ಮ ಬಂದು ಎಲ್ಲವನ್ನೂ ಸರಿ ಮಾಡ್ತಾರಾ?
    ಇನ್ನು ಅಮ್ಮಮ್ಮ ಗುಣಮುಖರಾಗಿ ವಿದೇಶದಿಂದ ಬರುತ್ತಿದ್ದಾರೆ. ಮನೆಯಲ್ಲಿ ಆಗುತ್ತಿರುವ ಮುನಿಸು, ಹೊರಗಡೆ ಆಗುತ್ತಿರುವ ಸಾನಿಯಾ, ಹರ್ಷ ಜಗಳವನ್ನು ಸರಿ ಮಾಡೋಕೆ ಅಮ್ಮಮ್ಮನೇ ಬೇಕು. ಈಗ ಅವರು ಬರುತ್ತಿದ್ದು, ಎಲ್ಲ ಸಮಸ್ಯೆಗೂ ಪರಿಹಾರ ಹೇಳ್ತಾರಾ? ಸಾನಿಯಾ ಎಂಡಿ ಪೋಸ್ಟ್ ಇಂದು ಇಳಿತಾಳಾ, ಕೆಲಸ ಬಿಟ್ಟಿರುವ ಭುವಿಗೆ ಅದಕ್ಕಿಂತ ದೊಡ್ಡ ಕೆಲಸ ಸಿಗುತ್ತಾ? ಎಲ್ಲವನ್ನೂ ನೋಡಲು ಕನ್ನಡತಿ ಧಾರಾವಾಹಿ ಸಂಚಿಕೆಗಳನ್ನು ನೋಡಬೇಕು.

    Published by:Savitha Savitha
    First published: