• Home
  • »
  • News
  • »
  • entertainment
  • »
  • Kannadathi: ಯಾರೋ ಮಾಡಿದ ತಪ್ಪಿಗೆ ಪೊಲೀಸ್ ಠಾಣೆಯಲ್ಲಿ ಭುವಿ, ಸಾನಿಯಾ ಮಾಡಿದ್ದ ಕುತಂತ್ರನಾ ಇದು?

Kannadathi: ಯಾರೋ ಮಾಡಿದ ತಪ್ಪಿಗೆ ಪೊಲೀಸ್ ಠಾಣೆಯಲ್ಲಿ ಭುವಿ, ಸಾನಿಯಾ ಮಾಡಿದ್ದ ಕುತಂತ್ರನಾ ಇದು?

ಯಾರೋ ಮಾಡಿದ ತಪ್ಪಿಗೆ ಪೊಲೀಸ್ ಠಾಣೆಯಲ್ಲಿ ಭುವಿ

ಯಾರೋ ಮಾಡಿದ ತಪ್ಪಿಗೆ ಪೊಲೀಸ್ ಠಾಣೆಯಲ್ಲಿ ಭುವಿ

ಪೊಲೀಸ್ ಠಾಣೆಗೆ ಹೋದ ಭುವಿಗೆ ಸತ್ಯ ತಿಳಿಯುತ್ತೆ. ತಮ್ಮ ಕಾರು ಹಿಟ್ ಅಂಡ್ ರನ್ ಕೇಸ್‍ನಲ್ಲಿ ಸಿಲುಕಿದೆ ಅಂತ. ಅದನ್ನು ಯಾರು ಮಾಡಿದ್ರು ಎಂದು ಗೊತ್ತಿಲ್ಲ. ರತ್ಮಮ್ಮ ತನ್ನ ಮರೆವಿನ ಕಾಯಿಲೆಯಿಂದ ಈ ರೀತಿ ಅಪಘಾತ ಮಾಡಿದ್ದಾರಾ ಎಂದು ಭುವಿ ಗಾಬರಿಗೊಂಡಿದ್ದಾಳೆ.

  • Share this:

    ಕಲರ್ಸ್ ಕನ್ನಡದಲ್ಲಿ ( Colors Kannada ) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ (Kannadathi) ಧಾರಾವಾಹಿ (Serial) ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್‍ಗೆ ದೊಡ್ಡ ಅಭಿಮಾನಿಗಳ (Fans) ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ. ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡುತ್ತಿದೆ. ಅಮ್ಮಮ್ಮ ತನ್ನ ಕಂಪನಿಯ ಎಂಡಿ ಪಟ್ಟವನ್ನು ಭುವಿಗೆ ಕೊಡಲು ರೆಡಿಯಾಗಿದ್ದಾಳೆ. ಇದು ಗೊತ್ತಾಗಿ ಸಾನಿಯಾ ಏನೇನೋ ಪ್ಲ್ಯಾನ್ ಮಾಡ್ತಿದ್ದಾಳೆ. ಆದ್ರೆ ಅವಳು ಏನೇ ಮಾಡಿದ್ರೂ ಅವಳಿಗೆ ಉಲ್ಟಾ ಹೊಡೆಯುತ್ತಿದೆ. ಈಗ ಭುವಿ ಪೊಲೀಸ್ (Police) ಠಾಣೆಯಲ್ಲಿದ್ದಾಳೆ.


    ಹಬ್ಬದ ದಿನವೇ ಮನೆಗೆ ಬಂದ ಪೊಲೀಸ್
    ರತ್ನಮಾಲಾ ಮನೆಯಲ್ಲಿ ಹಬ್ಬ ನಡೆಯುತ್ತಿದೆ. ಎಲ್ಲರೂ ಸಂಭ್ರಮದಿಂದ ಇದ್ದಾರೆ. ಆಗ ಪೊಲೀಸರು ಎಂಟ್ರಿ ಕೊಟ್ಟಿದ್ದಾರೆ. ಭುವಿ ಮನೆಯ ಹೊರಗೆ ಇದ್ದ ಕಾರಣ ಪೊಲೀಸರು ಅಲ್ಲೇ ಪ್ರಶ್ನೆ ಕೇಳುತ್ತಿದ್ದಾರೆ. ರತ್ನಮಾಲಾ ಇಲ್ವಾ ಎನ್ನುತ್ತಾರೆ. ಅದಕ್ಕೆ ಭುವಿ ಏನ್ ಆಯ್ತು? ಏಕೆ ಎನ್ನುತ್ತಾಳೆ. ಪೊಲೀಸರು ಪ್ರಶ್ನೆ ಮಾಡೋರು ನಾವು ನೀವಲ್ಲ ಎನ್ನುತ್ತಾರೆ. ಅಷ್ಟರಲ್ಲೇ ಅಲ್ಲೇ ಇದ್ದ ಕಾರು ನೋಡಿ, ಪೊಲೀಸರು ಹೇಳ್ತಾರೆ. ಇಲ್ಲೇ ಇದೆಯಲ್ಲಾ ಸಾಕ್ಷಿ ಕಾರ್ ಡ್ಯಾಮೇಜ್ ಆಗಿದೆ ಅಂತ. ಕಾರಿನ ದಾಖಲೆ ಕೇಳ್ತಾರೆ.


    ಪೊಲೀಸ್ ಜೀಪ್ ಹತ್ತಿ ಹೊರಟ ಭುವಿ
    ಪೊಲೀಸರು ಕೇಳಿದಂತೆ ಭುವಿ ಕಾರಿನ ದಾಖಲೆ ಕೊಡ್ತಾಳೆ. ಮತ್ತೆ ಪೊಲೀಸರನ್ನು ಏನಾಯ್ತು ಎಂದು ಕೇಳ್ತಾಳೆ. ಅದಕ್ಕೆ ಪೊಲೀಸ್ ನೀವು ದುಡ್ಡು ಇರುವ ಜನ ಏನ್ ಬೇಕಾದ್ರೂ ಮಾಡಬಹುದು ಎಂದು ಕೊಳ್ತೀರಿ. ರಾತ್ರಿ ಕಾರು ಅಡ್ಡದಿಡ್ಡಿ ಓಡಿಸಿದ್ದೀರಿ. ಕಾರು ಓಡಿಸಿದ ರತ್ನಮಾಲಾ ಅವರನ್ನು ಕರೆಯಿರಿ ಎನ್ನುತ್ತಾರೆ. ಆಗ ಭುವಿ, ಅಮ್ಮಮ್ಮನಿಗೆ ತೊಂದ್ರೆ ಆಗುತ್ತೆ ಅಂತ ತಾನೇ ಕಾರು ಓಡಿಸಿದ್ದು ಎನ್ನುತ್ತಾಳೆ. ಅದಕ್ಕೆ ಪೊಲೀಸರು ಭುವಿಯನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.


    ಇದನ್ನೂ ಓದಿ: Rashmika Mandanna: ಸ್ಟೈಲಿಶ್ ಲುಕ್‍ನಲ್ಲಿ ರಶ್ಮಿಕಾ ಮಂದಣ್ಣ, ವಾವ್ ಸೂಪರ್ ಎಂದ ನೆಟ್ಟಿಗರು 


    ಅಮ್ಮಮ್ಮನಿಗೆ ಆತಂಕ ಶುರು
    ಭುವಿ ಪೊಲೀಸ್ ಕಾರು ಹತ್ತಿ ಹೋಗುವುದನ್ನು ಸುಚಿ ನೋಡ್ತಾಳೆ. ಅದನ್ನು ಅಮ್ಮಮ್ಮನಿಗೆ ಹೇಳ್ತಾಳೆ. ಅಮ್ಮಮ್ಮ ಗಾಬರಿಯಾಗಿ ಭುವಿಗೆ ಕಾಲ್ ಮಾಡ್ತಾಳೆ. ಭುವಿ 2 ಗಂಟೆ ರತ್ನಮ್ಮ ಸಣ್ಣ ವಿಚಾರಣೆ ಧೈರ್ಯವಾಗಿರಿ ಎಂದು ಸಮಾಧಾನ ಮಾಡ್ತಾಳೆ. ಆದ್ರೂ ಅಮ್ಮಮ್ಮ ಭಯಗೊಂಡಿದ್ದಾರೆ.


    Colors Kannada serial, Kannada serial, Kannadathi Serial, Kannadathi serial today episode, ಕನ್ನಡತಿ ಧಾರಾವಾಹಿ, ಯಾರೋ ಮಾಡಿದ ತಪ್ಪಿಗೆ ಪೊಲೀಸ್ ಠಾಣೆಯಲ್ಲಿ ಭುವಿ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಅಮ್ಮಮ್ಮ


    ಹಿಟ್ ಅಂಡ್ ರನ್ ಕೇಸ್ ಅಂತೆ
    ಪೊಲೀಸ್ ಠಾಣೆಗೆ ಹೋದ ಭುವಿಗೆ ಸತ್ಯ ತಿಳಿಯುತ್ತೆ. ತಮ್ಮ ಕಾರು ಹಿಟ್ ಅಂಡ್ ರನ್ ಕೇಸ್‍ನಲ್ಲಿ ಸಿಲುಕಿದೆ ಅಂತ. ಅದನ್ನು ಯಾರು ಮಾಡಿದ್ರು ಎಂದು ಗೊತ್ತಿಲ್ಲ. ರತ್ಮಮ್ಮ ತನ್ನ ಮರೆವಿನ ಕಾಯಿಲೆಯಿಂದ ಈ ರೀತಿ ಅಪಘಾತ ಮಾಡಿದ್ದಾರಾ ಎಂದು ಭುವಿ ಗಾಬರಿಗೊಂಡಿದ್ದಾಳೆ.


    ಇದನ್ನೂ ಓದಿ: Kendasampige: ಕಾಲೊನಿಯವರು ಕೈ ಬಿಟ್ರೂ, ಕಾರ್ಪೊರೇಟರ್ ತೀರ್ಥಂಕರ್ ಪ್ರಸಾದ್ ಕೈ ಬಿಡಲ್ಲ! ಜನರ ಸಹಾಯಕ್ಕೆ ಬಂದೇ ಬಿಟ್ರು


    ಸಾನಿಯಾ ಕುತಂತ್ರನಾ?
    ಮನೆಯಲ್ಲೇ ಹರ್ಷ ಇಲ್ಲ. ಇದನ್ನೇ ಬಳಸಿಕೊಂಡ ಸಾನಿಯಾ ರತ್ನಮಾಲಾ ವಿರುದ್ಧ ಏನಾದ್ರೂ ಸಂಚು ಮಾಡಿದ್ದಾಳಾ ಅನ್ನೋ ಪ್ರಶ್ನೆಗಳು ಶುರುವಾಗಿವೆ. ಅಮ್ಮಮ್ಮ ಮರೆವಿನ ಕಾಯಿಲೆಯನ್ನು ಬಳಸಿಕೊಂಡಿದ್ದಾಳಾ. ಅಮ್ಮಮ್ಮ ಸಾನಿಯಾಳನ್ನು ಆಸ್ಪತ್ರೆಗೆ ಕರೆದುಕೊಂಡು ಮರೆತು ಬಂದಿದ್ದರು. ಇದನ್ನು ಇಟ್ಟುಕೊಂಡು ಅಪಘಾತದ ನಾಟಕವಾಡಿಸುತ್ತಿದ್ದಾಳಾ?


    Colors Kannada serial, Kannada serial, Kannadathi Serial, Kannadathi serial today episode, ಕನ್ನಡತಿ ಧಾರಾವಾಹಿ, ಯಾರೋ ಮಾಡಿದ ತಪ್ಪಿಗೆ ಪೊಲೀಸ್ ಠಾಣೆಯಲ್ಲಿ ಭುವಿ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಸಾನಿಯಾ


    ಇದು ಅಮ್ಮಮ್ಮ ಮಾಡಿದ ಅಪಘಾತನಾ? ಸಾನಿಯಾ ಕುತಂತ್ರನಾ? ತಪ್ಪೇ ಮಾಡದ ಭುವಿ ಪೊಲೀಸ್ ಠಾಣೆಯಲ್ಲಿ! ಮುಂದೇನಾಗುತ್ತೆ ಅಂತ ನೋಡೋಕೆ ಕನ್ನಡತಿ ಸೀರಿಯಲ್ ನೋಡಬೇಕು.

    Published by:Savitha Savitha
    First published: