ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ (Serials) ಕನ್ನಡತಿ (Kannadathi) ಸೀರಿಯಲ್ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್ ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ, ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡ್ತಿದೆ. ಭುವಿ-ಹರ್ಷನ ಮಧ್ಯೆ ಬರ್ತಿರೋ ವರುಗೆ ಒಬ್ಬ ಹೀರೋ (Hero) ಎಂಟ್ರಿ ಆಗಿದೆ. ಆತನನ್ನು ಮದುವೆ (Marriage) ಆಗಲು ವರು ಒಪ್ತಾಳಾ?
ಹರ್ಷ ಅಂದ್ರೆ ವರುಗೆ ಇಷ್ಟ
ಧಾರಾವಾಹಿ ಶುರುವಾದಾಗಿನಿಂದ ವರುಗೆ ಹೀರೋ ಅಂದ್ರೇ ಹರ್ಷ ಅಂತ. ಅವನನ್ನು ಹುಚ್ಚಿ ತರ ಪ್ರೀತಿ ಮಾಡ್ತಾ ಇದ್ಲು. ಅವನನ್ನೇ ಮದುವೆ ಆಗಬೇಕು ಎಂದುಕೊಂಡಿದ್ಲು. ಆದ್ರೆ ಹರ್ಷ ಭುವಿಯನ್ನು ಪ್ರೀತಿಸಿ ಮದುವೆ ಆಗ್ತಾನೆ ಅದಕ್ಕೆ ವರುಗೆ ವಿಪರೀತ ಕೋಪ, ಅಸಹನೆ ಎಲ್ಲವೂ ಇದೆ. ಹೀರೋ ನನಗೆ ಬೇಕು ಅಂತಿದ್ದಾಳೆ. ಅದಕ್ಕೆ ಅವರಿಬ್ಬರಿಗೂ ಡಿವೋರ್ಸ್ ಕೊಡಿಸೋ ಕೆಲಸದಲ್ಲಿ ತೊಡಗಿದ್ದಾಳೆ.
ಲಾಯರ್ ಭೇಟಿಯಾದ ವರು
ವರೂಧಿನಿ ಹರ್ಷ-ಭುವಿ ಡಿವೋರ್ಸ್ ಕೊಡಿಸಬೇಕು ಎಂದು ಲಾಯರ್ ಒಬ್ಬರುನ್ನು ಭೇಟಿ ಮಾಡಿದ್ದಾಳೆ. ಅವರು ಡಿವೋರ್ಸ್ ಕೊಡಿಸೋದ್ರಲ್ಲಿ ನಿಸ್ಸೀಮರು. ಅದಕ್ಕೆ ವರು ಡಿವೋರ್ಸ್ ಆಗುತ್ತೆ. ನನಗೆ ಹರ್ಷ ಸಿಕ್ಕೇ ಸಿಕ್ತಾನೆ ಎನ್ನುವ ಖುಷಿಯಲ್ಲಿದ್ದಾಳೆ. ಇಬ್ಬರು ಸ್ವಲ್ಪ ಹೊತ್ತು ಖುಷಿಯಾಗಿ ಮಾತನಾಡಿದ್ದಾರೆ.
ಇದನ್ನೂ ಓದಿ: Olavina Nildana: ತಾರಿಣಿ ಪ್ರೀತಿ ಪಡೆಯಲು ಹೋಗಿ, ಅಮ್ಮನ ನಂಬಿಕೆಯನ್ನೂ ಕಳೆದುಕೊಂಡ ಸಿದ್ಧಾಂತ್!
ವಿಲ್ ಯು ಮ್ಯಾರಿ ಮಿ ಎಂದ ಲಾಯರ್
ವರು ಲಾಯರ್ ಬಳಿ ಮಾತನಾಡಿ, ನೀವು ಆದಷ್ಟು ಬೇಗ ಮದುವೆ ಆಗಿ. ನಿಮ್ಮ ಖುಷಿಯನ್ನಯ ಶೇರ್ ಮಾಡಿಕೊಳ್ಳಲು ಯಾರಾದ್ರೂ ಬೇಕು ಅಲ್ವಾ?, ಕೇಸ್ ನಲ್ಲಿ ಗೆದ್ದಿದ್ದಕ್ಕೆ ಪಾರ್ಟಿ ಕೊಟ್ರಿ. ಆದ್ರೆ ನಿಮ್ಮ ಸಂತೋಷ ಹಂಚಿಕೊಳ್ಳಲು ನಿಮಗೆ ಸಂಗತಿ ಬೇಕು. ನಾನು ಯಾವಾಗಲೂ ಸಿಗುತ್ತೀನಾ? ಎಂದು ವರು ಲಾಯರ್ ಗೆ ಕೇಳಿದ್ದಾರೆ.
ನೀವು ಆದಷ್ಟು ಬೇಗ ಮದುವೆ ಆಗಿ. ಮದುವೆ ಆಗುವವರನ್ನೇ ಇಷ್ಟಪಡಬೇಕು. ಇಷ್ಟ ಪಟ್ಟವರನ್ನೇ ಮದುವೆ ಆಗಬೇಕು ಎಂದು ವರು ಹೇಳ್ತಾಳೆ. ಅದಕ್ಕೆ ಲಾಯರ್ ನಕ್ಕು. ನಾವು ನಿಮ್ಮ ಪರ್ಸನಲ್ ವಿಷ್ಯ ಕೇಳಬಾರದು. ನೀವು ಮಾತ್ರ ಬೇಕಾದ ರೀತಿ ಉಪದೇಶ ಮಾಡಬಹುದು ಅಲ್ವಾ ಎಂದು ಕೇಳಿ, ಮಂಡಿ ಮೇಲೆ ಕೂತು ವಿಲ್ ಯು ಮ್ಯಾರಿ ಮಿ ಎಂದು ಕೇಳಿದ್ದಾರೆ.
ಮದುವೆ ಒಪ್ಪಿಕೊಳ್ತಾಳಾ ವರು?
ವರುಗೆ ಹರ್ಷ ಬೇಕು ಎಂದು ಕಾಯುತ್ತಿದ್ದಾಳೆ. ಈ ನಡುವೆ ಈ ಲಾಯರ್ ಮದುವೆ ಆಗ್ತೀರಾ ಎಂದು ಕೇಳಿದ್ದಾರೆ. ಅದಕ್ಕೆ ವರು ಶಾಕ್ ಆಗಿ ನಿಂತಿದ್ದಾಳೆ. ಹರ್ಷನನ್ನು ಮರೆತು ವರು ಲಾಯರ್ ಜೊತೆ ಮದುವೆಗೆ ಒಪ್ಪಿಕೊಳ್ತಾಳಾ? ಹರ್ಷ-ಭುವಿಗೆ ನಿರಾಳ ಆಗುತ್ತಾ? ಧಾರಾವಾಹಿ ಮುಕ್ತಾಯದ ಹಂತಕ್ಕೆ ಬರುತ್ತಿದ್ದು, ಎಲ್ಲವನ್ನು ಹ್ಯಾಪಿ ಎಂಡಿಂಗ್ ಮಾಡ್ತಾರಾ ನೋಡಬೇಕು.
ಇದನ್ನೂ ಓದಿ: Ramachari Actor: 'ಚಾರಿ' ಅಲ್ಲ 'ಚೋರ' ಇವನು! 'ರಾಮಾಚಾರಿ' ಖ್ಯಾತಿಯ ರಿತ್ವಿಕ್ ಸ್ಟೈಲಿಶ್ ಲುಕ್ ನೋಡಿ
ಇದೆಲ್ಲಾ ಹರ್ಷನಾ ಪ್ಲ್ಯಾನಾ? ವರು ಮದುವೆಗೆ ಒಪ್ತಾಳಾ? ಇಲ್ಲ ಹರ್ಷನ ನೆನಪಲ್ಲೇ ಜೀವನ ಮಾಡ್ತಾಳಾ? ಮುಂದೇನಾಗುತ್ತೆ ಅಂತ ನೊಡೋಕೆ ಕನ್ನಡತಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ