• Home
  • »
  • News
  • »
  • entertainment
  • »
  • Kannadathi: ರತ್ನಮಾಲಾ ವಿಲ್ ಬಗ್ಗೆ ಹರ್ಷನಿಗೆ ಗೊತ್ತಾಯ್ತಾ? ಇನ್‌ಡೈರೆಕ್ಟ್ ಆಗಿ ಕ್ಲ್ಯೂ ಕೊಟ್ಟಳಾ ವರು?

Kannadathi: ರತ್ನಮಾಲಾ ವಿಲ್ ಬಗ್ಗೆ ಹರ್ಷನಿಗೆ ಗೊತ್ತಾಯ್ತಾ? ಇನ್‌ಡೈರೆಕ್ಟ್ ಆಗಿ ಕ್ಲ್ಯೂ ಕೊಟ್ಟಳಾ ವರು?

ಹರ್ಷನಿಗೆ ಇನ್‍ಡೈರೆಕ್ಟ್ ಆಗಿ ವಿಲ್ ಬಗ್ಗೆ ವರು ಮಾಹಿತಿ

ಹರ್ಷನಿಗೆ ಇನ್‍ಡೈರೆಕ್ಟ್ ಆಗಿ ವಿಲ್ ಬಗ್ಗೆ ವರು ಮಾಹಿತಿ

ಹರ್ಷ "ನಾನೇ ಆಸ್ತಿಯೆಲ್ಲಾ ನೋಡಿಕೊಳ್ಳೋನು" ಎಂದು ಹೇಳಿದ್ದಕ್ಕೆ ವರು, "ರತ್ನಮಾಲಾ ಇಲ್ಲ ನಿಜ. ಆದ್ರೆ ಭುವಿ ಇದಾಳೆ. ಅವಳಿಗೆ ಹೇಳದೇ, ನೀವು ಯಾವ ನಿರ್ಧಾರವನ್ನು ತೆಗೆದುಕೊಳ್ಳಲು ಆಗಲ್ಲ" ಎಂದು ಹರ್ಷನ ತಲೆಯಲ್ಲಿ ಹುಳ ಬಿಟ್ಟಿದ್ದಾಳೆ! ಮುಂದೇನಾಗುತ್ತೆ?

  • News18 Kannada
  • Last Updated :
  • Karnataka, India
  • Share this:

    ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ ಧಾರಾವಾಹಿ (Kannadathi Serial) ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್‍ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ, ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ (Super Hit) ಆಗಿ ಓಡುತ್ತಿದೆ. ಧಾರಾವಾಹಿಯಲ್ಲಿ ಅಮ್ಮಮ್ಮನ ಅಧ್ಯಾಯ ಮುಕ್ತಾಯವಾಗಿದೆ. ಆಸ್ತಿಗೆಲ್ಲಾ ಮುಂದಿನ ಹಕ್ಕುದಾರಳು ಭುವಿ ಎನ್ನುವುದನ್ನು ಹರ್ಷನಿಗೆ ಇನ್‍ಡೈರೆಕ್ಟ್ ಆಗಿ ವರು ಹೇಳಿದ್ದಾಳೆ.


    ರತ್ನಮಾಲಾ ಇಲ್ಲದೇ ಎಲ್ಲವೂ ಗೊಂದಲ
    ಕನ್ನಡತಿ ಧಾರಾವಾಹಿಯಲ್ಲಿ ನಟಿಸುವವರು ಆ ಪಾತ್ರಕ್ಕೆ ಜೀವ ತುಂಬಿದ್ದರು. ಅಮ್ಮಮ್ಮ ಅಂದ್ರೆ ರತ್ನಮಾಲಾ ಅವರ ಪಾತ್ರವು ಚೆನ್ನಾಗಿ ಮೂಡಿ ಬಂದಿತ್ತು. ಮಗನನ್ನು ಸಾಕಿದ ರೀತಿ, ಮನೆಯವರಿಗೆ ಹೇಳಿ ಕೊಟ್ಟ ಸಂಸ್ಕಾರ ಎಲ್ಲವೂ ಇಷ್ಟ ಆಗಿತ್ತು. ರತ್ನಮಾಲಾ ಇನ್ಮುಂದೆ ಧಾರಾವಾಹಿಯಲ್ಲಿ ಇರಲ್ಲ ಎನ್ನುವುದನ್ನೇ ಅಭಿಮಾನಿಗಳು ಒಪ್ತಾ ಇಲ್ಲ. ಯಾಕಂದ್ರೆ ಪಾತ್ರ ಅಷ್ಟು ಮನಸ್ಸಿನಲ್ಲಿ ಉಳಿದು ಬಿಟ್ಟಿತ್ತು. ಆದ್ರೆ ಇನ್ಮುಂದೆ ಆ ಅಭಿನಯ ಇರಲ್ಲ.


    ಕಂಪನಿ ನೋಡಿಕೊಳ್ಳುತ್ತಿರುವ ಹರ್ಷ
    ಅಮ್ಮಮ್ಮ ಇಲ್ಲದ ಕಾರಣ ಕಂಪನಿಯ ಎಲ್ಲಾ ಜವಾಬ್ದಾರಿಯನ್ನು ಹರ್ಷ ನೋಡಿಕೊಳ್ಳುತ್ತಿದ್ದಾನೆ. ರಾತ್ರಿ-ಹಗಲು ಎನದೇ ಕೆಲಸದಲ್ಲಿ ಮುಳುಗಿದ್ದಾನೆ. ನಾನು ಏನ್ ಕೆಲಸ ಮಾಡಬೇಕು ಎಂದು ಮನೆಯವರನ್ನು ಕೇಳಿ ಮಾಡಬೇಕಾ ಎಂದು ಹರ್ಷ ವರುವನ್ನು ಕೇಳುತ್ತಿದ್ದಾನೆ. ಅದಕ್ಕೆ ವರು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ನಿಮಗೆ ಇಲ್ಲ ಎಂದು ಹೇಳ್ತಾಳೆ. ಇದನ್ನು ಕೇಳಿ ಹರ್ಷ ಗೊಂದಲದಲ್ಲಿ ಇದ್ದಾನೆ.


    ಇದನ್ನೂ ಓದಿ: Lakshana: ಜೈಲಿನಿಂದ ತಪ್ಪಿಸಿಕೊಂಡ ಮೌರ್ಯ, ಭೂಪತಿ-ನಕ್ಷತ್ರಾಗೆ ಹೆಚ್ಚಾದ ಆತಂಕ! 


    ಇನ್‍ಡೈರೆಕ್ಟ್ ಆಗಿ ವಿಲ್ ಬಗ್ಗೆ ಮಾಹಿತಿ
    ಹೆಂಡ್ತಿ ಮಾತು ಕೇಳಬೇಕಾ, ಬೇಡ್ವಾ ಅಂತ ಏನಿಲ್ಲ ಹರ್ಷ ಅವರೇ, ಆದ್ರೆ ನಿಮಗೆ ಯಾವುದೇ ಪವರ್ ಇಲ್ಲ ಎಂದು ವರು ಹೇಳ್ತಾಳೆ. ಅದಕ್ಕೆ ಕೋಪಗೊಂಡ ಹರ್ಷ, ರತ್ನಮಾಲಾ ಅವರ ವಾರಸುದಾರ ನಾನು. ಸಾನಿಯಾ ಬರಿ ನಕಲಿ ಎಂಡಿ ಆಗಿದ್ದರು. ಆದ ಕಾರಣ ಅವರು ನಿರ್ಧಾರ ತೆಗೆದುಕೊಳ್ಳುವ ಹಕ್ಕಿರಲಿಲ್ಲ. ಆದ್ರೆ ನಾನು ತೆಗೆದುಕೊಳ್ಳಬಹುದು. ಯಾಕಂದ್ರೆ ರತ್ನಮಾಲಾ, ಬ್ಯುಸಿನೆಸ್ ನೋಡಿಕೊಳ್ಳೋನು ನಾನು ಎಂದು ಹರ್ಷ ಹೇಳ್ತಾನೆ.


    colors kannada serial, kannada serial, kannadathi serial, varu give information to harsha about property owner, harsha mother death, ಕನ್ನಡತಿ ಧಾರಾವಾಹಿ, ಹರ್ಷನಿಗೆ ಇನ್‍ಡೈರೆಕ್ಟ್ ಆಗಿ ವಿಲ್ ಬಗ್ಗೆ ವರು ಮಾಹಿತಿ, ರತ್ನಮಾಲಾ ಮಗನಿಗೆ ಶುರುವಾದ ಗೊಂದಲ, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ವರು


    ಭುವಿಗೆ ಹೇಳದೇ ಹೇಗೆ ನಿರ್ಧಾರ ತೆಗೆದುಕೊಳ್ತೀರಿ?
    ಹರ್ಷ, ನಾನೇ ಆಸ್ತಿಯೆಲ್ಲಾ ನೋಡಿಕೊಳ್ಳೋನು ಎಂದು ಹೇಳಿದ್ದಕ್ಕೆ ವರು, ರತ್ನಮಾಲಾ ಇಲ್ಲ ನಿಜ. ಆದ್ರೆ ಭುವಿ ಇದಾಳೆ. ಅವಳಿಗೆ ಹೇಳದೇ, ನೀವು ಯಾವ ನಿರ್ಧಾರವನ್ನು ತೆಗೆದುಕೊಳ್ಳಲು ಆಗಲ್ಲ ಎಂದು ಹರ್ಷನ ತಲೆಯಲ್ಲಿ ಹುಳ ಬಿಟ್ಟು ಅಲ್ಲಿಂದ ಹೋಗಿದ್ದಾಳೆ. ಅದಕ್ಕೆ ಹರ್ಷ, ಭುವಿ ಕೇಳಿ ನಿರ್ಧಾರ ತೆಗೆದುಕೊಳ್ಳಬೇಕಾ ಎಂಉ ಯೋಚನೆ ಮಾಡ್ತಾ ಇದ್ದಾನೆ.


    ಇದನ್ನೂ ಓದಿ: Jothe Jotheyali: ಝೇಂಡೆಗೆ ಗೊತ್ತಾದ ಆರ್ಯ ಬದುಕಿರುವ ಸತ್ಯ! ವಿಶ್ವಾಸ್ ತನ್ನ ಗೆಳೆಯನೇ ಎಂದು ಖುಷಿ 


    ಸುದರ್ಶನ್-ಸಾನಿಯಾ ಕೋಪ
    ಮೊದಲೇ ಅಮ್ಮಮ್ಮನ ಸಾವಿನಿಂದ, ಮನೆಯಲ್ಲಿ ಜಗಳ ನಡೆಯುತ್ತಿದೆ. ತಮಗೆ ಎಲ್ಲಿ ಆಸ್ತಿ ಸಿಗಲ್ವೋ ಎಂದು, ಸುದರ್ಶನ್ -ಸಾನಿಯಾ ಕೋಪ ಮಾಡಿಕೊಂಡಿದ್ದಾರೆ. ಈ ನಡುವೆ ಆಸ್ತಿಯೆಲ್ಲಾ ಭುವಿ ಹೆಸರಲ್ಲಿ ಇರೋದು ಗೊತ್ತಾದ್ರೆ ಏನ್ ರಂಪ ಮಾಡ್ತಾರೋ ಗೊತ್ತಿಲ್ಲ. ಅಲ್ಲದೇ ಹರ್ಷ ಬೇರೆ ಈಗ ಗೊಂದಲ ಶುರುವಾಗಿದೆ. ವರು ಯಾಕ್ ಆ ರೀತಿ ಹೇಳಿದ್ಲು ಎಂದು ಚಿಂತೆ ಮಾಡ್ತಾ ಇದ್ದಾನರೆ


    colors kannada serial, kannada serial, kannadathi serial, varu give information to harsha about property owner, harsha mother death, ಕನ್ನಡತಿ ಧಾರಾವಾಹಿ, ಹರ್ಷನಿಗೆ ಇನ್‍ಡೈರೆಕ್ಟ್ ಆಗಿ ವಿಲ್ ಬಗ್ಗೆ ವರು ಮಾಹಿತಿ, ರತ್ನಮಾಲಾ ಮಗನಿಗೆ ಶುರುವಾದ ಗೊಂದಲ, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ಸುದರ್ಶನ್-ಸಾನಿಯಾ ಕೋಪ


    ಮನೆಯಲ್ಲಿ ವಿಲ್ ಸತ್ಯ ಗೊತ್ತಗುತ್ತಾ? ಹರ್ಷನ ಮುಂದಿನ ನಡೆ ಏನು? ಸಾನಿಯಾ ಸುಮ್ಮನೇ ಇರುತ್ತಾಳಾ? ಭುವಿ ಒಳ್ಳೆಯ ನಿರ್ಧಾರ ತೆಗೆದುಕೊಳ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಕನ್ನಡತಿ ಧಾರಾವಾಹಿ ನೋಡಬೇಕು.

    Published by:Savitha Savitha
    First published: