• Home
  • »
  • News
  • »
  • entertainment
  • »
  • Kannadathi: ಭುವಿ ಮನೆಯಲ್ಲಿ ವಿಲ್​ಗಾಗಿ ವರು ಹುಡುಕಾಟ! ಅಮ್ಮಮ್ಮನ ಸ್ಥಿತಿ ಗಂಭೀರ

Kannadathi: ಭುವಿ ಮನೆಯಲ್ಲಿ ವಿಲ್​ಗಾಗಿ ವರು ಹುಡುಕಾಟ! ಅಮ್ಮಮ್ಮನ ಸ್ಥಿತಿ ಗಂಭೀರ

ಭುವಿ ಮನೆಯಲ್ಲಿ ವಿಲ್ ಹುಡುಕುತ್ತಿರುವ ವರು

ಭುವಿ ಮನೆಯಲ್ಲಿ ವಿಲ್ ಹುಡುಕುತ್ತಿರುವ ವರು

ಬಿಂದು ಎಷ್ಟೇ ಹೇಳಿದ್ರೂ ಕೇಳದ ವರು, ಭುವಿ ಮನೆಯಲ್ಲಿ ರತ್ನಮಾಲಾ ಬರೆದ ವಿಲ್‍ಗಾಗಿ ಶೋಧ ನಡೆಸುತ್ತಿದ್ದಾಳೆ. ಸಿಕ್ಕ ಸಿಕ್ಕ ಕಡೆಯಲ್ಲಿ ಹುಡುಕುತ್ತಿದ್ದಾಳೆ.

  • News18
  • Last Updated :
  • Karnataka, India
  • Share this:

    ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ (Serials) ಕನ್ನಡತಿ (Kannadathi) ಧಾರಾವಾಹಿ ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್‍ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ. ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡುತ್ತಿದೆ. ರತ್ನಮಾಲಾ ಆರೋಗ್ಯ (Health) ಸ್ಥಿತಿ ಗಂಭೀರವಾಗಿದೆ. ಇನ್ನು ವರು ಭುವಿ ಮನೆಯಲ್ಲಿ ವಿಲ್ ಪತ್ರ ಹುಡುಕುತ್ತಿದ್ದಾಳೆ (Searching) .


    ವರುಗೆ ವಿಲ್ ವಿಚಾರ ಗೊತ್ತಾಗಿದೆ


    ವರು ಹರ್ಷನಿಗಾಗಿ, ಸಾನಿಯಾ ಕೊಟ್ಟ ಪತ್ರಕ್ಕೆ ಸಹಿ ಮಾಡಿಸಿಕೊಳ್ಳೋಣ ಎಂದು ರತ್ನಮಾಲಾ ಅವರು ಇದ್ದ ಐಸಿಯುಗೆ ಹೋಗಿರುತ್ತಾಳೆ. ಆಗ ಏನೇನೋ ಮಾತನಾಡುತ್ತಾ, ರತ್ನಮಾಲಾ ಅವರ ಮೂಗಿಗೆ ಹಾಕಿದ್ದ ಆಕ್ಸಿಜನ್ ತೆಗೆದು ಬಿಡ್ತಾಳೆ. ಆಗ ಅಮ್ಮಮ್ಮನಿಗೆ ಎಚ್ಚರ ಆಗುತ್ತೆ. ಆಗ ವಿಲ್ ವಿಚಾರದ ಕನಸು ಅರಿವಿಗೆ ಬಂದು ಹರ್ಷನ ಬಳಿ ಮಾತನಾಡಬೇಕು ಎಂದು ಒದ್ದಾಡುತ್ತಿದ್ದಾಳೆ. ಭುವಿ ವಿಲ್, ಭುವಿ ವಿಲ್ ಎನ್ನುತ್ತಾಳೆ.


    ಭುವಿ ಮನೆಗೆ ಹೋದ ವರು


    ವರುಗೆ ಆಸ್ತಿ ವಿಚಾರ ಗೊತ್ತಾಗುತ್ತಿದ್ದಂತೆ ಸೀದಾ ಭುವಿ ಮನೆಗೆ ಹೋಗಿದ್ದಾಳೆ. ಬಿಂದು ಬಳಿ ಬಂದು ಒಂದ ದಾಖಲೆ ಬೇಕು ಕೊಡು ಎನ್ನುತ್ತಾಳೆ. ಏನದು? ನನಗೆ ಗೊತ್ತಿಲ್ಲ. ಗೊತ್ತಿದ್ದರೂ ಬಿಂದು ಹೇಳಲ್ಲ. ಅಕ್ಕನನ್ನು ಕೇಳಬೇಕು ಎನ್ನುತ್ತಾಳೆ. ಅದಕ್ಕೆ ವರು ರತ್ನಮಾಲಾ ಅವರೇ ಹೇಳಿದ್ದು ತರಲು. ನಿಮ್ಮ ಅಕ್ಕ ರತ್ನಮಾಲಾ ಮೇಡಂಗಿಂತ ದೊಡ್ಡವಳ ಎಂದು ಪ್ರಶ್ನೆ ಮಾಡ್ತಾಳೆ.


    ಇದನ್ನೂ ಓದಿ: BBK Season 09: ಕ್ಯಾಪ್ಟನ್​​ಗೆ ಕಳಪೆ ಪಟ್ಟ ಕೊಟ್ಟ ಮನೆಯವರು, ಕಾರಣ ಕೇಳಿ ಭಾವುಕರಾದ ಅನುಪಮಾ ಗೌಡ! 


    ವಿಲ್ ಗಾಗಿ ಭುವಿ ಮನೆಯಲ್ಲಿ ಶೋಧ


    ಬಿಂದು ಎಷ್ಟೇ ಹೇಳಿದ್ರೂ ಕೇಳದ ವರು, ಭುವಿ ಮನೆಯಲ್ಲಿ ರತ್ನಮಾಲಾ ಬರೆದ ವಿಲ್‍ಗಾಗಿ ಶೋಧ ನಡೆಸುತ್ತಿದ್ದಾಳೆ. ಸಿಕ್ಕ ಸಿಕ್ಕ ಕಡೆಯಲ್ಲಿ ಹುಡುಕುತ್ತಿದ್ದಾಳೆ. ಅದು ವರು ಕೈಗೆ ಸಿಕ್ರೆ ಅವಳು ಏನ್ ಮಾಡಿ ಬಿಡ್ತಾಳೋ ಅನ್ನೋ ಭಯ ಬಿಂದುಗೆ.


    colors kannada serial, kannada serial, kannadathi serial, varu searching in bhuvi house, ಕನ್ನಡತಿ ಧಾರಾವಾಹಿ, ಭುವಿ ಮನೆಯಲ್ಲಿ ವಿಲ್ ಹುಡುಕುತ್ತಿರುವ ವರು, ಅತ್ತ ಅಮ್ಮಮ್ಮನ ಸ್ಥಿತಿ ಗಂಭೀರ, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ಭುವಿ


    ಅತ್ತ ಅಮ್ಮಮ್ಮನ ಸ್ಥಿತಿ ಗಂಭೀರ


    ಇನ್ನು ಕೋಮಾಗೆ ಹೋಗಿದ್ದ ಅಮ್ಮಮ್ಮನಿಗೆ ಎಚ್ಚರ ಆಗಿತ್ತು. ವರು ಬಳಿ ಮಾತನಾಡಿದ್ರು. ಒಂದು ಪೆನ್, ಪೇಪರ್ ಕೊಡು ಏನೋ ಬರೆಯಬೇಕು ಎನ್ನುತ್ತಿದ್ದರು. ಅಷ್ಟರಲ್ಲಿ ವಿಲ್ ಬಗ್ಗೆ ಹೇಳಿದ್ರು. ಅದನ್ನು ಕೇಳಿ ಶಾಕ್ ನಿಂದ ವರು ಭುವಿ ಮನೆಗೆ ಹೋಗ್ತಾಳೆ. ಅಮ್ಮಮ್ಮನಿಗೆ ಆಕ್ಸಿಜನ್ ತೆಗೆದ ಕಾರಣ ಅವರ ಸ್ಥಿತಿ ಗಂಭೀರವಾಗಿದೆ. ಮತ್ತೆ ಆಂಬ್ಯುಲೆನ್ಸ್ ನಲ್ಲಿ ಕರೆದುಕೊಂಡು ಹೋಗುತ್ತಿದ್ದಾರೆ.


    ಇದನ್ನೂ ಓದಿ: Olavina Nildana: ಧೀರಜ್‍ನನ್ನು ಮದುವೆ ಆಗ್ತೀನಿ ಎಂದ ತಾರಿಣಿ, ಸಿದ್ಧಾಂತ್ ಕಣ್ಣೀರು! 


    ಆತಂಕಗೊಂಡ ಭುವಿ-ಹರ್ಷ
    ಅಮ್ಮಮ್ಮ ಉಸಿರಾಡಲು ಸಹ ಕಷ್ಟ ಪಡುತ್ತಿದ್ದಾರೆ. ಅದನ್ನು ನೋಡಿ ಹರ್ಷ ಮತ್ತು ಭುವಿ ಆತಂಕಗೊಂಡಿದ್ದಾರೆ. ತನ್ನ ಅಮ್ಮನಿಗೆ ಏನೋ ಆಯ್ತು ಎಂದು ಭಯ ಪಡುತ್ತಿದ್ದಾರೆ. ರತ್ನಮ್ಮ ನಾನು ಭುವಿ, ನೋಡಿ ಎಂದು ಅಳುತ್ತಿದ್ದಾಳೆ. ಆದ್ರೂ ರತ್ನಮಾಲಾ ಅವರಿಗೆ ತೀವ್ರ ಉಸಿರಾಟದ ಸಮಸ್ಯೆ ಆಗಿದೆ.


    colors kannada serial, kannada serial, kannadathi serial, varu searching in bhuvi house, ಕನ್ನಡತಿ ಧಾರಾವಾಹಿ, ಭುವಿ ಮನೆಯಲ್ಲಿ ವಿಲ್ ಹುಡುಕುತ್ತಿರುವ ವರು, ಅತ್ತ ಅಮ್ಮಮ್ಮನ ಸ್ಥಿತಿ ಗಂಭೀರ, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ಹರ್ಷ


    ವರುಗೆ ವಿಲ್ ಪತ್ರ ಸಿಗುತ್ತಾ? ರತ್ನಮಾಲಾ ಆರೋಗ್ಯ ಸುಧಾರಿಸುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ಕನ್ನಡತಿ ಸೀರಿಯಲ್ ನೋಡಬೇಕು.

    Published by:Savitha Savitha
    First published: