• Home
  • »
  • News
  • »
  • entertainment
  • »
  • Kannadathi: ಹರ್ಷ ಅಮ್ಮಮ್ಮನ ಬಳಿ ಮಾತನಾಡುವಾಗಲೇ ಕೋಮಾಗೆ ಜಾರಿದ ರತ್ನಮಾಲಾ!

Kannadathi: ಹರ್ಷ ಅಮ್ಮಮ್ಮನ ಬಳಿ ಮಾತನಾಡುವಾಗಲೇ ಕೋಮಾಗೆ ಜಾರಿದ ರತ್ನಮಾಲಾ!

ಮುಗಿದೇ ಹೋಯ್ತಾ ಅಮ್ಮಮ್ಮನ ಮಾತು?

ಮುಗಿದೇ ಹೋಯ್ತಾ ಅಮ್ಮಮ್ಮನ ಮಾತು?

ಹರ್ಷ ತನ್ನ ಮನದ ಮಾತನ್ನು ಅಮ್ಮಮ್ಮ ಬಳಿ ಹೇಳುತ್ತಿರುವಾಗ್ಲೇ ಆಕೆ ಕೆಳಗೆ ಬಿದ್ದು ಕೋಮಾಗೆ ಹೋಗಿ ಬಿಟ್ಟಿದ್ದಾಳೆ.ಈ ಸಾಮ್ರಾಜ್ಯಕ್ಕೆ ಭುವಿಯನ್ನು ಒಡತಿ ಮಾಡಿದ್ದೇನೆ ಎಂದು ಹೇಳುವಷ್ಟರಲ್ಲಿ ಕೋಮಾಗೆ ಹೋಗಿ ಬಿಟ್ಟಿದ್ದಾಳೆ.

  • News18 Kannada
  • Last Updated :
  • Karnataka, India
  • Share this:

    ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ (Kannadathi) ಧಾರಾವಾಹಿ (Serial) ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್‍ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ. ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡುತ್ತಿದೆ. ಹರ್ಷ-ಭುವಿ ಇಬ್ಬರ ಸಂತೋಷವಾಗಿರುವುದನ್ನು ನೋಡಿ ಅಮ್ಮಮ್ಮ  ಕಣ್ತುಂಬಿಕೊಂಡಿದ್ದಾಳೆ. ಹರ್ಷ ಅಮ್ಮ (Mother) ಬಳಿ ಮಾತನಾಡುತ್ತಿರುವಾಗಲೇ ರತ್ನಮಾಲಾ ಕೋಮಾಗೆ ಹೋಗಿದ್ದಾರೆ.


    ಸಾನಿಯಾ ತಪ್ಪುಗಳನ್ನು ಅಮ್ಮಮ್ಮಗೆ ಹೇಳಿದ ಹರ್ಷ
    ಮನೆಯಲ್ಲಿ ಎಲ್ಲರೂ ಸಂಭ್ರಮದಿಂದ ಇದ್ದತು. ಆಗ ಹರ್ಷ ಅಮ್ಮಮ್ಮನ ಬಳಿ ಮಾತನಾಡುತ್ತಾ ಇರುತ್ತಾನೆ. ಸಾನಿಯಾ ತಪ್ಪುಗಳನ್ನು ಹೇಳುತ್ತಾ ಇರುತ್ತಾನೆ. ಮಧ್ಯರಾತ್ರಿ ಸಾನಿಯಾಗೆ ಅಧಿಕಾರ ಕೊಟ್ಟೆಲ್ಲಾ, ಅವತ್ತೇ ನಿನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗ ನೋವು ಅನುಭವಿಸಲು ಶುರುಮಾಡಿದ. ನೀನೇನೋ ಅಧಿಕಾರ ಕೊಟ್ಟುಬಿಟ್ಟೆ, ಅದಕ್ಕೇನೂ ಬೇಜಾರಿಲ್ಲ. ಆದ್ರೆ ಅದನ್ನು ನಿನ್ನ ಸೊಸೆ ಚೆನ್ನಾಗಿ ನೋಡ್ಕೊಂಡು ಹೋಗಬೇಕಿತ್ತು.


    ಇದನ್ನೂ ಓದಿ: Lakshana: ಕೊನೆಗೂ ನಕ್ಷತ್ರಾ ಮನೆ ಸೇರಿ ಬಿಟ್ಲು ಶ್ವೇತಾ! ಮರೆಯಲ್ಲಿ ನಿಂತು ಸಹಾಯ ಮಾಡ್ತಿರೋರು ಯಾರು? 


    ಆದ್ರೆ ಸಾನಿಯಾ ನನ್ನ ಮೇಲೆ ಮರ್ಡರ್ ಅಟೆಂಪ್ಟ್ ಮಾಡಿದ್ಲು. ಕಂಪನಿ ಬುಕ್ ಕೀಪಿಂಗ್ ಸರಿಯಾಗಿ ಇಟ್ಟುಕೊಂಡಿಲ್ಲ. ದುಡ್ಡು ಎಲ್ಲಿ ಹೋಯ್ತು ಎಂದು ಗೊತ್ತಿಲ್ಲ. ಭುವಿಗೆ ಕಾಟ ಕೊಟ್ಟಿದ್ದಾರೆ, ವರುಗೆ ಕಾಟ ಕೊಟ್ಟಿದ್ದಾರೆ, ಹೇಳ್ತಾ ಹೋದ್ರೆ ದೊಡ್ಡ ಲಿಸ್ಟ್ ಇದೆ. ಎಲ್ಲಾ ಟ್ರೈ ಮಾಡಿದಾರೆ. ಇದರಲ್ಲಿ ಕೆಲವೊಂದು ನಿನಗೆ ಗೊತ್ತು. ಕೆಲವೊಂದು ಗೊತ್ತಿಲ್ಲ. ಈಗ ಗೊತ್ತರೋದಕ್ಕೆ ಶಿಕ್ಷೆ ಕೊಡಬೇಕು ಎಂದು ಹರ್ಷ ಅಮ್ಮಮ್ಮನ ಬಳಿ ಹೇಳುತ್ತಾನೆ.


    ಸಾನಿಯಾಗೆ ಶಿಕ್ಷೆ ಕೊಡಲು ಶುರು ಮಾಡಿದ್ದೇನೆ
    ಸಾನಿಯಾಗೆ ಶಿಕ್ಷೆ ಕೊಡಲು ನಾನು ಶುರು ಮಾಡಿದ್ದೇನೆ. ಇವತ್ತು ಸಾನಿಯಾ ಕೆಲಸ ಕಳೆದುಕೊಂಡ್ಲು. ನೀನು ಕೆಲಸ ಕೊಟ್ಟು ತಪ್ಪು ಮಾಡಿದೆ. ಅವರನ್ನು ತೆಗೆದು ಹಾಕಿ ನಾನು ಸರಿ ಮಾಡಿದ್ದೇನೆ. ನಿನ್ನ ಮುಂದಿನ ವಾರಸ್ದಾರನಾಗಿ ನಾನು ಇದನ್ನು ಮಾಡಲೇ ಬೇಕು. ಅಧಿಕಾರ ನೀನೇ ಕೊಡಬೇಕಿತ್ತು ನಾನೇ ತೆಗೆದುಕೊಂಡೆ ಎಂದು ಹರ್ಷ ಅಮ್ಮಮ್ಮ ಬಳಿ ಹೇಳ್ತಾ ಇದ್ದಾನೆ.


    colors kannada serial, kannada serial, kannadathi serial, kannadathi serial today episode, harsha mother in coma, ಕನ್ನಡತಿ ಧಾರಾವಾಹಿ, ಮುಗಿದೇ ಹೋಯ್ತಾ ಅಮ್ಮಮ್ಮನ ಮಾತು, ಸಾನಿಯಾ ಸೊಕ್ಕು ಅಡಗಿಸಲು ವರು ದಾಳ, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ಅಮ್ಮಮ್ಮ


    ಹರ್ಷ ಮಾತನಾಡುತ್ತಿರುವಾಗ್ಲೇ ಅಮ್ಮಮ್ಮ ಕೋಮಾಗೆ
    ಹರ್ಷ ತನ್ನ ಮನದ ಮಾತನ್ನು ಅಮ್ಮಮ್ಮ ಬಳಿ ಹೇಳುತ್ತಿರುವಾಗ್ಲೇ ಆಕೆ ಕೆಳಗೆ ಬಿದ್ದು ಕೋಮಾಗೆ ಹೋಗಿ ಬಿಟ್ಟಿದ್ದಾಳೆ. ದೇವ್ ಸಹ ಆಕೆಯನ್ನು ಚೆಕ್ ಮಾಡಿ ಕೋಮಾಗೆ ಹೋಗಿರುವುದನ್ನು ಖಚಿತಪಡಿಸಿದ್ದಾನೆ. ಅಮ್ಮಮ್ಮ ತನ್ನ ಮನದ ಮಾತು ಹರ್ಷನಿಗೆ ಹೇಳಬೇಕಿತ್ತು. ಈ ಸಾಮ್ರಾಜ್ಯಕ್ಕೆ ಭುವಿಯನ್ನು ಒಡತಿ ಮಾಡಿದ್ದೇನೆ ಎಂದು ಹೇಳುವಷ್ಟರಲ್ಲಿ ಕೋಮಾಗೆ ಹೋಗಿ ಬಿಟ್ಟಿದ್ದಾಳೆ.


    colors kannada serial, kannada serial, kannadathi serial, kannadathi serial today episode, harsha mother in coma, ಕನ್ನಡತಿ ಧಾರಾವಾಹಿ, ಮುಗಿದೇ ಹೋಯ್ತಾ ಅಮ್ಮಮ್ಮನ ಮಾತು, ಸಾನಿಯಾ ಸೊಕ್ಕು ಅಡಗಿಸಲು ವರು ದಾಳ, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ಅಮ್ಮಮ್ಮ ಕೋಮಾಗೆ


    ಸಾನಿಯಾ ಸೊಕ್ಕು ಅಡಗಿಲು ವರು ದಾಳ
    ಇನ್ನು ಹರ್ಷ ಸಾನಿಯಾಗೆ ಶೂಟ್ ಮಾಡಲು ಹೋಗಿದ್ದ ವಿಡಿಯೋ ಅವರ ಬಳಿ ಇದೆ. ಅದನ್ನಿ ಇಟ್ಟುಕೊಂಡು ದೂರು ನೀಡಿದ್ರೆ ಕಷ್ಟ ಎಂದು, ಹರ್ಷ ವರು ಬಳಿ ಸಹಾಯ ಕೇಳಿದ್ದಾನೆ. ವರು, ಹರ್ಷ ಹೇಳಿದಂತೆ ಸಾನಿಯಾ ಬಳಿ ಹೋಗಿ, ನಿನ್ನ ಬಳಿ ವಿಡಿಯೋ ಇದ್ರೂ ಹರ್ಷ ಧೈರ್ಯವಾಗಿ ಇದ್ದಾರೆ.


    ಹಾಗಾದ್ರೆ ಅವರ ಬಳಿಯು ನಿನ್ನ ವಿರುದ್ಧ ಏನಾದ್ರೂ ಸಾಕ್ಷಿ ಇರಬಹುದು ಎಂದು ತಲೆಯಲ್ಲಿ ಹುಳ ಬಿಟ್ಟಿದ್ದಾಳೆ. ಒಮ್ಮ ಸಾನಿಯಾ ಅಮ್ಮಮ್ಮನನ್ನು ಸಾಯಿಸಲು ಹೋಗಿದ್ದಳು. ಆ ವಿಡಿಯೋ ಅಮ್ಮಮ್ಮನ ಬಳಿ ಇತ್ತು. ಅದು ಹರ್ಷನಿಗೆ ಸಿಕ್ಕಿರಬಹುದು ಎಂದು ಸಾನಿಯಾ ಅಂದಿಕೊಂಡಿದ್ದಾಳೆ.


    ಇದನ್ನೂ ಓದಿ: Nammamma Super Star: ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 02 ವೇದಿಕೆಯಲ್ಲಿ ಪುನೀತ್ ಸಹೋದರಿಯರ ಮಾತು


    ಭುವಿಯೇ ಕಂಪನಿ ಒಡತಿ ಅನ್ನೋದು ಗೊತ್ತಾಗೋದೇ ಇಲ್ವಾ? ಹರ್ಷನೇ ಕಂಪನಿಯನ್ನು ನಡೆಸಿಕೊಂಡು ಹೋಗ್ತಾನಾ? ಮುಂದೇನಾಗುತ್ತೆ ಅಂತ ನೋಡೋಕೆ ಕನ್ನಡತಿ ಸೀರಿಯಲ್ ನೋಡಬೇಕು.

    Published by:Savitha Savitha
    First published: