ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ (Kannadathi) ಸೀರಿಯಲ್ (Serial) ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ, ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡ್ತಿದೆ. ಅಮ್ಮಮ್ಮ ರೀತಿ ಭುವಿ ಆವಾಜ್ ಹಾಕಿದ್ದಕ್ಕೆ ಸಾನಿಯಾ ಭಯಪಟ್ಟು, ತನ್ನ ಅಧಿಕಾರವನ್ನು ಹಸ್ತಾಂತರ ಮಾಡಿದ್ದಾಳೆ. ಅತ್ತ ತನ್ನ ಮತ್ತು ಭುವಿ ಮಧ್ಯೆ ಬಂದಿದ್ದು ವರು ಎಂದು ಹರ್ಷನಿಗೆ ಗೊತ್ತಾಗಿದೆ.
ನೀನು ಸತ್ತರೆ ಒಂದು ಕೇಸ್ ಅಷ್ಟೆ
ಸಾನಿಯಾ ಎಂಡಿ ಪೋಸ್ಟ್ ಕೊಡು. ಇಲ್ಲ ಅಂದ್ರೆ ಸಾಯ್ತೀನಿ ಎಂದು ಗನ್ ತೋರಿಸಿ ಭುವಿಗೆ ಭಯಪಡಿಸುತ್ತಾಳೆ. ಅದಕ್ಕೆ ಭುವಿ ತನ್ನ ಬಳಿ ಇರುವ ವಿಡಿಯೋ ಹರ್ಷನಿಗೆ ಕಳಿಸುತ್ತೇನೆ. ಆಗ ನೀನೇ ಸುಟ್ಟುಕೊಂಡು ಸಾಯಬಹುದು ಅಥವಾ ಹರ್ಷನ ಗನ್ ಗೆ ಬಲಿಯಾಗಬಹುದು. ನೀನು ಸತ್ತರೆ ಆತ್ಮಹತ್ಯೆ. ಒಂದು ಕೇಸ್ ಆಗಬಹುದು ಅಷ್ಟೆ ಎಂದು ಭುವಿ ಸಾನಿಯಾಗೆ ಹೇಳಿದ್ದಾಳೆ.
ಅಧಿಕಾರ ಹಸ್ತಾಂತರ ಮಾಡಿದ ಸಾನಿಯಾ
ಭುವಿ ಮಾತಿಗೆ ಬೆಚ್ಚಿದ ಸಾನಿಯಾ, ಮರು ಮಾತನಾಡದೇ ಭುವಿಗೆ ಅಧಿಕಾರ ಹಸ್ತಾಂತರ ಮಾಡಿದ್ದಾಳೆ. ನಾನು ಇಷ್ಟು ದಿನ ಎಂಡಿ ಆಗಿದ್ದೆ. ಈಗ ನನ್ನ ಸ್ವ ಇಚ್ಛೆಯಿಂದ ನನ್ನ ಅಧಿಕಾರವನ್ನು ಸೌಪರ್ಣಿಕಾ ಅವರಿಗೆ ಹಸ್ತಾಂತರ ಮಾಡುತ್ತೇನೆ ಎಂದು ಎಲ್ಲರ ಮುಂದೆ ಹೇಳಿದ್ದಾಳೆ. ಭುವಿ ಅಧಿಕಾರ ಸ್ವೀಕಾರ ಮಾಡಿದ್ದಾಳೆ.
ಟೆನ್ಶನ್ ನಲ್ಲಿರುವ ಹರ್ಷ
ಹರ್ಷನ ಕೈಯಲ್ಲಿ ಡಿವೋರ್ಸ್ ನೋಟಿಸ್ ಇದೆ. ಅದಕ್ಕೆ ಭುವಿ ಇದನ್ನು ಕಳಿಸಿದ್ದಾಳಾ ಎಂದು ಆತಂಕಗೊಂಡಿದ್ದಾನೆ. ಅದಕ್ಕೆ ಲಾಯರ್ ರನ್ನು ಭೇಟಿಯಾಗಿದ್ದಾನೆ. ಅದಕ್ಕೆ ಲಾಯರ್ ಭುವಿಗೆ ಈ ಎಲ್ಲಾ ಜಂಜಾಟ ಬೇಡ ಎಂದು ಈ ರೀತಿ ಡಿವೋರ್ಸ್ ನೋಟಿಸ್ ಕಳಿಸಿರಬಹುದು ಎಂದು ಹೇಳಿದ್ದಾನೆ. ಡಿವೋರ್ಸ್ ನೋಟಿಸ್ ಕೊಟ್ಟ ತಕ್ಷಣ ಎಲ್ಲಾ ಮುಗಿಯಲ್ಲ ಎಂದು ಧೈರ್ಯ ತುಂಬಿದ್ದಾರೆ.
ಇದನ್ನೂ ಓದಿ: Pathaan: ಹಿಂದೂ ಧರ್ಮಕ್ಕೆ ಅಪಮಾನ ಮಾಡಿದ್ರಾ ಶಾರುಖ್? ಜೋರಾಯ್ತು 'BoycottPathaan' ಕೂಗು!
ಅವಸರ ಮಾಡಿದ್ರೆ ಎಡವಟ್ಟು ಖಚಿತ
ಲಾಯರ್ ಹರ್ಷನ ಗೆಳೆಯನೇ ಆಗಿರೋದ್ರಿಂದ, ಹರ್ಷ ಈ ವಿಷಯವನ್ನು ನೀನೇ ಭುವಿ ಹತ್ತಿರ ಮಾತನಾಡು. ನಿಧಾನವಾಗಿ ಕೂತುಕೊಂಡು ಮಾತನಾಡಿದ್ರೆ ಎಲ್ಲಾ ಸಮಸ್ಯೆ ಬಗೆಹರಿಯುತ್ತೆ. ಇಲ್ಲ ಭುವಿಗೆ ಯಾರಾದ್ರೂ ಕ್ಲೋಸ್ ಇದ್ರೆ ಅವರ ಬಳಿ ಕೇಳಿ ತಿಳಿದುಕೋ ಎಂದು ಸಲಹೆ ನೀಡಿದ್ದಾನೆ.
ವರು ಮೇಲೆ ಕೋಪ ಮಾಡಿಕೊಂಡ ಹರ್ಷ
ಲಾಯರ್ ಭುವಿಗೆ ಕ್ಲೋಸ್ ಇರೋವವರ ಬಳಿ ಕೇಳು ಎನ್ನುತ್ತಾನೆ. ಅದಕ್ಕೆ ವರು ಅವಳ ಆತ್ಮೀಯ ಗೆಳತಿ ಎಂದು ಹರ್ಷ ಹೇಳ್ತಾನೆ. ಅದಕ್ಕೆ ಲಾಯರ್, ಅವಳ ಬಳಿ ಮಾತ್ರ ಕೇಳಬೇಡ ಎನ್ನುತ್ತಾನೆ. ಯಾಕೆ ಎನ್ನುತ್ತಾನೆ. ಅದಕ್ಕೆ ಈ ಹಿಂದೆ ವರು ಆಸ್ತಿ ಬಗ್ಗೆ ತಿಳಿದುಕೊಳ್ಳಲು ತನಗೆ ಕಾಟ ಕೊಟ್ಟಿದ್ದನ್ನು ಹೇಳುತ್ತಾನೆ. ಆಗ ಹರ್ಷನಿಗೆ ವರು ಪ್ಲ್ಯಾನ್ ಮಾಡಿ, ಈ ಡಿವೋರ್ಸ್ ಕೊಡಿಸುತ್ತಿದ್ದಾಳೆ ಎಂಬುದು ಗೊತ್ತಾಗುತ್ತೆ.
ಇದನ್ನೂ ಓದಿ: Bigg Boss Kannada: ಬಿಗ್ ಬಾಸ್ ಮನೆಯಲ್ಲಿ 'ಬೈ ಮಿಸ್ಟೇಕ್' ಕೋಪ! ದೀಪಿಕಾ ಮೇಲೆ ಮುನಿಸಿಕೊಂಡ ರಾಜಣ್ಣ!
ಭುವಿಗೆ ಮುಂದೆ ಸಾನಿಯಾ ತಣ್ಣಗಾಗಿ ಹೋಗಿದ್ದಾಳೆ. ಹರ್ಷನಿಗೆ ವರು ಮೇಲೆ ಸಿಕ್ಕಾಪಟ್ಟೆ ಕೋಪ ಬಂದಿದೆ. ಮುಂದೇನಾಗುತ್ತೆ ಅಂತ ನೋಡೋಕೆ ಕನ್ನಡತಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ