ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ (Kannadathi) ಧಾರಾವಾಹಿ (Serial) ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ, ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡ್ತಿದೆ. ಧಾರಾವಾಹಿಯಲ್ಲಿ ಅಮ್ಮಮ್ಮನ ಅಧ್ಯಾಯ ಮುಕ್ತಾಯವಾಗ್ತಿದ್ದಂತೆ, ಭುವಿ ಹೆಸರಲ್ಲಿ ಆಸ್ತಿ (Property) ಇರೋದು ಮನೆಯವರಿಗೆ ಗೊತ್ತಾಗಿದೆ. ನಾನು ಹುಚ್ಚಿ ಎಂದು ಹರ್ಷನನ್ನ (Harsha) ಸಾನಿಯಾ ಬಿಡಿಸಿದ್ದಾಳೆ.
ಹರ್ಷನನ್ನು ಅರೆಸ್ಟ್ ಮಾಡಿಸಿದ್ದ ಸಾನಿಯಾ
ಹರ್ಷ ಸಾನಿಯಾಳನ್ನು ಎಂಡಿ ಪಟ್ಟದಿಂದ ತೆಗೆದು ಹಾಕಿದ್ದಾನೆ. ಅದಕ್ಕೆ ಸಾನಿಯಾ ಸೇಡು ತೀರಿಸಕೊಳ್ಳಲು, ಪೊಲೀಸರಿಗೆ ದೂರು ನೀಡಿ ಅರೆಸ್ಟ್ ಮಾಡಿದ್ದಾಳೆ. ಈ ಹಿಂದೆ ಹರ್ಷ, ಸಾನಿಯಾಳ ಬಳಿ ಸತ್ಯ ಬಾಯ್ಬಿಡಿಸಲು, ಹರ್ಷ ಸಾನಿಯಾ ತಲೆಗೆ ಗನ್ ಇಟ್ಟಿರುತ್ತಾನೆ. ಅದನ್ನು ಪತ್ರಕರ್ತರೊಬ್ಬರು ವಿಡಿಯೋ ಮಾಡಿರುತ್ತಾರೆ. ಅದನ್ನೇ ಸಾಕ್ಷಿಯಾಗಿಟ್ಟುಕೊಂಡು ಹರ್ಷನನ್ನು ಅರೆಸ್ಟ್ ಮಾಡಿಸಿದ್ದಳು.
ಭುವಿಯ ಮುಂದೆ ಸಾನಿಯಾ ಡಮ್ಮಿ
ಅಮ್ಮಮ್ಮನ ಆರೋಗ್ಯ ಹದಗೆಟ್ಟಾಗ, ಆಂಬುಲೆನ್ಸ್ನಲ್ಲಿ ಕರೆದುಕೊಂಡು ಹೋಗುತ್ತಾ ಇರುತ್ತಾರೆ. ಆಗ ಸಾನಿಯಾ ರತ್ನಮಾಲಾ ಅವರಿಗೆ ಏಕವಚನದಲ್ಲಿ ಬೈದು, ಸಾಯಿಸಲು ಪ್ರಯತ್ನ ಪಟ್ಟಿರುತ್ತಾಳೆ. ಅದರ ವಿಡಿಯೋ ಈಗ ಭುವಿ ಕೈಯಲ್ಲಿದೆ. ಅದನ್ನು ಸಾನಿಯಾಗೆ ತೋರಿಸಿದ್ದಾಳೆ. ಸಾನಿಯಾ ಶೇಕ್ ಆಗಿ ಹೋಗಿದ್ದಾಳೆ. ಅದಕ್ಕೆ ಹರ್ಷನನ್ನು ಬಿಡಿಸಲು ಪರದಾಡಿದ್ದಾಳೆ.
ಇದನ್ನೂ ಓದಿ: Actress Ramola: ಕನ್ನಡತಿ ಧಾರಾವಾಹಿಯ ರಮೋಲಾ ಈಗ 'ರಿಚ್ಚಿ'ಗೆ ನಾಯಕಿ!
ನಾನು ಹುಚ್ಚಿ ಹರ್ಷನನ್ನು ಬಿಡಿ
ಮೊದಲು ಪೊಲೀಸರು, ಲಾಯರ್ ಗೆ ಹರ್ಷನನ್ನು ಬಿಡಿ ಎಂದು ಸಾನಿಯಾ ಮನವಿ ಮಾಡಿದಳು. ಆದ್ರೆ ಅವರು ಬಿಡಲಿಲ್ಲ. ಹುಡುಗಾಟ ಆಡ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಆಗ ಸಾನಿಯಾ ತಾನು ಆಸ್ಪತ್ರೆಯಲ್ಲಿ ತೋರಿಸಿದ್ದ ವರದಿ ತರಿಸಿ, ಪೊಲೀಸರಿಗೆ ತೋರಿಸುತ್ತಾಳೆ. ನಾನು ಹುಚ್ಚಿ ನನಗೆ ಗೊತ್ತಾಗದೇ ದೂರು ನೀಡಿದ್ದೇನೆ ಎನ್ನುತ್ತಾಳೆ.
ಹರ್ಷನನ್ನು ಬಿಟ್ಟು ಬಿಡಿ, ತಲೆ ಸರಿ ಇಲ್ಲದವರು ದೂರು ನೀಡಿದ್ರೆ ಅದು ಕೋರ್ಟ್ನಲ್ಲಿ ನಿಲ್ಲಲ್ಲ. ನನಗೂ ದಂಡ ಹಾಕ್ತಾರೆ. ಕೇಸ್ ಪರಿಶೀಲನೆ ಮಾಡಿಲ್ಲ ಎಂದು ನಿಮಗೂ ದಂಡ ಹಾಕ್ತಾರೆ. ಅದಕ್ಕೆ ಹರ್ಷನನ್ನು ಬಿಡಿ ಎಂದು ಬಿಡಿಸಿಕೊಂಡು ಹೋಗಿದ್ದಾಳೆ.
ಅಮ್ಮಮ್ಮನ ನೆನೆದು ಹರ್ಷ ಕಣ್ಣೀರು
ಅಮ್ಮಮ್ಮ ಇಲ್ಲದೇ ಹರ್ಷನಿಗೆ ಇರೋದಕ್ಕೆ ಕಷ್ಟ ಆಗ್ತಿದೆ. ನಿನ್ನ ಅಸ್ಥಿಯನ್ನು ಬಿಟ್ಟು ಬಂದ್ವಿ. ಆದ್ರೆ ನಿನ್ನ ನೆನಪುಗಳು ಕಾಡುತ್ತಿವೆ. ನೀನು ಇರಬೇಕಿತ್ತು ಅಮ್ಮಮ್ಮ ಎಂದು ಕಣ್ಣೀರು ಹಾಕಿದ್ದಾನೆ. ಅಲ್ಲದೇ ಭುವಿ ಕೂಡ ರತ್ನಮ್ಮ ನೀವು ಬದುಕಿದ್ದಾಗಲೇ ಆಸ್ತಿ ಬಗ್ಗೆ ಹೇಳಬೇಕಿತ್ತು. ನಾವು ಕೂತು ಮಾತನಾಡಬಹುದಿತ್ತು ಎಂದು ಹೇಳಿಕೊಂಡಿದ್ದಾಳೆ.
ಭುವಿ ಪಟ್ಟಾಭಿಷೇಕಕ್ಕೆ ಹರ್ಷ ರೆಡಿ
ಭುವಿ ಈ ಜವಾಬ್ದಾರಿಯನ್ನು ಹೇಗೆ ನಿಭಾಯಸುವುದು ಎಂದು ಸಂಕಟದಲ್ಲಿದ್ದಾಳೆ. ಆದ್ರೆ ಹರ್ಷ ಭುವಿಯನ್ನು ಕಚೇರಿಗೆ ಸ್ವಾಗತಿಸಲು ರೆಡಿಯಾಗಿದ್ದಾನೆ. ಭುವಿಗೆ ಗ್ರ್ಯಾಂಡ್ ಆಗಿ ವೆಲ್ ಕಮ್ ಮಾಡಬೇಕು. ಅದನ್ನು ಭುವಿ ಯಾವುತ್ತೂ ಮರೆಯಬಾರದು ಎಂದು ಹೇಳುತ್ತಿದ್ದಾನೆ.
ಇದನ್ನೂ ಓದಿ: Engagement: 2022ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಸೀರಿಯಲ್ ನಟರು ಇವರೇ!
ಭವಿ ಎಂಡಿ ಸ್ಥಾನ ಅಲಂಕರಿಸುತ್ತಾಳಾ? ಸಾನಿಯಾ ಮುಂದಿನ ನಡೆ ಏನು? ಹರ್ಷನ ಪಾತ್ರ ಏನು? ಮುಂದೇನಾಗುತ್ತೆ ಅಂತ ನೋಡೋಕೆ ಕನ್ನಡತಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ