ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ (Kannadathi) ಸೀರಿಯಲ್ (Serial) ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ, ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡ್ತಿದೆ. ಧಾರಾವಾಹಿಯಲ್ಲಿ ಅಮ್ಮಮ್ಮನ ಅಧ್ಯಾಯ ಮುಕ್ತಾಯವಾಗ್ತಿದ್ದಂತೆ, ಭುವಿ ಹೆಸರಲ್ಲಿ ಆಸ್ತಿ ಇರೋದು ಮನೆಯವರಿಗೆ ಗೊತ್ತಾಗಿದೆ. ಸಾನಿಯಾ ಎಂಡಿ (MD) ಪೋಸ್ಟ್ ಬೇಕು ಎಂದು ಬ್ಲ್ಯಾಕ್ ಮೇಲ್ ಮಾಡ್ತಾ ಇದ್ದಾಳೆ. ಅದಕ್ಕೆ ಭುವಿಯೂ ತಿರುಗೇಟು ಕೊಟ್ಟಿದ್ದಾಳೆ.
ಎಂಡಿ ಪಟ್ಟ ಬೇಕೇ ಬೇಕು
ಭುವಿ ರತ್ನಮಾಲಾ ಆಸ್ತಿಯ ಅಧಿಕಾರ ಸ್ವೀಕಾರ ಕಾರ್ಯಕ್ರಮ ನಡೆಯುತ್ತಿದೆ. ಆ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಕೂತಿರುವ ಸಾನಿಯಾ, ತನಗೆ ಎಂಡಿ ಪೋಸ್ಟ್ ಬೇಕು ಎಂದು ಪಟ್ಟು ಹಿಡಿದಿದ್ದಾಳೆ. ಅಲ್ಲದೇ ಕೋರ್ಟ್ ನಿಂದ ಸ್ಟೇ ಆರ್ಡರ್ ತಂದು, ನನ್ನನ್ನು ಇದ್ದಕ್ಕಿದ್ದ ಹಾಗೇ ಎಂಡಿ ಪೋಸ್ಟ್ ನಿಂದ ತೆಗೆಯುವಂತಿಲ್ಲ ಎಂದು ಹೇಳಿದ್ದಾಳೆ.
ಗನ್ ಇಟ್ಟು ಬ್ಲ್ಯಾಕ್ ಮೇಲ್ ಮಾಡಿದ ಸಾನಿಯಾ
ಅಲ್ಲದೇ ಸಾನಿಯಾ ಟೇಬಲ್ ಮೇಲೆ ಗನ್ ತೆಗೆದು ಇಡುತ್ತಾಳೆ. ಪಕ್ಕದಲ್ಲಿ ಕೋರ್ಟ್ ಆರ್ಡರ್ ತೆಗೆದು ಭುವಿಗೆ ಓದಲು ಹೇಳುತ್ತಾಳೆ. ನೀನು ಎಂಡಿ ಪೋಸ್ಟ್ ಕೊಡಲ್ಲ ಎಂದ್ರೆ, ಗನ್ ತೆಗೆದುಕೊಂಡು ಸುಟ್ಟುಕೊಂಡು ಸಾಯ್ತೀನಿ ಎಂದು ಬ್ಲ್ಯಾಕ್ ಮೇಲ್ ಮಾಡ್ತಾಳೆ. ಅಧಿಕಾರ ಇಲ್ಲ ಅಂದ್ರೆ, ಬದುಕಿದ್ದು ಸತ್ತ ಹಾಗೇ, ಅದಕ್ಕಿಂತ ನಾನು ಸಾಯುವುದೇ ಒಳ್ಳೆಯದು ಎನ್ನುತ್ತಾಳೆ. ಅದಕ್ಕೆ ಮೊದಲು ಭುವಿ ಗಾಬರಿ ಆಗ್ತಾಳೆ.
ಇದನ್ನೂ ಓದಿ: BBK Deepika Das: ದೀಪಿಕಾ ದಾಸ್ ಬೋಲ್ಡ್ ಲುಕ್‍ಗೆ ಫ್ಯಾನ್ಸ್ ಫಿದಾ, ಬ್ಯೂಟಿ ಕ್ವೀನ್ ಎಂದು ಕಾಮೆಂಟ್!
ಪಕ್ಕದಲ್ಲಿ ಕೂತು ಧೈರ್ಯ ತುಂಬಿದ ಅಮ್ಮಮ್ಮ
ಸಾನಿಯಾ ನಡೆ ನೋಡಿ ಭುವಿಗೆ ಗಾಬರಿ ಆಗುತ್ತೆ. ಆಗ ಅಮ್ಮಮ್ಮ ಭುವಿ ಪಕ್ಕದಲ್ಲಿ ಕೂತು ಧೈರ್ಯ ತುಂಬುತ್ತಾಳೆ. ಈ ರೀತಿ ಬ್ಲ್ಯಾಕ್ ಮೇಲ್‍ಗೆ ಭಯ ಪಡಬಾರದು. ನೀನು ಧೈರ್ಯವಾಗಿರಬೇಕು. ಭಯಪಟ್ರೆ, ಭಯ ಪಡಿಸುತ್ತಾನೆ ಇರುತ್ತಾರೆ ಎಂದು ರತ್ನಮ್ಮ ಹೇಳ್ತಾರೆ. ಅದನ್ನು ಕೇಳಿ ಭುವಿಗೆ ಧೈರ್ಯ ಬಂದಿದೆ.
ವಿಡಿಯೋ ಮುಂದಿಟ್ಟುಕೊಂಡ ಭುವಿ
ಸಾನಿಯಾ ಅಮ್ಮಮ್ಮನನ್ನು ಕೊಲ್ಲಲ್ಲು ಹೋದ ವಿಡಿಯೋ ಭುವಿ ಬಳಿ ಇದೆ. ಅದನ್ನೇ ಅಸ್ತ್ರವಾಗಿಸಿಕೊಂಡಿದ್ದಾಳೆ. ಅದನ್ನು ಉಪಯೋಗಿಸಿ, ಹರ್ಷ ಜೈಲಿಗೆ ಹೋಗದಂತೆ ತಡೆದಿದ್ದಳು. ಈಗ ಅದೇ ವಿಡಿಯೋ ಮುಂದಿಟ್ಟುಕೊಂಡು ಸಾನಿಯಾ ಕೊಬ್ಬು ಕರಗಿಸಲು ಭುವಿ ಮುಂದಾಗಿದ್ದಾಳೆ.
ಹರ್ಷನಿಗೆ ವಿಡಿಯೋ ಕಳಿಸುತ್ತೇನೆ
ಸಾನಿಯಾ ಹಠ ಸೌಪರ್ಣಿಕಾ ಮುಂದೆ ನಡೆಯಲ್ಲ. ಸಾನಿಯಾ ಅವರೇ ನೀವು ಇದೇ ರೀತಿ ಮಾಡ್ತಾ ಇದ್ರೆ, ನಾನು ಈ ವಿಡಿಯೋವನ್ನು ಹರ್ಷನಿಗೆ ಕಳಿಸಬೇಕಾಗುತ್ತೆ ಎಂದು ಭುವಿ ಹೇಳಿದ್ದಾಳೆ. ಅದನ್ನು ಕೇಳಿ ಸಾನಿಯಾ ಗಾಬರಿ ಆಗಿದ್ದಾಳೆ. ಭುವಿ ಮುಂದೆ ತನ್ನ ಆಟ ನಡೆಯಲ್ಲ ಎಂದು ಗೊತ್ತಾಗಿದೆ.
ಇದನ್ನೂ ಓದಿ: Kannadathi Serial: ಕನ್ನಡತಿ ಸೀರಿಯಲ್ ಮುಗಿಯುತ್ತಾ? ಈ ರೀತಿಯ ಚರ್ಚೆ ಎದ್ದಿರೋದ್ಯಾಕೆ?
ಭುವಿ ಈಗ ಅಮ್ಮಮ್ಮ ರೀತಿ ಆಗಿದ್ದಾಳೆ. ಸೌಪರ್ಣಿಕಾ ಮುಂದೆ ಸಾನಿಯಾ ಆಟ ನಡೆಯಲ್ಲ. ಸಾನಿಯಾ ಮುಂದಿನ ನಡೆ ಏನು? ಮುಂದೇನಾಗುತ್ತೆ ಅಂತ ನೋಡೋಕೆ ಕನ್ನಡತಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ