ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ (Kannadathi) ಸೀರಿಯಲ್ (Serial) ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್ಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ (Fans) ಅಲ್ಲ, ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ (Super Hit) ಆಗಿ ಓಡ್ತಿದೆ. ಸಾನಿಯಾಳನ್ನು ಆದಿ ಬಿಲ್ಡಿಂಗ್ (Building) ಮೇಲಿಂದ ತಳ್ಳಿದ್ದಾನೆ. ಭುವಿ ಅದನ್ನು ನೋಡಿ ಗಾಬರಿಯಾಗಿದ್ದಾಳೆ.
ಸಾನಿಯ ವಿರುದ್ಧ ಸಾಕ್ಷಿ
ಭುವಿ ಮತ್ತು ಹರ್ಷನ ನಿಶ್ಚಿತಾರ್ಥದ ಸಂದರ್ಭದಲ್ಲಿ ಸಾನಿಯಾ ಭುವಿಯನ್ನು ಕೊಲ್ಲುವ ಪ್ಲ್ಯಾನ್ ಮಾಡಿದ್ದಳು. ಅದರಂತೆ ರೌಡಿಗೆ ಡೀಲ್ ಕೊಟ್ಟಿದ್ದಳು. ಅವನು ಸಹ ಸಾನಿಯಾ ಹೇಳಿದಂತೆ ಭುವಿಯನ್ನು ಬೆಟ್ಟದ ಮೇಲಿಂದ ತಳ್ಳಿರುತ್ತಾನೆ. ಆದ್ರೆ ಭುವಿ ಪ್ರಾಣಪಾಯದಿಂದ ಪಾರಾಗಿರುತ್ತಾಳೆ. ಈಗ ಸಾನಿಯಾ ವಿರುದ್ಧ ಸಾಕ್ಷಿ ಸಿಕ್ಕಿದೆ.
ಕಾಲ್ ರೆಕಾರ್ಡ್ ತೆಗೆದ ಭುವಿ
ಭುವಿಗೆ ಸಾನಿಯಾ ನನ್ನನ್ನು ಕೊಲ್ಲೋಕೆ ಬಂದಿದ್ದಳು ಎಂದು ತಿಳಿದಿದೆ. ಅದಕ್ಕೆ ಅದನ್ನು ತೋರಿಸಲು ಸಾಕ್ಷಿ ಬೇಕು. ಆ ಸಾಕ್ಷಿಯನ್ನು ಭುವಿ ಹುಡುಕಿದ್ದಾಳೆ. ರೌಡಿ ಜೊತೆ ಮಾತನಾಡಿದ ಸಾನಿಯಾ ಕಾಲ್ ರೆಕಾರ್ಡ್ ತೆಗೆಸಿದ್ದಾಳೆ. ಅದನ್ನು ಸಾನಿಯಾಗೆ ಕೊಟ್ಟಿದ್ದಾಳೆ. ಅದಕ್ಕೆ ಸಾನಿಯಾ ಕೋಪ ಮಾಡಿಕೊಂಡಿದ್ದಾಳೆ. ನನ್ನ ವಿರುದ್ಧ ನೀನು ಪಿತೂರಿ ಮಾಡ್ತಾ ಇದೀಯಾ ಎಂದು ಕೇಳಿದ್ದಾಳೆ.
ನೀವು ಬದಲಾಗದಿದ್ರೆ ಶಿಕ್ಷೆ ಕಟ್ಟಿಟ್ಟ ಬುತ್ತಿ
ಸಾನಿಯಾ ಎಷ್ಟೇ ಹೇಳಿದ್ರೂ ಬದಲಾಗುತ್ತಿಲ್ಲ. ಅದಕ್ಕೆ ಭುವಿ ಸಾಕ್ಷಿಗಳನ್ನು ಕಲೆ ಹಾಕುತ್ತಿದ್ದಾಳೆ. ಸಾಕ್ಷಿ ಸಮೇತ ಸಾನಿಯಾಳನ್ನು ಜೈಲಿಗೆ ಹಾಕಿಸಲು ತಯಾರಿ ನಡೆಸುತ್ತಿದ್ದಾಳೆ. ಅದಕ್ಕೆ ಸಾನಿಯಾ ಗಾಬರಿಗೊಂಡಿದ್ದಾಳೆ. ಇದ್ಯಾವುದನ್ನು ನಾನು ಮಾಡಿಲ್ಲ. ಇದೆಲ್ಲಾ ಸುಳ್ಳು ಎಂದು ಸಾನಿಯಾ ಹೇಳುತ್ತಿದ್ದಾಳೆ.
ಸಾನಿಯಾಳನ್ನು ತಳ್ಳಿದ ಆದಿ
ಭುವಿ ಮತ್ತು ಸಾನಿಯಾ ತಾಪ್ಸಿಗೆ ಕಟ್ಟಿಸುತ್ತಿರುವ ಆಸ್ಪತ್ರೆ ಮೇಲೆ ನಿಂತು ಮಾತನಾಡುತ್ತಿದ್ದಾರೆ. ಆಗ ಆದಿ ಅಲ್ಲಿಗೆ ಬರುತ್ತಾನೆ.ಆಗ ಸಾನಿಯಾ ಡ್ರಾಮಾ ಮಾಡ್ತಾಳೆ. ಆದಿ ನೀವು ಬಂದಿದ್ದು ಒಳ್ಳೆದಾಯ್ತು. ಇಲ್ಲ ಅಂದ್ರೆ ಈ ಭುವಿ ನನ್ನ ಮೇಲಿಂದ ತಳ್ಳಿ ಬಿಡುತ್ತಿದ್ದಳು ಎಂದು ಹೇಳ್ತಾಳೆ.
ಆಗ ಆದಿ, ಭುವಿ ಏನೂ ಕ್ರಮ ತೆಗೆದುಕೊಳ್ಳಲ್ಲ. ನಾನೇ ತೆಗೆದುಕೊಳ್ತೇನೆ ಎಂದು ಸಾನಿಯಾಳನ್ನು ಮೇಲಿಂದ ತಳ್ಳಿ ಬಿಟ್ಟಿದ್ದಾನೆ . ಸಾನಿಯಾ ಜೋರಾಗಿ ಕಿರುಚಿದ್ದಾಳೆ.
ಆತಂಕದಲ್ಲಿ ಭುವಿ
ಆದಿ ಸಾನಿಯಾಳನ್ನು ತಳ್ಳುವುದನ್ನು ನೋಡಿ ಭುವಿ ಆತಂಕಗೊಂಡಿದ್ದಾಳೆ. ಆದಿ ನೀವು ಏನು ಮಾಡಿ ಬಿಟ್ರಿ ಎಂದು ಕೇಳ್ತಾ ಇದ್ದಾಳೆ. ಧಾರಾವಾಹಿ ಮುಗಿಯುವ ಸಂದರ್ಭದಲ್ಲಿ ಇದ್ಯಾಕೆ ಈ ರೀತಿ ಮಾಡ್ತಾ ಇದ್ದಾರೆ ಎಂದು ಅಭಿಮಾನಿಗಳು ಕೇಳ್ತಾ ಇದ್ದಾರೆ. ಇನ್ನೂ ಕೆಲವರು ಸಾನಿಯಾಗೆ ಅದೇ ಒಳ್ಳೆ ಶಿಕ್ಷೆ ಎನ್ನುತ್ತಿದ್ದಾರೆ.
ಇದನ್ನೂ ಓದಿ: Actress Sindhu Kalyan: ಗಟ್ಟಿಮೇಳದ ಸುಹಾಸಿನಿ ಪಾತ್ರ ಮಾಡ್ತಿರೋ ಸಿಂಧು ಕಲ್ಯಾಣ್ ಬಗ್ಗೆ ಇಲ್ಲಿದೆ ಮಾಹಿತಿ
ನಿಜವಾಗ್ಲೂ ಆದಿ ಸಾನಿಯಾಳನ್ನು ತಳ್ಳಿ ಬಿಟ್ನಾ? ಅಥವಾ ಇದು ಸಹ ಎಲ್ಲಾ ಧಾರಾವಾಹಿಯಂತೆ ಕನಸಾ? ಕನಸಾದ್ರೆ ಕಂಡಿದ್ದು ಯಾರು? ಮುಂದೇನಾಗುತ್ತೆ ಅಂತ ನೋಡೋಕೆ ಕನ್ನಡತಿ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ