ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ (Kannadathi) ಸೀರಿಯಲ್ (Serial) ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ, ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡ್ತಿದೆ. ಆದ್ರೆ ಸೀರಿಯಲ್ ಮುಗಿಯುವ (End) ಸಮಯ ಹತ್ತಿರ ಬಂದಿದೆ. ವಿಲನ್ (Villain) ಆಗಿದ್ದ ಸಾನಿಯಾ ಬದಲಾಗಿದ್ದಾಳೆ.
ಸಾನಿಯಾನ ತಳ್ಳಿದ್ದ ಆದಿ
ಸಾನಿಯಾ ಎಷ್ಟೋ ಬಾರಿ ಭುವಿಯನ್ನು ಕೊಲ್ಲಲು ಹೋಗಿದ್ದಾಳೆ. ಅದಕ್ಕೆ ಆದಿಗೆ ಕೋಪ ಇತ್ತು. ಎಷ್ಟು ಸಲ ಹೇಳಿದ್ರೂ ಬುದ್ಧಿ ಕಲಿತಿರಲಿಲ್ಲ. ಸಾನಿಯಾಗೆ ಹಣ, ಅಧಿಕಾರ ಮುಖ್ಯ, ಅವಳು ಬದಲಾಗಲ್ಲ. ನೀನು ಸಾಯಿ ಎಂದು ಬಿಲ್ಡಿಂಗ್ ಮೇಲಿಂದ ತಳ್ಳಿ ಬಿಡುತ್ತಾನೆ. ಆಗ ಸಾನಿಯಾ ಒಂದು ಕಂಬಿ ಹಿಡಿದು ನಿಂತಿರುತ್ತಾಳೆ. ಆಗ ಭುವಿ ಮತ್ತೆ ಆದಿ ಸೇರಿ ಆಕೆಯನ್ನು ಮೇಲೆ ಎತ್ತುತ್ತಾರೆ.
ನಾನೇ ಸಾಯುತ್ತೇನೆ ಎಂದ ಆದಿ
ಸಾನಿಯಾಳನ್ನು ಕಾಪಾಡಿದ ಆದಿ, ಬಿಲ್ಡಿಂಗ್ ಮೇಲಿಂದ ಆಯಾ ತಪ್ಪಿ ಬೀಳುತ್ತಾನೆ. ಅವನು ಕಂಬಿ ಹಿಡಿದಿರುತ್ತಾನೆ. ಆಗ ಸಾನಿಯಾ ಆತನ ಕೈ ಹಿಡಿಯುತ್ತಾಳೆ. ಆದ್ರೆ ಆದಿ ಕೈ ಬಿಡು ಸಾನಿಯಾ ನಾನು ಬದುಕಲ್ಲ. ನಿನ್ನ ಜೊತೆ ಇರಲು ಇಷ್ಟ ಇಲ್ಲ. ನಿನಗೆ ಹಣ, ಅಧಿಕಾರ ಬೇಕು. ಗಂಡ ಬೇಡ ತಾನೇ. ನಾನು ಇಲ್ಲ ಅಂದ್ರೂ ಅವುಗಳ ಜೊತೆ ಇರು ಎನ್ನುತ್ತಾನೆ. ಸಾನಿಯಾ ತುಂಬಾ ಕ್ಷಮೆ ಕೇಳಿದ ಮೇಲೆ ಆದಿ ಮೇಲೆ ಬರುತ್ತಾನೆ.
ಬದಲಾದ ಸಾನಿಯಾ!
ಇಷ್ಟು ದಿನ ದುಡ್ಡು ಬೇಕು. ಅಧಿಕಾರ ಬೇಕು ಎಂತಿದ್ದ ಸಾನಿಯಾಗೆ ಬುದ್ಧಿ ಬಂದಿದೆ. ಎಲ್ಲ ಇದ್ದೂ ಜೀವ ಇಲ್ಲ ಅಂದ್ರೆ ಏನ್ ಮಾಡೋದು ಎಂದು ಗೊತ್ತಾಗಿದೆ. ಅದಕ್ಕೆ ಸಾನಿಯಾ ಬದಲಾಗಿದ್ದಾಳೆ. ಆದಿ ಬಳಿ ಮತ್ತೆ ಕ್ಷಮೆ ಕೇಳಿ, ಬದಲಾಗುತ್ತೇನೆ ಎಂದಿದ್ದಾಳೆ. ನಿಜವಾಗ್ಲೂ ಬದಲಾಗುತ್ತೇನೆ. ಹಳೆಯ ತರ ಸುಳ್ಳು ಪ್ರಾಮಿಸ್ ಮಾಡ್ತಾ ಇಲ್ಲ ಎಂದು ಹೇಳಿದ್ದಾಳೆ.
ಶೀಘ್ರದಲ್ಲೇ ಕನ್ನಡತಿ ಧಾರಾವಾಹಿ ಮುಕ್ತಾಯ
ಧಾರಾವಾಹಿ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ. ಕಲರ್ಸ್ ಕನ್ನಡದ ಟಾಪ್ ಒನ್ ಸೀರಿಯಲ್. ಆದ್ರೂ ಯಾಕೋ ಬೇಗ ಮುಗಿಸಲು ತಂಡ ನಿರ್ಧರಿಸಿದೆ. ಚೆನ್ನಾಗಿರುವಾಗ್ಲೇ ಮುಗಿಸಬೇಕು. ಕಥೆಯನ್ನು ಎಳೆದು ಜನರಿಗೆ ಬೋರ್ ಮಾಡಬಾರದು ಎಂದು ಕಲಾವಿದರು ಹೇಳಿದ್ದರು. ಅಮ್ಮಮ್ಮನ ಅಧ್ಯಾಯ ಮುಕ್ತಾಯವಾದಾಗಲೇ ಧಾರಾವಾಹಿ ಮುಗಿಯತ್ತೆ ಎನ್ನುವ ಚರ್ಚೆಗಳು ಶುರುವಾಗಿದ್ದವು.
ಅಭಿಮಾನಿಗಳ ಪ್ರಶ್ನೆ
ಕನ್ನಡತಿ ಧಾರಾವಾಹಿ ಮುಗಿಯುತ್ತೆ ಅಂತ ಸುದ್ದಿ ಚರ್ಚೆ ಆಗುತ್ತಿದ್ದಂತೆ ಸಾವಿರಾರು ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದಾರೆ. ಕನ್ನಡತಿ ಧಾರಾವಾಹಿ ನಮ್ಮ ನೆಚ್ಚಿನ ಸೀರಿಯಲ್. ದಯಮಾಡಿ ಧಾರಾವಾಹಿ ಮುಗಿಸಬೇಡಿ ಎಂದು ಹೇಳುತ್ತಿದ್ದಾರೆ. ಮುಗಿಸಲು ಕಾರಣ ಹೇಳಿ ಎಂದು ಹಲವರು ಕೇಳಿದ್ದಾರೆ.
ಇದನ್ನೂ ಓದಿ: Ramachari: ಮಗಳಿಗೆ ಕಣ್ಣು ಕಾಣದೇ ಇರೋ ಸತ್ಯ ಮಾನ್ಯತಾಗೆ ಗೊತ್ತಾಯ್ತು, ರಾಮಾಚಾರಿ ಮನೆಯವರಿಗೆ ಕ್ಲಾಸ್!
ಸಾನಿಯಾ ಸರಿ ಹೋದ್ಲು, ಭುವಿಗೆ ಇನ್ನೂ ಕೆಲವು ಜವಾಬ್ದಾರಿಗಳು ಇವೆಯಂತೆ. ತಾಪ್ಸಿ ಪ್ರಾಣಕ್ಕೆ ಏನಾದ್ರೂ ಅಪಾಯ ಆಗುತ್ತಾ? ಮುಂದೇನಾಗುತ್ತೇ ಅಂತ ನೋಡೋಕ್ಕೆ ಕನ್ನಡತಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ