• Home
  • »
  • News
  • »
  • entertainment
  • »
  • Kannadathi: ಶೋಕಸಾಗರದಲ್ಲಿ ಕುಟುಂಬಸ್ಥರು, ಇಲ್ಲಿಯೂ ಬಿಡ್ತಿಲ್ಲ ಸಾನಿಯಾ, ಸುದರ್ಶನ ನೀಚತನ; ವೀಕ್ಷಕರಿಂದ ಹಿಡಿಶಾಪ

Kannadathi: ಶೋಕಸಾಗರದಲ್ಲಿ ಕುಟುಂಬಸ್ಥರು, ಇಲ್ಲಿಯೂ ಬಿಡ್ತಿಲ್ಲ ಸಾನಿಯಾ, ಸುದರ್ಶನ ನೀಚತನ; ವೀಕ್ಷಕರಿಂದ ಹಿಡಿಶಾಪ

ಅಮ್ಮಮ್ಮ ಇಲ್ಲ ಎಂದು ಮನೆಯವರು ಕಣ್ಣೀರು

ಅಮ್ಮಮ್ಮ ಇಲ್ಲ ಎಂದು ಮನೆಯವರು ಕಣ್ಣೀರು

ಮನೆಯಲ್ಲಿ ಎಲ್ಲರೂ ಬೇಸರ ಮಾಡಿಕೊಂಡಿದ್ರೆ, ಸಾನಿಯಾ ಮತ್ತು ಹರ್ಷ ಚಿಕ್ಕಪ್ಪ ಸುದರ್ಶನ್ ಆಸ್ತಿ ಬಗ್ಗೆ ಮಾತನಾಡುತ್ತಿದ್ದಾರೆ. ನೆಂಟರ ಮುಂದೆ ಗಲಾಟೆ ಮಾಡಿದ್ರೆ, ಹರ್ಷ ಖಂಡಿತ ಆಸ್ತಿ ಕೊಡುತ್ತಾನೆ ಎಂದು ಇಬ್ಬರು ಮಾತನಾಡಿಕೊಳ್ಳುತ್ತಿದ್ದಾರೆ.

  • News18 Kannada
  • Last Updated :
  • Karnataka, India
  • Share this:

    ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ (Kannadathi) ಧಾರಾವಾಹಿ (Serial) ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್‍ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ. ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡುತ್ತಿದೆ. ಧಾರಾವಾಹಿಯಲ್ಲಿ ಅಮ್ಮಮ್ಮನ ಅಧ್ಯಾಯ ಮುಕ್ತಾಯವಾಗಿದೆ. ಮನೆಯಲ್ಲಿ ಎಲ್ಲರೂ ಕಣ್ಣೀರಿಡುತ್ತಿದ್ದಾರೆ (Crying). ಆದ್ರೆ ಸಾನಿಯಾ, ಸುದರ್ಶನ್ ಆಸ್ತಿ (Property) ವಿಚಾರ ಚರ್ಚೆ ಮಾಡ್ತಾ ಇದ್ದಾರೆ.


    ರತ್ನಮಾಲಾ ಅಧ್ಯಾಯ ಮುಕ್ತಾಯ
    ಕನ್ನಡತಿ ಧಾರಾವಾಹಿಯಲ್ಲಿ ನಟಿಸುವವರು ಆ ಪಾತ್ರಕ್ಕೆ ಜೀವ ತುಂಬಿದ್ದರು. ಅಮ್ಮಮ್ಮ ಅಂದ್ರೆ ರತ್ನಮಾಲಾ ಅವರ ಪಾತ್ರವು ಚೆನ್ನಾಗಿ ಮೂಡಿ ಬಂದಿತ್ತು. ಮಗನನ್ನು ಸಾಕಿದ ರೀತಿ, ಮನೆಯವರಿಗೆ ಹೇಳಿ ಕೊಟ್ಟ ಸಂಸ್ಕಾರ ಎಲ್ಲವೂ ಇಷ್ಟ ಆಗಿತ್ತು. ರತ್ನಮಾಲಾ ಇನ್ಮುಂದೆ ಧಾರಾವಾಹಿಯಲ್ಲಿ ಇರಲ್ಲ ಎನ್ನುವುದನ್ನೇ ಅಭಿಮಾನಿಗಳು ಒಪ್ತಾ ಇಲ್ಲ. ಯಾಕಂದ್ರೆ ಪಾತ್ರ ಅಷ್ಟು ಮನಸ್ಸಿನಲ್ಲಿ ಉಳಿದು ಬಿಟ್ಟಿತ್ತು. ಆದ್ರೆ ಇನ್ಮುಂದೆ ಆ ಅಭಿನಯ ಇರಲ್ಲ.


    ಮನೆಯವರೆಲ್ಲಾ ಕಣ್ಣೀರು
    ಪ್ರೀತಿಯ ಅಮ್ಮಮ್ಮ ಇನ್ನಿಲ್ಲ ಎನ್ನುವುದನ್ನು ಕೇಳಿ ಮನೆಯವರೆಲ್ಲಾ ಕಣ್ಣೀರು ಹಾಕಿದ್ದಾರೆ. ಮನೆ ತನಕ ಬಂದ ರತ್ನಮಾಲಾ ಅವರು, ಮನೆ ಒಳಗೆ ಬರಲಿಲ್ಲ ಎಂದು ಅಳುತ್ತಿದ್ದಾರೆ. ಹರ್ಷ-ಭುವಿಗೆ ದಿಕ್ಕೇ ತೋಚದಂತಾಗಿದೆ. ದೊಡ್ಡಮ್ಮ ಇಲ್ಲ ಎನ್ನುವುದನ್ನು ಕೇಳಿ ಎಲ್ಲರೂ ಆಘಾತಕ್ಕೆ ಒಳಗಾಗಿದ್ದಾರೆ.


    ಇದನ್ನೂ ಓದಿ: Bigg Boss Kannada: 'ಫೇಕ್' ಹಚ್ಚಿಸಿದ ಬೆಂಕಿಗೆ ಬಿಗ್ ಬಾಸ್ ಮಂದಿ ತತ್ತರ, ರಾಜಣ್ಣ ಧಗಧಗ!


    ಮನೆಯಲ್ಲಿ ಮೌನ
    ಹರ್ಷ, ಅಮ್ಮಮ್ಮ ಇಲ್ಲ ಎನ್ನುವುದನ್ನು ಒಪ್ಪುತ್ತಲೇ ಇಲ್ಲ. ಅವರು ಇದ್ದಾರೆ. ಡೀಪ್ ಸ್ಲೀಪ್ ಗೆ ಹೋಗಿರಬಹುದು. ಅಥವಾ ಕೋಮಾಗೆ ಹೋಗಿರಬಹುದು. ಅವಳನ್ನು ಎಲ್ಲಿಗೂ ಕರೆದುಕೊಂಡು ಹೋಗಬೇಡಿ ಎನ್ನುತ್ತಿದ್ದಾನೆ. ಮನೆಯಲ್ಲಿ ಎಲ್ಲರಿಗೂ ಅಳುವೊಂದೆ ಕಾಣ್ತಿದೆ. ಎಲ್ಲರೂ ಮೌನವಾಗಿದ್ದಾರೆ. ಆಧಾರ ಸ್ತಂಭವಾಗಿದ್ದ ರತ್ನಮಾಲಾ ಕಳೆದುಕೊಂಡು ಕಂಗಾಲಾಗಿದ್ದಾರೆ.


    colors kannada serial, kannada serial, kannadathi serial, harsha mother in death,saniya and sudarshan talk about property, ಕನ್ನಡತಿ ಧಾರಾವಾಹಿ, ಅಮ್ಮಮ್ಮ ಇಲ್ಲ ಎಂದು ಮನೆಯವರು ಕಣ್ಣೀರು, ಆಸ್ತಿ ಬಗ್ಗೆ ಸಾನಿಯಾ, ಸುದರ್ಶನ್ ಚರ್ಚೆ, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ಅಮ್ಮಮ್ಮ


    ಆಸ್ತಿ ಬಗ್ಗೆ ಸಾನಿಯಾ, ಸುದರ್ಶನ್ ಚರ್ಚೆ!
    ಮನೆಯಲ್ಲಿ ಎಲ್ಲರೂ ಬೇಸರ ಮಾಡಿಕೊಂಡಿದ್ರೆ, ಸಾನಿಯಾ ಮತ್ತು ಹರ್ಷ ಚಿಕ್ಕಪ್ಪ ಸುದರ್ಶನ್ ಆಸ್ತಿ ಬಗ್ಗೆ ಮಾತನಾಡುತ್ತಿದ್ದಾರೆ. ಇಬ್ಬರು ಸೈಡ್‍ಗೆ ಹೋಗಿ. ಇದೇ ಒಳ್ಳೆಯ ಸಮಯ ಆಸ್ತಿ ಕೇಳಲು. ನೆಂಟರ ಮುಂದೆ ಗಲಾಟೆ ಮಾಡಿದ್ರೆ, ಹರ್ಷ ಖಂಡಿತ ಆಸ್ತಿ ಕೊಡುತ್ತಾನೆ ಎಂದು ಇಬ್ಬರು ಮಾತನಾಡಿಕೊಳ್ಳುತ್ತಿದ್ದಾರೆ. ಸಾವಿನ ಮನೆಯಲ್ಲಿ ವ್ಯವಹಾರದ ಮಾತು ನಡೆಯುತ್ತಿದೆ.


    colors kannada serial, kannada serial, kannadathi serial, harsha mother in death,saniya and sudarshan talk about property, ಕನ್ನಡತಿ ಧಾರಾವಾಹಿ, ಅಮ್ಮಮ್ಮ ಇಲ್ಲ ಎಂದು ಮನೆಯವರು ಕಣ್ಣೀರು, ಆಸ್ತಿ ಬಗ್ಗೆ ಸಾನಿಯಾ, ಸುದರ್ಶನ್ ಚರ್ಚೆ, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ಸುದರ್ಶನ್


     ವರೂಧಿನಿ ನಗು
    ಸಾನಿಯಾ ಮತ್ತು ಹರ್ಷ ಚಿಕ್ಕಪ್ಪ ಸುದರ್ಶನ್ ಆಸ್ತಿ ಬಗ್ಗೆ ಮಾತನಾಡುತ್ತಿರುವಾಗ ವರು ಬರುತ್ತಾಳೆ. ಅವಳು ಅವರನ್ನು ನೋಡಿ ಜೋರಾಗಿ ನಗುತ್ತಾಳೆ. ಯಾಕೆ ನಗುತ್ತಿ ಅಂತಾರೆ. ಸಾವಿನ ಮನೆಯಲ್ಲಿ ಅಸ್ತಿ ಬಗ್ಗೆ ಮಾತನಾಡುತ್ತಿದ್ದೀರಿ. ಅದು ಅಲ್ಲದೇ ನೀವು ಮಾತನಾಡುತ್ತಿರುವುದ ಆಗಲ್ಲ ಎಂದು ಹೇಳಿ ಹೋಗಿದ್ದಾಳೆ.


    colors kannada serial, kannada serial, kannadathi serial, harsha mother in death,saniya and sudarshan talk about property, ಕನ್ನಡತಿ ಧಾರಾವಾಹಿ, ಅಮ್ಮಮ್ಮ ಇಲ್ಲ ಎಂದು ಮನೆಯವರು ಕಣ್ಣೀರು, ಆಸ್ತಿ ಬಗ್ಗೆ ಸಾನಿಯಾ, ಸುದರ್ಶನ್ ಚರ್ಚೆ, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ವರೂಧಿನಿ-ಸಾನಿಯಾ


    ಇದನ್ನೂ ಓದಿ: Rashmika Mandanna: ಮನಸು ನೋಯಿಸಿದವರಿಗೆ ರಶ್ಮಿಕಾ ಬಹಿರಂಗ ಪತ್ರ! ಕೊಡಗಿನ ಕುವರಿ ಏನ್ ಹೇಳಿದ್ದಾರೆ?


    ವರುಗೆ ಭುವಿ ಹೆಸರಲ್ಲಿ ಆಸ್ತಿ ಇರೋದು ಗೊತ್ತಾಗಿದೆ. ಅದನ್ನು ಯಾರ ಮುಂದೆಯಾದ್ರೂ ಹೇಳ್ತಾಳಾ? ಹರ್ಷ ಅದನ್ನು ಹೇಗೆ ಸ್ವೀಕರಿಸುತ್ತಾನೆ? ಮುಂದೇನಾಗುತ್ತೆ ಅಂತ ನೋಡೋಕೆ ಕನ್ನಡತಿ ಧಾರಾವಾಹಿ ನೊಡಬೇಕು.

    Published by:Savitha Savitha
    First published: