• Home
  • »
  • News
  • »
  • entertainment
  • »
  • Kannadathi: ಅಮ್ಮಮ್ಮನ ವಿಲ್ ನೋಡಿ ಮನೆಯಲ್ಲಿ ಕೋಲಾಹಲ, ಕನಸು ನಿಜವಾದ್ರೆ ಗಲಾಟೆ ಗ್ಯಾರಂಟಿ!

Kannadathi: ಅಮ್ಮಮ್ಮನ ವಿಲ್ ನೋಡಿ ಮನೆಯಲ್ಲಿ ಕೋಲಾಹಲ, ಕನಸು ನಿಜವಾದ್ರೆ ಗಲಾಟೆ ಗ್ಯಾರಂಟಿ!

ಅಮ್ಮಮ್ಮ ಮಾಡಿದ ವಿಲ್ ನೋಡಿ ಮನೆಯಲ್ಲಿ ಕೋಲಾಹಲ

ಅಮ್ಮಮ್ಮ ಮಾಡಿದ ವಿಲ್ ನೋಡಿ ಮನೆಯಲ್ಲಿ ಕೋಲಾಹಲ

ಮನೆಯಲ್ಲಿ ಆಸ್ತಿ ವಿಚಾರ ಗೊತ್ತಾಗಿರೋದು ನಿಜವಲ್ಲ. ಅದು ರತ್ನಮಾಲಾ ಅವರು ಕಂಡ ಕನಸು. ಅದು ನಿಜವಾದ್ರೆಮ ಭುವಿಯ ವಿರುದ್ಧ ಎಲ್ಲಾ ತಿರುಗಿ ಬೀಳ್ತಾರೆ ಎಂದು ಭಯಗೊಂಡು, ಆಸ್ಪತ್ರೆಯಲ್ಲಿ ಹರ್ಷ, ಹರ್ಷನ ಜೊತೆ ಮಾತನಾಡಬೇಕು ಎನ್ನುತ್ತಿದ್ದಾಳೆ.

  • News18 Kannada
  • Last Updated :
  • Karnataka, India
  • Share this:

    ಕಲರ್ಸ್ ಕನ್ನಡದಲ್ಲಿ  (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ (Serials) ಕನ್ನಡತಿ (Kannadathi) ಧಾರಾವಾಹಿ ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್‍ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ. ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡುತ್ತಿದೆ. ರತ್ನಮಾಲಾ ಕೋಮಾಗೆ (Coma) ಹೋಗಿದ್ದಾರೆ. ಸದ್ಯ ರತ್ನಮಾಲಾ ಎಚ್ಚರಗೊಂಡಿದ್ದು, ಹರ್ಷನನ್ನು (Harsha) ನೋಡಬೇಕು ಎಂದು ಪರದಾಡುತ್ತಿದ್ದಾಳೆ


    ಅಮ್ಮಮ್ಮ ಮಾಡಿದ ವಿಲ್‍ನಿಂದ ಜಗಳ
    ರತ್ನಮಾಲಾ ಅವರು ಭುವಿ ಹೆಸರಿಗೆ ಎಲ್ಲಾ ಆಸ್ತಿಯನ್ನು ಬರೆದಿರುವುದು ಮನೆಯಲ್ಲಿ ಗೊತ್ತಾಗಿದೆ. ಆ ವಿಷ್ಯ ಗೊತ್ತಾಗಿ ಜಗಳ ನಡೆಯುತ್ತಿದೆ. ಸಾನಿಯಾ ಈ ಮನೆಯಲ್ಲಿ ನನ್ನ ಬಿಟ್ರೆ, ಇನ್ಯಾರು ಅಧಿಕಾರ ನಡೆಸೋದು ಇರೋರು ಅಂತಾಳೆ. ಅದಕ್ಕೆ ಭುವಿ ಅವರಿಗೆ ಹುಷಾರಿಲ್ಲ, ಆಮೇಲೆ ಮಾತನಾಡೋಣ. ನಾನು ಯಾರಿಗೂ ಮೋಸ ಮಾಡಲ್ಲ. ಅವರಿಗಿಂತ ಹೆಚ್ಚಾಗಿ ಮಾಡ್ತೇನೆ ಎನ್ನುತ್ತಾಳೆ. ಅಷ್ಟರಲ್ಲಿ ದೇವ್ ಹೆಂಡ್ತಿ ತಾಪ್ಸಿ, ಅತ್ತೆ ಮಾಡಿರೋದು ನೋಡಿದ್ದೀವೆ ಎಂದು ಹೇಳಿ ಇಬ್ಬರು ಕೋಪ ಮಾಡಿಕೊಂಡು ಹೋಗ್ತಾರೆ.


    ಸುದರ್ಶನ್‍ಗೂ ಸಿಟ್ಟು
    ಹರ್ಷನ ಚಿಕ್ಕಪ್ಪ ಸುದರ್ಶನ್, ಮೊದಲಿನಿಂದಲೂ ಆಸ್ತಿ ಮೇಲೆ ಕಣ್ಣಿಟ್ಟಿದ್ದಾನೆ. ನಾನೇ ಐಡಿಯಾ ಕೊಟ್ಟ ಬುಸಿನೆಸ್. ನನಗೆ ಮುಕ್ಕಾಲು ಆಸ್ತಿ ಬೇಕು ಎಂದು ಕೇಳಿದ್ದ. ಈಗ ಎಲ್ಲಾ ಭುವಿ ಹೆಸರಿಗೆ ಹೋಗಿರೋದನ್ನು ನೋಡಿ ಅವನು ಕೋಪಗೊಂಡು ಹೋಗಿದ್ದಾನೆ. ಭುವಿಗೆ, ರತ್ನಮಾಲಾಗೆ ಚಿಂತೆ ಹೆಚ್ಚಾಗಿದೆ.


    ಇದನ್ನೂ ಓದಿ: Olavina Nildana: ತಾರಿಣಿ ಅಂದ್ರೆ ತುಂಬಾ ಇಷ್ಟ! ಮನೆಮಂದಿ ಮುಂದೆ ಲವ್ ರಿವೀಲ್ ಮಾಡಿದ ಸಿದ್ಧಾಂತ್! 


    ಹರ್ಷ ಕೂಡ ಮೌನಿ
    ಅಮ್ಮಮ್ಮ ತನ್ನ ಹೆಸರಿಗೆ ಬಿಟ್ಟು, ಭುವಿ ಹೆಸರಿಗೆ ಪೂರ್ತಿ ಆಸ್ತಿ ಬರೆದಿದ್ದಾರೆ ಎನ್ನುವುದನ್ನು ಕೇಳಿ ಹರ್ಷ ಮೌನವಾಗಿದ್ದಾನೆ. ಏನೂ ಮಾತನಾಡದೇ ಸುಮ್ಮನೇ ನಿಂತಿದ್ದಾನೆ. ಭುವಿ ಹತ್ತಿರ ಹೋದ್ರೆ, ಕೋಣೆಗೆ ಹೋಗಿದ್ದಾನೆ. ಹಿಂದೆಯೇ ಹೋದ ಅಮ್ಮಮ್ಮ, ಇದೆಲ್ಲಾ ನಿಭಾಯಿಸಲು ಆಗೋದು ಭುವಿಗೆ ಮಾತ್ರ. ಅವಳ ಜೊತೆ ನೀನು ನಿಂತು ಧೈರ್ಯ ಹೇಳಬೇಕು ಎಂದಿದ್ದಾಳೆ. ಹರ್ಷ ಏನೂ ಮಾತನಾಡದೇ ಕೋಣೆ ಬಾಗಿಲು ಹಾಕಿಕೊಂಡಿದ್ದಾನೆ. ಆಗ ರತ್ನಮಾಲಾ ಅವರಿಗೆ ಎಚ್ಚರ ಆಗುತ್ತೆ.


    Colors Kannada kannadathi serial Rathmala bad dream about property she shocked
    ಹರ್ಷ


    ಇದು ನಿಜವಲ್ಲ, ಕನಸು
    ಮನೆಯಲ್ಲಿ ಆಸ್ತಿ ವಿಚಾರ ಗೊತ್ತಾಗಿರೋದು ನಿಜವಲ್ಲ. ಅದು ರತ್ನಮಾಲಾ ಅವರು ಕಂಡ ಕನಸು. ಅದು ನಿಜವಾದ್ರೆ ಭುವಿಯ ವಿರುದ್ಧ ಎಲ್ಲಾ ತಿರುಗಿ ಬೀಳ್ತಾರೆ ಎಂದು ಭಯಗೊಂಡು, ಆಸ್ಪತ್ರೆಯಲ್ಲಿ ಹರ್ಷ, ಹರ್ಷನ ಜೊತೆ ಮಾತನಾಡಬೇಕು ಎನ್ನುತ್ತಿದ್ದಾಳೆ. ಹರ್ಷನಿಗೆ ನಾನು ಆಸ್ತಿ ಬರೆದ ವಿಚಾರ ಅರ್ಥ ಮಾಡಿಸಬೇಕು ಎನ್ನುತ್ತಿದ್ದಾಳೆ.


    ಇದನ್ನೂ ಓದಿ: Gaalipata 2: ಟಿವಿಯಲ್ಲಿ ಹಾರಾಡಲು ಗಾಳಿಪಟ 2 ರೆಡಿ, ಜೀ ಕನ್ನಡದಲ್ಲಿ ಸಿನಿಮಾ! 


    ವರುಗೆ ವಿಲ್ ವಿಚಾರ ಗೊತ್ತಾಯ್ತಾ?
    ವರು ಸಾನಿಯಾ ಕೊಟ್ಟ ಪತ್ರಕ್ಕೆ ಸಹಿ ಮಾಡಿಸಿಕೊಳ್ಳೋಣ ಎಂದು ಐಸಿಯುಗೆ ಹೋಗಿರುತ್ತಾಳೆ. ಆಗ ಏನೇನೋ ಮಾತನಾಡುತ್ತಾ, ರತ್ನಮಾಲಾ ಅವರ ಮೂಗಿಗೆ ಹಾಕಿದ್ದ ಆಕ್ಸಿಜನ್ ತೆಗೆದು ಬಿಡ್ತಾಳೆ. ಆಗ ಅಮ್ಮಮ್ಮನಿಗೆ ಎಚ್ಚರ ಆಗುತ್ತೆ. ಆಗ ವಿಲ್ ವಿಚಾರದ ಕನಸು ಅರಿವಿಗೆ ಬಂದು ಹರ್ಷನ ಬಳಿ ಮಾತನಾಡಬೇಕು ಎಂದು ಒದ್ದಾಡುತ್ತಿದ್ದಾಳೆ.


    Colors Kannada kannadathi serial Rathmala bad dream about property she shocked
    ಸಾನಿಯಾ


    ವಿಲ್ ವಿಚಾರ ನಿಜವಾಗಿಯೂ ತಿಳಿದ್ರೆ, ಮನೆಯಲ್ಲಿ ಗಲಾಟೆ ಆಗೋದು ಗ್ಯಾರಂಟಿ. ಇದನ್ನು ಅಮ್ಮಮ್ಮ ಹೇಗೆ ಎಲ್ಲರ ಬಳಿ ಹೇಳ್ತಾಳೆ ಅಂತ ನೋಡಬೇಕು. ಮುಂದೇನಾಗುತ್ತೆ ಅಂತ ನೋಡೋಕೆ ಕನ್ನಡತಿ ಸೀರಿಯಲ್ ನೋಡಬೇಕು.

    Published by:Savitha Savitha
    First published: