• Home
  • »
  • News
  • »
  • entertainment
  • »
  • Kannadathi: ಅಮ್ಮಮ್ಮನಿಲ್ಲದೇ ಅನಾಥನಾದ ಹರ್ಷ, ರತ್ನಮಾಲಾ ಪಾತ್ರ ಇರಬೇಕಿತ್ತು ಎಂದ ಅಭಿಮಾನಿಗಳು!

Kannadathi: ಅಮ್ಮಮ್ಮನಿಲ್ಲದೇ ಅನಾಥನಾದ ಹರ್ಷ, ರತ್ನಮಾಲಾ ಪಾತ್ರ ಇರಬೇಕಿತ್ತು ಎಂದ ಅಭಿಮಾನಿಗಳು!

ಅಮ್ಮಮ್ಮನಿಲ್ಲದೇ ಅನಾಥನಾದ ಹರ್ಷ

ಅಮ್ಮಮ್ಮನಿಲ್ಲದೇ ಅನಾಥನಾದ ಹರ್ಷ

ಪ್ರೀತಿಯ ಅಮ್ಮಮ್ಮ ಇನ್ನಿಲ್ಲ ಎನ್ನುವುದನ್ನು ಕೇಳಿ ಮನೆಯವರೆಲ್ಲಾ ಕಣ್ಣೀರು ಹಾಕಿದ್ದಾರೆ. ಮನೆ ತನಕ ಬಂದ ರತ್ನಮಾಲಾ ಅವರು, ಮನೆ ಒಳಗೆ ಬರಲಿಲ್ಲ ಎಂದು ಅಳುತ್ತಿದ್ದಾರೆ.

  • News18 Kannada
  • Last Updated :
  • Karnataka, India
  • Share this:

    ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ (Kannadathi) ಧಾರಾವಾಹಿ (Serial) ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್‍ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ. ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ (Super Hit) ಆಗಿ ಓಡುತ್ತಿದೆ. ಧಾರಾವಾಹಿಯಲ್ಲಿ ಅಮ್ಮಮ್ಮನ ಅಧ್ಯಾಯ ಮುಕ್ತಾಯವಾಗಿದೆ. ರತ್ನಮಾಲಾ ಇಲ್ಲದೇ ಹರ್ಷ ಅನಾಥನಾಗಿದ್ದಾನೆ. ರತ್ನಮಾಲಾ ಪಾತ್ರ ಇರಬೇಕಿತ್ತು ಎಂದ ಅಭಿಮಾನಿಗಳು (Fans) ಹೇಳಿದ್ದಾರೆ.


    ಪ್ರೀತಿಯ ಅಮ್ಮಮ್ಮ ಇನ್ನಿಲ್ಲ
    ಆಸ್ಪತ್ರೆಯಲ್ಲಿದ್ದ ಅಮ್ಮಮ್ಮನನ್ನು ಹರ್ಷ ಮತ್ತು ಭುವಿ ಮನೆ ಬಳಿ ಕರೆದುಕೊಂಡು ಬರುತ್ತಾರೆ. ರತ್ನಮಾಲಾ ಅವರು ಬಂದು ಮನೆಯರನ್ನು ನೋಡುವಾಗ ಭುವಿ ಕೈ ಹಿಡಿದಿದ್ದರು. ತಕ್ಷಣ ಭುವಿ ಕೈ ಬಿಟ್ಟು ಬಿಡುತ್ತಾರೆ. ಕಣ್ಣು ಮುಚ್ಚುತ್ತಾರೆ.


    ಅದಕ್ಕೆ ಭುವಿ ಗಾಬರಿಗೊಂಡು, ರತ್ನಮ್ಮ ಇದ್ದಕ್ಕಿದ್ದ ಹಾಗೇ ನನ್ನ ಕೈ ಬಿಟ್ರು ಎಂದು ಹೇಳುತ್ತಾಳೆ. ಹರ್ಷ ಮಲಗಿಕೊಂಡ್ರು ಎನ್ನಿಸುತ್ತೆ ಎಂದು ಹೇಳ್ತಾನೆ. ದೇವ್ ಬಂದು ಚೆಕ್ ಮಾಡಿ ಗಾಬರಿ ಆಗುತ್ತಾನೆ. ದೊಡ್ಡಮ್ಮ ಇಲ್ಲ ಎಂದು ಹೇಳುತ್ತಾನೆ.


    ಮನೆಯವರೆಲ್ಲಾ ಕಣ್ಣೀರು
    ಪ್ರೀತಿಯ ಅಮ್ಮಮ್ಮ ಇನ್ನಿಲ್ಲ ಎನ್ನುವುದನ್ನು ಕೇಳಿ ಮನೆಯವರೆಲ್ಲಾ ಕಣ್ಣೀರು ಹಾಕಿದ್ದಾರೆ. ಮನೆ ತನಕ ಬಂದ ರತ್ನಮಾಲಾ ಅವರು, ಮನೆ ಒಳಗೆ ಬರಲಿಲ್ಲ ಎಂದು ಅಳುತ್ತಿದ್ದಾರೆ. ಹರ್ಷ-ಭುವಿಗೆ ದಿಕ್ಕೇ ತೋಚದಂತಾಗಿದೆ. ದೊಡ್ಡಮ್ಮ ಇಲ್ಲ ಎನ್ನುವುದನ್ನು ಕೇಳಿ ಎಲ್ಲರೂ ಆಘಾತಕ್ಕೆ ಒಳಗಾಗಿದ್ದಾರೆ.


    ಇದನ್ನೂ ಓದಿ: BBK Season 09: ಬಿಗ್​ಬಾಸ್ ಮನೆಯಿಂದ ಸಾನ್ಯಾ ಅಯ್ಯರ್ ಔಟ್, ರೂಪೇಶ್ ಶೆಟ್ಟಿ ಕಣ್ಣೀರು! 


    ಅನಾಥನಾದ ಹರ್ಷ
    ಹರ್ಷನಿಗೆ ಎಲ್ಲರೂ ಇರಬಹುದು. ಆದ್ರೆ ಅಮ್ಮನ ಸ್ಥಾನ ತುಂಬಲು ಯಾರಿಗೂ ಆಗಲ್ಲ. ತಂದೆಯನ್ನು ಕಳೆದುಕೊಂಡಿದ್ದ ಹರ್ಷನನ್ನು ಅಮ್ಮಮ್ಮ ತುಂಬಾ ಚೆನ್ನಾಗಿ ಸಾಕಿದ್ದಳು. ಯಾವುದರ ಕೊರತೆ ಬರದಂತೆ ನೋಡಿಕೊಂಡಿದ್ದಳು. ಭುವಿಯಂತ ಒಳ್ಳೆ ಹುಡುಗಿಯನ್ನು ಮದುವೆ ಮಾಡಿದ್ದಳು. ಈಗ ಅಮ್ಮಮ್ಮನಿಲ್ಲದ ಹರ್ಷನೆಗೆ ಅನಾಥ ಭಾವನೆ ಕಾಡುತ್ತಿದೆ.


    colors kannada serial, kannada serial, kannadathi serial, rathnamala is no more, ಕನ್ನಡತಿ ಧಾರಾವಾಹಿ, ಅಮ್ಮಮ್ಮನಿಲ್ಲದೇ ಅನಾಥನಾದ ಹರ್ಷ, ರತ್ನಮಾಲಾ ಪಾತ್ರ ಇರಬೇಕಿತ್ತು ಎಂದ ಅಭಿಮಾನಿಗಳು, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ಅನಾಥನಾದ ಹರ್ಷ


    ಸುಂದರ ಸಂಸಾರ ಬಿಟ್ಟು ಹೊರಟಳಾ?
    ರತ್ನಮಾಲಾ ಅವರು ಕಂಪನಿಯನ್ನು ಬೆಳೆಸುತ್ತಾ, ಜೊತೆಗೆ ಸಂಸಾರವನ್ನು ನಿಭಾಯಿಸಿಕೊಂಡು ಹೋಗ್ತಾ ಇದ್ರು. ಯಾವಾಗಲು ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತಿದ್ರು.


    ತಮ್ಮ ಸಂಸಾರದ ಜೊತೆ ಮೈದುನನ ಸಂಸಾರದ ಜವಾಬ್ದಾರಿಯನ್ನು ತೆಗೆದುಕೊಂಡಿದ್ರು. ಅವರ ಮಕ್ಕಳನ್ನು ತಮ್ಮ ಮಕ್ಕಳಂತೆ ಬೆಳೆಸಿದ್ದಾರೆ. ಅವರಿಗೂ ಅಷ್ಟೇ ದೊಡ್ಡಮ್ಮ ಎಂದ್ರೆ ಅಪಾರ ಗೌರವ, ಪ್ರೀತಿ. ಎಲ್ಲರನ್ನು ಸಮಾನಾಗಿ ಕಾಣ್ತಾರೆ ಎಂದು ವಿಶ್ವಾಸ ಇಟ್ಟುಕೊಂಡಿದ್ರು. ಆದ್ರೆ ಅವರು ಇಲ್ಲ ಎನ್ನುವುದನ್ನು ನಂಬಲು ಆಗ್ತಾ ಇಲ್ಲ.


    colors kannada serial, kannada serial, kannadathi serial, rathnamala is no more, ಕನ್ನಡತಿ ಧಾರಾವಾಹಿ, ಅಮ್ಮಮ್ಮನಿಲ್ಲದೇ ಅನಾಥನಾದ ಹರ್ಷ, ರತ್ನಮಾಲಾ ಪಾತ್ರ ಇರಬೇಕಿತ್ತು ಎಂದ ಅಭಿಮಾನಿಗಳು, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ರತ್ನಮಾಲಾ


    ರತ್ನಮಾಲಾ ಪಾತ್ರ ಇರಬೇಕಿತ್ತು ಎಂದು ಅಭಿಮಾನಿಗಳು
    ಕನ್ನಡತಿ ಧಾರಾವಾಹಿಯಲ್ಲಿ ರತ್ನಮಾಲಾ ಅವರ ಪಾತ್ರ ಮುಗಿಸಿದ್ದಕ್ಕೆ ಅಭಿಮಾನಿಗಳು ಬೇಸರಗೊಂಡಿದ್ದಾರೆ. ರತ್ನಮಾಲಾ ಅವರು ಇರಬೇಕಿತ್ತು ಎಂದು ಹೇಳಿದ್ದಾರೆ. ಅವರು ಎಲ್ಲರಿಗೂ ಆಸ್ತಿ ವಿಚಾರ ತಿಳಿಸಬೇಕಿತ್ತು ಎಂದಿದ್ದಾರೆ. ಸಾನಿಯಾ ಮಾಡಿದ್ದ ತಪ್ಪು ತಿಳಸಬೇಕಿತ್ತು ಎಂದು ಅಭಿಮಾನಿಗಳು ಹೇಳ್ತಾ ಇದ್ದಾರೆ.


    ಇದನ್ನೂ ಓದಿ: Ramya New Photos: ಟೆಡ್ಡಿ ಬೇರ್ ಹಿಡಿದು ಫೋಟೋಗೆ ಪೋಸ್ ನೀಡಿದ ಮೋಹಕತಾರೆ 


    ಅಮ್ಮಮ್ಮನಿಲ್ಲದ ಹರ್ಷ ಹೇಗಿರುತ್ತಾನೆ? ಭುವಿಗೆ ರತ್ನಮ್ಮನ ಸ್ಥಾನ ತುಂಬುವವರು ಯಾರು? ಆಸ್ತಿ ವಿಚಾರಕ್ಕೆ ಜಗಳ ಆಗುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ಕನ್ನಡತಿ ಸೀರಿಯಲ್ ನೋಡಬೇಕು.

    Published by:Savitha Savitha
    First published: