• Home
 • »
 • News
 • »
 • entertainment
 • »
 • Kannadathi: ಅಮ್ಮಮ್ಮನನ್ನು ಮಿಸ್ ಮಾಡಿಕೊಳ್ಳುತ್ತಿದೆ ಕನ್ನಡತಿ ತಂಡ! ಪಾತ್ರ ಮುಗಿಯುತ್ತೆ ಎಂದಾಗ ಸೆಟ್‌ನಲ್ಲಿ ಆಗಿದ್ದೇನು?

Kannadathi: ಅಮ್ಮಮ್ಮನನ್ನು ಮಿಸ್ ಮಾಡಿಕೊಳ್ಳುತ್ತಿದೆ ಕನ್ನಡತಿ ತಂಡ! ಪಾತ್ರ ಮುಗಿಯುತ್ತೆ ಎಂದಾಗ ಸೆಟ್‌ನಲ್ಲಿ ಆಗಿದ್ದೇನು?

ಅಮ್ಮಮ್ಮನ ಪಾತ್ರ ಮುಗಿಯುತ್ತೆ ಎಂದಾಗ ಸೀರಿಯಲ್ ಸೆಟ್ ನಲ್ಲಿ ಆಗಿದ್ದೇನು?

ಅಮ್ಮಮ್ಮನ ಪಾತ್ರ ಮುಗಿಯುತ್ತೆ ಎಂದಾಗ ಸೀರಿಯಲ್ ಸೆಟ್ ನಲ್ಲಿ ಆಗಿದ್ದೇನು?

ಭುವಿ, ಹರ್ಷನ ಪಾತ್ರದಷ್ಟೇ ಅಮ್ಮಮ್ಮನ ಪಾತ್ರವನ್ನೂ ಸಹ ಜನ ಪ್ರೀತಿಯಿಂದ ಸ್ವೀಕರಿಸಿದ್ದರು. "ನನ್ನನ್ನು ಒಂದು ಪಾತ್ರದಂತೆ ನೋಡದೇ, ತಮ್ಮ ಮನೆಯ ಒಬ್ಬ ಸದಸ್ಯೆಯಾಗಿ ನೋಡ್ತಾ ಇದ್ರು. ತುಂಬಾ ಪ್ರೀತಿ ತೋರಿಸಿದ್ದಾರೆ. ಎಲ್ಲಾರಿಗೂ ಧನ್ಯವಾದ" ಎಂದು ಚಿತ್ಕಳಾ ಬಿರಾದರ್ ಹೇಳಿದ್ದಾರೆ.

 • News18 Kannada
 • Last Updated :
 • Karnataka, India
 • Share this:

  ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ (Kannadathi) ಧಾರಾವಾಹಿ (Serial) ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್‍ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ. ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ (Super Hit) ಆಗಿ ಓಡುತ್ತಿದೆ. ಧಾರಾವಾಹಿಯಲ್ಲಿ ಅಮ್ಮಮ್ಮನ ಅಧ್ಯಾಯ ಮುಕ್ತಾಯವಾಗಿದೆ. ಈ ಸೀನ್ ತೆಗೆಯುವಾಗ ಸೀರಿಯಲ್ ಸೆಟ್ (Set) ನಲ್ಲಿ ಆಗಿದ್ದೇನು?


  ಸಾಯುವ ಪಾತ್ರ ಗೊತ್ತಾದಾಗ ಬೇಸರ
  ಕನ್ನಡತಿ ಧಾರಾವಾಹಿಯಲ್ಲಿ ಅಮ್ಮಮ್ಮ ಅಂದ್ರೆ, ರತ್ನಮಾಲಾ ಅವರ ಪಾತ್ರವು ಚೆನ್ನಾಗಿ ಮೂಡಿ ಬಂದಿತ್ತು. ಆ ಪಾತ್ರಕ್ಕೆ ಜೀವ ತುಂಬಿದ್ದರು ಚಿತ್ಕಳಾ ಬಿರಾದರ್. ಅವರಿಗೆ ತಮ್ಮ ಸಾವಿನ ಪಾತ್ರ ಬರುವು ಒಂದು ವಾರದ ಮುಂಚೆ ಮಾತ್ರ ಗೊತ್ತಾಗಿತ್ತಂತೆ. ನಾನು ಬೇಸರ ಆಗಿದ್ದೆ. ಎಲ್ಲರೂ ಸಹ ಅದನ್ನು ಕೇಳಿ, ನಿಜವಾಗ್ಲೂ ಶಾಕ್ ಆಗಿದ್ದರು.


  ನಮ್ಮ ರೈಟರ್ ತುಂಬಾನೇ ಬೇಸರ ಮಾಡಿಕೊಂಡಿದ್ರು
  ಜನ ಎಲ್ಲಾ ರತ್ನಮಾಲಾ ಪಾತ್ರ ಮುಗಿಸಿದ್ದಕ್ಕೆ ಬೇಸರಗೊಂಡಿದ್ದಾರೆ. ಎಲ್ಲರೂ ನಮ್ಮ ರೈಟರ್ ನ್ನು ಬೈಯ್ತಾ ಇದ್ದಾರೆ. ಆದ್ರೆ ಅವರು ಸಹ ಬೇಸರಗೊಂಡಿದ್ರು. ಈ ಪ್ರತಿಯೊಂದು ಸೀನ್ ಆಗುವಾಗ ನಮ್ಮ ಜೊತೆಗೆ ಇದ್ರು. ನನ್ನನ್ನು ಅಮ್ಮಮ್ಮ ಡೆಡ್ ಬಾಡಿ ಅಂತನೂ ಹೇಳಲು ಮುಜುಗರ ಪಟ್ಟುಕೊಳ್ತಾ ಇದ್ರು.


  ಇದನ್ನೂ ಓದಿ: Kannadathi: ಪತ್ರ ಬರೆದ ಹರ್ಷ, ಅಮ್ಮಮ್ಮ ಇಲ್ಲ ಅಂದ್ರೂ ಕಾಡುವ ನೆನಪು ಸಾವಿರ 


  ಹರ್ಷ ಅರ್ಧ ಗಂಟೆ ತಬ್ಬಿಕೊಂಡು ಬೇಸರ ಮಾಡಿಕೊಂಡಿದ್ನಂತೆ
  ಅಮ್ಮಮ್ಮನ ಸಾಯುವ ಪಾತ್ರ ಇದೆ ಎಂದು ಮೊದಲು ಕಿರಣ್ ರಾಜ್ ಗೆ ಗೊತ್ತಿರಲಿಲ್ವಂತೆ. ಅದನ್ನು ಕೇಳಿ ತುಂಬಾ ಬೇಸರ ಮಾಡಿಕೊಂಡಿದ್ನಂತೆ. ನಾನು ಅವತ್ತು ಶೂಟಿಂಗ್ ಹೋಗೋದು ಲೇಟ್ ಆಯ್ತು. ಅವನು ಕಾಲ್ ಮಾಡಿ ಬೇಗ ಬನ್ನಿ ಎಂದು ಹೇಳಿದ್ನಂತೆ. ಹೋದಾಗ ಸೀರಿಯಲ್ ಸೆಟ್ ನಲ್ಲಿ ಅರ್ಧಗಂಟೆ ತಬ್ಬಿಕೊಂಡ್ನಂತೆ. ನಮಗೆ ಪಾತ್ರಗಳು ಆ ರೀತಿ ಇತ್ತು. ಎಮೋಷನ್ ಇರುತ್ತಿತ್ತು ಎಂದು ಚಿತ್ಕಳಾ ಬಿರಾದರ್ ಹೇಳಿದ್ದಾರೆ.


  colors kannada serial, kannada serial, ammamma death, kannadathi serial, harsha mother death, real story of serial set, rathnamala funeral ceremony, ಕನ್ನಡತಿ ಧಾರಾವಾಹಿ, ಪ್ರೀತಿಯ ಅಮ್ಮಮ್ಮನ ಅಂತ್ಯಸಂಸ್ಕಾರ, ಅಮ್ಮಮ್ಮ ಇಲ್ಲ ಅಂದ್ರೂ ನೆನಪುಗಳು ಸಾವಿರಾರು, ಪವಾಡ ನಡೆಯಬೇಕಂತೆ!, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
  ಅಮ್ಮಮ್ಮ


  ವಿಲ್ ಓಪೆನ್ ಆಗಲು ಅಮ್ಮಮ್ಮ ಸಾಯಲೇ ಬೇಕಿತ್ತು
  ಎಷ್ಟೋ ಬಾರಿ ಚಿತ್ಕಳಾ ಬಿರಾದರ್ ಅವರೇ ರೈಟರ್ ಹತ್ತಿರ ಹೋಗಿ ಕೇಳಿದ್ರಂತೆ. ಈ ಪಾತ್ರ ಮುಗಿಸಲ್ವಾ ಅಂತ. ಯಾಕಂದ್ರೆ ವಿಲ್ ವಿಚಾರ ಓಪೆನ್ ಆಗಬೇಕು ಅಂದ್ರೆ, ಅಲ್ಲಿ ಅಮ್ಮಮ್ಮ ಪಾತ್ರ ಸಾಯಲೇ ಬೇಕಾಗಿತ್ತು. ಅದು ಧಾರಾವಾಹಿ ಆರಂಭದ ಪ್ರೋಮೋದಲ್ಲೇ ಇತ್ತು. ಅದರಂತೆ ಪಾತ್ರ ಮುಗಿದಿದೆ ಎಂದು ಚಿತ್ಕಳಾ ಬಿರಾದರ್ ತಮ್ಮ ಮನದ ಮಾತು ಹೇಳಿದ್ದಾರೆ.


  ಇದನ್ನೂ ಓದಿ: Actress Manasa Joshi: ಮಹಾಲಕ್ಷ್ಮಿ ಮನೆಗೆ ಬಂದ ಖುಷಿಯಲ್ಲಿ ಮಂಗಳಗೌರಿ ನಟಿ! ಹೆಮ್ಮೆ ಪಟ್ಟ ಪೋಷಕರು 


  ಮನೆಯಲ್ಲಿ ಶಾಂತಿ ಮಾಡಿಸಬೇಕಂತೆ
  ಅಮ್ಮಮ್ಮನ ಪಾತ್ರ ಮುಗಿದಿದ್ದು ಓಕೆ, ಆದ್ರೆ ಸಾವಿನ ದೃಶ್ಯವನ್ನು ಹೆಚ್ಚು ತೋರಿಸಿದ್ದು ಜನರಿಗೆ ಇಷ್ಟವಾಗಿಲ್ಲ. ಅಲ್ಲದೇ ಚಿತ್ಕಳಾ ಬಿರಾದರ್ ಅವರಿಗೆ, ಈ ರೀತಿಯ ಸೀನ್ ಗೆ ಏಕೆ ಒಪ್ಪಿಕೊಂಡ್ರಿ? ಮನೆಯಲ್ಲಿ ಶಾಂತಿ ಮಾಡಿಸಿ, ಹೋಮ ಮಾಡಿಸಿ, ದೇವಸ್ಥಾನಕ್ಕೆ ಹೋಗಿ ಬನ್ನಿ ಎಂದು ಹೇಳುತ್ತಿದ್ದಾರಂತೆ. ನನಗೆ ಗೊತ್ತಿದ್ದೇ ನಾನು ಇದನ್ನು ಪಾತ್ರಕ್ಕಾಗಿ ಮಾಡಿದೆ ಎಂದು ಹೇಳಿದ್ದಾರೆ.


  colors kannada serial, kannada serial, ammamma death, kannadathi serial, harsha mother death, real story of serial set, rathnamala funeral ceremony, ಕನ್ನಡತಿ ಧಾರಾವಾಹಿ, ಪ್ರೀತಿಯ ಅಮ್ಮಮ್ಮನ ಅಂತ್ಯಸಂಸ್ಕಾರ, ಅಮ್ಮಮ್ಮ ಇಲ್ಲ ಅಂದ್ರೂ ನೆನಪುಗಳು ಸಾವಿರಾರು, ಪವಾಡ ನಡೆಯಬೇಕಂತೆ!, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
  ಅಮ್ಮಮ್ಮ


  ಜನಕ್ಕೆ ಧನ್ಯವಾದ
  ಭುವಿ, ಹರ್ಷನ ಪಾತ್ರದಷ್ಟೆ, ಅಮ್ಮಮ್ಮನ ಪಾತ್ರವನ್ನು ಜನ ಸ್ವೀಕರಿಸಿದ್ರು. ನನ್ನನ್ನು ಒಂದು ಪಾತ್ರದಂತೆ ನೋಡದೇ, ತಮ್ಮ ಮನೆಯ ಒಬ್ಬ ಸದಸ್ಯೆಯಾಗಿ ನೋಡ್ತಾ ಇದ್ರು. ತುಂಬಾ ಪ್ರೀತಿ ತೋರಿಸಿದ್ದಾರೆ. ಎಲ್ಲಾರಿಗೂ ಧನ್ಯವಾದ ಎಂದು ಚಿತ್ಕಳಾ ಬಿರಾದರ್ ಹೇಳಿದ್ದಾರೆ. ಧಾರಾವಾಹಿ ಮಿಸ್ ಮಾಡ್ದೇ ನೋಡಿ ಎಂದಿದ್ದಾರೆ.

  Published by:Savitha Savitha
  First published: