• Home
  • »
  • News
  • »
  • entertainment
  • »
  • Kannadathi: ಪತ್ರ ಬರೆದ ಹರ್ಷ, ಅಮ್ಮಮ್ಮ ಇಲ್ಲ ಅಂದ್ರೂ ಕಾಡುವ ನೆನಪು ಸಾವಿರ

Kannadathi: ಪತ್ರ ಬರೆದ ಹರ್ಷ, ಅಮ್ಮಮ್ಮ ಇಲ್ಲ ಅಂದ್ರೂ ಕಾಡುವ ನೆನಪು ಸಾವಿರ

ಅಮ್ಮಮ್ಮ ಇಲ್ಲ ಅಂದ್ರೂ ನೆನಪುಗಳು ಸಾವಿರಾರು

ಅಮ್ಮಮ್ಮ ಇಲ್ಲ ಅಂದ್ರೂ ನೆನಪುಗಳು ಸಾವಿರಾರು

ಅಮ್ಮಮ್ಮ ಇಲ್ಲ ಅಂದ್ರೂ ಅವರ ನೆನಪುಗಳು ಸಾವಿರ. ಹರ್ಷ ಅವರ ಅಂತ್ಯಸಂಸ್ಕಾರದ ವೇಳೆ, ಬೆಂಕಿ ಇಡುವ ಮೊದಲು, ರತ್ನಮಾಲಾ ಅವರ ಜೊತೆಗೆ ಕಳೆದ ಎಲ್ಲಾ ನೆನಪುಗಳನ್ನು ನೆನಪಿಸಿಕೊಳ್ಳುತ್ತಿದ್ದಾನೆ.

  • News18 Kannada
  • Last Updated :
  • Karnataka, India
  • Share this:

    ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ (Kannadathi) ಧಾರಾವಾಹಿ (Serial) ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್‍ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ. ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡುತ್ತಿದೆ. ಧಾರಾವಾಹಿಯಲ್ಲಿ ಅಮ್ಮಮ್ಮನ ಅಧ್ಯಾಯ ಮುಕ್ತಾಯವಾಗಿದೆ. ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಹರ್ಷನ (Harsha) ಮನಸ್ಸು ಕಲ್ಲಾಗಿದೆ. ಅಮ್ಮಮ್ಮ ಬದುಕಿ (Alive) ಬರಲಿ ಎಂದು ಬೇಡಿಕೊಳ್ಳುತ್ತಿದ್ದಾನೆ.


    ರತ್ನಮಾಲಾ ಇನ್ನು ನೆನಪು ಮಾತ್ರ
    ಕನ್ನಡತಿ ಧಾರಾವಾಹಿಯಲ್ಲಿ ಅಮ್ಮಮ್ಮ ಅಂದ್ರೆ, ರತ್ನಮಾಲಾ ಅವರ ಪಾತ್ರವು ಚೆನ್ನಾಗಿ ಮೂಡಿ ಬಂದಿತ್ತು. ಆ ಪಾತ್ರಕ್ಕೆ ಜೀವ ತುಂಬಿದ್ದರು.ಪ್ರೀತಿಯ ಅಮ್ಮಮ್ಮ ಇನ್ನಿಲ್ಲ ಎನ್ನುವುದನ್ನು ಕೇಳಿ ಮನೆಯವರೆಲ್ಲಾ ಕಣ್ಣೀರು ಹಾಕಿದ್ದಾರೆ. ದೊಡ್ಡಮ್ಮ ಇಲ್ಲ ಎನ್ನುವುದನ್ನು ಕೇಳಿ ಎಲ್ಲರೂ ಆಘಾತಕ್ಕೆ ಒಳಗಾಗಿದ್ದಾರೆ. ಹರ್ಷ, ಅಮ್ಮಮ್ಮ ಇಲ್ಲ ಎನ್ನುವುದನ್ನು ಒಪ್ಪುತ್ತಲೇ ಇಲ್ಲ. ಎಲ್ಲರೂ ಮೌನವಾಗಿದ್ದಾರೆ. ಆಧಾರ ಸ್ತಂಭವಾಗಿದ್ದ ರತ್ನಮಾಲಾ ಕಳೆದುಕೊಂಡು ಕಂಗಾಲಾಗಿದ್ದಾರೆ.


    ಅಂತ್ಯಸಂಸ್ಕಾರದ ವೇಳೆ ಪಾವಡ ನಡೆಯಲಿ
    ಹರ್ಷನೇ ಮುಂದೆ ನಿಂತು ತನ್ನ ಅಮ್ಮಮ್ಮನ ಅಂತ್ಯಸಂಸ್ಕಾರ ಮಾಡುತ್ತಿದ್ದಾನೆ. ಆದ್ರೆ ಅವನು ದೇವರ ಬಳಿ ಬೇಡಿಕೊಳ್ಳುತ್ತಿದ್ದಾನೆ. ಏನಾದ್ರೂ ಪವಾಡ ಮಾಡಿ ನನ್ನ ಅಮ್ಮನನ್ನು ಬದುಕಿಸಿಕೊಂಡು ದೇವರೇ ಎಂದು. ಅಮ್ಮಮ್ಮ ಇನ್ನು ಬರುವುದೇ ಇಲ್ವಾ ಎಂದು ಆತಂಕಗೊಂಡಿದ್ದಾನೆ. ಅವರ ಸಾವನ್ನು ಒಪ್ಪಲು ಆಗುತ್ತಾ ಇಲ್ಲ ಹರ್ಷನಿಗೆ.


    ಅಮ್ಮಮ್ಮನ ಸಾವಿರ ನೆನಪುಗಳು
    ಅಮ್ಮಮ್ಮ ಇಲ್ಲ ಅಂದ್ರೂ ಅವರ ನೆನಪುಗಳು ಸಾವಿರ. ಹರ್ಷ ಅವರ ಅಂತ್ಯಸಂಸ್ಕಾರದ ವೇಳೆ, ಬೆಂಕಿ ಇಡುವ ಮೊದಲು, ರತ್ನಮಾಲಾ ಅವರ ಜೊತೆಗೆ ಕಳೆದ ಎಲ್ಲಾ ನೆನಪುಗಳನ್ನು ನೆನಪಿಸಿಕೊಳ್ಳುತ್ತಿದ್ದಾನೆ. ಅವರ ಜೊತೆ ಯಾವಾಗಲೂ ಜಗಳ ಆಡ್ತಾ ಇದ್ದೆ ಈಗ ಅವರೇ ಇಲ್ಲ ಎಂದು ಬೇಸರ ಮಾಡಿಕೊಂಡಿದ್ದಾನೆ.


    ಇದನ್ನೂ ಓದಿ: Meghana Raj: ಥೈಲ್ಯಾಂಡ್​ನಲ್ಲಿ ನಟಿ ಮೇಘನಾ ರಾಜ್! ಆಪ್ತರೊಂದಿಗೆ ವಿದೇಶಿ ಪ್ರವಾಸ 


    ಅಮ್ಮಮ್ಮನಿಗೆ ಹರ್ಷನ ಪತ್ರ


    colors kannada serial, kannada serial, kannadathi serial, harsha mother death, harsh remembering old memories, rathnamala funeral ceremony, ಕನ್ನಡತಿ ಧಾರಾವಾಹಿ, ಪ್ರೀತಿಯ ಅಮ್ಮಮ್ಮನ ಅಂತ್ಯಸಂಸ್ಕಾರ, ಅಮ್ಮಮ್ಮ ಇಲ್ಲ ಅಂದ್ರೂ ನೆನಪುಗಳು ಸಾವಿರಾರು, ಪವಾಡ ನಡೆಯಬೇಕಂತೆ!, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ಹರ್ಷನ ಪತ್ರ


    ಹರ್ಷನ ಬಳಿ ವಿಲ್ ಬಗ್ಗೆ ಹೇಳಲು ವರು ರೆಡಿ
    ವರೂಧಿನಿಗೆ ಮೊದಲಿನಿಂದಲೂ ಹರ್ಷನ ಮೇಲೆ ಕಣ್ಣು. ಅವನ್ನು ಹೀರೋ ಎಂದುಕೊಂಡು ತುಂಬಾ ಪ್ರೀತಿ ಮಾಡ್ತಾ ಇದ್ಲು. ಆದ್ರೆ ಅವರು ಭುವಿಯನ್ನು ಪ್ರೀತಿಸಿ ಮದುವೆ ಆಗುತ್ತಾನೆ. ಅದಕ್ಕೆ ಇಬ್ಬರನ್ನು ದೂರ ಮಾಡಲು ವರು, ಹರ್ಷನ ಮುಂದೆ ವಿಲ್ ವಿಚಾರ ಹೇಳಲು ರೆಡಿಯಾಗಿದ್ದಾಳೆ. ಆಸ್ತಿ ವಿಚಾರ ಮುಂದಿಟ್ಟುಕೊಂಡು ಇಬ್ಬರನ್ನು ದೂರ ಮಾಡೋ ಪ್ಲ್ಯಾನ್ ಮಾಡ್ತಾ ಇದ್ದಾಳೆ.


    ಸಾನಿಯಾಗೆ ಹೆಚ್ಚಾದ ಅನುಮಾನ
    ರತ್ನಮಾಲಾ ಸಾಯುವ ಮೊದಲು ವರು ಬಳಿ ಏನೋ ಹೇಳಿದ್ದಾರೆ ಎಂದು ಸಾನಿಯಾಗೆ ಗೊತ್ತಾಗಿದೆ. ಅದು ಏನು ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡ್ತಾ ಇದ್ದಾಳೆ. ವರು ಬಳಿ ಏನೆಂದು ಕೇಳುತ್ತಿದ್ದಾಳೆ. ಆದ್ರೆ ವರು ಮಾತ್ರ ಏನೂ ಬಾಯಿ ಬಿಡುತ್ತಿಲ್ಲ. ಅದಕ್ಕೆ ಸಾನಿಯಾ ಏನ್ ಆಗಿರಬಹುದು ಎಂದು ಚಿಂತೆ ಮಾಡುತ್ತಾ ಇದ್ದಾಳೆ.


    colors kannada serial, kannada serial, kannadathi serial, harsha mother death, harsh remembering old memories, rathnamala funeral ceremony, ಕನ್ನಡತಿ ಧಾರಾವಾಹಿ, ಪ್ರೀತಿಯ ಅಮ್ಮಮ್ಮನ ಅಂತ್ಯಸಂಸ್ಕಾರ, ಅಮ್ಮಮ್ಮ ಇಲ್ಲ ಅಂದ್ರೂ ನೆನಪುಗಳು ಸಾವಿರಾರು, ಪವಾಡ ನಡೆಯಬೇಕಂತೆ!, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ಸಾನಿಯಾ


    ಅಮ್ಮಮ್ಮ ಇಲ್ಲದೇ ರತ್ನಮಾಲಾ ಕುಟುಂಬ ಹೇಗೆ ನಡೆಯುತ್ತೆ ಅನ್ನೋದೇ ದೊಡ್ಡ ಪ್ರಶ್ನೆ. ಮತ್ತೆ ಎಲ್ಲರೂ ತಕರಾರು ತೆಗೆಯಬಹುದು. ಮುಂದೇನಾಗುತ್ತೆ ಅಂತ ನೋಡೋಕೆ ಕನ್ನಡತಿ ಧಾರಾವಾಹಿ ನೋಡಬೇಕು.

    Published by:Savitha Savitha
    First published: