ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ (Kannadathi) ಸೀರಿಯಲ್ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್ ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ, ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡ್ತಿದೆ. ಅಮ್ಮಮ್ಮ ರೀತಿ ಅಧಿಕಾರ ನಡೆಸಬೇಕು ಎಂದು ಭುವಿ ಅಂದುಕೊಂಡಿದ್ದಾಳೆ. ಭುವಿ-ಹರ್ಷನ ಮಧ್ಯೆ ಬರ್ತಿರೋ ವರುಗೆ ಒಬ್ಬ ಹೀರೋ ಎಂಟ್ರಿ ಆಗ್ತಿದೆ ಧಾರಾವಾಹಿಯಲ್ಲಿ.
ಹರ್ಷ ಅಂದ್ರೆ ವರುಗೆ ಇಷ್ಟ
ಧಾರಾವಾಹಿ ಶುರುವಾದಾಗಿನಿಂದ ವರುಗೆ ಹೀರೋ ಅಂದ್ರೇ ಹರ್ಷ ಅಂತ. ಅವನನ್ನು ಹುಚ್ಚಿ ತರ ಪ್ರೀತಿ ಮಾಡ್ತಾ ಇದ್ಲು. ಅವನನ್ನೇ ಮದುವೆ ಆಗಬೇಕು ಎಂದುಕೊಂಡಿದ್ಲು. ಆದ್ರೆ ಹರ್ಷ ಭುವಿಯನ್ನು ಪ್ರೀತಿಸಿ ಮದುವೆ ಆಗ್ತಾನೆ ಅದಕ್ಕೆ ವರುಗೆ ವಿಪರೀತ ಕೋಪ, ಅಸಹನೆ ಎಲ್ಲವೂ ಇದೆ. ಹೀರೋ ನನಗೆ ಬೇಕು ಅಂತಿದ್ದಾಳೆ.
ಡಿವೋರ್ಸ್ ಪ್ಲ್ಯಾನ್ ಮಾಡಿರುವ ಸೈಕೋ
ವರುಧಿನಿ, ಹರ್ಷ ಮತ್ತು ಭುವಿಯನ್ನು ದೂರ ಮಾಡಲು ಡಿವೋರ್ಸ್ ಪ್ಲ್ಯಾನ್ ಮಾಡಿದ್ದಾಳೆ. ಭುವಿಯಿಂದ ಉಪಾಯದಿಂದ ಸಹಿ ತೆಗೆದುಕೊಂಡು, ಹರ್ಷನಿಗೆ ಕಳಿಸಿದ್ದಾಳೆ. ಮೊದಲು ಹರ್ಷ ಆತಂಕವಾಗಿದ್ದ, ನಂತರ ಇದು ವರು ಪ್ಲ್ಯಾನ್ ಎಂದು ಗೊತ್ತಾಯ್ತು. ಅದಕ್ಕೆ ವರುಗೆ ಬುದ್ಧಿ ಕಲಿಸಬೇಕು ಎಂದುಕೊಂಡಿದ್ದಾನೆ.
ಇದನ್ನೂ ಓದಿ: Aditi Sagar: ಕನಕ ಆಗಿ ಪ್ರೇಕ್ಷಕರ ಮನ ಗೆದ್ದ ಅರುಣ್ ಸಾಗರ್ ಪುತ್ರಿ! ಅದ್ಭುತ ಅಭಿನಯ ಎಂದ ಅಭಿಮಾನಿಗಳು
ಬಿಸಿಲಲ್ಲಿ ಹೀರೋಗೆ ಕಾದ ವರು
ವರು ಎಲ್ಲರಿಗೂ ತೊಂದರೆ ಕೊಡ್ತಾಳೆ. ಆಕೆಗೆ ನಾವು ತೊಂದರೆ ಕೊಡಬೇಕು ಎಂದು, ಬಿಂದು-ಸುಚಿ ಸೇರಿ ಒಂದು ಪ್ಲ್ಯಾನ್ ಮಾಡ್ತಾರೆ.
ಹರ್ಷನ ಮೊಬೈಲ್ ನಿಂದ ನಿಮ್ಮನ್ನು ಭೇಟಿಯಾಗಬೇಕು. ನಾನು ಹೇಳಿದ ಜಾಗಕ್ಕೆ ಬನ್ನಿ ಎಂದು ಮೆಸೇಜ್ ಕಳಿಸುತ್ತಾರೆ. ಅದನ್ನು ಹರ್ಷ ಕಳಿಸಿದ್ದು ಎಂದುಕೊಂಡು ವರು ತುಂಬಾ ಖುಷಿಯಾಗಿ, ಸೀರೆಯಲ್ಲಿ ಹರ್ಷನನ್ನು ಭೇಟಿಯಾಗಲು ಬಂದಿದ್ದಳು. ಆದ್ರೆ ಹರ್ಷ ಅಲ್ಲಿಗೆ ಬರಲ್ಲ.
ಸುಚಿ-ಬಿಂದುಗೆ ಹರ್ಷನ ಬೈಗುಳ
ವರು ಕಚೇರಿಗೆ ಬಂದಿಲ್ಲ. ಕಾಲ್ ಸಹ ಮಾಡಿಲ್ಲ ಎಂದು ಹರ್ಷ ಅಂದುಕೊಳ್ತಿದ್ದ, ಆಗ ಸುಚಿ ಮತ್ತು ಬಿಂದು ಮಾಡಿದ ಪ್ಲ್ಯಾನ್ ಗೊತ್ತಾಗುತ್ತೆ. ಅವರಿಬ್ಬರಿಗೂ ಬೈಯುತ್ತಾನೆ. ಸುಚಿ ಕೋಪ ಮಾಡಿಕೊಂಡು ಹೋಗುತ್ತಾಳೆ. ಹರ್ಷಣ್ಣ ನೀನು ಬೇಗ ಈ ವರು ಸಮಸ್ಯೆ ಬಗೆಹರಿಸು ಎಂದು ಸಿಟ್ಟಿನಿಂದ ಹೋಗುತ್ತಾಳೆ.
ವರುಗಾಗಿ ಹೊಸ ಹೀರೋ ಎಂಟ್ರಿ
ಹರ್ಷ ವರುಗೆ ಹೀರೋ ಸಿಗುವವರೆಗೂ, ನಮ್ಮ ಜೀವನಕ್ಕೆ ಆಕೆ ವಿಲನ್ ಆಗಿ ಇರ್ತಾಳೆ ಎಂದು ಕೊಳ್ತಾನೆ. ಆಗ ಧಾರಾವಾಹಿಗೆ ಹೊಸ ಹೀರೋ ಎಂಟ್ರಿ ಆಗಿದೆ. ಸದ್ಯ ಕಾರಿನಲ್ಲಿ ಬಂದಿದ್ದಾನೆ. ಯಾರು ಅನ್ನುವುದನ್ನು ಇವತ್ತಿನ ಸಂಚಿಕೆಯಲ್ಲಿ ತೋರಿಸಲಿದ್ದಾರೆ. ಹರ್ಷನಿಗೆ ವರು ಬೇರೆಯವರ ಜೊತೆ ಎಂಗೇಜ್ ಆದ್ರೆ ಸಾಕಪ್ಪ ಎನ್ನಿಸಿದೆ.
ಇದನ್ನೂ ಓದಿ: Actress Bhoomika: ಭಾಗ್ಯಲಕ್ಷ್ಮಿ ಧಾರಾವಾಹಿ ಲಕ್ಷ್ಮಿಯ ನಿಜವಾದ ಹೆಸರೇನು? ಡ್ಯಾನ್ಸ್ ನಿಂದ ನಟನೆಗೆ ಬಂದಿದ್ದು ಇದೇ ಕಾರಣಕ್ಕೆ!
ಧಾರಾವಾಹಿಗೆ ಬಂದ ಹೊಸ ಹೀರೋ ಯಾರು? ಧಾರಾವಾಹಿ ಮುಗಿಸಲು ಇದೊಂದು ಟರ್ನಿಂಗ್ ಪಾಯಿಂಟಾ? ಭುವಿ-ಹರ್ಷನ ಬಾಳು ನಿರಾಳ ಆಗುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ಕನ್ನಡತಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ