• Home
  • »
  • News
  • »
  • entertainment
  • »
  • Kannadathi: ಮಿಸ್ ಯೂ ಅಮ್ಮಮ್ಮ ಅಂತ ಕಿರಣ್ ರಾಜ್ ಪೋಸ್ಟ್, ರತ್ನಮಾಲಾ ಅಭಿನಯಕ್ಕೆ ಮೆಚ್ಚುಗೆ

Kannadathi: ಮಿಸ್ ಯೂ ಅಮ್ಮಮ್ಮ ಅಂತ ಕಿರಣ್ ರಾಜ್ ಪೋಸ್ಟ್, ರತ್ನಮಾಲಾ ಅಭಿನಯಕ್ಕೆ ಮೆಚ್ಚುಗೆ

ಕನ್ನಡತಿಯ ಹರ್ಷ ಮತ್ತು ರತ್ನಮಾಲಾ

ಕನ್ನಡತಿಯ ಹರ್ಷ ಮತ್ತು ರತ್ನಮಾಲಾ

"ನಿಮ್ಮ ಜೊತೆ ಕೆಲಸ ಮಾಡಿದ ಹೆಮ್ಮೆ ನನಗಿದೆ. ಅದೊಂದು ಭಾವನೆಗಳ ಪ್ರಯಾಣವಾಗಿತ್ತು. ನಿಮ್ಮ ಅಭಿನಯದ ಪ್ರಭಾವ ಪ್ರತಿಯೊಬ್ಬ ವೀಕ್ಷಕನ ಕಣ್ಣಿನಲ್ಲಿ ಕಾಣಿಸುತ್ತಿತ್ತು" ಹೀಗಂತ ಕಿರಣ್ ರಾಜ್ ಅಲಿಯಾಸ್ ಹರ್ಷ ಪೋಸ್ಟ್ ಮಾಡಿದ್ದಾರೆ.

  • News18 Kannada
  • Last Updated :
  • Karnataka, India
  • Share this:

    ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ (Serials) ಕನ್ನಡತಿ (Kannadathi) ಧಾರಾವಾಹಿ ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್‍ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ. ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡುತ್ತಿದೆ. ಧಾರಾವಾಹಿಯಲ್ಲಿ ಅಮ್ಮಮ್ಮನ ಅಧ್ಯಾಯ ಮುಕ್ತಾಯವಾಗಿದೆ. ಅದಕ್ಕೆ ಹರ್ಷ ಅಲಿಯಾಸ್ ಕಿರಣ್ ರಾಜ್ (Kiran Raj) ಅವರು ಭಾವನಾತ್ಮಕ ಪೋಸ್ಟ್ (Post) ಹಾಕಿಕೊಂಡಿದ್ದಾರೆ.


    ಪ್ರೀತಿಯ ಅಮ್ಮಮ್ಮ ಇನ್ನಿಲ್ಲ
    ಆಸ್ಪತ್ರೆಯಲ್ಲಿದ್ದ ಅಮ್ಮಮ್ಮನನ್ನು ಹರ್ಷ ಮತ್ತು ಭುವಿ ಮನೆ ಬಳಿ ಕರೆದುಕೊಂಡು ಬರುತ್ತಾರೆ. ರತ್ನಮಾಲಾ ಅವರು ಬಂದು ಮನೆಯರನ್ನು ನೋಡುವಾಗ ಭುವಿ ಕೈ ಹಿಡಿದಿದ್ದರು. ತಕ್ಷಣ ಭುವಿ ಕೈ ಬಿಟ್ಟು ಬಿಡುತ್ತಾರೆ. ಕಣ್ಣು ಮುಚ್ಚುತ್ತಾರೆ.


    ಹರ್ಷನ ಪೋಸ್ಟ್


    ಅದಕ್ಕೆ ಭುವಿ ಗಾಬರಿಗೊಂಡು, ರತ್ನಮ್ಮ ಇದ್ದಕ್ಕಿದ್ದ ಹಾಗೇ ನನ್ನ ಕೈ ಬಿಟ್ರು ಎಂದು ಹೇಳುತ್ತಾಳೆ. ಹರ್ಷ ಮಲಗಿಕೊಂಡ್ರು ಎನ್ನಿಸುತ್ತೆ ಎಂದು ಹೇಳ್ತಾನೆ. ದೇವ್ ಬಂದು ಚೆಕ್ ಮಾಡಿ ಗಾಬರಿ ಆಗುತ್ತಾನೆ. ದೊಡ್ಡಮ್ಮ ಇಲ್ಲ ಎಂದು ಹೇಳುತ್ತಾನೆ.


    ಮನೆಯವರೆಲ್ಲಾ ಕಣ್ಣೀರು
    ಪ್ರೀತಿಯ ಅಮ್ಮಮ್ಮ ಇನ್ನಿಲ್ಲ ಎನ್ನುವುದನ್ನು ಕೇಳಿ ಮನೆಯವರೆಲ್ಲಾ ಕಣ್ಣೀರು ಹಾಕಿದ್ದಾರೆ. ಮನೆ ತನಕ ಬಂದ ರತ್ನಮಾಲಾ ಅವರು, ಮನೆ ಒಳಗೆ ಬರಲಿಲ್ಲ ಎಂದು ಅಳುತ್ತಿದ್ದಾರೆ. ಹರ್ಷ-ಭುವಿಗೆ ದಿಕ್ಕೇ ತೋಚದಂತಾಗಿದೆ. ದೊಡ್ಡಮ್ಮ ಇಲ್ಲ ಎನ್ನುವುದನ್ನು ಕೇಳಿ ಎಲ್ಲರೂ ಆಘಾತಕ್ಕೆ ಒಳಗಾಗಿದ್ದಾರೆ.


    ಇದನ್ನೂ ಓದಿ: Roopesh Shetty: ನಾನು ಗಡಿನಾಡು ಕನ್ನಡಿಗ ಎಂದಿದ್ದ ರೂಪೇಶ್ ಶೆಟ್ಟಿ ಕುಟುಂಬಕ್ಕೆ ಬೆದರಿಕೆ; ಮಂಗಳೂರಿನಲ್ಲಿ ಕೇಸ್ ದಾಖಲು 


    ಚಿತ್ಕಳಾ ಬಿರಾದಾರ ನಟನೆ ಅದ್ಭುತ
    ಕನ್ನಡತಿ ಧಾರಾವಾಹಿಯಲ್ಲಿ ರತ್ನಮಾಲಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದವರು ಚಿತ್ಕಳಾ ಬಿರಾದಾರ. ಈಗ ಅವರ ಪಾತ್ರ ಮಗಿದಿದೆ. ಅವರು ಪಾತ್ರವನ್ನು ತುಂಬಾ ಚೆನ್ನಾಗಿ ನಿರ್ವಹಿಸಿದ್ರು ಎಂದು ಅಭಿಮಾನಿಗಳು ಹೇಳಿದ್ದಾರೆ. ಹರ್ಷನು ಸಹ ಅಮ್ಮಮ್ಮನಿಲ್ಲದೇ ಅನಾಥ ಬಾವನೆ ಕಾಡುತ್ತಿದೆ.


    colors kannada serial, kannada serial, kannadathi serial, harsha mother in death, kiran raj post, ಕನ್ನಡತಿ ಧಾರಾವಾಹಿ, ಮಿಸ್ ಯು ಅಮ್ಮಮ್ಮ ಎಂದು ಪೋಸ್ಟ್ ಹಾಕಿಕೊಂಡ ಕಿರಣ್ ರಾಜ್, ರತ್ನಮಾಲಾ ಅಭಿನಯಕ್ಕೆ ಮೆಚ್ಚುಗೆ, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ರತ್ನಮಾಲಾ


    ಕಿರಣ್ ರಾಜ್ ಭಾವನಾತ್ಮಕ ಪೋಸ್ಟ್
    ಕನ್ನಡತಿ ಧಾರಾವಹಿಯಲ್ಲಿ ಇನ್ಮುಂದೆ ರತ್ನಮಾಲಾ ಅಂದ್ರೆ, ಚಿತ್ಕಳಾ ಬಿರಾದಾರ ಇರಲ್ಲ. ಅದಕ್ಕೆ ಕಿರಣ್ ರಾಜ್ ಅವರು ಭಾವನಾತ್ಮಕ ಪೋಸ್ಟ್ ಹಾಕಿಕೊಂಡಿದ್ದಾರೆ. 'ನಿಮ್ಮ ಜೊತೆ ಕೆಲಸ ಮಾಡಿದ ಹೆಮ್ಮೆ ನನಗಿದೆ. ಅದೊಂದು ಭಾವನೆಗಳ ಪ್ರಯಾಣವಾಗಿತ್ತು. ನಿಮ್ಮ ಅಭಿನಯದ ಪ್ರಭಾವ ಪ್ರತಿಯೊಬ್ಬ ವೀಕ್ಷಕನ ಕಣ್ಣಿನಲ್ಲಿ ಕಾಣಿಸುತ್ತಿತ್ತು. ನಿಮ್ಮ ಮುಂದಿನ ವೃತ್ತಿ ಹಾಗೂ ಜೀವನಕ್ಕೆ ಒಳ್ಳೆಯದಾಗಲಿ' ಎಂದು ಬರೆದುಕೊಂಡಿದ್ದಾರೆ.


    colors kannada serial, kannada serial, kannadathi serial, harsha mother in death, kiran raj post, ಕನ್ನಡತಿ ಧಾರಾವಾಹಿ, ಮಿಸ್ ಯು ಅಮ್ಮಮ್ಮ ಎಂದು ಪೋಸ್ಟ್ ಹಾಕಿಕೊಂಡ ಕಿರಣ್ ರಾಜ್, ರತ್ನಮಾಲಾ ಅಭಿನಯಕ್ಕೆ ಮೆಚ್ಚುಗೆ, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ಹರ್ಷ-ರತ್ನಮಾಲಾ


    ಚಿತ್ಕಳಾ ಬಿರಾದಾರ ಪ್ರತಿಕ್ರಿಯೆ
    ಕಿರಣ್ ರಾಜ್ ಪೋಸ್ಟ್ ಗೆ ಚಿತ್ಕಳಾ ಬಿರಾದಾರ ಪ್ರತಿಕ್ರಿಯೆ ನೀಡಿದ್ದಾರೆ. 'ಲವ್ ಯೂ ಮಗನೇ. ನೀನು ಯಾವತ್ತೂ ನನ್ನ ಮಗನಾಗಿಯೇ ಇರುತ್ತೀಯಾ. ನಿನ್ನ ಮೇಲೆ ನನ್ನ ಆಶೀರ್ವಾದ ಯಾವತ್ತೂ ಇರುತ್ತದೆ. ನನ್ನ ಮಗ ಹರ್ಷನೊಂದಿಗಿನ ಸೀನ್‍ಗಳನ್ನ ಕನ್ನಡತಿಯಲ್ಲಿ ನಾನು ತುಂಬಾ ಮಿಸ್ ಮಾಡುತ್ತೇನೆ' ಎಂದಿದ್ದಾರೆ.


    ಇದನ್ನೂ ಓದಿ: BBK Season 09: ದಿವ್ಯಾ ಫೇಕ್ ಎಂದ ರಾಜಣ್ಣ, ಕಣ್ಣೀರಿಟ್ಟ ಉರುಡುಗ! 


    ಕನ್ನಡತಿ ಸೀರಿಯಲ್‍ನಲ್ಲಿ ಎಮೋಷನಲ್ ಎಪಿಸೋಡ್ ಗಳು ನಡೆಯುತ್ತಿದ್ದು, ನೀವೂ ನೋಡಿ.

    Published by:Savitha Savitha
    First published: