ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ (Kannadathi) ಸೀರಿಯಲ್ (Serial) ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ, ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡ್ತಿದೆ. ಭುವಿ ಅಮ್ಮಮ್ಮನ ಜವಾಬ್ದಾರಿ ತೆಗೆದುಕೊಂಡಿದ್ದಾಳೆ. ಹರ್ಷನಿಗೆ ಈಗ ಸ್ವಲ್ಪ ನೆಮ್ಮದಿಯಾಗಿದೆ. ಆದ್ರೆ ಈ ಡಿವೋರ್ಸ್ (Divorce) ಪ್ಲ್ಯಾನ್ ತಲೆಯಲ್ಲಿ ಕೊರೀತಾ ಇದೆ. ಹರ್ಷನ 15 ದಿನ ಮಿಷನ್ ( 15 Days Mission ) ಅರ್ಥ ಏನು ಅಂತಿದ್ದಾರೆ ಅಭಿಮಾನಿಗಳು.
ನಾನೇ ಸೈನ್ ಮಾಡಿಸಿ ಕೊಟ್ಟೆ
ಹರ್ಷನ ಕೈಗೆ ಭುವಿಯ ಡಿವೋರ್ಸ್ ನೋಟಿಸ್ ಸಿಕ್ಕಿದೆ. ಆದ್ರೆ ಅದನ್ನು ಭುವಿ ಕಳಿಸಿಲ್ಲ. ಯಾರು ಕಳಿಸಿರಬಹುದು ಎಂದು ಯೋಚನೆ ಮಾಡಿದಾಗ, ಇದು ವರು ಕೆಲಸ ಎಂದು ಗೊತ್ತಾಗಿದೆ. ಮದುವೆ ನೋಂದಣಿ ಸಮಯದಲ್ಲಿ ನಮ್ಮಿಬ್ಬರ ಬಳಿ ಬೇರೆ ಬೇರೆ ಪತ್ರಕ್ಕೆ ಸಹಿ ಹಾಕಿಸಿಕೊಂಡಳು, ಆಗ ಅನುಮಾನ ಇತ್ತು. ಈಗ ಕ್ಲಿಯರ್ ಆಯ್ತು. ನಾನೇ ಭುವಿ ಬಳಿ ಹೋಗಿ ಸೈನ್ ಮಾಡಿಸಿಕೊಂಡೆ. ಭುವಿ ಸಹ ಓದದೇ ಸೈನ್ ಮಾಡಿ ಬಿಟ್ರು ಎಂದು ಹರ್ಷ ಲಾಯರ್ ಬಳಿ ಹೇಳಿದ್ದಾನೆ.
ವರು ಮೇಲೆ ಕೆಂಡಾಮಂಡಲ
ಹರ್ಷನಿಗೆ ವರು ಮೇಲೆ ತುಂಬಾ ಕೋಪ ಬಂದಿದೆ. ನಾನು ಬದಲಾಗಿದ್ದೇನೆ. ನಿಮ್ಮ ಸ್ನೇಹಿತೆಯಾಗಿ ಸ್ವೀಕರಿಸಿ ಎಂದು ಬೇಡಿಕೊಂಡ್ಲು. ಈಗ ನೋಡಿದ್ರೆ, ಮತ್ತೆ ತನ್ನ ಹಳೇ ಚಾಳಿ ಮುಂದುವರಿಸಿದ್ದಾಳೆ. ಗೊತ್ತಿಲ್ಲದಂತೆ ಸೈನ್ ಮಾಡಿಸಿಕೊಂಡು ನಮ್ಮ ಬಾಳಲ್ಲಿ ಆಟ ಆಡ್ತಾ ಇದ್ದಾಳೆ. ಇದಕ್ಕೆ ನಾನು ಸರಿಯಾದ ಬುದ್ಧಿ ಕಲಿಸುತ್ತೇನೆ ಎಂದು ಹೇಳಿದ್ದಾನೆ.
ಇದನ್ನೂ ಓದಿ: Lakshana: ನಕ್ಷತ್ರಾ ಮುಂದೆ ಮಂಡಿಯೂರಿ ಕ್ಷಮೆ ಕೇಳಿದ ಮೌರ್ಯ, ಭೂಪತಿಗೆ ಖುಷಿಯೋ ಖುಷಿ!
ಭುವಿ-ನಾನು ದೂರ ಆಗಲ್ಲ
ನಾನು ಭುವಿ ಒಟ್ಟಿಗೆ ಇರಬೇಕು ಎಂದು ಸುಮ್ಮನೇ ವರು ಹೇಳ್ತಾಳೆ. ಆದ್ರೆ ನಾವಿಬ್ಬರು ಡಿವೋರ್ಸ್ ಮಾಡಿಕೊಳ್ಳಬೇಕು ಎನ್ನುವುದು ಅವಳ ಪ್ಲ್ಯಾನ್. ಡಿವೋರ್ಸ್ ಆದ ಮೇಲೆ ನಾನು ಅವಳನ್ನು ಮದುವೆ ಆಗ್ತೀನಿ ಅಂತ ಅಂದುಕೊಂಡಿದ್ದಾಳೆ. ಆದ್ರೆ ಅದು ಆಗಲ್ಲ. ಅವಳಿಗೆ ಬುದ್ಧಿ ಕಲಿಸಲು ನಿಮ್ಮ ಸಹಾಯ ಬೇಕು ಎಂದು ಸುಚಿ ಮತ್ತು ಬಿಂದು ಬಳಿ ಹರ್ಷ ಕೇಳಿದ್ದಾನೆ.
15 ದಿನದ ಮಿಷನ್ ಎಂದ ಹರ್ಷ
ಸುಚಿ, ಬಿಂದು ನಿಮಗೆ ಸತ್ಯ ಗೊತ್ತಾಗಿದೆ ತಾನೇ, ವರುಗೆ ಬುದ್ಧಿ ಕಲಿಸಿ ಎಂದು ಹೇಳ್ತಾರೆ. ಅದಕ್ಕೆ ಹರ್ಷ, ಅವಳ ಆಟ ಮುಗಿಯಿತು. ಈಗ ನನ್ನ ಆಟ ಶುರು. 15 ದಿನದ ಮಿಷನ್ ಇದು. ವರುಗೆ ಸರಿಯಾಗಿ ಪಾಠ ಕಲಿಸುತ್ತೇನೆ ಎಂದು ಹರ್ಷ ಹೇಳಿದ್ದಾನೆ. ಅದಕ್ಕೆ ಸುಚಿ, ಬಿಂದು ಸಾಥ್ ನೀಡ್ತಾ ಇದ್ದಾರೆ.
15 ದಿನದಲ್ಲಿ ಧಾರಾವಾಹಿ ಮುಗಿಯುತ್ತಾ?
ಹರ್ಷನ 15 ದಿನದ ಮಿಷನ್ ಎಂದು ಕೇಳಿ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದಾರೆ. ಈಗಾಗಲೇ ಧಾರಾವಾಹಿ ಮುಗಿಯುತ್ತೇ ಎನ್ನುವ ಸುದ್ದಿ ಎಲ್ಲೆಡೆ ಹಬ್ಬಿದೆ. ಅದಕ್ಕೆ ತಕ್ಕಂತೆ ರಂಜನಿ ರಾಘವನ್ ಅವರು, ಬಾಯಲ್ಲಿ ಸಿಹಿ ಇರುವಾಗ್ಲೇ ಮುಗಿಸಬೇಕು ಎಂದು ಕಾರ್ಯಕ್ರಮವೊಂದರಲ್ಲಿ ಹೇಳಿದ್ರು. ಈಗ ಹರ್ಷನ ಮಿಷನ್ 15 ದಿನ ಅದೇ ಅರ್ಥನಾ ಎಂದು ಅಭಿಮಾನಿಗಳು ಕೇಳ್ತಾ ಇದ್ದಾರೆ. ಧಾರಾವಾಹಿ ಮುಗಿಸಬೇಡಿ ಎನ್ನುತ್ತಿದ್ದಾರೆ.
ಇದನ್ನೂ ಓದಿ: Gattimela: ಅಮೂಲ್ಯ-ವೇದಾಂತ್ ಬಾಳಲ್ಲಿ ಬಿರುಗಾಳಿ, ಅಮ್ಮ ಎಂದು ಬಂದ ಚಂದ್ರಕಲಾಳಿಂದ ನಾಟಕ!
ವರುಗೆ ಹರ್ಷ ಬುದ್ಧಿ ಕಲಿಸುತ್ತಾನಾ? 15 ದಿನದಲ್ಲಿ ಧಾರಾವಾಹಿ ಮುಗಿಯುತ್ತಾ? ಎಲ್ಲ ಕುತೂಹಲಕ್ಕೂ ನೀವೂ ಕನ್ನಡತಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ