ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ ಧಾರಾವಾಹಿ (Kannadathi Serial) ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ, ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು (Kannada Fans) ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡ್ತಿದೆ. ಧಾರಾವಾಹಿಯಲ್ಲಿ ಅಮ್ಮಮ್ಮನ ಅಧ್ಯಾಯ ಮುಕ್ತಾಯವಾಗ್ತಿದ್ದಂತೆ, ಸೌಪರ್ಣಿಕಾ ಅನ್ನೋ ಹೆಸರು ಓಡಾಡ್ತಾ ಇದೆ. ಭುವಿ (Bhuvi) ನೀರಿಗೆ ಬಿದ್ದಿದ್ದೇಗೆ ಎನ್ನೋ ಪ್ರಶ್ನೆಗಳು ಎದ್ದಿವೆ.
ಇದ್ದಕ್ಕಿದ್ದ ಹಾಗೇ ನಾಪತ್ತೆಯಾಗಿದ್ದ ಭುವಿ
ಶ್ರೀರಂಗಪಟ್ಟಣಕ್ಕೆ ಮನೆಯವರೆಲ್ಲಾ ಅಮ್ಮಮ್ಮನ ಅಸ್ಥಿ ಬಿಡಲು ಹೋಗಿರುತ್ತಾರೆ. ಹರ್ಷ ಮತ್ತು ಭುವಿ ಏನೋ ಪೂಜೆ ಮಾಡಿಸಲು ನದಿ ದಡದಲ್ಲಿ ನಿಂತಿರುತ್ತಾರೆ. ಹರ್ಷ ಭುವಿ ಜೊತೆ ಮಾತನಾಡುತ್ತಿರುವಾಗಲೇ ಭುವಿ ನಾಪತ್ತೆ ಆಗ್ತಾಳೆ. ಹರ್ಷ ಗಾಬರಿಗೊಂಡಿದ್ದಾನೆ. ಎಲ್ಲಾ ಕಡೆ ಹುಡುಕಿದ್ದಾನೆ. ಹೆಂಡ್ತಿ ಕಾಣದೇ ಹರ್ಷನ ಟೆನ್ಶನ್ ಹೆಚ್ಚಾಗಿದೆ.
ನೀರಿಗೆ ಬಿದ್ದಿರುವ ಭುವಿ
ಹರ್ಷ ಎಲ್ಲಾ ಕಡೆ ಹುಡುಕಿ ಬಂದು ಮತ್ತೆ ನದಿ ದಡದ ಬಳಿ ಬರುತ್ತಾನೆ. ಅಲ್ಲಿ ಭುವಿಯ ಹೂವು ಬಿದ್ದಿರುತ್ತೆ. ಅದನ್ನು ನೋಡಿ ಗಾಬರಿ ಆಗ್ತಾನೆ. ಭುವಿ ನೀರಿಗೇನಾದ್ರೂ ಬಿದ್ರಾ ಎಂದು ಅವನು ನೀರಿಗೆ ಹಾರಿ ಅವಳನ್ನು ಹುಡುಕುತ್ತಾನೆ. ಸದ್ಯ, ನೀರಿಗೆ ಬಿದ್ದ ಭುವಿ ಸಿಕ್ಕಿದ್ದಾಳೆ. ಯಾಕೆ ನೀರಿಗೆ ಬಿದ್ಲು ಎಂದು ಗೊತ್ತಾಗುತ್ತಿಲ್ಲ.
ಇದನ್ನೂ ಓದಿ: Actress Mokshitha Pai: ತಮಿಳು ಧಾರಾವಾಹಿಯಿಂದ ಹೊರ ಬಂದಿದ್ದೇಕೆ 'ಪಾರು'? ಮೋಕ್ಷಿತಾ ಪೈ ಕೊಟ್ಟ ಕಾರಣ ನೋಡಿ!
ಕಾಲು ಜಾರಿ ಬಿದ್ಲಾ? ಆತ್ಮಹತ್ಯೆನಾ?
ಅಷ್ಟೊತ್ತು ಹರ್ಷನ ಬಳಿ ಚೆನ್ನಾಗಿ ಮಾತನಾಡುತ್ತಿದ್ದ ಭುವಿ, ನೀರಿಗೆ ಬಿದ್ದಿದ್ಯಾಕೆ ಎನ್ನುವ ಪ್ರಶ್ನೆಗಳು ಕಾಡ್ತಿವೆ. ಆಸ್ತಿ ವಿಚಾರ ತಲೆಯಲ್ಲಿ ಹಾಕಿಕೊಂಡು ತಲೆ ಕೆಡಿಸಿಕೊಂಡಿದ್ದಾಳೆ. ಅದಕ್ಕೆ ತಲೆ ಸುತ್ತಿ ನೀರಿಗೆ ಬಿದ್ಲಾ? ಇಲ್ಲ, ಕನ್ನಡ ಟೀಚರ್ ಏನಾದ್ರೂ ದುಡುಕಿ ನಿರ್ಧಾರ ತೆಗೆದುಕೊಂಡ್ರಾ ಗೊತ್ತಿಲ್ಲ. ಅವರೇ ಎಚ್ಚರ ಆದ ಮೇಲೆ ಹೇಳಬೇಕು.
ಎಚ್ಚರವಾಗ್ತಿಲ್ಲ ಭುವಿಗೆ!
ಹರ್ಷ ಏನೋ ಭುವಿಯನ್ನು ಕಾಪಾಡಿ ದಡಕ್ಕೆ ಕರೆದುಕೊಂಡು ಬಂದಿದ್ದಾನೆ. ಆದ್ರೆ ಭುವಿಗೆ ಎಚ್ಚರ ಆಗ್ತಾ ಇಲ್ಲ. ನೀರು ಕುಡಿದು ಬಿಟ್ಟಿದ್ದಾಳೆ. ಅದನ್ನು ನೋಡಿ ಹರ್ಷ ಗಾಬರಿ ಆಗಿದ್ದಾನೆ. ಅಷ್ಟರಲ್ಲಿ ಅಲ್ಲಿಗೆ ಆದಿ ಬರುತ್ತಾನೆ. ಅವನು ಆಕೆಯನ್ನು ಎಬ್ಬಿಸಲು ಟ್ರೈ ಮಾಡ್ತಾನೆ ಭುವಿ ಎದ್ದಿಲ್ಲ. ಆತಂಕದಲ್ಲಿ ಆಸ್ಪತ್ರೆ ಸೇರಿಸುತ್ತಾರಾ ನೋಡಬೇಕು.
ಆದಿ-ಸಾನಿಯಾ ಜಗಳ
ಭುವಿ-ಹರ್ಷ ತುಂಬಾ ಸಮಯ ಕಳೆದ್ರೂ ಬರಲಿಲ್ಲ ಎಂದುಕೊಂಡು, ಆದಿ ಕರೆದುಕೊಂಡು ಬರಲು ಹೋಗಲು ರೆಡಿಯಾಗ್ತಾನೆ. ಆಗ ಸಾನಿಯ ಆದಿ ಬಳಿ ಜಗಳ ಆಡ್ತಾಳೆ. ಅವರೇನು ಚಿಕ್ಕ ಮಕ್ಕಳ ಎಂದು.
ಅಲ್ಲದೇ ಕರೆದುಕೊಂಡು ಬಾ ನಾನು ಅವರನ್ನು ಪೊಲೀಸರಿಂದ ಅರೆಸ್ಟ್ ಮಾಡಿಸುತ್ತೇನೆ ಎಂದು ಹೇಳ್ತಾಳೆ. ಅದಕ್ಕೆ ಆದಿ ಹರ್ಷ-ಭುವಿ ನೆಮ್ಮದಿಯಿಂದ ಇರಲು ನಿನ್ನ ಜೈಲಿಗೆ ಕಳಿಸಬೇಕು ಎಂದು ಹೇಳಿ ಹೋಗ್ತಾನೆ. ಸಾನಿಯಾ ಬೇಸರ ಮಾಡಿಕೊಂಡಿದ್ದಾಳೆ.
ಇದನ್ನೂ ಓದಿ: Bigg Boss Kannada: ರೂಪೇಶ್ ರಾಜಣ್ಣನ ಗಡ್ಡ ತೆಗೆದಿದ್ದೇಕೆ ಸಂಬರ್ಗಿ? ರಾಜ್ಯಾದ್ಯಂತ ಈಗ ಇದೇ ಬ್ರೇಕಿಂಗ್ ನ್ಯೂಸ್!
ಭುವಿ ಎಚ್ಚರಗೊಳ್ತಾಳಾ? ಹರ್ಷ ನೀರಿಗೆ ಬಿದ್ದ ಕಾರಣ ತಿಳಿದುಕೊಳ್ತಾನಾ? ಮುಂದೇನಾಗುತ್ತೆ ಅಂತ ನೋಡೋಕೆ ಕನ್ನಡತಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ