ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ (Serials) ಕನ್ನಡತಿ (Kannadathi) ಸೀರಿಯಲ್ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಗೆ ದೊಡ್ಡ ಅಭಿಮಾನಿಗಳ (Fans) ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ, ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡ್ತಿದೆ. ಹೋಟೆಲ್ ಒಂದರಲ್ಲಿ ಕನ್ನಡಕ್ಕೆ ತುಂಬಾ ಅವಮಾನ ಮಾಡಿದ್ದಾರೆ. ಮಾಲೀಕ ಮತ್ತು ಹರ್ಷ ಜಗಳ ಮಾಡಿಕೊಂಡಿದ್ದಾರೆ. ಕನ್ನಡದಲ್ಲಿ (Kannada) ಕಾಫಿ ಶಾಪ್ (Coffee) ಓಪನ್ ಮಾಡುವುದಾಗಿ ಹರ್ಷ ಹೇಳಿದ್ದಾನೆ
ಹೋಟೆಲ್ಗೆ ಹೋದ ಭುವಿ ಮತ್ತು ಹರ್ಷ
ಭುವಿ ಮತ್ತು ಹರ್ಷ ಕಚೇರಿಯಲ್ಲಿ ಯಾವುದೋ ವಿಷಯಕ್ಕೆ ಜಗಳ ಮಾಡಿಕೊಂಡಿರುತ್ತಾರೆ. ಅದಕ್ಕೆ ಸುಚಿ ಇಬ್ಬರು ಹೋಟೆಲ್ಗೆ ಹೋಗಿ ಟೈಮ್ ಸ್ಪೆಂಡ್ ಮಾಡಿ ಎಲ್ಲ ಮರೆತು ಹೋಗುತ್ತೆ ಎಂದು ಹೇಳಿರುತ್ತಾಳೆ. ಹರ್ಷನಿಗೆ ಇಷ್ಟವಾದ ಹೋಟೆಲ್ ಗೆ ಹೋಗಿರುತ್ತಾರೆ. ಅಲ್ಲಿ ಕನ್ನಡ ವಿಷಯಕ್ಕೆ ಜಗಳ ಆಗಿದೆ.
ಹೋಟೆಲ್ನಲ್ಲಿ ಇಂಗ್ಲಿಷ್ ಮಾತ್ರ ಬಳಕೆ
ಭುವಿ ಬಳಿ ಹೋಟೆಲ್ ಸರ್ವರ್ ಬಂದು ನಿಮಗೇನು ಬೇಕು ಎಂದು ಇಂಗ್ಲಿಷ್ ನಲ್ಲಿ ಕೇಳ್ತಾರೆ. ಅದಕ್ಕೆ ಭುವಿ ಕನ್ನಡದಲ್ಲಿ ಕೇಳಿ ಅಂತಾಳೆ. ಅವನು ಕೇಳ್ತಾನೆ. ಭುವಿ ಹಾಗೇ ಅವನ ಜೊತೆ ಬಿಜಾಪುರದ ಬಗ್ಗೆ ಮಾತನಾಡುತ್ತಾರೆ. ಆ ಹುಡುಗನು ಖುಷಿಯಿಂದ ಕನ್ನಡದಲ್ಲಿ ತನ್ನ ಊರಿನ ಬಗ್ಗೆ ಹೇಳ್ತಾ ಇರ್ತಾನೆ.
ಕೆನ್ನೆಗೆ ಹೊಡೆದ ಮಾಲೀಕ
ಕನ್ನಡದಲ್ಲಿ ಸರ್ವರ್ ಮಾತನಾಡಿದ್ದಕ್ಕೆ ಮಾಲೀಕ ಸರ್ವರ್ ಹುಡುಗನಿಗೆ ಕಪಾಳಕ್ಕೆ ಹೊಡೆಯುತ್ತಾನೆ. ಇದನ್ನು ಹರ್ಷ ಮತ್ತು ಭುವಿ ಪ್ರಶ್ನೆ ಮಾಡ್ತಾರೆ. ಅದಕ್ಕೆ ಮಾಲೀಕ ನನ್ನ ಹೋಟೆಲ್ ನನ್ನ ಇಷ್ಟ.
ಇದನ್ನೂ ಓದಿ: Actress Bhoomi Shetty: ಥೈಲ್ಯಾಂಡ್ ಸುತ್ತಾಡಿದ ಭೂಮಿ! ಸೋಲೋ ಟ್ರಿಪ್ ಹೋಗಿದ್ರಾ ಶೆಟ್ರ ಹುಡ್ಗಿ?
ಕನ್ನಡದಲ್ಲಿ ಬ್ಯುಸಿನೆಸ್ ಮಾಡಿದ್ರೆ ಹಾಳಾಗುತ್ತೆ. ನಿಮಗೆ ಬ್ಯುಸಿನೆಸ್ ಬಗ್ಗೆ ನಿನಗೆ ಏನ್ ಗೊತ್ತಾ? ಕನ್ನಡದಲ್ಲಿ ಮಾಡಿದ್ರೆ ಎಲ್ಲಾ ಕಳೆದುಕೊಂಡು ಮನೆಗೆ ಹೋಗಬೇಕು ಎನ್ನುತ್ತಾನೆ. ನಿಮಗೆ ಧೈರ್ಯ ಇದ್ರೆ ಕನ್ನಡದಲ್ಲಿ ಬ್ಯುಸಿನೆಸ್ ಮಾಡಿ ಎಂದು ಹರ್ಷನಿಗೆ ಸವಾಲ್ ಹಾಕ್ತಾರೆ.
ಕನ್ನಡದಲ್ಲೇ ಕಾಫಿ ಶಾಪ್
ಆ ಹೋಟೆಲ್ ಮಾಲೀಕನಿಗೆ ಹರ್ಷ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾನೆ. ಕರ್ನಾಟಕದಲ್ಲೇ ಇದ್ದು, ಬೆಂಗಳೂರಲ್ಲಿ ಬೆಳದು ಕನ್ನಡಕ್ಕೆ ಇಷ್ಟು ಅವಮಾನ ಮಾಡ್ತೀರಾ? ನಾನು ಕನ್ನಡಲ್ಲೇ ಕಾಫಿ ಶಾಪ್ ಓಪನ್ ಮಾಡ್ತೇನೆ. ಅದು ದೇಶದಲ್ಲೇ ಹೆಸರು ವಾಸಿಯಾಗುವಂತೆ ಮಾಡ್ತೀನಿ ಎಂದು ಹರ್ಷ ಚಾಲೆಂಜ್ ಹಾಕಿ ಹೋಗಿದ್ದಾನೆ.
ಕನ್ನಡ ಸಂಘಟನೆಗಳಿಂದ ಕ್ಲಾಸ್
ಕಪಾಳಕ್ಕೆ ಹೊಡೆಸಿಕೊಂಡ ಸರ್ವರ್ ಕನ್ನಡ ಸಂಘಟನೆಗಳಿಗೆ ಕಾಲ್ ಮಾಡಿದ್ದಾನೆ. ಕನ್ನಡ ಮಾತನಾಡಿದ್ದಕ್ಕೆ ಕಪಾಳಕ್ಕೆ ಹೊಡೆದ್ರು ಎಂದು ಹೇಳ್ತಾನೆ. ಅದಕ್ಕೆ ಕನ್ನಡ ಸಂಘಟನೆಯವರು ಹೋಟೆಲ್ ಗೆ ನುಗ್ಗಿ ಮಾಲೀಕನಿಗೆ ಮಸಿ ಬಳಿದು ಸರಿಯಾದ ಪಾಠ ಕಲಿಸಿದ್ದಾರೆ. ಇನ್ನೊಂದು ಬಾರಿ ಕನ್ನಡಕ್ಕೆ ಅವಮಾನ ಮಾಡಬಾರದು ಆ ರೀತಿ ಮಾಡಿದ್ದಾರೆ.
ಇದನ್ನೂ ಓದಿ: Bigg Boss OTT: ಅವರ ಖುಷಿ ಮುಖ್ಯ, ಜಶ್ವಂತ್ ದೂರು ಹೋಗಿದ್ದಕ್ಕೆ ಕಾರಣ ಕೊಟ್ಟ ನಂದು!
ಕನ್ನಡದಲ್ಲಿ ಬ್ಯುಸಿನೆಸ್ ಮಾಡಿ ಹರ್ಷ ಗೆಲುವು ಸಾಧಿಸುತ್ತಾನಾ? ಕನ್ನಡತಿ ಸೀರಿಯಲ್ ಮುಗಿಯುವ ಟೈಂ ಹತ್ತಿರ ಬಂತಾ? ಮುಂದೇನಾಗುತ್ತೆ ಅಂತ ನೋಡೋಕೆ ಕನ್ನಡತಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ