ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ (Serials) ಕನ್ನಡತಿ (Kannadathi) ಸೀರಿಯಲ್ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್‍ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಅಭಿಮಾನಿಗಳು ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ, ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡ್ತಿದೆ. ಆದ್ರೆ ಸೀರಿಯಲ್ ಮುಗಿಯುವ ಸಮಯ ಹತ್ತಿರ ಬಂದಿದೆ. ಧಾರಾವಾಹಿಯ ಅಂತಿಮ (End) ಅಧ್ಯಾಯ ಶುರುವಾಗಿದೆ. ಹರ್ಷನ ಮೇಲೆ ಭುವಿ ಮುನಿಸಿಕೊಂಡಿದ್ದಾಳೆ. ಭುವಿಗೆ ಬಿಗ್ ಸರ್ಪ್ರೈಸ್ (Surprise) ಕೊಡ್ತಾನಾ ಹೀರೋ.
ಅಮ್ಮಮ್ಮನ ಕನಸು ನನಸು ಮಾಡಲು ಒದ್ದಾಟ
ಅಮ್ಮಮ್ಮ ಬದುಕಿರುವಾಗ ಕಾಫಿ ಶಾಪ್ ನ್ನು ಕನ್ನಡದಲ್ಲಿ ತೆರೆಯಬೇಕೆಂದು ಆಸೆ ಇಟ್ಟುಕೊಂಡಿದ್ರು. ಆಗ ಹರ್ಷ ಅದಕ್ಕೆ ಒಪ್ಪಿರಲಿಲ್ಲ. ಅದಕ್ಕಾಗಿ ಸದಾ ಅಮ್ಮಮ್ಮನ ಜೊತೆ ಜಗಳವಾಡ್ತಾ ಇದ್ದ. ಅಮ್ಮಮ್ಮ ತೀರಿ ಹೋದ ಮೇಲೆ ಹರ್ಷ ಬದಲಾಗಿದ್ದಾನೆ. ಅಮ್ಮಮ್ಮನ ಆಸೆಯಂತೆ ಈ ಪ್ರಾಜೆಕ್ಟ್ ಆಗಬೇಕು ಎಂದು ಹಗಲು, ರಾತ್ರಿ, ಊಟ, ಮನೆ ಬಿಟ್ಟು ಕೆಲಸ ಮಾಡಿಸುತ್ತಿದ್ದಾನೆ.
ಭುವಿ ಕೈಗೆ ಸಿಗದ ಹರ್ಷ
ಮನೆ ಬಿಟ್ಟು ಬೇರೆ ಕಡೆ ಇದ್ದ ಹರ್ಷ ಮನೆಯವರ ಕೈಗೆ ಸಿಗುತ್ತಿಲ್ಲ. ಭುವಿ ಎಷ್ಟೇ ಕಾಲ್ ಮಾಡಿದ್ರೂ ನಾಟ್ ರೀಚಬಲ್ ಆಗಿದೆ. ಹರ್ಷ ಮಾತನಾಡದೇ ಇರುವುದಕ್ಕೆ ಭುವಿ ಬೇಸರ ಮಾಡಿಕೊಂಡಿದ್ದಾಳೆ. ಒಂದು ಕರೆ ಮಾಡಿ ಮಾತನಾಡದಷ್ಟು ಬ್ಯುಸಿನಾ ಎಂದು ಬೇಸರ ಮಾಡಿಕೊಂಡಿದ್ದಾಳೆ. ಯಾಕೆ ಈ ರೀತಿ ಮಾಡ್ತಾ ಇದ್ದಾರೆ ಎಂದು ಗಾಬರಿಯಾಗಿದ್ದಾಳೆ.
ಕಾದಿದ್ಯಾ ಬಿಗ್ ಸರ್ಪ್ರೈಸ್?
ಭುವಿ ಈ ವಿಚಾರವನ್ನು ಮನೆಯವರ ಮುಂದೆ ಹೇಳ್ತಾಳೆ. ಹರ್ಷ ಯಾಕೋ ಮಾತನಾಡೇ ಇಲ್ಲ ಎಂದು. ಅದಕ್ಕೆ ಸುಚಿ ರೇಗಿಸುತ್ತಾಳೆ. ಅಣ್ಣ ನನಗೆ ದಿನ ಕಾಲ್ ಮಾಡ್ತಿದ್ದ. ನಿಮಗೆ ಮಾಡಿಲ್ಲ ಎಂದ್ರೆ ನಿಮಗೆ ಏನೋ ಬಿಗ್ ಸರ್ಪ್ರೈಸ್ ಕಾದಿರಬಹುದು. ಹೊಸ ಪ್ರಾಜೆಕ್ಟ್ ಬಗ್ಗೆ ನೀವು ಎಲ್ಲಿ ಕೇಳಿ ಬಿಡ್ತೀರೋ ಅಂತ ಅಣ್ಣ ನಿಮ್ಮ ಜೊತೆ ಮಾತನಾಡುತ್ತಿಲ್ಲ ಎಂದು ಹೇಳಿದ್ದಾಳೆ.
ಅಮ್ಮಮ್ಮನ ಕಾಫಿ ಅಂಗಡಿ ಹೇಗಿದೆ?
ಇವತ್ತು ಅಮ್ಮಮ್ಮ ಕಾಫಿ ಅಂಗಡಿ ಹೇಗಿದೆ ಎಂದು ಗೊತ್ತಾಗಲಿದೆ. ಹರ್ಷನು ಬರಲಿದ್ದಾನೆ. ಹೊಸ ಅಂಗಡಿಯ ಉದ್ಘಾಟನೆ ಆಗಲಿದೆ. ಹೆಸರೇನು ಕನ್ನಡದಲ್ಲಿದೆ. ಆದ್ರೆ ಒಳಗೆ ಹೇಗಿದೆ ಅಂತ ಇನ್ನೂ ಜನಕ್ಕೆ ತೋರಿಸಿಲ್ಲ. ಇವತ್ತು ಅದನ್ನು ತೋರಿಸಲಿದ್ದಾರೆ. ಹರ್ಷ ಅಂದಕೊಂಡಂತೆ ಕಟ್ಟಿಸಿದ್ದಾನಾ? ಅಥವಾ ಅಮ್ಮಮ್ಮ ಮತ್ತು ಭುವಿ ಆಸೆ ಅಂತೆ ಕಟ್ಟಿಸಿದ್ದಾನಾ ನೋಡಬೇಕು. ಅಭಿಮಾನಿಗಳಂತೂ ನೋಡಲು ಕಾಯ್ತಾ ಇದ್ದಾರೆ.
ಹರ್ಷ ಬೇಕು ಎಂತಿರುವ ವರು
ವರುಗೆ ಎಷ್ಟೇ ಬೈದು ಬುದ್ಧಿ ಹೇಳಿದ್ರೂ ಬದಲಾಗುವ ಲಕ್ಷಣಗಳು ಕಾಣ್ತಾ ಇಲ್ಲ. ಹೀರೋ ಬಾಯಿಗೆ ಬಂದಂತೆ ಬೈದು, ಎಚ್ಚರಿಕೆ ಕೊಟ್ರೂ ಹೀರೋ ನನಗೆ ಬೇಕೇ ಬೇಕು ಅಂತಿದ್ದಾಳೆ. ನನಗೆ ಹೀರೋ ಅಂದ್ರೆ ಹರ್ಷ. ಅವರು ನನ್ನ ಮದುವೆ ಆಗಬೇಕು ಅಷ್ಟೇ ಅಂತಿದ್ದಾಳೆ. ಈ ಸಮಸ್ಯೆಯನ್ನು ಹರ್ಷ ಹೇಗೆ ಬಗೆಹರಿಸುತ್ತಾನೆ ಅನ್ನುವುದೇ ಪ್ರಶ್ನೆ ಆಗಿದೆ.
ಇದನ್ನೂ ಓದಿ: Jothe Jotheyali: ಅನು ಕಿಡ್ನ್ಯಾಪ್ ಮಾಡಿದ ಝೇಂಡೆ, ಆರ್ಯವರ್ಧನ್ಗೆ ಹೆಚ್ಚಿತು ಕೋಪ!
ಹರ್ಷನ ಕಾಫಿ ಶಾಪ್ ಹೇಗಿದೆ? ಭುವಿಗೆ ಇಷ್ಟ ಆಗುತ್ತಾ? ಭುವಿ ಆಸೆ ಈಡೇರುತ್ತಾ? ವರು ಬದಲಾಗೋದೇ ಇಲ್ಲಾ? ಮುಂದೇನಾಗುತತೆ ಅಂತ ನೋಡೋಕೆ ಒಂದು ವಾರ ಕನ್ನಡತಿ ಸೀರಿಯಲ್ ತಪ್ಪದೇ ನೋಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ