ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ (Serial) ಕನ್ನಡತಿ (Kannadathi) ಸೀರಿಯಲ್ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ, ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡ್ತಿದೆ. ಭುವಿ ಮತ್ತು ಹರ್ಷನಿಗೆ ಡಿವೋರ್ಸ್ (Divorce) ಕೊಡಿಸಬೇಕು ಎಂದು ವರು ಓಡಾಡ್ತಾ ಇದ್ದಾರೆ. ವರೂ ಲಾಯರ್ (Lawyer) ಜೊತೆ ಇರುವುದನ್ನು ಹರ್ಷ ನೋಡಿದ್ದಾನೆ.
ಹೀರೋ ಬೇಕೇ ಬೇಕು ಎನ್ನುತ್ತಿರುವ ವರು
ಧಾರಾವಾಹಿ ಶುರುವಾದಾಗಿನಿಂದ ವರೂಗೆ ಹೀರೋ ಅಂದ್ರೇ ಹರ್ಷ ಅಂತ. ಅವನನ್ನು ಹುಚ್ಚಿ ತರ ಪ್ರೀತಿ ಮಾಡ್ತಾ ಇದ್ಲು. ಅವನನ್ನೇ ಮದುವೆ ಆಗಬೇಕು ಎಂದುಕೊಂಡಿದ್ಲು. ಆದ್ರೆ ಹರ್ಷ ಭುವಿಯನ್ನು ಪ್ರೀತಿಸಿ ಮದುವೆ ಆಗ್ತಾನೆ ಅದಕ್ಕೆ ವರುಗೆ ವಿಪರೀತ ಕೋಪ, ಅಸಹನೆ ಎಲ್ಲವೂ ಇದೆ. ಹೀರೋ ನನಗೆ ಬೇಕು ಅಂತಿದ್ದಾಳೆ.
ಡಿವೋರ್ಸ್ ಪ್ಲ್ಯಾನ್, ಲಾಯರ್ ಭೇಟಿ
ವರೂಧಿನಿ, ಹರ್ಷ ಮತ್ತು ಭುವಿಯನ್ನು ದೂರ ಮಾಡಲು ಡಿವೋರ್ಸ್ ಪ್ಲ್ಯಾನ್ ಮಾಡಿದ್ದಾಳೆ. ಭುವಿಯಿಂದ ಉಪಾಯದಿಂದ ಸೈನ್ ತೆಗೆದುಕೊಂಡು, ಹರ್ಷನಿಗೆ ಕಳಿಸಿದ್ದಾಳೆ. ಮೊದಲು ಹರ್ಷ ಆತಂಕವಾಗಿದ್ದ, ನಂತರ ಇದು ವರೂ ಪ್ಲ್ಯಾನ್ ಎಂದು ಗೊತ್ತಾಯ್ತು. ಅದಕ್ಕೆ ವರೂಗೆ ಬುದ್ಧಿ ಕಲಿಸಬೇಕು ಎಂದುಕೊಂಡಿದ್ದಾನೆ. ವರೂ ಲಾಯರ್ ನನ್ನು ಭೇಟಿಯಾಗಿದ್ದಾಳೆ.
ಇದನ್ನೂ ಓದಿ: Bigg Boss Kannada: ಬಿಗ್ ಬಾಸ್ ಸೀಸನ್ 08 ರ ಸ್ಪರ್ಧಿಗಳ ಸಮಾಗಮ, ಹಳೇ ಸ್ನೇಹಿತರ ಮಸ್ತಿ!
ವರು ಮತ್ತು ಲಾಯರ್ ನೋಡಿದ ಹರ್ಷ
ಭುವಿ ಮತ್ತು ಹರ್ಷ ಕಚೇರಿಯಲ್ಲಿ ಯಾವುದೋ ವಿಷಯಕ್ಕೆ ಜಗಳ ಮಾಡಿಕೊಂಡಿರುತ್ತಾರೆ. ಅದಕ್ಕೆ ಸುಚಿ ಇಬ್ಬರು ಹೋಟೆಲ್ಗೆ ಹೋಗಿ ಟೈಮ್ ಸ್ಪೆಂಡ್ ಮಾಡಿ ಎಲ್ಲ ಮರೆತು ಹೋಗುತ್ತೆ ಎಂದು ಹೇಳಿರುತ್ತಾಳೆ. ಅದಕ್ಕೆ ಹರ್ಷ ಮತ್ತು ಭುವಿ ಹೋಟೆಲ್ ಗೆ ಹೋಗಿದ್ದಾರೆ. ಅಲ್ಲಿ ವರೂ ಮತ್ತು ಲಾಯರ್ ಮಾತನಾಡುತ್ತಾ ಕೂತಿರುತ್ತಾರೆ.
ವರೂಗೆ ಪ್ರಶ್ನೆ ಕೇಳಿದ ಹರ್ಷ
ಇವರು ಫೇಮಸ್ ಡಿವೋರ್ಸ್ ಲಾಯರ್. ಇವರನ್ನು ಯಾಕೆ ಮೀಟ್ ಮಾಡಿದ್ದೀಯಾ ವರು? ಇವರ ಬಳಿ ನಿನಗೇನು ಕೆಲಸ ಎಂದು ಹರ್ಷ ಕೇಳಿದ್ದಾನೆ. ಹರ್ಷನ ಪ್ರಶ್ನೆಗಳಿಗೆ ವರೂ ತಬ್ಬಿಬ್ಬು ಆಗಿದ್ದಾಳೆ. ಏನು ಹೇಳಬೇಕೋ ಗೊತ್ತಾಗದೇ ಒದ್ದಾಡುತ್ತಿದ್ದಾಳೆ. ಭುವಿ ಸಹ ಟೆನ್ಶನ್ ಮಾಡಿಕೊಂಡು ನಿಂತಿದ್ದಾಳೆ.
ವರು ನಾಟಕ ಬಯಲಾಗುತ್ತಾ?
ತನಗೂ, ಭುವಿಗೂ ಡಿವೋರ್ಸ್ ಕೊಡಿಸಬೇಕು ಅಂತ ಪ್ಲ್ಯಾನ್ ಮಾಡಿದ್ದು ಹರ್ಷನಿಗೆ ಗೊತ್ತಿತ್ತು. ಈಗ ವರೂ ಸಾಕ್ಷಿ ಸಮೇತ ಸಿಕ್ಕಿ ಬಿದ್ದಿದ್ದಾಳೆ. ಭುವಿ ಮುಂದೆ ತನ್ನ ಸ್ನೇಹಿತೆಯ ಪ್ಲ್ಯಾನ್ ನನ್ನು ಹರ್ಷ ಬಯಲು ಮಾಡ್ತಾನಾ? ವರು ಡಿವೋರ್ಸ್ ಕೊಡಿಸೋ ಪ್ಲ್ಯಾನ್ ಭುವಿಗೆ ಗೊತ್ತಾಗುತ್ತಾ ಇವತ್ತಿನ ಸಂಚಿಕೆಯಲ್ಲಿ ನೋಡಬೇಕು.
ಇದನ್ನೂ ಓದಿ: Aditi Prabhudeva Birthday: ಈ ಬಾರಿ ಗಂಡನ ಜೊತೆ ಅದಿತಿ ಪ್ರಭುದೇವ ಬರ್ತ್ಡೇ!
ವರೂ ಈಗ ಹರ್ಷನ ಬಳಿ ಏನ್ ಹೇಳ್ತಾಳೆ? ಭುವಿಯ ಮುಂದಿನ ನಿರ್ಧಾರವೇನು? ಮುಂದೇನಾಗುತ್ತೆ ಅಂತ ನೋಡೋಕೆ ಕನ್ನಡತಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ