ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ (Kannadathi) ಸೀರಿಯಲ್ (Serial) ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ, ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡ್ತಿದೆ. ಅಮ್ಮಮ್ಮ ರೀತಿ ಅಧಿಕಾರ ನಡೆಸಬೇಕು ಎಂದು ಭುವಿ ಅಂದುಕೊಂಡಿದ್ದಾಳೆ. ಭುವಿ ಮುಂದೆ ಹರ್ಷ ಬೇಡಿಕೆಯೊಂದನ್ನು (Demand) ಇಟ್ಟಿದ್ದಾನೆ. ಅತ್ತ ಡಿವೋರ್ಸ್ (Divorce) ಕೊಡಿಸಲು ಯತ್ನಿಸುತ್ತಿರುವ ವರುಗೆ ಚೆಕ್ ಮೇಟ್ ನೀಡಿದ್ದಾನೆ.
ಕಚೇರಿಯಲ್ಲಿ ಕೆಲಸದಲ್ಲಿ ಭುವಿ ಬ್ಯುಸಿ
ಅಮ್ಮಮ್ಮನ ಅಧಿಕಾರ ಸ್ವೀಕಾರ ಮಾಡಿರುವ ಭುವಿ, ಕಚೇರಿಯಲ್ಲಿ ತನ್ನ ಕೆಲಸ ಶುರು ಮಾಡಿಕೊಂಡಿದ್ದಾಳೆ. ಆಫೀಸ್ ನಲ್ಲಿ ಕೆಲಸ ಮಾಡುವ ಮಹಿಳೆಯಿಂದ, ಮೊದಲು ಆಫೀಸ್ ಹೇಗಿತ್ತು. ರತ್ನಮ್ಮ ಹೇಗೆ ಇರುತ್ತಿದ್ರು ಎಲ್ಲಾ ಕೇಳಿ ತಿಳಿದುಕೊಂಡಿದ್ದಾಳೆ. ಅದೇ ರೀತಿ ತಾನು ಕಂಪನಿ ಮುನ್ನೆಡಸಿಕೊಂಡು ಹೋಗಬೇಕು ಎನ್ನುತ್ತಿದ್ದಾಳೆ.
ಭುವಿ ಮುಂದೆ ಬೇಡಿಕೆ
ಭುವಿ ಬಳಿ ಬಂದಿರುವ ಹರ್ಷ. ನಿಮಗೆ ಗೊತ್ತಿಲ್ಲದೇ ಒಂದು ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಅದನ್ನು ನೀವು ಮಾಡಿಕೊಡಬೇಕು. ಈ ನಿರ್ಧಾರದಿಂದ ಇಬ್ಬರ ನಡುವೆ ಜಗಳ ನಡೆಯಬಹುದು. ಮನಸ್ತಾಪ ಉಂಟಾಗಬಹುದು. ಆದ್ರೂ ಈ ಬೇಡಿಕೆ ನೀವು ಈಡೇರಿಸಲೇಬೇಕು ಎಂದು ಕೇಳಿಕೊಂಡಿದ್ದಾನೆ. ಏನದು ಬೇಡಿಕೆ ಅಂತ ತಿಳಿಯಲು ಸಂಚಿಕೆ ನೋಡಬೇಕು.
ಇದನ್ನೂ ಓದಿ: Ramachari: ರಾಮಾಚಾರಿ ಪ್ರೀತಿ ಪಡೆಯಲು ಬದಲಾದ ಚಾರು, ಟೆಡಿಷನಲ್ ಲುಕ್ ಓಕೆನಾ?
ವರು ಬಳಿ ಹರ್ಷನ ನಾಟಕ
ತನಗೂ, ಭುವಿಗೂ ಡಿವೋರ್ಸ್ ಕೊಡಿಸಬೇಕು ಅಂತ ಪ್ಲ್ಯಾನ್ ಮಾಡ್ತಿರೋ ವರುಗೆ ಬುದ್ಧಿ ಕಲಿಸಬೇಕು ಎಂದುಕೊಂಡಿದ್ದಾನೆ. ಬೆಳಬೆಳಗ್ಗೆಯೇ ವರು ಮನೆಗೆ ಹೋಗಿದ್ದಾನೆ. ಹೀರೋ ನೋಡಿ ವರುಗೆ ಖುಷಿ ಆಗಿದೆ. ನಿಮ್ಮ ಬಳಿ ನನ್ನ ಪರ್ಸನಲ್ ವಿಷ್ಯ ಮಾತನಾಡಬೇಕು ಎಂದಿದ್ದಾನೆ. ಹಾಗೇ ಭುವಿ ಡಿವೋರ್ಸ್ ಕೊಟ್ಟಿದ್ದಾರೆ ಎಂದಿದ್ದಾನೆ. ನಿಮ್ಮ ಬಳಿ ಏನಾದ್ರೂ ಹೇಳಿದ್ರಾ ಎಂದು ಕೇಳಿದ್ದಾನೆ.
ಸೈಕೋ ವರೂಧಿನಿಗೆ ಶಾಕ್
ಹರ್ಷನ ಮಾತು ಕೇಳಿದ ವರುಗೆ ಶಾಕ್ ಆಗಿದೆ. ನನ್ನ ಬಳಿ ಯಾಕೆ ಡಿವೋರ್ಸ್ ಬಗ್ಗೆ ಕೇಳ್ತಾ ಇದ್ದಾರೆ ಎಂದುಕೊಂಡಿದ್ದಾಳೆ. ಅಲ್ಲದೇ ಭುವಿ ಡಿವೋರ್ಸ್ ಕಾಪಿ ಒಂದನ್ನು ತರಿಸಿಕೊಡಲು ವರು ಬಳಿ ಕೇಳಿದ್ದಾನೆ. ಅದಕ್ಕೆ ವರು ಆಯ್ತು ಎಂದು ಲಾಯರ್ ಗೆ ಕಾಲ್ ಮಾಡಿ ಕೇಳಿದ್ದಾಳೆ. ಅವರು ಸಹ ಓಕೆ ಎಂದಿದ್ದಾರೆ.
ಭುವಿ ಉಳಿಸಿಕೊಳ್ಳುವ ಮಿಷನ್
ಹರ್ಷನಿಗೆ ವರು, ತನ್ನನ್ನು ಭುವಿಯನ್ನು ದೂರ ಮಾಡಲು ಪ್ಲ್ಯಾನ್ ಮಾಡುತ್ತಾ ಇದ್ದಾಳೆ ಎಂದು ಗೊತ್ತಾಗಿದೆ. ಅದಕ್ಕೆ ಹರ್ಷ 15 ದಿನದ ಮಿಷನ್ ಶುರು ಮಾಡಿದ್ದಾನೆ. 15 ದಿನದಲ್ಲಿ ವರುಗೆ ಪಾಠ ಕಲಿಸಿ, ಭುವಿ ಜೊತೆ ಸುಂದರವಾದ ಜೀವನ ಕಳೆಯಬೇಕು ಎಂದುಕೊಂಡಿದ್ದಾನೆ. ಅಂದುಕೊಂಡಂತೆ ಎಲ್ಲಾ ಮಾಡ್ತಾ ಇದ್ದಾನೆ.
ಇದನ್ನೂ ಓದಿ: Aditi Prabhudeva: ಅದಿತಿ ಆರತಕ್ಷತೆಯಲ್ಲಿ ಯಶ್-ರಾಧಿಕಾರದ್ದೇ ಹವಾ! ಫೋಟೋ ಶೇರ್ ಮಾಡಿದ ಯಶಸ್
ಭುವಿ ಹರ್ಷನ ಬೇಡಿಕೆಗೆ ಒಪ್ತಾಳಾ? ವರುಗೆ ಹರ್ಷನ್ ಮಿಷನ್ ಕಾರ್ಯ ಗೊತ್ತಾಗುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ಕನ್ನಡತಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ