• Home
  • »
  • News
  • »
  • entertainment
  • »
  • Kannadathi: ಭುವಿ ಕೈ ಹಿಡಿಯುತ್ತಲೇ ಕೊನೆಯುಸಿರೆಳೆದ್ರಾ ಅಮ್ಮಮ್ಮ? ಕನ್ನಡತಿ ಕುಟುಂಬದ ಕಣ್ಣೀರು!

Kannadathi: ಭುವಿ ಕೈ ಹಿಡಿಯುತ್ತಲೇ ಕೊನೆಯುಸಿರೆಳೆದ್ರಾ ಅಮ್ಮಮ್ಮ? ಕನ್ನಡತಿ ಕುಟುಂಬದ ಕಣ್ಣೀರು!

ರತ್ನಮಾಲಾ ಕೊನೆಯುಸಿರು?

ರತ್ನಮಾಲಾ ಕೊನೆಯುಸಿರು?

ಅಮ್ಮಮ್ಮ ಭುವಿ ಹಿಡಿದ ಕೈ ಬಿಟ್ಟಿದ್ದಕ್ಕೆ ಮನೆಯವರೆಲ್ಲಾ ಗಾಬರಿ ಆಗಿದ್ದಾರೆ. ದೇವ್ ಬೇರೆ ಚೆಕ್ ಮಾಡಿ ಭಯಗೊಂಡಿದ್ದಾನೆ. ಅದಕ್ಕೆ ಮನೆಯವರೆಲ್ಲಾ ಕಣ್ಣೀರು ಹಾಕಿದ್ದಾರೆ.

  • News18 Kannada
  • Last Updated :
  • Karnataka, India
  • Share this:

    ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ (Kannadathi) ಧಾರಾವಾಹಿ (Serial) ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್‍ಗೆ ದೊಡ್ಡ ಅಭಿಮಾನಿಗಳ (Fans) ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ. ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡುತ್ತಿದೆ. ಧಾರಾವಾಹಿಯಲ್ಲಿ ಅಮ್ಮಮ್ಮನ ಅಧ್ಯಾಯ ಮುಕ್ತಾವಾಗಿದೆ. ಅನಾರೋಗ್ಯದಿಂದ ಇದ್ದ ರತ್ನಮಾಲಾ ಕೊನೆಯುಸಿರೆಳೆದಿದ್ದಾರೆ (Death).


    ಅಮ್ಮಮ್ಮನ ಸ್ಥಿತಿ ಗಂಭೀರವಾಗಿತ್ತು


    ಕೋಮಾಗೆ ಹೋಗಿದ್ದ ಅಮ್ಮಮ್ಮನಿಗೆ ಎಚ್ಚರ ಆಗಿತ್ತು. ವರು ಬಳಿ ಮಾತನಾಡಿದ್ರು. ಒಂದು ಪೆನ್ ಪೇಪರ್ ಕೊಡು ಏನೋ ಬರೆಯಬೇಕು ಎನ್ನುತ್ತಿದ್ದರು. ಅಷ್ಟರಲ್ಲಿ ವಿಲ್ ಬಗ್ಗೆ ಹೇಳಿದ್ರು. ಅದನ್ನು ಕೇಳಿ ಶಾಕ್ ನಿಂದ ವರು ಭುವಿ ಮನೆಗೆ ಹೋಗ್ತಾಳೆ. ಅಮ್ಮಮ್ಮನಿಗೆ ಆಕ್ಸಿಜನ್ ತೆಗೆದ ಕಾರಣ ಅವರ ಸ್ಥಿತಿ ಗಂಭೀರವಾಗಿತ್ತು.


    ಮನೆಗೆ ಕರೆ ತಂದ ಭುವಿ-ಹರ್ಷ
    ಡಾಕ್ಟರ್ ಅಮ್ಮಮ್ಮನನ್ನು ಮನೆಗೆ ಕರೆದುಕೊಂಡು ಹೋಗಿ. ಕೆಲವೊಮ್ಮೆ ಮನೆಯಲ್ಲಿದ್ರೆ, ಎಚ್ಚರ ಆಗಬಹುದು ಎಂದು ಹೇಳ್ತಾರೆ. ಅದಕ್ಕೆ ಹರ್ಷ ಮತ್ತು ಭುವಿ ಅಮ್ಮಮ್ಮನನ್ನು ಆಂಬ್ಯುಲೆನ್ಸ್ ನಲ್ಲಿ ಮನೆಗೆ ಕರೆದುಕೊಂಡು ಹೋಗುತ್ತಾರೆ. ಮನೆ ಬಳಿ ಬಂದ ರತ್ನಮಾಲಾ ಅವರಿಗೆ ಎಚ್ಚರ ಆಗಿದೆ. ಮನೆಯವರನ್ನು ನೋಡಿ ಖುಷಿ ಆಗಿದ್ದಾರೆ.


    ಇದನ್ನೂ ಓದಿ: BBK Season 09: ಬಿಗ್‌ ಬಾಸ್‌ ಮನೆಯಲ್ಲಿ ಸಾನ್ಯಾ-ರೂಪೇಶ್ ಶೆಟ್ಟಿ ಕಿತ್ತಾಟ! ಹಾಡು ಹೇಳಲು ಹೋಗಿ ಎಡವಟ್ಟು ಮಾಡಿಕೊಂಡ ಜೋಡಿ!


    ಅಮ್ಮಮ್ಮ ಇನ್ನಿಲ್ಲ?
    ಅಮ್ಮಮ್ಮ ಮನೆ ಬಳಿ ಬಂದು ಮನೆಯರನ್ನು ನೋಡುವಾಗ ಭುವಿ ಕೈ ಹಿಡಿದಿದ್ದರು. ತಕ್ಷಣ ಭುವಿ ಕೈ ಬಿಟ್ಟು ಬಿಡುತ್ತಾರೆ. ಕಣ್ಣು ಮುಚ್ಚುತ್ತಾರೆ. ಅದಕ್ಕೆ ಭುವಿ ಗಾಬರಿಗೊಂಡು, ರತ್ನಮ್ಮ ಇದ್ದಕ್ಕಿದ್ದ ಹಾಗೇ ನನ್ನ ಕೈ ಬಿಟ್ರು ಎಂದು ಹೇಳುತ್ತಾಳೆ. ಹರ್ಷ ಮಲಗಿಕೊಂಡ್ರು ಎನ್ನಿಸುತ್ತೆ ಎಂದು ಹೇಳ್ತಾನೆ. ದೇವ್ ಬಂದು ಚೆಕ್ ಮಾಡಿ ಗಾಬರಿ ಆಗುತ್ತಾನೆ.


    colors kannada serial, kannada serial, kannadathi serial, harsha mother rathnamala is no more, ಕನ್ನಡತಿ ಧಾರಾವಾಹಿ, ಕನ್ನಡತಿ ಧಾರಾವಾಹಿಯಲ್ಲಿ ಅಮ್ಮಮ್ಮನ ಅಧ್ಯಾಯ ಮುಕ್ತಾಯ, ರತ್ನಮಾಲಾ ಕೊನೆಯುಸಿರು?, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ಅಮ್ಮಮ್ಮ ಇನ್ನಿಲ್ಲ?


    ಮನೆಯವರೆಲ್ಲಾ ಕಣ್ಣೀರು
    ಅಮ್ಮಮ್ಮ ಭುವಿ ಹಿಡಿದ ಕೈ ಬಿಟ್ಟಿದ್ದಕ್ಕೆ ಮನೆಯವರೆಲ್ಲಾ ಗಾಬರಿ ಆಗಿದ್ದಾರೆ. ದೇವ್ ಬೇರೆ ಚೆಕ್ ಮಾಡಿ ಭಯಗೊಂಡಿದ್ದಾನೆ. ಅದಕ್ಕೆ ಮನೆಯವರೆಲ್ಲಾ ಕಣ್ಣೀರು ಹಾಕಿದ್ದಾರೆ. ಮನೆ ತನಕ ಬಂದ ರತ್ನಮಾಲಾ ಅವರು, ಮನೆ ಒಳಗೆ ಬರಲಿಲ್ಲ ಎಂದು ಕಣ್ಣೀರು ಇಟ್ಟಿದ್ದಾರೆ. ಹರ್ಷ-ಭುವಿ ಒಂದೇ ಸಮನೆ ಅಳುತ್ತಿದ್ದಾರೆ.


    ಇದನ್ನೂ ಓದಿ: Real Life: ಭಾಗ್ಯಲಕ್ಷ್ಮಿ ಧಾರಾವಾಹಿಯ ತಾಂಡವ್‍ನ ನಿಜವಾದ ಪತ್ನಿ ಯಾರು? ಮನೆಯಲ್ಲೂ ಕೋಪಿಷ್ಠಾನಾ ಈತ? 


    ಸುಂದರ ಸಂಸಾರ ಬಿಟ್ಟು ಹೊರಟಳಾ?
    ರತ್ನಮಾಲಾ ಅವರು ಕಂಪನಿಯನ್ನು ಬೆಳೆಸುತ್ತಾ, ಜೊತೆಗೆ ಸಂಸಾರವನ್ನು ನಿಭಾಯಿಸಿಕೊಂಡು ಹೋಗ್ತಾ ಇದ್ರು. ಯಾವಾಗಲು ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತಿದ್ರು. ತಮ್ಮ ಸಂಸಾರದ ಜೊತೆ ಮೈದುನನ ಸಂಸಾರದ ಜವಾಬ್ದಾರಿಯನ್ನು ತೆಗೆದುಕೊಂಡಿದ್ರು.


    colors kannada serial, kannada serial, kannadathi serial, harsha mother rathnamala is no more, ಕನ್ನಡತಿ ಧಾರಾವಾಹಿ, ಕನ್ನಡತಿ ಧಾರಾವಾಹಿಯಲ್ಲಿ ಅಮ್ಮಮ್ಮನ ಅಧ್ಯಾಯ ಮುಕ್ತಾಯ, ರತ್ನಮಾಲಾ ಕೊನೆಯುಸಿರು?, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ಭುವಿ-ಹರ್ಷ


    ಅವರ ಮಕ್ಕಳನ್ನು ತಮ್ಮ ಮಕ್ಕಳಂತೆ ಬೆಳೆಸಿದ್ದಾರೆ. ಅವರಿಗೂ ಅಷ್ಟೆ ದೊಡ್ಡಮ್ಮ ಎಂದ್ರೆ ಅಪಾರ ಗೌರವ, ಪ್ರೀತಿ. ಎಲ್ಲರನ್ನು ಸಮಾನಾಗಿ ಕಾಣ್ತಾರೆ ಎಂದು ವಿಶ್ವಾಸ ಇಟ್ಟುಕೊಂಡಿದ್ರು. ಆದ್ರೆ ಅವರು ಇಲ್ಲ ಎನ್ನುವುದನ್ನು ನಂಬಲು ಆಗ್ತಾ ಇಲ್ಲ.


    ಅಮ್ಮಮ್ಮ ಅಧ್ಯಾಯ ಮುಗಿದೇ ಹೋಯ್ತಾ? ಪ್ರೀತಿಯ ರತ್ನಮಾಲಾ ಇನ್ನಿಲ್ವಾ? ಮುಂದೇನಾಗುತ್ತೆ ಅಂತ ನೋಡೋಕೆ ಕನ್ನಡತಿ ಸೀರಿಯಲ್ ನೋಡಬೇಕು.

    Published by:Savitha Savitha
    First published: