• Home
 • »
 • News
 • »
 • entertainment
 • »
 • Kannadathi: ಹರ್ಷನ ಮುಂದೆ ವಿಲ್ ಸತ್ಯ ಬಯಲು, ತಲೆ ಕೆಳಗಾದ ವರು ಲೆಕ್ಕಾಚಾರ

Kannadathi: ಹರ್ಷನ ಮುಂದೆ ವಿಲ್ ಸತ್ಯ ಬಯಲು, ತಲೆ ಕೆಳಗಾದ ವರು ಲೆಕ್ಕಾಚಾರ

ಹರ್ಷನ ಮುಂದೆ ವಿಲ್ ಸತ್ಯ ಬಯಲು!

ಹರ್ಷನ ಮುಂದೆ ವಿಲ್ ಸತ್ಯ ಬಯಲು!

ಲಾಯರ್ ಆಸ್ತಿಯೆಲ್ಲಾ ಭುವಿ ಹೆಸರಿಗೆ ಇದೆ ಎಂದು ಹೇಳುತ್ತಿದ್ದಂತೆ ಹರ್ಷ ಶಾಕ್ ಆಗಿ ಎದ್ದು ನಿಂತಿದ್ದಾನೆ. ಅಮ್ಮಮ್ಮ ನನ್ನ ಹೆಸರಿಗೆ ಬಿಟ್ಟು ನನ್ನ ಪತ್ನಿ ಹೆಸರಿಗೆ ಯಾಕೆ ಬರೆದ್ರೂ ಎಂದು ಚಿಂತೆ ಮಾಡುತ್ತಿದ್ದಾನೆ.

 • News18 Kannada
 • Last Updated :
 • Karnataka, India
 • Share this:

  ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ ಧಾರಾವಾಹಿ (Kannadathi Serial) ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ, ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡುತ್ತಿದೆ. ಧಾರಾವಾಹಿಯಲ್ಲಿ ಅಮ್ಮಮ್ಮನ ಅಧ್ಯಾಯ ಮುಕ್ತಾಯವಾಗಿದೆ. ಅಮ್ಮಮ್ಮ ತನ್ನ ಹೆಸರಿಗೆ ವಿಲ್ ಬರೆದಿರುವು ಭುವಿಗೆ ಗೊತ್ತಾಗಿದೆ. ಅದನ್ನು ಹರ್ಷನ ಬಳಿ ಹೇಳಲು ಒದ್ದಾಡುತ್ತಿದ್ದಾಳೆ. ಹರ್ಷನಿಗೆ (Harsha) ಲಾಯರ್ (Lawyer) ಮೂಲಕ ವಿಲ್ ಸತ್ಯ ಗೊತ್ತಾಗಿದೆ


  ಭುವಿಗೆ ಪ್ರಾಣ ಸಂಕಟ
  ಧಾರಾವಾಹಿಯಲ್ಲಿ ರತ್ನಮಾಲಾ ಅಧ್ಯಾಯ ಮುಕ್ತಾಯವಾಗಿದೆ. ಸದ್ಯ ಅವರು ಆಸ್ತಿಗೆ ಹಕ್ಕುದಾರ ತಾನೇ ಎಂದುಕೊಂಡಿದ್ದ ಹರ್ಷ. ಆದ್ರೆ ರತ್ನಮ್ಮ ತನ್ನೆಲ್ಲಾ ಆಸ್ತಿಯನ್ನು ಭುವಿ ಹೆಸರಿಗೆ ಮಾಡಿ ಹೋಗಿದ್ದಾರೆ. ಈ ಸತ್ಯ ಭುವಿಗೂ ಗೊತ್ತಾಗಿದೆ. ಹರ್ಷನ ಹೆಸರಿಗೆ ಬಿಟ್ಟು ಆಸ್ತಿಯೆಲ್ಲಾ ನನ್ನ ಹೆಸರಿಗೆ ಏಕೆ ಬರೆದ್ರೂ ಎಂದು ಗೊಂದಲದಲ್ಲಿದ್ದಾಳೆ. ಅದನ್ನು ಮೊದಲು ಹರ್ಷನ ಬಳಿ ಹೇಳಬೇಕು ಎಂದು ಚಡಪಡಿಸುತ್ತಿದ್ದಾಳೆ.


  ಹರ್ಷನನ್ನು ಭೇಟಿಯಾಗಲು ಬಂದ ಲಾಯರ್
  ಹರ್ಷ ಅಮ್ಮಮ್ಮನ ಕಾರ್ಯಗಳನ್ನು ಮುಗಿಸಿ, ಕಚೇರಿಯ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾನೆ. ರತ್ನಮಾಲಾ ಅವರು ಮಾಡಬೇಕಿದ್ದ ಕೆಲಸಗಳನ್ನು ಅವನೇ ಮಾಡಬೇಕಿದೆ. ಆಗ ಲಾಯರ್ ಅಲ್ಲಿಗೆ  ಕಾರ್ತಿಕ್ ಬರುತ್ತಾರೆ. ಅರ್ಜೆಂಟ್ ಆಗಿ ಮಾತನಾಡಬೇಕು ಎಂದು ಹೇಳ್ತಾರೆ. ಹರ್ಷ ನಾಳೆ ಬನ್ನಿ ಅಂದ್ರೂ ಕೇಳದೇ ಈ ಕೂಡಲೇ ಮಾತನಾಡಬೇಕು ಎನ್ನುತ್ತಾನೆ. ಹರ್ಷ ಸರಿ ಎನ್ನುತ್ತಾನೆ.


  ಇದನ್ನೂ ಓದಿ: Bigg Boss Kannada: ಬಿಗ್ ಬಾಸ್ ಮನೆಯಲ್ಲಿ 100 ದಿನ ಪೂರೈಕೆ, ಗೆಲುವು ಯಾರಿಗೆ? 


  ಭುವಿ ಹೆಸರಲ್ಲಿದೆ ಎಲ್ಲಾ ಆಸ್ತಿ
  ಲಾಯರ್ ಹರ್ಷನ ಬಳಿ ಮಾತನಾಡುತ್ತಿದ್ದಾರೆ. ಮಾತನಾಡುತ್ತಾ, ಹರ್ಷ ಈ ಎಲ್ಲಾ ಆಸ್ತಿ ಭುವಿ ಹೆಸರಲ್ಲಿ ಇದೆ. ರತ್ನಮಾಲಾ ಮೇಡಂ ಸಾಯೋಕು ಮೊದಲೇ ಪ್ರಾಪರ್ಟಿಯನ್ನು ಸೌಪರ್ಣಿಕಾ ಹೆಸರಿಗೆ ಮಾಡಿದ್ದಾರೆ. ಈ ಸತ್ಯ ನಿನಗೆ ಗೊತ್ತಿರಲಿ ಎಂದು ಹೇಳಲು ಬಂದೆ ಎಂದು ಹೇಳುತ್ತಾನೆ.


  colors kannada serial, kannada serial, kannadathi serial, harsha know about property, bhuvi try to speak with harsha about property, ಕನ್ನಡತಿ ಧಾರಾವಾಹಿ, ಹರ್ಷನ ಮುಂದೆ ವಿಲ್ ಸತ್ಯ ಬಯಲು, ಭುವಿ ಮೇಲೆ ತಪ್ಪು ತಿಳಿದುಕೊಳ್ತಾನಾ?, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
  ಭುವಿ


  ಹರ್ಷನಿಗೆ ಶಾಕ್
  ಲಾಯರ್ ಆಸ್ತಿಯೆಲ್ಲಾ ಭುವಿ ಹೆಸರಿಗೆ ಇದೆ ಎಂದು ಹೇಳುತ್ತಿದ್ದಂತೆ ಹರ್ಷ ಶಾಕ್ ಆಗಿ ಎದ್ದು ನಿಂತಿದ್ದಾನೆ. ಅಮ್ಮಮ್ಮ ನನ್ನ ಹೆಸರಿಗೆ ಬಿಟ್ಟು ನನ್ನ ಪತ್ನಿ ಹೆಸರಿಗೆ ಯಾಕೆ ಬರೆದ್ರೂ ಎಂದು ಚಿಂತೆ ಮಾಡುತ್ತಿದ್ದಾನೆ. ತಾನೇ ಯಜಮಾನ ಎಂದುಕೊಂಡಿದ್ದ ಹರ್ಷ ಒಮ್ಮೆಲೇ ಕುಸಿದಿದ್ದಾನೆ.


  ಭುವಿ ಮೇಲೆ ತಪ್ಪು ತಿಳಿದುಕೊಳ್ತಾನಾ?
  ವಿಲ್ ವಿಚಾರವಾಗಿ ಹರ್ಷ ಭುವಿ ಮೇಲೆ ತಪ್ಪು ತಿಳಿದುಕೊಳ್ತಾನಾ? ತನ್ನನ್ನ ಬಿಟ್ಟು ಭುವಿಗೆ ಯಾಕ್ ಬರೆದ್ರು? ಇದು ಭುವಿಗೆ ಗೊತ್ತಾ? ಗೊತ್ತಿದ್ರೂ ನನ್ನ ಬಳಿ ಹೇಳಿಲ್ವಾ? ಅಮ್ಮಮ್ಮ-ಭುವಿ ಸೇರಿಯೇ ಈ ಕೆಲಸ ಮಾಡಿದ್ದಾರಾ? ಭುವಿ ಈ ರೀತಿ ಮಾಡಿದಳಾ? ಇದೇ ರೀತಿ ಹರ್ಷನ ಮನಸ್ಸಲ್ಲಿ ನೂರೆಂಟು ಪ್ರಶ್ನೆ ಹುಟ್ಟಬಹುದು. ಭುವಿ ಮೇಲೆ ತಪ್ಪು ತಿಳಿದುಕೊಳ್ಳಬಹುದು.


  ಇದನ್ನೂ ಓದಿ: Bigg Boss Kannada: ವೈಲ್ಡ್ ಕಾರ್ಡ್ ಎಂಟ್ರಿ ಆಗಿದ್ದು ದೀಪಿಕಾ ದಾಸ್ ಅಂತಿದ್ದಾರೆ ಜನ, ನಿಜನಾ? 


  ಭುವಿ ಬಳಿ ಸುಳ್ಳು ಹೇಳಿದ ವರು
  ಭುವಿ ಈ ವಿಲ್ ವಿಚಾರವನ್ನು ಹರ್ಷನ ಬಳಿ ಹೇಳಬೇಕು ಎಂದುಕೊಂಡಿರುತ್ತಾಳೆ. ಅದನ್ನು ವರು ತಡೆಯುತ್ತಾಳೆ. ಈ ವಿಚಾರ ನನಗೆ ನಿನಗಿಂತ ಮೊದಲೇ ಗೊತ್ತಿತ್ತು. ಆಸ್ಪತ್ರೆಯಲ್ಲಿ ರತ್ನಮಾಲಾ ಮೇಡಂ ಹೇಳಿದ್ರು. ಹರ್ಷನಿಗೂ ಈ ವಿಚಾರ ಗೊತ್ತು. ನೀನು ಹೇಳಬೇಡು ಎಂದು ಸುಳ್ಳು ಹೇಳಿದ್ದಾಳೆ. ಈ ವಿಚಾರವಾಗಿ ಇಬ್ಬರ ಮಧ್ಯೆ ಅಸಮಾಧಾನ ತುರುವುದು ವರು ಪ್ಲ್ಯಾನ್. ಅಲ್ಲದೇ ಈ ವಿಚಾರ ನಾನೇ ಹೇಳಬೇಕು ಎಂದು ವರು ಕಾಯ್ತಾ ಇದ್ದಾಳೆ.


  colors kannada serial, kannada serial, kannadathi serial, harsha know about property, bhuvi try to speak with harsha about property, ಕನ್ನಡತಿ ಧಾರಾವಾಹಿ, ಹರ್ಷನ ಮುಂದೆ ವಿಲ್ ಸತ್ಯ ಬಯಲು, ಭುವಿ ಮೇಲೆ ತಪ್ಪು ತಿಳಿದುಕೊಳ್ತಾನಾ?, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
  ಭುವಿ ಬಳಿ ಸುಳ್ಳು ಹೇಳಿದ ವರು


  ಹರ್ಷನ ಮುಂದಿನ ನಡೆ ಏನು? ಭುವಿ ಇದನ್ನು ಹೇಗೆ ನಿಬಾಯಿಸುತ್ತಾಳೆ? ವರೂ ಪ್ಲ್ಯಾನ್ ವರ್ಕ್ ಆಗುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ಕನ್ನಡತಿ ಸೀರಿಯಲ್ ನೋಡಬೇಕು.

  Published by:Savitha Savitha
  First published: