Kannadathi: ಸಾನಿಯಾ ಗುಟ್ಟು ಹರ್ಷನ ಮುಂದೆ ರಟ್ಟು, ಏನ್ ಪ್ಲ್ಯಾನ್ ಮಾಡಿದ್ರೂ ಅವಳಿಗೇ ತಿರುಗೇಟು!

ವಿದ್ಯಾರ್ಥಿಗಳ ಜೊತೆಗೆ ಮನೆಗೆ ಬಂದಿರುವ ಸಾನಿಯಾ ಕಡೆ ಹುಡುಗ ಮನೆ ಹುಡುಕುತ್ತಿದ್ದಾನೆ. ಸಾನಿಯಾ ಕರೆ ಮಾಡಿ ಹೇಳಿದಂತೆ ಕೇಳುತ್ತಿದ್ದಾನೆ. ಆ ಹುಡುಗ ಅಮ್ಮಮ್ಮನ ಕೋಣೆಗೆ ಕದ್ದು ಬರುತ್ತಾನೆ. ಆದ್ರೆ ಅಲ್ಲಿ ಹರ್ಷ ಕೂತಿರುತ್ತಾನೆ. ಅದನ್ನು ನೋಡಿ ಆತ ಶಾಕ್ ಆಗಿದ್ದಾನೆ.

ಸಾನಿಯಾ-ಹರ್ಷ

ಸಾನಿಯಾ-ಹರ್ಷ

  • Share this:
    ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ (Serials) ಕನ್ನಡತಿ (Kannadathi) ಧಾರಾವಾಹಿ ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್‍ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ. ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು (Kannada Fans) ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡುತ್ತಿದೆ. ಅಮ್ಮಮ್ಮ ತನ್ನ ಕಂಪನಿಯ ಎಂಡಿ (MD) ಪಟ್ಟವನ್ನು ಭುವಿಗೆ ಕೊಡಲು ರೆಡಿಯಾಗಿದ್ದಾಳೆ. ಇದನ್ನು ಕೇಳಿಸಿಕೊಂಡ ಸಾನಿಯಾಗೆ ಶಾಕ್ ಆಗಿದೆ. ಅವಳು ಏನೇ ಪ್ಲ್ಯಾನ್ (Plan) ಮಾಡಿದ್ರೂ ಅದನ್ನು ಹರ್ಷ ಉಲ್ಟಾ ಮಾಡ್ತಾನೆ.

    ಭುವಿಗೆ ಕಂಪನಿ ಜವಾಬ್ದಾರಿ
    ಅಮ್ಮಮ್ಮ ಭುವಿ ನೋಡಿದ ದಿನದಿಂದಲೇ ಈಕೆಯೇ ನಮ್ಮ ಮನೆ ಸೊಸೆ ಎಂದು ಭಾವಿಸಿದ್ದಳು. ಅದಕ್ಕೆ ಮೊದಲೇ ತನ್ನ ಎಲ್ಲ ಆಸ್ತಿಯನ್ನು ಅವಳ ಹೆಸರಿಗೆ ಬರೆಸಿದ್ದಳು. ಈಗ ಭುವಿ, ಹರ್ಷನನ್ನು ಮದುವೆ ಆಗಿ ಆ ಮನೆ ಸೊಸೆಯಾಗಿದ್ದಾಳೆ. ಅದಕ್ಕೆ ಅಮ್ಮಮ್ಮ ಕಂಪನಿಯ ಎಂಡಿ ಸ್ಥಾನ ಕೊಡಲು ರೆಡಿಯಾಗಿದ್ದಾಳೆ. ತನ್ನ ರೂಮ್‍ನಲ್ಲಿರುವ ಚೇರ್ ಮೇಲೆ ಕೂರಿಸಿ, ಭುವಿ ಇನ್ಮೇಲೆ ಕಂಪನಿ ಜವಾಬ್ದಾರಿ ತೆಗೆದುಕೋ, ಎಂಡಿ ಆಗು ಎಂದು ಹೇಳಿದ್ದಾಳೆ.

    ಸಾನಿಯಾಗೆ ಶಾಕ್, ಆತಂಕ
    ಅಮ್ಮಮ್ಮ ಭುವಿಗೆ ಎಂಡಿ ಆಗು ಅನ್ನುವುದನ್ನು ಕೇಳಿಸಿಕೊಂಡ ಸಾನಿಯಾ ಶಾಕ್ ಆಗಿದ್ದಾಳೆ. ಇದನ್ನು ಹೇಗಾದ್ರೂ ತಪ್ಪಿಸಬೇಕು. ಅಮ್ಮಮ್ಮನ ಮರೆವಿನ ಕಾಯಿಲೆ ಬಗ್ಗೆ ತಿಳಿದುಕೊಳ್ಳಬೇಕು ಎಂದು ಹಂಬಲಿಸುತ್ತಿದ್ದಾಳೆ. ಅದಕ್ಕೆ ಭುವಿ ಸ್ಟೂಡೆಂಟ್ಸ್ ಜೊತೆ ತನ್ನ ಕಡೆಯ ಹುಡುಗನ್ನು ಕಳಿಸಿದ್ದಾಳೆ.

    ಇದನ್ನೂ ಓದಿ: Paaru Serial: ಆದಿಯ ಎರಡನೇ ಮದುವೆ ಯೋಗ ತಡೆಯುವ ಅನಿವಾರ್ಯತೆಯಲ್ಲಿ ಅಖಿಲಾಂಡೇಶ್ವರಿ, ಸಕ್ಸಸ್ ಆಗುತ್ತಾ ಪ್ಲ್ಯಾನ್?

    ಭುವಿ ಖುಷಿಗೆ ಹರ್ಷನ ಪ್ಲ್ಯಾನ್
    ಕನ್ನಡ ಪಾಠ ಮಾಡ್ತಿದ್ದ ಭುವಿಯನ್ನು ಟೀಚರ್ ಕೆಲಸದಿಂದ ಹರ್ಷ ಬಿಡಿಸಿದ್ದಾನೆ. ಇದರಿಂದ ಭುವಿ ಸ್ವಲ್ಪ ಬೇಸರದಲ್ಲಿ ಇದ್ದಾಳೆ. ಅದಕ್ಕೆ ಹರ್ಷ ಆಕೆಯನ್ನು ಸಂತೋಷ ಪಡಿಸಬೇಕೆಂದು ವಿದ್ಯಾರ್ಥಿಗಳ್ನು ಮನೆಗೆ ಕರೆಸಿದ್ದಾನೆ. ಅದರಲ್ಲಿ ಸಾನಿಯಾ ಕಳಿಸಿದ ಹುಡುಗ ಸಹ ಇದ್ದಾನೆ. ಅದನ್ನು ನೋಡಿ ಭುವಿ ಮತ್ತು ಹರ್ಷ ಇಬ್ಬರೂ ಶಾಕ್ ಆಗಿದ್ದಾರೆ. ಆದರೂ ಏನೂ ಮಾತನಾಡದೇ ಸುಮ್ಮನೇ ಇದ್ದಾರೆ.

    Colors Kannada serial, Kannada serial, Kannadathi Serial, Kannadathi serial today episode, Company MD post, Harsha know about plan of Saniya, ಕನ್ನಡತಿ ಧಾರಾವಾಹಿ, ಭುವಿಗೆ ಎಂಡಿ ಸ್ಥಾನ ಪಟ್ಟ ಕೊಡಲು ಅಮ್ಮಮ್ಮ ಸಿದ್ಧ, ಸಾನಿಯಾ ಗುಟ್ಟು ಹರ್ಷನ ಮುಂದೆ ರಟ್ಟು, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಕನ್ನಡತಿ


    ಮನೆ ಸರ್ಚ್ ಮಾಡುತ್ತಿರೋ ಸಾನಿಯಾ ಕಳಿಸಿದ ಹುಡುಗ
    ವಿದ್ಯಾರ್ಥಿಗಳ ಜೊತೆಗೆ ಮನೆಗೆ ಬಂದಿರುವ ಸಾನಿಯಾ ಕಡೆ ಹುಡುಗ ಮನೆ ಹುಡುಕುತ್ತಿದ್ದಾನೆ. ಸಾನಿಯಾ ಕರೆ ಮಾಡಿ ಹೇಳಿದಂತೆ ಕೇಳುತ್ತಿದ್ದಾನೆ. ಆ ಹುಡುಗ ಅಮ್ಮಮ್ಮನ ಕೋಣೆಗೆ ಕದ್ದು ಬರುತ್ತಾನೆ. ಆದ್ರೆ ಅಲ್ಲಿ ಹರ್ಷ ಕೂತಿರುತ್ತಾನೆ. ಅದನ್ನು ನೋಡಿ ಆತ ಶಾಕ್ ಆಗಿದ್ದಾನೆ. ನೀನು ಇಲ್ಲಿ ಬಂದೇ ಬರ್ತಿಯಾ ಅಂತ ಗೊತ್ತಿತ್ತು ಎಂದು ಹರ್ಷ ಹೇಳುತ್ತಿದ್ದಾನೆ.

    ಇದನ್ನೂ ಓದಿ: Ashika Ranganath: ಚುಟು ಚುಟು ಹುಡುಗಿಗೆ ಸೈಮಾ ಅವಾರ್ಡ್, ಖುಷಿಯಲ್ಲಿ ಮದಗಜ ಬೆಡಗಿ ಆಶಿಕಾ ರಂಗನಾಥ್

    ಸಾನಿಯಾ ಗುಟ್ಟು ರಟ್ಟು?
    ಸಾನಿಯಾ ಏನೇ ಪ್ಲ್ಯಾನ್ ಮಾಡಿದ್ರೂ ಹರ್ಷನ ಮುಂದೆ ನಡೆಯಲ್ಲ. ಅದು ಆಕೆಗೂ ಗೊತ್ತು ಆದ್ರೂ ಏನೇನು ಐಡಿಯಾ ಮಾಡಿ ಸಿಕ್ಕಿ ಹಾಕಿಕೊಳ್ಳುತ್ತಾಳೆ. ಈ ಬಾರಿಯೂ ಅದೇ ರೀತಿ ಆಗಿದೆ. ಆಕೆ ಕಳಿಸಿದ ಹುಡುಗ ಹರ್ಷನ ಕೈಯಲ್ಲಿ ತಗ್ಲಾಕೊಂಡಿದ್ದಾನೆ. ಈಗ ಆತನಿಗೆ ಹರ್ಷನ ಮುಂದೆ ನಿಜ ಹೇಳದೇ ಬೇರೆ ದಾರಿ ಇಲ್ಲ.

    Colors Kannada serial, Kannada serial, Kannadathi Serial, Kannadathi serial today episode, Company MD post, Harsha know about plan of Saniya, ಕನ್ನಡತಿ ಧಾರಾವಾಹಿ, ಭುವಿಗೆ ಎಂಡಿ ಸ್ಥಾನ ಪಟ್ಟ ಕೊಡಲು ಅಮ್ಮಮ್ಮ ಸಿದ್ಧ, ಸಾನಿಯಾ ಗುಟ್ಟು ಹರ್ಷನ ಮುಂದೆ ರಟ್ಟು, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಸಾನಿಯಾ-ಅಮ್ಮಮ್ಮ


    ಮುಂದೇನಾಗುತ್ತೆ? ಹರ್ಷ ಸಾನಿಯಾಗೆ ಏನ್ ಮಾಡ್ತಾನೆ? ಎಲ್ಲವನ್ನೂ ನೋಡಲು ಕನ್ನಡತಿ ಸೀರಿಯಲ್ ನೋಡಬೇಕು.
    Published by:Savitha Savitha
    First published: