Kannadathi: ವಿಘ್ನಗಳೆಲ್ಲಾ ಕಳೆದು ಸುಸೂತ್ರವಾಗಿ ನಡೆಯುತ್ತಾ ಹರ್ಷ ಭುವಿ ಮದುವೆ?

‘ಹವಿ’ ನಿಶ್ಚಿತಾರ್ಥ ನೆರವೇರಿದೆ. 'ಕನ್ನಡತಿ' ಧಾರಾವಾಹಿಯಲ್ಲಿ ವೀಕ್ಷಕರು ಹರ್ಷ, ಭುವಿ ಮದುವೆಗಾಗಿ ಎದುರು ನೋಡುತ್ತಿದ್ದಾರೆ

ಕನ್ನಡತಿ ಧಾರಾವಾಹಿ

ಕನ್ನಡತಿ ಧಾರಾವಾಹಿ

 • Share this:
  ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ ‘ಕನ್ನಡತಿ’ (Kannadathi) ಕೂಡ ಒಂದು. ‘ಕನ್ನಡತಿ’ ಧಾರಾವಾಹಿಯಲ್ಲಿ ಇದೀಗ ದೊಡ್ಡ ತಿರುವು ಸಿಕ್ಕಿದೆ. ‘ಹವಿ’ ನಿಶ್ಚಿತಾರ್ಥ  (Engagement) ನೆರವೇರಿದೆ. 'ಕನ್ನಡತಿ' ಧಾರಾವಾಹಿಯಲ್ಲಿ ವೀಕ್ಷಕರು ಹರ್ಷ (Harsha) , ಭುವಿ (Bhuvi) ಮದುವೆಗಾಗಿ ಎದುರು ನೋಡುತ್ತಿದ್ದಾರೆ, ಇವರಿಬ್ಬರು ಪರಸ್ಪರ ಪ್ರೀತಿ ಹೇಳಿಕೊಂಡು, ನಿಶ್ಚಿತಾರ್ಥದ ಜೊತೆಗೆ ಪ್ರಿ ವೆಡ್ಡಿಂಗ್ (Pre-Wedding) ಫೋಟೋಶೂಟ್ (Photoshoot) ಕೂಡ ಮಾಡಿಸಿಕೊಂಡಿರೋದು ಅಭಿಮಾನಿಗಳಿಗಂತೂ ಸಖತ್ ಖುಷಿ ನೀಡಿದೆ. ಭುವಿ, ಹರ್ಷನ ಜೋಡಿಯನ್ನು ಈ ರೀತಿ ಕೂಡ ನೋಡಬಹುದಲ್ವಾ ಎಂದು ಅವರು ಸರ್ಪ್ರೈಸ್ ಆಗಿದ್ದಾರೆ.

  ಹರ್ಷ, ಭುವಿ ಮದುವೆ ಆಹ್ವಾನ ಪತ್ರಿಕೆ ರೆಡಿ

  ಭುವಿ ಮದುವೆಯ ಆಹ್ವಾನ ಪತ್ರಿಕೆ ರೆಡಿಯಾಗಿದೆ.  ಎಷ್ಟೇ ಬೇಜಾರಾದರೂ ಭುವಿ ಎಲ್ಲವನ್ನು ಸಹಿಸಿಕೊಂಡಿದ್ದಾಳೆ. ಇನ್ನೊಂದು ಕಡೆ ಸಾನಿಯಾ ಕೂಡ ಭುವಿಯ ಸ್ವಾಭಿಮಾನ, ಅವಳ ಅಂತಸ್ತನ್ನು ಕೆಣಕುವ ಪ್ರಯತ್ನ ಮಾಡುತ್ತಿದ್ದಾಳೆ. ಈಗಾಗಲೇ ಸಾಕಷ್ಟು ತಿರುವುಗಳಿಗೆ ಸಾಕ್ಷಿಯಾಗಿರುವ 'ಕನ್ನಡತಿ' ಧಾರಾವಾಹಿಯಲ್ಲಿ ಮುಂದೆ ಏನೇನು ನಡೆಯಲಿದೆಯೋ ಕಾದು ನೋಡಬೇಕಿದೆ. ಈ ಎಲ್ಲ ಸಮಸ್ಯೆಗಳ ಬಗ್ಗೆ ಹರ್ಷ, ಭುವಿ ಮದುವೆಯಾಗಲಿದೆಯಾ? ಎಂದು ಕಾದು ನೋಡಬೇಕಿದೆ. ಈಗಾಗಲೇ ಹರ್ಷ ಈ ಸೀರಿಯಲ್‌ನ ಟೈಟಲ್ ಕಾರ್ಡ್ ಕೂಡ ಬದಲಾಗಿದೆ, ಆಗಾಗ ಅಮ್ಮಮ್ಮನ ಆರೋಗ್ಯ ಹದಗೆಡುತ್ತಿದೆ. ಅಮ್ಮಮ್ಮ ಪಾತ್ರಧಾರಿ ಚಿತ್ಕಲಾ ಬಿರಾದಾರ್ ಅವರು 'ಕನ್ನಡತಿ' ಧಾರಾವಾಹಿಯ ಮದುವೆಗೆ ಬನ್ನಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಪ್ರೇಕ್ಷಕರಿಗೆ ಆಹ್ವಾನ ನೀಡಿದ್ದಾರೆ.

  ಚಿಕ್ಕಪ್ಪ ಎಂಬ ಇನ್ನೊಬ್ಬ ವಿಲನ್

  ವರೂಧಿನಿ, ಸಾನಿಯಾ ಸಾಕಾಗಲ್ಲ ಅಂತ ಹರ್ಷನ ಚಿಕ್ಕಪ್ಪ ಈಗ ಈ ಮದುವೆಗೆ ಅಡ್ಡಲಾಗಿದ್ದಾನೆ. ಹರ್ಷ, ಭುವಿ ಖುಷಿಯಿಂದ ಮದುವೆ ಆಗೋದು ಅವನಿಗೆ ಇಷ್ಟ ಇಲ್ಲ. ತನ್ನ ಮಗಳು ಸುಚಿ ಮದುವೆ ನಿಲ್ಲಲು ಭುವಿ ಕಾರಣ, ಅಪ್ಪನಿಲ್ಲದ ಇವಳಿಗೆ ತಾನು ಯಾಕೆ ತಂದೆ ಸ್ಥಾನದಲ್ಲಿ ನಿಲ್ಲಲಿ ಎಂಬ ಪ್ರಶ್ನೆಯನ್ನು ಚಿಕ್ಕಪ್ಪ ಎಲ್ಲರ ಮುಂದೆ ಇಟ್ಟಿದ್ದಾನೆ. ಸಂಪ್ರದಾಯದ ಹೆಸರಲ್ಲಿ ಭುವಿಗೆ ಈಗಾಗಲೇ ಚಿಕ್ಕಪ್ಪ ಅವಮಾನ ಮಾಡಿದ್ದಾನೆ.

  ವಿಘ್ನಗಳ ನಡುವೆಯೂ ನೆರವೇರಿದ ‘ಹವಿ’ ನಿಶ್ಚಿತಾರ್ಥ
  ಅಕ್ಕಿ ಮಿಲ್ ಸಾಹುಕರನಿಗೆ ಭುವಿಯನ್ನ ಕೊಟ್ಟು ಮದುವೆ ಮಾಡಬೇಕು ಎಂಬುದು ಮಂಗಳಮ್ಮ ಅಜ್ಜಿಯ ಬಯಕೆಯಾಗಿತ್ತು. ಅಷ್ಟರಲ್ಲೇ ಹರ್ಷ - ಭುವಿಯ ಪ್ರೇಮ ಕಹಾನಿ ಮಂಗಳಮ್ಮ ಅಜ್ಜಿಗೆ ಗೊತ್ತಾಯಿತು. ವಾದ, ವಿವಾದ, ರಂಪಾಟವೆಲ್ಲಾ ಮುಗಿದ ನಂತರ ಹರ್ಷ - ಭುವಿ ಮದುವೆಗೆ ಅಜ್ಜಿ ಒಪ್ಪಿಗೆ ಸೂಚಿಸಿದರು. ಭುವಿಯ ತಂದೆ ಮನೆಯಲ್ಲೇ ನಿಶ್ಚಿತಾರ್ಥ ನಿಗದಿಯಾಯಿತು.

  ಇದನ್ನೂ ಓದಿ: Yamuna Srinidhi: ಯಮುನಾ ಶ್ರೀನಿಧಿ ಅವರು ಉತ್ತಮ ಭರತನಾಟ್ಯ ಡ್ಯಾನ್ಸರ್ ಕೂಡ ಹೌದು ನೀವೇ ಓದಿ ನೋಡಿ

  ನಿಶ್ಚಿತಾರ್ಥಕ್ಕೂ ಮುನ್ನ ಭುವಿಯ ಸೀರೆ ಸುಟ್ಟುಹೋಯ್ತು, ಭುವಿಯ ಚಿಕ್ಕಮ್ಮನಿಗೆ ಕರೆಂಟ್ ಶಾಕ್ ತಗುಲಿತು, ನಿಶ್ಚಿತಾರ್ಥಕ್ಕೆಂದು ಖರೀದಿಸಿದ ಉಂಗುರಗಳು ಕಾಣೆಯಾದವು. ಇಷ್ಟೆಲ್ಲಾ ವಿಘ್ನಗಳ ನಡುವೆಯೂ ‘ಹವಿ’ ಎಂಗೇಜ್‌ಮೆಂಟ್ ನಡೆಯಿತು. ರೇಶ್ಮೆ ದಾರದಲ್ಲೇ ಉಂಗುರಗಳನ್ನು ಮಾಡಿ ಹರ್ಷ ಹಾಗೂ ಭುವಿ ಬದಲಾಯಿಸಿಕೊಂಡರು. ಬಳಿಕ ಈ ಹಿಂದೆ ಖರೀದಿಸಿದ್ದ ‘ಹವಿ’ ಉಂಗುರವನ್ನು ಭುವಿಗೆ ಹರ್ಷ ತೊಡಿಸಿದರು.  ಇದನ್ನೂ ಓದಿ: Jothe Jotheyali: ರೋಚಕ ತಿರುವಿನೊಂದಿಗೆ 'ಜೊತೆ ಜೊತೆಯಲಿ', ರಾಜನಂದಿನಿಯಾಗಿ ಬಂದ ಅನು ಸಿರಿಮನೆ!

  ಹರ್ಷ, ಭುವಿ ಮದುವೆ ವಿಷಯ ಅರಗಿಸಿಕೊಳ್ಳದ ವರೂಧಿನಿ

  ಸಮಯ ಸಿಕ್ಕಾಗಲೆಲ್ಲ ವರೂಧಿನಿ ಬ್ರೇನ್ ವಾಶ್ ಮಾಡುವ ಸಾನಿಯಾ ಮುಂದೆ ಏನೇನು ಮಾಡುತ್ತಾಳೋ ಏನೋ! 'ಸೈಕೋ' ವರೂಧಿನಿಗೆ ಒಮ್ಮೆ ತನ್ನ ಪ್ರಾಣ ಸ್ನೇಹಿತೆ ಭುವಿ ಚಿಂತೆಯಾದರೆ, ಇನ್ನೊಮ್ಮೆ ತನ್ನ ಹೀರೋ ಹರ್ಷ ನೆನಪಾಗುತ್ತಾನೆ.  ಕುತಂತ್ರಿ ಸಾನಿಯಾ ಈ ಮದುವೆ ತಡೆಯಲು ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನ ಮಾಡುತ್ತಲೇ ಇದ್ದಾಳೆ. ಹರ್ಷನ ವ್ಯಾಮೋಹಕ್ಕೆ ಬಿದ್ದು ಮುಂದೆ ವರು ಏನೂ ಬೇಕಾದರೂ ಮಾಡಿಯಾಳು, ಅದನ್ನು ಅಲ್ಲಗಳೆಯುವಂತಿಲ್ಲ. ಹರ್ಷ, ಭುವಿ ಮದುವೆಯಾಗುತ್ತಾರೆ ಎಂಬುದನ್ನೂ ಈ ಕ್ಷಣಕ್ಕೂ ವರುಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಈ ಜೋಡಿ ಒಟ್ಟಿಗೆ ನಗುನಗುತ್ತ ಇದ್ದರೆ,  ವರು ಸಹಿಸಿಕೊಳ್ಳಲ್ಲ.
  Published by:Swathi Nayak
  First published: