Kannadathi Serial: ಹೀರೋ ಜೊತೆ ಮದುವೆ ಆಗೋದು ನಾನೇ ಅಂತಿದ್ದಾಳೆ ವರೂಧಿನಿ!

ಹರ್ಷ ಭೂವಿ ಮದುವೆಯ ಸಂಚಿಕೆಗಳನ್ನು ಕಣ್ತುಂಬ ನೋಡಲು ಕಾಯುತ್ತಿದ್ದಾರೆ ಅಭಿಮಾನಿಗಳು. ಈಗಾಗಲೇ ವಿಭಿನ್ನ ರೀತಿಯಲ್ಲಿ ಫೋಟೋಶೂಟ್ ಮಾಡಿ ಪ್ರೇಕ್ಷಕರ ಮನಗೆದ್ದ ಹವಿ ಜೋಡಿಯು ಮತ್ತೆ ಇನ್ನು ಯಾವ ಸ್ಟೈಲ್ ನಲ್ಲಿ ಮದುವೆಯಾಗುತ್ತಾರೆ ಎನ್ನುವುದನ್ನು ನೋಡಲು ಕಾಯುತ್ತಿದ್ದಾರೆ. 

ಕನ್ನಡತಿ ಸೀರಿಯಲ್‌

ಕನ್ನಡತಿ ಸೀರಿಯಲ್‌

 • Share this:
  ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಜನಮೆಚ್ಚಿದ ಧಾರಾವಾಹಿಯಾಗಿ ಮೂಡಿ ಬರುತ್ತಿದೆ ಕನ್ನಡತಿ (Kannadathi) ಧಾರಾವಾಹಿ. ತನ್ನ ವಿಭಿನ್ನ ಕಥೆಯಿಂದ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಹರ್ಷ (Harsha) ಭೂವಿ (Bhuvi) ಮದುವೆಯ ಸಂಚಿಕೆಗಳನ್ನು ಕಣ್ತುಂಬ ನೋಡಲು ಕಾಯುತ್ತಿದ್ದಾರೆ ಅಭಿಮಾನಿಗಳು. ಈಗಾಗಲೇ ವಿಭಿನ್ನ ರೀತಿಯಲ್ಲಿ ಫೋಟೋಶೂಟ್ ಮಾಡಿ ಪ್ರೇಕ್ಷಕರ ಮನಗೆದ್ದ ಹವಿ (Havi) ಜೋಡಿಯು ಮತ್ತೆ ಇನ್ನು ಯಾವ ಸ್ಟೈಲ್ ನಲ್ಲಿ ಮದುವೆಯಾಗುತ್ತಾರೆ ಎನ್ನುವುದನ್ನು ನೋಡಲು ಕಾಯುತ್ತಿದ್ದಾರೆ. ಆದರೆ ವರೂ ಮಾತ್ರ ಇನ್ನೂ ಹರ್ಷ ಕುಮಾರ್ ಜೊತೆ ಹಸೆಮಣೆ ಏರುವವಳು ನಾನೇ ಅಂತಿದ್ದಾಳೆ.

  ವರೂಧಿನಿಗೆ ಹೀರೋನ ಜೊತೆ ಮದುವೆಯಾಗಬೇಕೆನ್ನುವ ಬಯಕೆ

  ಇದೀಗ ಮತ್ತೆ ವರೂಧಿನಿಯ ಮನಸಲ್ಲಿ ತನ್ನ ಹೀರೋನ ಜೊತೆ ಮದುವೆಯಾಗಬೇಕೆನ್ನುವ ಬಯಕೆ ಹುಟ್ಟಿದೆ. ಭುವಿ ಹಾಗೂ ಹರ್ಷ ಜೊತೆಯಾಗಿ ಸಮಯ ಕಳೆಯುವುದನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ವರೂಧಿನಿ. ಮತ್ತೇನಾದರೂ ತಂತ್ರ ಮಾಡಿ ಮದುವೆ ದಿನ ವಧುವನ್ನು ಬದಲಾಯಿಸುವ ಪ್ಲಾನ್ ಮಾಡಿದ್ದಾಳ ವರೂಧಿನಿ ಎನ್ನುವ ಪ್ರಶ್ನೆ ಪ್ರೇಕ್ಷಕರನ್ನು ಅತಿಯಾಗಿ ಕಾಡುತ್ತಿದೆ. ಮದುವೆ ವಿಚಾರದಲ್ಲೇನೋ ಆಕೆಗೆ ಆಸಕ್ತಿ ಇರುವಂತೆ ತೋರಿದರೂ ಮುಂದೆ ಏನಾದರೂ ತೊಂದರೆ ಮಾಡಬಹುದು ಎನ್ನುವ ಸಂಶಯ ಕೂಡ ಇದೆ. 

  ಇದನ್ನೂ ಓದಿ: Raja Rani 2: ರಿಯಲ್ ಜೋಡಿಗಳ ಗೇಮ್​ ಶೋಗೆ ದಿನಗಣನೆ, ಯಾರೆಲ್ಲಾ ಈ ಬಾರಿ ಆಡ್ತಾರೆ? ಇಲ್ಲಿದೆ ಲಿಸ್ಟ್

  'ಸಪ್ತಪದಿ' ಮೂಲಕವೇ ಈ ಮದುವೆ ಮುರಿದುಬೀಳಿಸೋ ಪ್ಲಾನ್?

  ಪ್ರೋಮೊದಲ್ಲಿ ವರೂ ಹೇಳಿದ ಪ್ರಕಾರ ವರು ಈಗ ತನ್ನ ಹೀರೋನನ್ನು ಪಡೆಯಲು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾಳೆ. ಇದು ನಿಜಕ್ಕೂ ನಿಜವಾಗಲಿದೆಯೋ ಇಲ್ಲವೋ ಎಂದು ಕಾದು ನೋಡಬೇಕಿದೆ. ಹರ್ಷ ಅವಳ ಹೀರೋ. ಅವನನ್ನು ಪಡೆಯೋದಕ್ಕೋಸ್ಕರ ಅವಳು ಏನು ಮಾಡೋದಕ್ಕೂ ರೆಡಿ ಇದ್ದಾಳೆ. ಸದ್ಯಕ್ಕೆ ತಾನು ನಡೆಸ್ತಿರೋ ವೆಡ್ಡಿಂಗ್ ಪ್ಲಾನರ್ ಕಂಪನಿ 'ಸಪ್ತಪದಿ' ಮೂಲಕವೇ ಈ ಮದುವೆ ಮುರಿದುಬೀಳಿಸೋ ಪ್ಲಾನ್ ಮಾಡ್ತಿದ್ದಾಳೆ. ಈ ಹಿಂದೆ ಎಂಗೇಜ್ಮೆಂಟ್ ನಲ್ಲೂ ಭುವಿಯ ರಿಂಗ್ ತನ್ನಲ್ಲೇ ಇಟ್ಟುಕೊಂಡು ಎಂಗೇಜ್ಮೆಂಟ್ ನಿಲ್ಲಿಸಲು ಹೊರಟಿದ್ದಳು ವರೂಧಿನಿ.

  ಅಭಿಮಾನಿಗಳು ಈ ಬಗ್ಗೆ ತಮ್ಮ ಅಸಮಾಧಾನವನ್ನು ಕೂಡ ಹೊರ ಹಾಕಿದ್ದಾರೆ. ಸೈಕೋ ವರೂಧಿನಿ ತನ್ನ ಹೀರೋಗಾಗಿ ಇಂತಹ ನೀಚ ಕೆಲಸಕ್ಕೆ ಇಳಿಯಲು ತಯಾರಿದ್ದಾಳೆ. ಏನೇ ಆದರೂ ಹರ್ಷ ಭೂವಿಯ ಮದುವೆ ಸುಸೂತ್ರವಾಗಿ ಯಾರದೇ ತಂತ್ರ ಗಳಿಲ್ಲದೆ ನಡೆಯಲಿ ಎಂದು ಅಭಿಮಾನಿಗಳು ಕೇಳಿಕೊಳ್ಳುತ್ತಿದ್ದಾರೆ.

  ಇದನ್ನೂ ಓದಿ: Sathya Serial: ಕೋಟೆ ಮನೆಯ ಸೊಸೆ ಸತ್ಯಾಳಿಗೆ ಪ್ರತಿ ದಿನ ಅಗ್ನಿ ಪರೀಕ್ಷೆ ! ಸೀತಾಳ ಮನಸ್ಸನ್ನು ಯಾವಾಗ ಗೆಲ್ಲುತ್ತಾಳೆ ಸತ್ಯಾ

  ಮದುವೆಯ ತಯಾರಿಯಲ್ಲಿರುವ ಭುವಿಗೆ ಆರ್ಥಿಕ ಸಂಕಷ್ಟ

  ಸ್ವಾಭಿಮಾನಿ ಭೂವಿ ಯಾರ ಬಳಿಯೂ ದುಡ್ಡಿಗಾಗಿ ಅಂಗಲಾಚುವುದಿಲ್ಲಾ. ಆದರೆ ಈಗ ಮದುವೆಯ ಸಂಪೂರ್ಣ ಜವಾಬ್ದಾರಿಯೂ ಅವಳ ಹೆಗಲ ಮೇಲಿದೆ. ಮದುವೆಯ ಖರ್ಚಿಗಾಗಿ ಪರದಾಡುವ ಭೂವಿಯನ್ನು ಕಂಡರೆ ಅಯ್ಯೋ ಎನಿಸುತ್ತದೆ. ಹಣವನ್ನು ಹೊಂದಿಸಲು ಎಲ್ಲಿಲ್ಲದ ಕಷ್ಟಪಡುತ್ತಿದ್ದಾಳೆ. ಆದರೆ ಎಷ್ಟೇ ಕಷ್ಟ ಬಂದರೂ ಆಕೆಯೇ ಅಮ್ಮಮ್ಮ ಬಳಿ ಆಗಲಿ ಹರ್ಷನ ಬಳಿಯಿಂದಾಗಲೀ ಆಗಲೇ ದುಡ್ಡಿನ ಸಹಾಯವನ್ನು ಪಡೆಯುವವಳಲ್ಲಾ. ಇಷ್ಟೆಲ್ಲಾ ಆರ್ಥಿಕ ಸಮಸ್ಯೆ ಇರುವ ಭುವಿ ಮದುವೆಯ ಕರ್ಚಿಗೆ ಹಣವನ್ನು ಹೇಗೆ ಹೊಂದಿಸುತ್ತಾಳೆ ಎನ್ನುವುದನ್ನು ನೋಡಬೇಕಿದೆ.

  ಹರ್ಷ-ಭುವಿ ಮದುವೆಯ ಖುಷಿಗೆ ಸಾಥ್‌ ಕೊಡೋಕೆ ಎಂದು 'ಗೀತಾ' ಸೀರಿಯಲ್ ಹೀರೋ ವಿಜಯ್ ಎಂಟ್ರಿ ಕೊಟ್ಟಾಗಿದೆ. 'ಗಿಣಿರಾಮ' ಹೀರೋ ಪುರುಷೋತ್ತಮ್ ಬರ್ತಿದ್ದಾರೆ. ಬಹುಶಃ ಮದ್ವೆಗೆ ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳ ಗ್ರಾಂಡ್ ಎಂಟ್ರೀ ಕೂಡ ಇರಬಹುದು. ಹರ್ಷ-ಭುವಿಯ ಕನ್ನಡದ ಮದುವೆಯಲ್ಲಿ ಎಲ್ಲರೂ ಭಾಗಿಯಾಗಿ ಜೋಡಿಗಳಿಗೆ ಹಾರೈಸಿ.
  Published by:Swathi Nayak
  First published: