ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ (Kannadathi) ಸೀರಿಯಲ್ (Serial) ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ, ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡ್ತಿದೆ. ಅಮ್ಮಮ್ಮ ರೀತಿ ಅಧಿಕಾರ ನಡೆಸಬೇಕು ಎಂದು ಭುವಿ ಅಂದುಕೊಂಡಿದ್ದಾಳೆ. ಅಧಿಕಾರ ಸ್ವೀಕಾರ ಮಾಡಿರೋ ಭುವಿ ಮೇಲೆ ಅಟ್ಯಾಕ್ (Attack) ಆಗಿದೆ. ಪತ್ನಿಯನ್ನು ಕಾಪಾಡಿದ್ದಾನೆ ಹರ್ಷ (Harsha).
ಎಂಡಿ ಆಗಿರುವ ಭುವಿ ಪ್ರಾಣ ಅಪಾಯದಲ್ಲಿ
ಭುವಿ ಎಂಡಿ ಆಗುತ್ತಿದ್ದಂತೆ, ಆಕೆ ಪ್ರಾಣಕ್ಕೆ ಅಪಾಯ ಎದುರಾಗಿದೆ. ಅಲ್ಲದೇ ಎಲ್ಲಾ ಆಸ್ತಿ ಈಕೆಯ ಹೆಸರಿಗೆ ಇದೆ. ಅದನ್ನು 5 ವರ್ಷ ವರ್ಗಾಯಿಸುವಂತಿಲ್ಲ. ಅದಕ್ಕೆ ಭುವಿ ಸತ್ತರೆ ಆಸ್ತಿ ಹಂಚಿಕೆ ಆಗಬಹುದು ಎನ್ನುವ ಕಲ್ಪನೆ ಇರಬಹುದು. ಅದಕ್ಕೆ ಭುವಿ ಹಿಂದೆ ರೌಡಿಗಳು ಬಿದ್ದಿದ್ದಾರೆ. ಆದ್ರೆ ಬಂದ ರೌಡಿಗಳು ಭುವಿಗೆ ಮನೆಗೆ ಹೋಗುವಂತೆ ಬೆದರಿಕೆ ಹಾಕಿದ್ದಾರೆ.
ನಿಮ್ಮನ್ನು ಯಾರು ಕಳಿಸಿದ್ದ ಎಂದು ಭುವಿ ಪ್ರಶ್ನೆ
ಭುವಿ ತನ್ನ ಮೇಲೆ ಅಟ್ಯಾಕ್ ಮಾಡಿದವರನ್ನು ಪತ್ತೆ ಹಚ್ಚುವ ಕೆಲಸ ಮಾಡ್ತಾ ಇದ್ದಲು. ಅದು ಸಕ್ಸಸ್ ಆಗಿದೆ. ಭುವಿ ಅವರ ಆಟೋದಲ್ಲಿ ಹೋಗಿ, ಅವರಿಗೆ ಪ್ರಶ್ನೆ ಮಾಡಿದ್ದಾಳೆ. ನಿಮ್ಮನ್ನು ಕಳಿಸಿದ್ದು ಯಾರು. ನನ್ನನ್ನು ಕೊಲ್ಲಲು ಹೇಳಿದ್ರಾ? ಬೆದರಿಕೆ ಹಾಕಲು ಹೇಳಿದ್ರಾ ಹೇಳಿ ಅಂತಿದ್ದಾಳೆ. ಅದಕ್ಕೆ ಕೊಲೆಗಾರ ನೀವು ಇಲ್ಲಿಂದ ಹೋಗಿ ಎನ್ನುತ್ತಿದ್ದಾನೆ.
ಇದನ್ನೂ ಓದಿ: Jothe Jotheyali: ಆರ್ಯನ ಕಂಪನಿ ಬಾಸ್ ಆದ ಕೇಶವ್ ಝೇಂಡೆ, ಮುಂದೇನು ಮಾಡ್ತಾಳೆ ಅನು ಸಿರಿಮನೆ?
ಭುವಿ ಮೇಲೆ ಮತ್ತೆ ಅಟ್ಯಾಕ್
ಭುವಿ ರೌಡಿಗಳಿಗೆ ಪ್ರಶ್ನೆ ಮೇಲೆ ಪ್ರಶ್ನೆ ಕೇಳಿದ್ದಾಳೆ. ನಿಮ್ಮನ್ನು ಕಳಿಸಿದ್ದು ಯಾರು ಅಂತ ಹೇಳಿದ್ರೆ, ನಾನು ಹೊರಟು ಹೋಗ್ತೀನಿ. ನಿಮಗೂ, ನಮಗೂ ಏನೂ ದ್ವೇಷ ಇಲ್ಲ ಅಂತ ಹೇಳ್ತಾಳೆ. ಭುವಿ ಪಟ್ಟು ಬಿಡದ ಕಾರಣ, ನೀನು ಬದುಕಿದ್ರೆ, ನಮ್ಮನ್ನು ಜೈಲಿಗೆ ಕಳಿಸುತ್ತೀಯಾ, ನೀನು ಸಾಯಬೇಕು ಎಂದು ಚಾಕು ತೆಗೆದು ಭುವಿಗೆ ಹಾಕಲು ಬರುತ್ತಾನೆ.
ಭುವಿ ಕಾಪಾಡಿದ ನಿತೇಶ್
ಭುವಿಗೆ ಚಾಕು ಇನ್ನೇನು ಚಾಕು ಹಾಕಬೇಕು, ಅಷ್ಟರಲ್ಲಿ ನಿತೇಶ್ ಬಂದು ಕಾಪಾಡುತ್ತಾನೆ. ನಿತೇಶ್ ಈ ಹಿಂದೆ ಸಾನಿಯಾ ಕಳಿಸಿದ ಹುಡುಗ. ಅವನು ಮೊದಲು ಕೆಟ್ಟವನಾಗಿದ್ದ. ಈಗ ಒಳ್ಳೆಯವನಾಗಿ ಬದಲಾಗಿದ್ದಾನೆ. ಆತ ಭುವಿ ಪ್ರಾಣ ಕಾಪಾಡಿದ್ದಾನೆ. ಇನ್ನು ರೌಡಿಗಳು ನಿತೇಶ್ ಮೇಲೆ ಅಟ್ಯಾಕ್ ಮಾಡುಲು ಹೋಗ್ತಾರೆ.
ಆಗ ಹರ್ಷ ಬಂದು ಭುವಿ ಮತ್ತು ನಿತೇಶ್ ನನ್ನು ಕಾಪಾಡಿದ್ದಾನೆ. ಹರ್ಷ ಸರಿಯಾದ ಸಮಯಕ್ಕೆ ಬಂದು ಇಬ್ಬರು ಪ್ರಾಣ ಕಾಪಾಡಿದ್ದಾನೆ. ಆದ್ರೆ ಭುವಿ ಕೊಲ್ಲಲು ಈ ರೌಡಿಗಳನ್ನು ಬಿಟ್ಟಿದ್ದು ಯಾರು ಅಂತ ಮಾತ್ರ ಗೊತ್ತಾಗಿಲ್ಲ.
ಇದನ್ನೂ ಓದಿ: Actress Pranitha Subhash: ವೈಟ್ ಅಂಡ್ ವೈಟ್ನಲ್ಲಿ ಅಮ್ಮ-ಮಗಳು, ಪ್ರಣೀತಾ ಸುಭಾಷ್ ಫೋಟೋಗೆ ಭಾರೀ ಮೆಚ್ಚುಗೆ!
ಮದುವೆಗೆ ಒಪ್ಪಿದ ವರು
ಭುವಿ ವರುಳನ್ನು ಏನೇನು ಪ್ರಶ್ನೆ ಮಾಡಿದ್ದಳು. ನೀನು ಹರ್ಷನನ್ನು ಇನ್ನೂ ಮರೆತಿಲ್ಲ. ಅವರನ್ನೇ ಹೀರೋ ಹೀರೋ ಎನ್ನುತ್ತೀಯಾ? ನಿನಗೆ ಹರ್ಷನ ಮೇಲೆ ಆ ಭಾವನೆ ಇಲ್ಲ ಅಂದ್ರೆ, ಮದುವೆಗೆ ಒಪ್ಪಿಕೋ ಎಂದು ಹೇಳುತ್ತಾಳೆ. ಅದಕ್ಕೆ ವರು ಮದುವೆಗೆ ಒಪ್ಪಿದ್ದಾಳೆ. ಆದ್ರೆ ಇದು ಬರೀ ನಾಟಕ.
ಭುವಿ ಕೊಲ್ಲಲು ರೌಡಿಗಳನ್ನು ಕಳಿಸಿದ್ದು ಯಾರು? ವರು ಮದುವೆ ಆಗ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಕನ್ನಡತಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ