ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ ಧಾರಾವಾಹಿ (Kannadathi Serial) ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ, ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡುತ್ತಿದೆ. ಧಾರಾವಾಹಿಯಲ್ಲಿ ಅಮ್ಮಮ್ಮನ ಅಧ್ಯಾಯ ಮುಕ್ತಾಯವಾಗಿದೆ. ಕೊನೆ ಬಾರಿ ಅಮ್ಮಮ್ಮ ಏನ್ ಹೇಳಿದ್ರು. ನೀವ್ ಯಾಕೆ ಐಸಿಯು (ICU) ವಾರ್ಡ್ಗೆ ಹೋಗಿದ್ರಿ ಎಂದು ವರುಧಿನಿಯನ್ನು ಹರ್ಷ ಪ್ರಶ್ನೆ (Question) ಮಾಡ್ತಾ ಇದ್ದಾನೆ.
ಅಮ್ಮಮ್ಮ ಕೊನೆ ಬಾರಿ ಏನ್ ಹೇಳಿದ್ರು?
ಹರ್ಷ ಮತ್ತು ಮನೆಯವರೆಲ್ಲಾ ಅಮ್ಮಮ್ಮ ಕಾರ್ಯ ಮಾಡಲು ಹೊರಟಿದ್ದಾರೆ. ಹರ್ಷ ಏನೋ ಕೆಲಸ ಇದೆ ಎಂದು ಮುಂದೆ ಹೊರಟಿದ್ದಾನೆ. ಜೊತೆಗೆ ವರೂಧಿನಿ ಇದ್ದಾಳೆ. ಹರ್ಷ ವರೂಧಿನಿಯನ್ನು ಕೇಳ್ತಾ ಇದ್ದಾನೆ.
ಅಮ್ಮಮ್ಮ ಕೊನೆ ಬಾರಿ ನಿಮ್ಮ ಬಳಿಯೇ ತಾನೇ ಮಾತನಾಡಿದ್ದು, ಏನ್ ಹೇಳಿದ್ರು. ಅವರು ಹರ್ಷನಿಗೆ ಹೇಳು ಅಂತ ಹೇಳಿ ಇರ್ತಾರೆ. ನೀವ್ ಯಾಕೆ ಏನು ಹೇಳ್ತಾ ಇಲ್ಲ ಎಂದು ಪ್ರಶ್ನೆ ಮಾಡ್ತಾ ಇದ್ದಾನೆ.
ವರು ಏನ್ ಹೇಳಿದ್ಲು?
ಹೌದು ಹರ್ಷ ಅವರೇ ಅಮ್ಮಮ್ಮ ನನ್ನ ಬಳಿಯೇ ಕೊನೆಯದಾಗಿ ಮಾತನಾಡಿದ್ದು. ಅದು ವಿಲ್ ವಿಚಾರವಾಗಿ. ಈ ಆಸ್ತಿ ವಿಚಾರ ಹರ್ಷನಿಗೆ ಗೊತ್ತಾದ್ರೆ ನನ್ನ ಮೇಲೆ ಬೇಸರ ಮಾಡಿಕೊಳ್ತಾನಾ ಎಂದು ಕೇಳ್ತಾ ಇದ್ದರು. ಅಷ್ಟೇ ಎಂದು ವರು ಹೇಳಿದ್ದಾಳೆ.
ಇದನ್ನೂ ಓದಿ: Bigg Boss Kannada: 'ಎಸ್' ಅಕ್ಷರದ ಹುಡುಗಿ ಜೊತೆ ರೂಪೇಶ್ ಶೆಟ್ಟಿ ಮದುವೆ, ಆರ್ಯವರ್ಧನ್ ಗುರೂಜಿ ಭವಿಷ್ಯ!
ನೀವ್ ಯಾಕ್ ಐಸಿಯುಗೆ ಹೋದ್ರಿ?
ಹರ್ಷ ಎಲ್ಲವನ್ನೂ ಕೇಳಿಸಿಕೊಂಡ ಮೇಲೆ, ವರು ಅವರೇ ಆ ಐಸಿಯು ರೂಮ್ ಗೆ ಯಾರು ಹೋಗುವಂತಿರಲಿಲ್ಲ. ನಾವು ಸಹ ಹೋಗಿದ್ದಿಲ್ಲ. ನೀವ್ ಯಾಕ್ ಹೋದ್ರಿ ಎಂದು ಪ್ರಶ್ನೆ ಮಾಡಿದ್ದಾನೆ. ಅದಕ್ಕೆ ಉತ್ತರ ಹೇಳಲು ಆಗದೇ ವರು ಪರದಾಡುತ್ತಿದ್ದಾಳೆ. ಸಾನಿಯಾ ಹೇಳಿದ್ದಕ್ಕೆ ಹೋಗಿದ್ದೇ ಎಂದು ಹೇಳ್ತಾಳಾ ನೋಡಬೇಕು.
ಲಾಯರ್ ಬಳಿ ಹೋದ ಭುವಿ
ಭುವಿಗೆ ತನ್ನ ಹೆಸರಿಗೆ ಆಸ್ತಿ ಇದೆ ಎಂದಾಗಿನಿಂದ ಸಂಕಟ ಶುರುವಾಗಿದೆ. ಅದನ್ನು ಮೊದಲು ಹರ್ಷನ ಹೆಸರಿಗೆ ವರ್ಗಾಯಿಸಬೇಕು ಎಂದು ಕೊಂಡಿದ್ದಾಳೆ. ಅದಕ್ಕೆ ಲಾಯರ್ ನನ್ನು ಭೇಟಿಯಾಗಿದ್ದಾಳೆ. ಅವರಿಗೆ ವಿಲ್ ತೋರಿಸಿದ್ದಾಳೆ. ಇದನ್ನು ನನ್ನ ಪತಿ ಹೆಸರಿಗೆ ವರ್ಗಾಯಿಸಬೇಕು ಎಂದಿದ್ದಾಳೆ.
5 ವರ್ಷ ಆಸ್ತಿ ಯಾರಿಗೂ ವರ್ಗಾಯಿಸುವಂತಿಲ್ಲ
ಭುವಿ ಕೊಟ್ಟ ವಿಲ್ ಓದಿ, ಲಾಯರ್, ಭುವಿ ಅವರೇ ನೀವು ಈ ವಿಲ್ ನ್ನು ಸಂಪೂರ್ಣವಾಗಿ ಓದಿದ್ದೀರಾ ಎಂದು ಕೇಳುತ್ತಾರೆ. ಅವಳು ಹೌದು ಎನ್ನುತ್ತಾಳೆ. ಹಾಗಾದ್ರೆ ಕೊನೆ ಸಾಲನ್ನು ಮತ್ತೆ ಓದಿ ಎನ್ನುತ್ತಾರೆ. ಆಗ ಭುವಿ ಓದುತ್ತಾಳೆ.
'ಈ ಎಲ್ಲಾ ಆಸ್ತಿಯು ಸೌಪರ್ಣಿಕಾ ಹೆಸರಿಗೆ ಇರುತ್ತೆ. ಅದನ್ನು 5 ವರ್ಷದ ತನಕ ವರ್ಗಾಯಿಸುವಂತಿಲ್ಲ' ಎಂದು ಬರೆದಿರುತ್ತೆ. ಭುವಿಗೆ ಈಗ ಮತ್ತಷ್ಟು ಸಂಕಟ ಶುರುವಾಗಿದೆ.
ಪೊಲೀಸರಿಗೆ ದೂರು ಕೊಡಲು ಸಾನಿಯಾ ಪ್ಲ್ಯಾನ್
ಇನ್ನು ಇವೆಲ್ಲದರ ಮಧ್ಯೆ ಎಂಡಿ ಪಟ್ಟ ಕೈ ತಪ್ಪಿದ್ದಕ್ಕೆ ಸಾನಿಯಾ ಸಿಡಿ ಸಿಡಿ ಅಂತಿದ್ದಾಳೆ. ಅಲ್ಲದೇ ಒಮ್ಮ ಹರ್ಷ ಆಕೆಯ ತಲೆಗೆ ಗನ್ ಹಿಡಿದಿದ್ದ. ಆ ವಿಡಿಯೋ ಇದೆ. ಅದನ್ನು ಮುಂದಿಟ್ಟುಕೊಂಡು ಹರ್ಷನನ್ನು ಅರೆಸ್ಟ್ ಮಾಡಿಸಬೇಕು ಎಂದುಕೊಂಡಿದ್ದಾಳೆ.
ಇದನ್ನೂ ಓದಿ: Puttakkana Makkalu: ಪುಟ್ಟಕ್ಕನ ತಂಡ ಸೋಲಿಸಲು ರಾಜಿಯ ಕುತಂತ್ರ, ಮಜ್ಜಿಗೆಗೆ ನಿದ್ದೆ ಮಾತ್ರೆ ಸೇರ್ಪಡೆ!
ಧಾರಾವಾಹಿಯೂ ಕುತೂಹಲ ಮೂಡಿಸುತ್ತಿದ್ದು, ಮುಂದೇನಾಗುತ್ತೆ ಅಂತ ನೋಡೋಕೆ ಕನ್ನಡತಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ